ಭಾರತಕ್ಕಾಗಿ ನಿಸ್ಸಾನ್ ಮತ್ತು ರೆನಾಲ್ಟ್ ಆರು ಹೊಸ ಮಾಡೆಲ್ ಗಳನ್ನು ಪರಿಚಯಿಸಲಿವೆ- 4 ಎಸ್‌ಯುವಿಗಳು ಮತ್ತು 2 ಇವಿಗಳು
ಇವುಗಳಲ್ಲಿ ಮೊದಲನೆಯದು ಈ ಆಟೋಮೋಟಿವ್ ಸಹಯೋಗದಿಂದ ಹೊಸ ಹೂಡಿಕೆಗಳೊಂದಿಗೆ 2025 ರಲ್ಲಿ ಆಗಮಿಸಲಿದೆ
-
ನಿಸಾನ್ ಮತ್ತು ರೆನಾಲ್ಟ್ ಎರಡು ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳು ಮತ್ತು ಪ್ರವೇಶ-ಮಟ್ಟದ ಇವಿಯನ್ನು ಪರಿಚಯಿಸುತ್ತಿದೆ.
-
ಇವುಗಳಲ್ಲಿ ಒಂದು ಖಂಡಿತವಾಗಿಯೂ ಹೊಸ ಡಸ್ಟರ್ ಮತ್ತು ನಿಸ್ಸಾನ್‌ನ ಆವೃತ್ತಿಯಾಗಿರುತ್ತದೆ.
-
ಈ ಹಂಚಿಕೊಂಡ ಮಾಡೆಲ್‌ಗಳು ಕ್ರಾಸ್-ಬ್ಯಾಡ್ಜ್ ಆಗಿರುವುದಿಲ್ಲ, ಬದಲಾಗಿ ವಿಭಿನ್ನ ಗುರುತುಗಳನ್ನು ಹೊಂದಿರಲಿವೆ.
-
ಸಿಟ್ರೋಯೆನ್ eC3 ಹಾಗೂ ಟಾಟಾ ಟಿಯಾಗೋ EV ಈ EVಗಳ ಪ್ರತಿಸ್ಪರ್ಧಿಗಳಾಗಿರುತ್ತವೆ.
-
ಹೊಸ ಮಾಡೆಲ್‌ಗಳು ಬರುವ ತನಕ, CBUಗಳು ಮತ್ತು ರೆನಾಲ್ಟ್ ಟ್ರೈಬರ್‌ನ ಆವೃತ್ತಿಯನ್ನು ನಿಸ್ಸಾನ್ ಬಿಡುಗಡೆ ಮಾಡುತ್ತದೆ.
ನಿಸ್ಸಾನ್ ಭಾರತಕ್ಕಾಗಿ ತನ್ನ ಭವಿಷ್ಯದ ಮಾದರಿ ಯೋಜನೆಗಳನ್ನು ಘೋಷಿಸಿದ್ದು,ಇದು 2025ರಿಂದ ಪ್ರಾರಂಭವಾಗಲಿದೆ. ಜಪಾನಿನ ಈ ಬ್ರ್ಯಾಂಡ್ ಮತ್ತು ಫ್ರೆಂಚ್ ಸಹಭಾಗಿ ಪಾಲುದಾರ ರೆನಾಲ್ಟ್, ಪ್ರತಿ ಬ್ಯಾಡ್ಜ್‌ಗೆ ಆರು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ತರಲು ಉದ್ದೇಶಿಸಿದೆ. ಇವುಗಳು ನಾಲ್ಕು ಹೊಸ ಕಾಂಪ್ಯಾಕ್ಟ್ SUVಗಳು ಮತ್ತು ಎರಡು ಪ್ರವೇಶ-ಹಂತದ EVಗಳನ್ನು ಒಳಗೊಂಡಿರುತ್ತವೆ. ಈ ಹೊಸ ಮಾಡೆಲ್‌ಗಳು ಭಾರತದಲ್ಲಿ ರೆನಾಲ್ಟ್-ನಿಸ್ಸಾನ್ ಪ್ರಸ್ತುತಿಯನ್ನು ಪುನರುಜ್ಜೀವಗೊಳಿಸಲು ರೂ. 5,300 ಕೋಟಿಯಷ್ಟು ಹೊಸ ಹೂಡಿಕೆಯಿಂದ ಬೆಂಬಲಿತವಾಗಿದೆ.
ಯಾವ SUVಗಳು ಬರಲಿವೆ?
ನಮ್ಮ ಮಾರುಕಟ್ಟೆಗಾಗಿ ನಿಸ್ಸಾನ್ ತನ್ನ ಹೊಸ ಮಾಡೆಲ್‌ಗಳ ಬಗ್ಗೆ ಯಾವುದೇ ನಿರ್ದಿಷ್ಟತೆಗಳನ್ನು ನೀಡಿಲ್ಲ, ಆದರೆ SUVಗಳು C-ವಿಭಾಗಕ್ಕಾಗಿ ಇರುತ್ತವೆ ಹಾಗೂ ಇದನ್ನು ಕಾಂಪ್ಯಾಕ್ಟ್ SUV ಎಂದೂ ಕರೆಯಲಾಗುತ್ತದೆ ಎಂದು ಅದು ಹೇಳಿದೆ.ಇದು ಜನಪ್ರಿಯ ರೆನಾಲ್ಟ್ ಡಸ್ಟರ್ ಮತ್ತು ನಿಸ್ಸಾನ್‌ನ ಉತ್ಪನ್ನ ಟೆರಾನೋದ ಉತ್ತರಾಧಿಕಾರಿಯನ್ನು ಒಳಗೊಂಡಿರಬೇಕು. ಇನ್ನೆರಡು SUVಗಳು ಇವುಗಳ ನಂತರದ ಸ್ಥಾನದಲ್ಲಿರುವ ಥ್ರೀ-ರೋ ಆಫರಿಂಗ್‌ಗಳಾಗಿರಬಹುದು.
ಇದನ್ನೂ ಓದಿ: ರೆನಾಲ್ಟ್-ನಿಸ್ಸಾನ್ ಭಾರತಕ್ಕೆ ತರಲಿವೆ ಹೊಸ SUVಗಳು, ಡಸ್ಟರ್ ಅನ್ನು ಮರಳಿ ತರಬಹುದು
ಈ SUVಗಳು ಹೊಸ ಪೀಳಿಗೆಯ ಪ್ಲಾಟ್‌ಫಾರ್ಮ್‌ನಿಂದ ಆಧಾರ ಹೊಂದಿರುತ್ತವೆ ಹಾಗೂ ಇದು ಹೈಬ್ರಿಡ್‌ಗಳು ಹಾಗೂ ಬ್ಯಾಟರಿ EVಗಳಂತಹ ಎಲೆಕ್ಟ್ರಿಫೈಡ್ ಪವರ್‌ಟ್ರೈನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಆದಾಗ್ಯೂ ಭಾರತದಲ್ಲಿ ಈ SUVಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ, ನಿಸಾನ್ ಅಥವಾ ರೆನಾಲ್ಟ್ ಎಲೆಕ್ಟ್ರಿಫೈಡ್ ಪವರ್‌ಟ್ರೈನ್‌ಗಳನ್ನು ನೀಡುವ ಬಗ್ಗೆ ಸ್ಪಷ್ಟವಾಗಿಲ್ಲ.
ಎಲೆಕ್ಟ್ರಿಕ್ SUVಗಳು ಇಲ್ಲವೇ?
ಭಾರತಕ್ಕೆ EVಗಳನ್ನು ಪರಿಚಯಿಸುವಾಗ ನಿಸ್ಸಾನ್ ಮತ್ತು ರೆನಾಲ್ಟ್ ಪ್ರವೇಶ-ಮಟ್ಟದ ಮಾರ್ಗವನ್ನು ತೆಗೆದುಕೊಳ್ಳಲು ಬಯಸಿದಂತೆ ಕಾಣುತ್ತದೆ. ಈ EVಗಳು ಎರಡೂ ಬ್ರ್ಯಾಂಡ್‌ಗಳು ಬಳಸುವ ಅತ್ಯಂತ ಸಣ್ಣ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಒಂದಾದ CMF-A ಅನ್ನು ಆಧರಿಸಿರುತ್ತವೆ, ಹಾಗೂ ಸಬ್‌ಕಾಂಪ್ಯಾಕ್ಟ್ SUVಗಳಾದ ಮ್ಯಾಗ್ನೈಟ್ ಮತ್ತು ಕಿಗರ್‌ಗಿಂತ ಚಿಕ್ಕದಾಗಿದ್ದು ರೆನಾಲ್ಟ್ ಕ್ವಿಡ್ ಗಿಂತ ದೊಡ್ಡದಾಗಿರಬಹುದು.
50kW DC ವೇಗದ ಚಾರ್ಜಿಂಗ್‌ನೊಂದಿಗೆ ಈ ಪ್ರವೇಶ-ಮಟ್ಟದ EVಗಳು ರೂ 10 ಲಕ್ಷಕ್ಕಿಂತ ಕಡಿಮೆ ಆರಂಭಿಕ ಬೆಲೆಯೊಂದಿಗೆ ಬರುತ್ತವೆ ಮತ್ತು ಕನಿಷ್ಠ 300ಕಿಮೀ ನಷ್ಟು ಕ್ಲೈಮ್ ಮಾಡಿದ ರೇಂಜ್ ಅನ್ನು ನೀಡುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಇಷ್ಟಾದರೂ ಅವುಗಳು SUV-ತರಹದ ಕ್ರಾಸ್ಓವರ್ ಸ್ಟೈಲಿಂಗ್ ಅನ್ನು ಹೊಂದಿರಬಹುದು ಮತ್ತು ಸಿಟ್ರೋಯೆನ್ eC3 ಮತ್ತು ಟಾಟಾ ಟಿಯಾಗೋ EV ಯಂತಹವುಗಳಿಗೆ ಕೈಗೆಟುಕುವ ಪ್ರತಿಸ್ಪರ್ಧಿಗಳಾಗಲಿದ್ದಾರೆ.
ಈ ಹೊಸ ಕಾರುಗಳು ಯಾವಾಗ ಬರಲಿವೆ?
ಈ ಆರು ಹೊಸ ಕಾರುಗಳಲ್ಲಿ ಮೊದಲನೆಯದು 2025ರಲ್ಲಿ ಬರಲಿದೆ ಎಂದು ನಿಸ್ಸಾನ್ ಹೇಳಿದೆ. ಮ್ಯಾಗ್ನೈಟ್ ಮತ್ತು ಕಿಗಾರ್‌ನಲ್ಲಿ ನಾವು ನೋಡಿದಂತೆ, ಈ ನಿಸ್ಸಾನ್ SUV ಹೊಸ ಡಸ್ಟರ್‌ಗಿಂತ ಮುಂಚಿತವಾಗಿ ತನ್ನ ಮಾರುಕಟ್ಟೆಗೆ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.
ಅಲ್ಲಿಯ ತನಕ, ಪ್ರಸ್ತುತ ರೆನಾಲ್ಟ್-ನಿಸ್ಸಾನ್ ಲೈನ್‌ಅಪ್‌ಗೆ ಕಾಸ್ಮೆಟಿಕ್ ಟ್ವೀಕ್‌ಗಳು ಮತ್ತು ಟೆಕ್-ಆಧಾರಿತ ಫೀಚರ್ ಅಪ್‌ಗ್ರೇಡ್‌ಗಳನ್ನು ಒಳಗೊಂಡಂತಹ ಫೇಸ್‌ಲಿಫ್ಟ್‌ಗಳ ಮೂಲಕ ನವೀಕರಣಗಳನ್ನು ನಾವು ನಿರೀಕ್ಷಿಸುತ್ತೇವೆ. ಅಲ್ಲದೇ, ನಿಸ್ಸಾನ್ ರೆನಾಲ್ಟ್ ಟ್ರೈಬರ್ ಅನ್ನುಆಧರಿಸಿದ ತನ್ನದೇ ಆದ ಸಬ್‌ಕಾಂಪ್ಯಾಕ್ಟ್ ಥ್ರೀ-ರೋ ಕ್ರಾಸ್‌ಓವರ್ ಅನ್ನು ಬಿಡುಗಡೆ ಮಾಡುವ ಹಾಗೂ X-Trail ನಂತಹ CBU ಮಾಡೆಲ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ