Login or Register ಅತ್ಯುತ್ತಮ CarDekho experience ಗೆ
Login

ಉತ್ಪಾದನೆಗೆ ಸಿದ್ಧವಾಗಿರುವ Kia EV4 ನ ಅನಾವರಣ, ಭಾರತಕ್ಕೂ ಬರುವ ಸಾಧ್ಯತೆ

ಕಿಯಾ ev4 ಗಾಗಿ anonymous ಮೂಲಕ ಫೆಬ್ರವಾರಿ 28, 2025 03:29 pm ರಂದು ಪ್ರಕಟಿಸಲಾಗಿದೆ

ಸಂಪೂರ್ಣ ಎಲೆಕ್ಟ್ರಿಕ್‌ ಆಗಿರುವ ಕಿಯಾ EV4 ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಎರಡೂ ಬಾಡಿ ಶೈಲಿಗಳಲ್ಲಿ ಬಿಡುಗಡೆಯಾಗಲಿದೆ

ಕಿಯಾ ಕಂಪನಿಯು ಸ್ಪೇನ್‌ನಲ್ಲಿ ನಡೆದ 2025 ರ EV ದಿನದ ಕಾರ್ಯಕ್ರಮದಲ್ಲಿ ಉತ್ಪಾದನೆಗೆ ಸಿದ್ಧವಾಗಿರುವ EV4 ಅನ್ನು ಅನಾವರಣಗೊಳಿಸಿದೆ. ಕೊರಿಯನ್ ಬ್ರ್ಯಾಂಡ್‌ನ ಇತ್ತೀಚಿನ ಮೊಡೆಲ್‌ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಎರಡೂ ಬಾಡಿ ಶೈಲಿಗಳಲ್ಲಿ ಲಭ್ಯವಿದೆ. ಇವೆರಡೂ E-GMP ಅನ್ನು ಪ್ಲಾಕ್‌ಫಾರ್ಮ್‌ ಅನ್ನು ಆಧರಿಸಿವೆ, ಇದು ಎಲೆಕ್ಟ್ರಿಕ್‌ ವಾಹನಗಳಿಗಾಗಿ ಕಾರು ತಯಾರಕರ ಮೀಸಲಾದ ಪ್ಲಾಟ್‌ಫಾರ್ಮ್‌ ಆಗಿದೆ. ಹೆಚ್ಚು ತಡಮಾಡದೆ, ಹೊಸ ಇವಿ4 ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುವುದನ್ನು ಗಮನಿಸಲು ಪ್ರಾರಂಭಿಸೋಣ.

ಕಿಯಾ ಇವಿ4: ಎಕ್ಸ್‌ಟೀರಿಯರ್‌ ವಿನ್ಯಾಸ

ಮಾರುಕಟ್ಟೆಗೆ ಬರುವ ಯಾವುದೇ ಹೊಸ ಕಿಯಾ ಕಾರಿನಂತೆ, "ಆಪೋಸಿಟ್ಸ್ ಯುನೈಟೆಡ್" ವಿನ್ಯಾಸ ಶೈಲಿಯನ್ನು ಆಧರಿಸಿದ EV4, ಮೋಜಿನ ವಿನ್ಯಾಸವನ್ನು ಹೊಂದಿದೆ. ಈ ಫ್ಯಾಸಿಯಾ ಪರಿಚಿತ ಟೈಗರ್ ಫೇಸ್ ಅನ್ನು ಖಾಲಿಯಾದ ಗ್ರಿಲ್‌ನೊಂದಿಗೆ ಹೊಂದಿದೆ, ಅದರ ಪಕ್ಕದಲ್ಲಿ ನಯವಾದ ಲಂಬವಾದ ಎಲ್‌ಇಡಿ ಹೆಡ್‌ಲೈಟ್‌ಗಳಿವೆ. ಅದರ ಕೆಳಗೆ, ಇದು ದೊಡ್ಡ ಏರ್‌ಡ್ಯಾಮ್‌ ಅನ್ನು ಪಡೆಯುತ್ತದೆ, ಇದು ಒಟ್ಟಾರೆ ಫೇಸಿಯಾಗೆ ಆಕ್ರಮಣಕಾರಿ ನೋಟವನ್ನು ನೀಡುತ್ತದೆ.

ಎರಡೂ ಮೊಡೆಲ್‌ಗಳ ಸೈಡ್ ಪ್ರೊಫೈಲ್ ವಿಭಿನ್ನ ಲುಕ್‌ ಅನ್ನು ಹೊಂದಿದೆ. ಆದರೆ ನಮ್ಮ ಅಭಿಪ್ರಾಯ ಕೇಳಿದರೆ, ಈ ಹ್ಯಾಚ್‌ಬ್ಯಾಕ್ ಅದರ ರ‍್ಯಾಕ್ಡ್‌ ಎ-ಪಿಲ್ಲರ್, ನಯವಾದ ಲೈನ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳೊಂದಿಗೆ ಉತ್ತಮವಾಗಿ ಕಾಣುತ್ತದೆ ಎಂದು ನಾವು ಭಾವಿಸುತ್ತೇವೆ. ಆಕರ್ಷಕವಾದ ಅಲಾಯ್ ವೀಲ್‌ಗಳು ಲುಕ್‌ಗೆ ಇನ್ನಷ್ಟು ಮೆರುಗು ನೀಡುತ್ತವೆ. ದುರದೃಷ್ಟವಶಾತ್, ಸೆಡಾನ್‌ನ ಶೈಲಿಯು ಹೆಚ್ಚು ಜನಪ್ರಿಯವಾಗಿದೆ, ಏಕೆಂದರೆ ಬೂಟ್ ವಿಭಾಗವು ನಾಚ್‌ಬ್ಯಾಕ್ ತರಹದ ಶೈಲಿಯನ್ನು ರೂಪಿಸಲು ಅದರ ಮೇಲೆ ಅಂಟಿಕೊಂಡಿರುವಂತೆ ತೋರುತ್ತದೆ.

ಹಿಂಭಾಗದಲ್ಲಿ, ಸ್ಪಷ್ಟವಾಗಿ ಹೇಳುವುದಾದರೆ, EV4 ಎರಡು ರೀತಿಯ ಬಾಡಿ ಶೈಲಿಗಳಲ್ಲಿ ಲಭ್ಯವಿದ್ದು, ಮೊಡೆಲ್‌ಅನ್ನು ಆಧರಿಸಿ ವಿಭಿನ್ನ ಶೈಲಿಯನ್ನು ಪಡೆಯುತ್ತದೆ. ನಯವಾದ L-ಆಕಾರದ LED ಟೈಲ್ ಲ್ಯಾಂಪ್‌ಗಳು ಒಟ್ಟಾರೆ ವಿನ್ಯಾಸವನ್ನು ಪೂರ್ತಿಗೊಳಿಸುತ್ತವೆ.

ಕಿಯಾ ಇವಿ4: ಇಂಟೀರಿಯರ್‌

ಕಿಯಾ ಇವಿ4ನ ಕ್ಯಾಬಿನ್ ವಿನ್ಯಾಸವು ತುಂಬಾ ಪರಿಚಿತವಾಗಿದೆ. ಉದಾಹರಣೆ ಸಹಿತ ಹೇಳುವುದಾದರೆ, ವಿನ್ಯಾಸವು ಇತ್ತೀಚೆಗೆ ಬಿಡುಗಡೆಯಾದ ಕಿಯಾ ಸೈರೋಸ್ ಅನ್ನು ನೆನಪಿಸುತ್ತದೆ. ಪ್ರಮುಖ ಹೈಲೈಟ್‌ ಎಂದರೆ ಮೂರು-ಸ್ಕ್ರೀನ್‌ನ ಸೆಟಪ್, ಇದರಲ್ಲಿ ಎರಡು 12.3-ಇಂಚಿನ ಸ್ಕ್ರೀನ್‌ಗಳು ಮತ್ತು 5-ಇಂಚಿನ ಕ್ಲೈಮೆಟ್‌ ಕಂಟ್ರೋಲ್‌ ಘಟಕವಿದೆ. ಇದು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಬರುತ್ತದೆ ಮತ್ತು ಅದೃಷ್ಟವಶಾತ್ ಕ್ಲೈಮೇಟ್‌ ಕಂಟ್ರೋಲ್‌ನಂತಹ ಪ್ರಮುಖ ಫಂಕ್ಷನ್‌ಗಳಿಗೆ ಬಟನ್‌ ಕಂಟ್ರೋಲ್‌ಗಳನ್ನು ಹೊಂದಿದೆ.

ಕೆಳಗಿನ ಸೆಂಟರ್‌ ಕನ್ಸೋಲ್‌ನಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್‌ಗಾಗಿ ಅವಕಾಶವಿದೆ ಮತ್ತು ದೊಡ್ಡ ಶೇಖರಣಾ ಸ್ಥಳವೂ ಇದೆ.

ಕಿಯಾ ಇವಿ4: ಆನ್‌ಬೋರ್ಡ್ ಫೀಚರ್‌ಗಳು

ವಿಶಿಷ್ಟವಾದ ಕಿಯಾ ಶೈಲಿಯಲ್ಲಿ, ಇವಿ4 ಫೀಚರ್‌ಗಳೊಂದಿಗೆ ತುಂಬಿ ತುಳುಕುತ್ತದೆ. ಮೇಲೆ ತಿಳಿಸಲಾದ ಪರದೆಗಳು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವಿಶ್ರಾಂತಿ ಕಾರ್ಯದೊಂದಿಗೆ ಚಾಲಿತ ಮುಂಭಾಗದ ಸೀಟುಗಳು, ಸನ್‌ರೂಫ್, ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು ಮತ್ತು ರೈನ್‌ ಸೆನ್ಸಿಂಗ್‌ ವೈಪರ್‌ಗಳು ಫೀಚರ್‌ನಲ್ಲಿನ ಹೈಲೈಟ್‌ ಆಗಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಬಹು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ ಮತ್ತು ಹಲವಾರು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ನೋಡಿಕೊಳ್ಳುತ್ತವೆ.

ಕಿಯಾ ಇವಿ4 ವೆಹಿಕಲ್ ಟು ಲೋಡ್ (V2L) ಮತ್ತು ವೆಹಿಕಲ್ ಟು ವೆಹಿಕಲ್ (V2V) ನಂತಹ ವಿಶಿಷ್ಟ EV ಫೀಚರ್‌ಗಳೊಂದಿಗೆ ಬರುತ್ತದೆ. ಆದರೆ ಇವಿ4 ನೊಂದಿಗೆ, ಕಿಯಾ ಒಂದು ಹೆಜ್ಜೆ ಮುಂದೆ ಹೋಗಿ ವೆಹಿಕಲ್ ಟು ಗ್ರಿಡ್ (V2G) ಅನ್ನು ಪರಿಚಯಿಸಿದೆ, ಅಲ್ಲಿ ಪವರ್‌ ಕಟ್‌ ಸಂದರ್ಭದಲ್ಲಿ ನಿಮ್ಮ ವಾಹನದ ಬ್ಯಾಟರಿ ಪ್ಯಾಕ್‌ನಿಂದ ಚಾರ್ಜ್ ಅನ್ನು ಬಳಸಿಕೊಂಡು ನಿಮ್ಮ ಮನೆಯಲ್ಲಿರುವ ಸಾಮಾನ್ಯ ಗೃಹೋಪಯೋಗಿ ಉಪಕರಣಗಳಿಗೆ ವಿದ್ಯುತ್ ನೀಡಬಹುದು.

ಕಿಯಾ EV4: ಪವರ್‌ಟ್ರೇನ್ ಆಯ್ಕೆಗಳು

ಕಿಯಾ ಇವಿ4ನಲ್ಲಿ ಆಯ್ಕೆ ಮಾಡಲು ಎರಡು ಪವರ್‌ಟ್ರೇನ್ ಆಯ್ಕೆಗಳಿವೆ. ಎರಡೂ ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತವೆ, ಆದರೆ ಒಂದೇ ಇ-ಮೋಟಾರ್‌ನೊಂದಿಗೆ ಜೋಡಿಸಲ್ಪಟ್ಟಿವೆ. ನಿಮ್ಮ ಮಾಹಿತಿಗಾಗಿ ವಿವರವಾದ ವಿಶೇಷಣಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:

ಮಾನದಂಡಗಳು

ಕಿಯಾ ಇವಿ4 ಬೇಸ್‌

ಕಿಯಾ ಇವಿ4 ಟಾಪ್‌

ಪವರ್‌ (ಪಿಎಸ್‌)

204 ಪಿಎಸ್‌

ಬ್ಯಾಟರಿ ಪ್ಯಾಕ್‌

58.3 ಕಿ.ವ್ಯಾಟ್‌

81.4 ಕಿ.ವ್ಯಾಟ್‌

WLTP-ಕ್ಲೈಮ್‌ ಮಾಡಲಾದ ರೇಂಜ್‌

430 ಕಿ.ಮೀ.ವರೆಗೆ

630 ಕಿ.ಮೀ.ವರೆಗೆ

10 - 80 ಪ್ರತಿಶತ ಫಾಸ್ಟ್‌ ಚಾರ್ಜಿಂಗ್ ಸಮಯ

29 ನಿಮಿಷಗಳು*

31 ನಿಮಿಷಗಳು*

0-100 kmph ಸಮಯ

7.4 ಸೆಕೆಂಡ್‌ಗಳು

7.7 ಸೆಕೆಂಡ್‌ಗಳು

*ಫಾಸ್ಟ್‌ ಚಾರ್ಜಿಂಗ್ ವೇಗವನ್ನು ಘೋಷಿಸಲಾಗುವುದು.

ಕಿಯಾ EV4: ಭಾರತದಲ್ಲಿ ಬಿಡುಗಡೆ ಯಾವಾಗ ?

ಈ ಸಮಯದಲ್ಲಿ, ಕಿಯಾ EV4 ಅನ್ನು ಭಾರತಕ್ಕೆ ತರುವ ಯಾವುದೇ ಯೋಜನೆಯನ್ನು ಘೋಷಿಸಿಲ್ಲ, ಆದರೂ ಈ ಹೆಸರನ್ನು ಕಾರು ತಯಾರಕರು ಟ್ರೇಡ್‌ಮಾರ್ಕ್ ಮಾಡಿದ್ದಾರೆ. ಹಾಗೆಯೇ, ಕಾರು ತಯಾರಕರು ಈಗಾಗಲೇ ಭಾರತದಲ್ಲಿ ಹೆಚ್ಚು ಪ್ರೀಮಿಯಂ ಆದ ಕಿಯಾ EV6 ಮತ್ತು ಕಿಯಾ EV9 ಗಳನ್ನು ಹೊಂದಿರುವುದರಿಂದ, ಭವಿಷ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯನ್ನು ನಾವು ತಳ್ಳಿಹಾಕುವಂತಿಲ್ಲ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on Kia ev4

explore ಇನ್ನಷ್ಟು on ಕಿಯಾ ev4

ಕಿಯಾ ev4

Rs.Price To Be Announced* Estimated Price
ಮೇ 15, 2030 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ