ಮೊದಲ ಬಾರಿಗೆ ಪರೀಕ್ಷೆ ನಡೆಸುವ ವೇಳೆಗೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ Renault Triber ಫೇಸ್‌ಲಿಫ್ಟ್
ರೆನಾಲ್ಟ್ ಟ್ರೈಬರ್ 2025 ಗಾಗಿ dipan ಮೂಲಕ ಮಾರ್ಚ್ 21, 2025 06:33 pm ರಂದು ಪ್ರಕಟಿಸಲಾಗಿದೆ
- 7 Views
- ಕಾಮೆಂಟ್ ಅನ್ನು ಬರೆಯಿರಿ
ಫೇಸ್‌ಲಿಫ್ಟೆಡ್ ಟ್ರೈಬರ್‌ನ ಸ್ಪೈ ಶಾಟ್ ಹಿಂಭಾಗದ ವಿನ್ಯಾಸವನ್ನು ಭಾರೀ ಕವರ್‌ನೊಂದಿಗೆ ಹೊಸ ಸ್ಪ್ಲಿಟ್-ಎಲ್ಇಡಿ ಟೈಲ್ ಲೈಟ್‌ಗಳು ಮತ್ತು ಟೈಲ್‌ಗೇಟ್ ವಿನ್ಯಾಸದಂತೆ ಕಾಣುತ್ತದೆ
-
ವಿನ್ಯಾಸ ಬದಲಾವಣೆಗಳಲ್ಲಿ ಹೊಸ ಅಲಾಯ್ ವೀಲ್ ವಿನ್ಯಾಸ, ಮುಂಭಾಗದ ಬಂಪರ್ ಮತ್ತು ಪರಿಷ್ಕೃತ ಹೆಡ್‌ಲೈಟ್ ವಿನ್ಯಾಸವನ್ನು ಒಳಗೊಂಡಿರಬಹುದು.
-
ಒಳಭಾಗದಲ್ಲಿ, ಇದು ಸ್ವಲ್ಪ ಮಾರ್ಪಡು ಮಾಡಿದ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ವಿಭಿನ್ನ ಕ್ಯಾಬಿನ್ ಥೀಮ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
-
ಫೀಚರ್‌ಗಳ ವಿಷಯದಲ್ಲಿ, ಇದು ಅದೇ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿರಬಹುದು.
-
ಇದು ಆಟೋ ಎಸಿ ಮತ್ತು ಆಟೋ-ಡಿಮ್ಮಿಂಗ್ ಐಆರ್‌ವಿಎಮ್‌ನಂತಹ ಹೊಸ ಫೀಚರ್‌ಗಳನ್ನು ಪಡೆಯಬಹುದು.
-
ಸುರಕ್ಷತಾ ಪ್ಯಾಕೇಜ್‌ನಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿರಬಹುದು.
-
ಅದೇ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ (72 PS/96 Nm) ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
-
ಇದು ಪ್ರಸ್ತುತ ಲಭ್ಯವಿರುವ ಟ್ರೈಬರ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರಬಹುದೆಂಬ ನಿರೀಕ್ಷೆಯಿದೆ.
2025ರ ಜನವರಿಯಲ್ಲಿ, ರೆನಾಲ್ಟ್ ಟ್ರೈಬರ್ ವರ್ಷದ ದ್ವಿತೀಯಾರ್ಧದಲ್ಲಿ ಮಿಡ್‌ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆಯಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಈಗ, 2025 ಟ್ರೈಬರ್‌ನ ಪರೀಕ್ಷಾರ್ಥ ಆವೃತ್ತಿ ಇತ್ತೀಚೆಗೆ ಭಾರೀ ಮರೆಮಾಚುವಿಕೆಯಲ್ಲಿ ಕಂಡುಬಂದಿದ್ದು, ಸ್ಪೈ ಶಾಟ್‌ಗಳು ಹಿಂಭಾಗದ ಪ್ರೊಫೈಲ್ ಅನ್ನು ಮಾತ್ರ ತೋರಿಸುತ್ತದೆ. ನಾವು ಇದರಲ್ಲಿ ಗಮನಿಸಬಹುದಾದ ಎಲ್ಲಾ ಅಂಶಗಳು ಇಲ್ಲಿವೆ:
ಏನನ್ನು ಗಮನಿಸಬಹುದು ?
ಸಂಪೂರ್ಣವಾಗಿ ಕವರ್‌ನಿಂದ ಆವೃತವಾಗಿದ್ದರೂ, ಕೆಲವು ವಿನ್ಯಾಸ ಅಂಶಗಳನ್ನು 2025ರ ರೆನಾಲ್ಟ್ ಟ್ರೈಬರ್‌ನಲ್ಲಿ ಕಾಣಬಹುದು. ಸ್ಪ್ಲಿಟ್-ಟೈಪ್ ಎಲ್‌ಇಡಿ ಟೈಲ್ ಲೈಟ್ ವಿನ್ಯಾಸ ಕಂಡುಬಂದಿದ್ದು, ಪ್ರಸ್ತುತ-ಲಭ್ಯವಿರುವ ಮೊಡೆಲ್‌ನ ಟೈಲ್ ಲೈಟ್‌ಗಳಿಗೆ ಹೋಲಿಸಿದರೆ ಇದು ಕೆಲವು ವಿನ್ಯಾಸ ಪರಿಷ್ಕರಣೆಗಳನ್ನು ಪಡೆಯಬಹುದು.
ಹಿಂಭಾಗದ ವೈಪರ್ ಅನ್ನು ಸಹ ಗಮನಿಸಬಹುದು ಮತ್ತು ಟೈಲ್‌ಗೇಟ್ ಕೂಡ ಹೆಚ್ಚು ಆಕ್ರಮಣಕಾರಿ ಕರ್ವ್‌ಗಳನ್ನು ಹೊಂದಿರುವಂತೆ ತೋರುತ್ತದೆ ಮತ್ತು ಬಂಪರ್ ಅನ್ನು ಮರುವಿನ್ಯಾಸಗೊಳಿಸುವ ಸಾಧ್ಯತೆಯಿದೆ.
ಸೈಡ್‌ನ ಭಾಗವು ಭಾಗಶಃ ಗೋಚರಿಸುತ್ತಿದ್ದರೂ, ಅದು ಪ್ರಸ್ತುತ-ಲಭ್ಯವಿರುವ ಮೊಡೆಲ್‌ಗೆ ಹೋಲುತ್ತದೆ. ಆದರೂ, ಇದು ಹೊಸ ಅಲಾಯ್ ಚಕ್ರಗಳನ್ನು ಪಡೆಯಬಹುದು.
ಮುಂಭಾಗವು ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು, ಗ್ರಿಲ್ ಮತ್ತು ಬಂಪರ್ ವಿನ್ಯಾಸವನ್ನು ಒಳಗೊಂಡಿರಬಹುದು. ಇಂಟೀರಿಯರ್‌ಅನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಫೇಸ್‌ಲಿಫ್ಟೆಡ್ ನಿಸ್ಸಾನ್ ಮ್ಯಾಗ್ನೈಟ್‌ನೊಂದಿಗೆ ಕಂಡುಬರುವಂತೆ ಇದು ಸ್ವಲ್ಪ ಮಾರ್ಪಡಿಸಿದ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ವಿಭಿನ್ನ ಕ್ಯಾಬಿನ್ ಥೀಮ್ ಅನ್ನು ಪಡೆಯಬಹುದು ಎಂದು ನಾವು ನಿರೀಕ್ಷಿಸುತ್ತೇವೆ.
ಇದನ್ನೂ ಓದಿ: ಮುಂದಿನ ತಿಂಗಳಿನಿಂದ Honda ಕಾರುಗಳ ಬೆಲೆಯಲ್ಲೂ ಏರಿಕೆ
2025 ರೆನಾಲ್ಟ್ ಟ್ರೈಬರ್: ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ
ಫೀಚರ್‌ಗಳ ಸೂಟ್ ಪ್ರಸ್ತುತ-ಲಭ್ಯವಿರುವ ಟ್ರೈಬರ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದು ಆಟೋ ಎಸಿ ಮತ್ತು ಆಟೋ-ಡಿಮ್ಮಿಂಗ್ ಇನ್‌ಸೈಡ್ ರಿಯರ್-ವ್ಯೂ ಮಿರರ್ (IRVM) ಅನ್ನು ಸಹ ಪಡೆಯಬಹುದು.
ಪ್ರಸ್ತುತ-ಲಭ್ಯವಿರುವ ಟ್ರೈಬರ್‌ನಲ್ಲಿ ನೀಡಲಾಗುವ 4 ಏರ್‌ಬ್ಯಾಗ್‌ಗಳಿಗೆ ಹೋಲಿಸಿದರೆ ಹೊಸ ಆವೃತ್ತಿಯ ಸುರಕ್ಷತಾ ಸೂಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಒಳಗೊಂಡಿರಬಹುದು. ಇತರ ಸುರಕ್ಷತಾ ಫೀಚರ್‌ಗಳು ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ), ಹಿಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ರಿಯರ್-ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಸೇರಿದಂತೆ ಎಲ್ಲವು ಹಿಂದಿನಂತೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
2025 ರೆನಾಲ್ಟ್ ಟ್ರೈಬರ್: ನಿರೀಕ್ಷಿತ ಪವರ್‌ಟ್ರೇನ್ ಆಯ್ಕೆಗಳು
2025ರ ರೆನಾಲ್ಟ್ ಟ್ರೈಬರ್ ಪ್ರಸ್ತುತ-ಮೊಡೆಲ್‌ನಲ್ಲಿ ಲಭ್ಯವಿರುವ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ. ವಿವರಗಳು ಇಲ್ಲಿವೆ:
ಎಂಜಿನ್ |
1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ |
ಪವರ್ |
72 ಪಿಎಸ್ |
ಟಾರ್ಕ್ |
96 ಎನ್‌ಎಮ್ |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನ್ಯುವಲ್ / 5-ಸ್ಪೀಡ್ AMT |
ಈ ಎಂಜಿನ್ ಸಿಎನ್‌ಜಿ ಆಯ್ಕೆಯನ್ನು ಮ್ಯಾನ್ಯುವಲ್ ಆಯ್ಕೆಯೊಂದಿಗೆ ಪಡೆಯುತ್ತದೆ, ಇದನ್ನು ಅಧಿಕೃತ ಮಾರಾಟಗಾರರಿಂದ ಮರುಜೋಡಿಸಬಹುದಾಗಿದೆ.
ಹಾಗೆಯೇ, ಟ್ರೈಬರ್ ಕಿಗರ್‌ನ 100 ಪಿಎಸ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರಬಹುದು, ಆದರೆ ಈ ವಿಷಯದಲ್ಲಿ ಫ್ರೆಂಚ್ ಕಾರು ತಯಾರಕರಿಂದ ಇನ್ನೂ ಯಾವುದೇ ಸ್ಪಷ್ಟನೆ ಬಂದಿರುವುದಿಲ್ಲ.
2025 ರೆನಾಲ್ಟ್ ಟ್ರೈಬರ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2025ರ ರೆನಾಲ್ಟ್ ಟ್ರೈಬರ್ ಪ್ರಸ್ತುತ ಲಭ್ಯವಿರುವ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಬಹುದೆಂದು ನಿರೀಕ್ಷಿಸಲಾಗಿದೆ, ಪ್ರಸ್ತುತ ಇದರ ಬೆಲೆ 6.10 ಲಕ್ಷ ರೂ.ನಿಂದ 8.97 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ) ಇದೆ. ಪ್ರಸ್ತುತ-ಲಭ್ಯವಿರುವ ಮೊಡೆಲ್‌ನಂತೆ, ಫೇಸ್‌ಲಿಫ್ಟೆಡ್ ಟ್ರೈಬರ್ ಭಾರತದಲ್ಲಿ ನೇರ ಪ್ರತಿಸ್ಪರ್ಧಿಯನ್ನು ಹೊಂದಿರುವುದಿಲ್ಲ ಆದರೆ ಇದನ್ನು ಮಾರುತಿ ಎರ್ಟಿಗಾ, ಮಾರುತಿ XL6 ಮತ್ತು ಕಿಯಾ ಕ್ಯಾರೆನ್ಸ್‌ಗಳಿಗೆ ಚಿಕ್ಕದಾದ ಮತ್ತು ಹೆಚ್ಚು ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ