ರೆನಾಲ್ಟ್-ನಿಸ್ಸಾನ್ ಭಾರತಕ್ಕೆ ತರಲಿವೆ ಹೊಸ SUVಗಳು, ಡಸ್ಟರ್ ಅನ್ನು ಮರಳಿ ತರಬಹುದು

published on ಫೆಬ್ರವಾರಿ 08, 2023 01:54 pm by ansh

  • 17 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಹೊಸ ಪೀಳಿಗೆ SUVಗಳು ಪ್ರಬಲ-ಹೈಬ್ರಿಡ್ ಪವರ್‌ಟ್ರೈನ್‌ನೊಂದಿಗೆ ಬರುವ ಸಾಧ್ಯತೆಯಿದೆ

Dacia Duster

ನಿಸ್ಸಾನ್ ಮತ್ತು ರೆನಾಲ್ಟ್ ಈ ವರ್ಷಾಂತ್ಯದಲ್ಲಿ ತಮ್ಮ ಮೈತ್ರಿ ಒಪ್ಪಂದವನ್ನು ನವೀಕರಿಸಲು ನಿರ್ಧರಿಸಿದ್ದು, ಅಲ್ಪಾವಧಿಯಿಂದ ಮಧ್ಯಮಾವಧಿಯ ಭವಿಷ್ಯದಲ್ಲಿ, ತಮ್ಮ ಕೆಲವು ಮಾರುಕಟ್ಟೆವಾರು ಉದ್ದೇಶಗಳನ್ನು ವಿವರಿಸಿದೆ. ಜಪಾನ್ ಮತ್ತು ಪ್ರೆಂಚ್‌ನ ಈ ಕಾರುತಯಾರಕರು ಭಾರತಕ್ಕಾಗಿ SUVಗಳನ್ನು ಒಳಗೊಂಡು ಹೊಸ ವಾಹನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿವೆ. ಈ SUVಗಳು ಡಸ್ಟರ್‌ನ ಹೊಚ್ಚ ಹೊಸ ಪುನರಾವೃತ್ತಿಯಾಗಿರಬಹುದು ಎಂದು ನಾವು ಭಾವಿಸುತ್ತೇವೆ. ಈ ಹೊಸ ಡಸ್ಟರ್, ಟೆರಾನೋದಲ್ಲಿ ಈ ಮೊದಲು ಹೊಂದಿದ್ದಂತಹ ನಿಸ್ಸಾನ್ ಅನ್ನು ಪರ್ಯಾಯವಾಗಿ ಹುಟ್ಟುಹಾಕಬಹುದು.

ಹೆಸರು ಮತ್ತು ಡಿಸೈನ್

Dacia Duster Front

ರೆನಾಲ್ಟ್ ಭಾರತೀಯ ಖರೀದಿದಾರರಿಗೆ ಡಸ್ಟರ್ ನೇಮ್‌ಪ್ಲೇಟ್ ಅನ್ನು ಮರಳಿ ತರಬಹುದಾದರೂ ನಿಸ್ಸಾನ್‌ನ ಟೆರಾನೋ ಕಾರ್ ಅಷ್ಟೊಂದು ಜನಪ್ರಿಯವಾಗಿರದಿದ್ದ ಕಾರಣ ಹೊಸ ಹೆಸರನ್ನು ಆರಿಸಬಹುದು. ಜಪಾನಿನ ಈ ಸಂಸ್ಥೆಯು ಕಿಕ್ಸ್ ಮೋನಿಕರ್ ಅನ್ನೂ ಬಳಸುವ ಸಾಧ್ಯತೆ ಇಲ್ಲ.

ಇದನ್ನು ಓದಿ: ನಿಸ್ಸಾನ್ ಪ್ರಬಲ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಭಾರತದಲ್ಲಿ ನೀಡುವ ಜಪಾನಿನ ಕೊನೆಯ ಕಾರುತಯಾರಕ ಸಂಸ್ಥೆಯಾಗಲಿದೆ

ಎರಡೂ SUVಗಳೂ ಒಂದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ ಮತ್ತು ಎಲ್ಲಾ ನಿರ್ದಿಷ್ಟತೆಗಳನ್ನೂ ಹಂಚಿಕೊಳ್ಳುವ ಸಾಧ್ಯತೆಯಿದೆ. ರೆನಾಲ್ಟ್-ನಿಸ್ಸಾನ್‌ನ ಇತ್ತೀಚಿನ ಇತರೆ ಉತ್ಪನ್ನಗಳಾದ ಕೈಗರ್ ಮತ್ತು ಮ್ಯಾಗ್ನೈಟ್‌ನಂತಯೇ, ಈ ಎರಡು ಕಾಂಪ್ಯಾಕ್ಟ್ SUVಗಳು ವಿಶಿಷ್ಟವಾದ ಡಿಸೈನ್ ಲ್ಯಾಂಗ್ವೇಜ್‌ಗಳನ್ನು ಹೊಂದಿರಲಿವೆ.

ಒಂದು ಹೊಸ ಪೀಳಿಗೆ

Dacia Duster Rear

ಎರಡನೇ ಪೀಳಿಗೆ ಡಸ್ಟರ್ ವೀದೇಶದಲ್ಲಿ ಈಗಾಗಲೇ ಮಾರಾಟದಲ್ಲಿರುವಾಗ, ರೆನಾಲ್ಟ್ ಅಂತಿಮವಾಗಿ ಭಾರತದಲ್ಲಿ ತನ್ನ ಮೊದಲನೇ ಪೀಳಿಗೆ ಡಸ್ಟರ್ ಅನ್ನು 2022ರಲ್ಲಿ ಸ್ಥಗಿತಗೊಳಿಸಿತು. ಐರೋಪ್ಯ ಮಾರುಕಟ್ಟೆಯಲ್ಲಿ, ರೆನಾಲ್ಟ್ ಗ್ರೂಪ್ ಮಾಲೀಕತ್ವದಲ್ಲಿ ಡೇಸಿಯಾ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾದ ಡಸ್ಟರ್ ಬಹು ಪವರ್ಟ್ರೈನ್ ಆಯ್ಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತನ್ನ ಎರಡನೇ ಪೀಳಿಗೆ ಅವತಾರದಲ್ಲಿ ಪಡೆದಿತ್ತು. ಆದಾಗ್ಯೂ, ಈ ಕಾರುತಯಾರಕರು ಡಸ್ಟರ್ ಅನ್ನು ಮತ್ತೆ ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದರೆ, ಪ್ರಾಯಶಃ ಇದು ಈಗಾಗಲೇ ಅಭಿವೃದ್ಧಿಯಲ್ಲಿರುವ ಮತ್ತು EV ಯಲ್ಲಿಯೂ ತಯಾರಾಗಲಿರುವ ಮೂರನೇ ಪೀಳಿಗೆ ಮಾಡೆಲ್ ಅನ್ನು ತರಲಿದೆ.

ಪವರ್‌ಟ್ರೈನ್ ಮತ್ತು ಫೀಚರ್‌ಗಳು

Dacia Duster Cabin

ಈ ಮೂರನೇ ಪೀಳಿಗೆಯ ಡಸ್ಟರ್ ಕೇವಲ ಪೆಟ್ರೋಲ್‌ ಯೂನಿಟ್‌ನೊಂದಿಗೆ ಪ್ರಬಲ-ಹೈಬ್ರಿಡ್ ಪವರ್‌ಟ್ರೈನ್ ಅನ್ನು ನೀಡುವ ಸಂಭವ ಇದೆ, ಆದರೆ ಡೀಸೆಲ್‌ನೊಂದಿಗೆ ಈ ಆಫರ್ ಇರುವುದಿಲ್ಲ. ಹಾಗಿದ್ದಲ್ಲಿ, ನಿಸ್ಸಾನ್ ಕೂಡಾ ಇದೇ ರೀತಿ ಸಜ್ಜುಗೊಳ್ಳಲಿದ್ದು ಈ ಹೊಸ ಹೈಬ್ರಿಡ್ ಕಾಂಪ್ಯಾಕ್ಟ್ SUV ಜೋಡಿಯು ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಭಾರತದ ಮಾರುಕಟ್ಟೆಗೆ ಬರಲಿವೆ.

ಇದನ್ನೂ ಓದಿ: ಮುಂಬರುವ ನಿಸ್ಸಾನ್ ಎಕ್ಸ್-ಟ್ರಯಲ್‌ ಬಗ್ಗೆ ತಿಳಿದುಕೊಳ್ಳಬೇಕಾದ ಟಾಪ್ 7 ವಿಷಯಗಳು

ಫೀಚರ್‌ಗಳ ವಿಷಯದಲ್ಲೂ, ಹೊಸ ರೆನಾಲ್ಟ್-ನಿಸ್ಸಾನ್ SUVಗಳು ಒಂದೆರಡು ಉತ್ತಮ ಡಿಸ್‌ಪ್ಲೇ ಯೂನಿಟ್‌ಗಳು, ಕೆಲವು ಪ್ರೀಮಿಯಂ ಕಂಫರ್ಟ್‌ಗಳನ್ನು ಹೊಂದಿದ್ದು ಡಸ್ಟರ್ ಮತ್ತು ಟೆರೆನೋದ ದೃಢವಾದ ಮೋಡಿಯನ್ನು ಆಶಾದಾಯಕವಾಗಿ ಉಳಿಸಿಕೊಳ್ಳುತ್ತವೆ.

ನಿರೀಕ್ಷಿತ ಬಿಡುಗಡೆ ಸಮಯ

ಈ ರೆನಾಲ್ಟ್-ನಿಸ್ಸಾನ್ ಸಹಯೋಗವು 2024 ರ ಒಳಗೆ ಈ ಕಾಂಪ್ಯಾಕ್ಟ್ SUVಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರೊಂದಿಗೆ ಶೀಘ್ರದಲ್ಲೇ ಪ್ರಾರಂಭಿಸಹುದು. ಎರಡೂ SUVಗಳ ಬೆಲೆ ಒಂದೇ ರೀತಿಯದ್ದಾಗಿರುತ್ತದೆ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಕ್ ಮತ್ತು ಫೋಕ್ಸ್‌ವಾಗೆನ್ ಟೈಗನ್‌ಗಳಿಗೆ ಪ್ರತಿಸ್ಪರ್ಧಿಗಳಾಗಿರುತ್ತವೆ. 

ದೊಡ್ಡ SUVಗಳೂ ಇರಲಿವೆ

Nissan X-Trail

ಭಾರತದಲ್ಲಿನ ಕಾಂಪ್ಯಾಕ್ಟ್ SUV ಜಾಗಕ್ಕೆ ರೆನಾಲ್ಟ್ ಮತ್ತು ನಿಸ್ಸಾನ್‌ನ ಬಹುನಿರೀಕ್ಷಿತ ಮರಳುವಿಕೆಯನ್ನು ನಾವು ನಿರೀಕ್ಷಿಸುತ್ತಿರುವಾಗ, ಈ ಕಾರುತಯಾರಕರು ತಮ್ಮ ದೊಡ್ಡದಾದ ಮತ್ತು ಹೆಚ್ಚು ಪ್ರೀಮಿಯಂ ಮಾಡೆಲ್‌ಗಳನ್ನು ಇಲ್ಲಿಯೂ ತರುವುದನ್ನು ನಾವು ನೋಡಬಹುದು. ನಿಸ್ಸಾನ್ ಎಕ್ಸ್-ಟ್ರಯಲ್ ಅನ್ನು ಈಗಾಗಲೇ ಭಾರತಕ್ಕಾಗಿ ಎಂದು ದೃಢಪಡಿಸಲಾಗಿದ್ದು ಇದು ಸಿಟ್ರೋಯೆನ್ C5 ಏರ್‌ಕ್ರಾಸ್ ಮತ್ತು ಸ್ಕೋಡಾ ಕೋಡಿಯಾಕ್‌ಗೆ ಒಂದು CBU (ಅಮದು ಮಾಡಿಕೊಂಡ) ಪ್ರತಿಸ್ಪರ್ಧಿಯಾಗಬಹುದು, ಅದೇ ರೀತಿ ರೆನಾಲ್ಟ್ ಮತ್ತೊಮ್ಮೆ ಕೂಪ್-ಸ್ಟೈಲ್ಡ್ ಅರ್ಕಾನಾದೊಂದಿಗೆ ಮಧ್ಯಮ ಗಾತ್ರದ SUVಯ ಸ್ಥಳವನ್ನು ಪ್ರಯತ್ನಿಸಬಹುದು.

ಇದನ್ನೂ ಓದಿ: 2023 ರೆನಾಲ್ಟ್ ಮಾಡೆಲ್‌ಗಳು ಪಡೆಯುತ್ತಿವೆ ನಾಲ್ಕು ಹೊಸ ಸ್ಟಾಂಡರ್ಡ್ ಸುರಕ್ಷಾ ಫೀಚರ್‌ಗಳು

ಡಸ್ಟರ್‌ನ ನಿರೀಕ್ಷಿತ ವಾಪಸಾತಿಗಾಗಿ ರೆನಾಲ್ಟ್ ಮತ್ತು ನಿಸಾನ್ CMF-B ಪ್ಲಾಟ್‌ಫಾರ್ಮ್ ಅನ್ನು ಸ್ಥಳೀಕರಿಸುವ ನಿರೀಕ್ಷೆಯಿದ್ದು, ಮಾಡ್ಯುಲಾರ್ ಅಂಡರ್‌ಪಿನ್ನಿಂಗ್‌ಗಳು ಇನ್ನಷ್ಟು ಹೆಚ್ಚಿನ ಕಾಂಪ್ಯಾಕ್ಟ್ ಮಾಡೆಲ್‌ಗಳನ್ನು ಹುಟ್ಟುಹಾಕಬಹುದು. ಇವುಗಳು ಡಿಸೈನ್ ಮತ್ತು ಫೀಚರ್‌ಗಳಿಂದ ಪ್ರತ್ಯೇಕಿಸಲ್ಪಡುತ್ತವೆ ಮತ್ತು ಹೆಚ್ಚು ದೃಢವಾದ ಮಾಡೆಲ್‌ಗಳಿಗೆ ಇವು ಪ್ರಬಲ ಪರ್ಯಾಯಗಳಾಗಿ ಕಾರ್ಯನಿರ್ವಹಿಸುತ್ತವೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience