ಭಾರತದಲ್ಲಿ ಪುನರಾಗಮನವನ್ನು ಮಾಡುತ್ತಿರುವ Skoda Superb, 54 ಲಕ್ಷ ರೂ.ಗೆ ಬಿಡುಗಡೆ

published on ಏಪ್ರಿಲ್ 03, 2024 08:12 pm by ansh for ಸ್ಕೋಡಾ ಸೂಪರ್‌

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೋಡಾದ ಈ ಪ್ರಮುಖ ಸೆಡಾನ್ ಅದು ಬಿಟ್ಟುಹೋದ ಅದೇ ಅವತಾರದಲ್ಲಿ ಭಾರತಕ್ಕೆ ಮತ್ತೆ ಮರಳುತ್ತದೆ

Skoda Superb Launched

  • ಇದು  2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಅದು 190 PS ಅನ್ನು ಉತ್ಪಾದಿಸುತ್ತದೆ ಮತ್ತು 7-ಸ್ಪೀಡ್ DSG ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.
  • ಇದು 2023 ರಲ್ಲಿ ಸ್ಥಗಿತಗೊಂಡ ಮೊಡೆಲ್‌ನ ಅದೇ ಬಾಹ್ಯ ಮತ್ತು ಇಂಟಿರೀಯರ್‌ ವಿನ್ಯಾಸದೊಂದಿಗೆ ಬರುತ್ತದೆ.
  • ಇದರಲ್ಲಿ ಸನ್‌ರೂಫ್ ಮಿಸ್‌ ಆಗಿದೆ, ಆದರೆ ಡ್ರೈವರ್ ಮೋಡ್‌ಗಳೊಂದಿಗೆ ಡ್ರೈವರ್-ನೀ ಏರ್‌ಬ್ಯಾಗ್ ಮತ್ತು ಡೈನಾಮಿಕ್ ಚಾಸಿಸ್ ಕಂಟ್ರೋಲ್‌ ಅನ್ನು ಸೇರಿಸುತ್ತದೆ.
  • ಹೊಸ ಬಣ್ಣದ ಆಯ್ಕೆಗಳೆಂದರೆ  ರೊಸ್ಸೊ ಬ್ರೂನೆಲ್ಲೋ ಮತ್ತು ವಾಟರ್ ವರ್ಲ್ಡ್ ಗ್ರೀನ್ ಮತ್ತು ಮ್ಯಾಜಿಕ್ ಬ್ಲ್ಯಾಕ್.
  • ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 54 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. 

ಕಳೆದ ವರ್ಷ ಸ್ಥಗಿತಗೊಂಡ ನಂತರ, ಇದೀಗ ಸ್ಕೋಡಾ ಸೂಪರ್ಬ್ ಭಾರತಕ್ಕೆ ಮತ್ತೆ ಅದೇ ಆವೃತ್ತಿಯಲ್ಲಿ ಭಾರತಕ್ಕೆ ಮರಳಿದೆ. ಭಾರತದಲ್ಲಿ ಸ್ಕೋಡಾ ಸೂಪರ್ಬ್ 54 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ ಮತ್ತು ಇದು ಸ್ಥಗಿತಗೊಳ್ಳುವ ಮೊದಲು ನೀಡಲಾದ ಅದೇ ವೈಶಿಷ್ಟ್ಯಗಳು, ಪವರ್‌ಟ್ರೇನ್ ಮತ್ತು ವಿನ್ಯಾಸವನ್ನು ನೀಡುತ್ತದೆ. ಕಳೆದ ವರ್ಷ ಜಾಗತಿಕವಾಗಿ ಅನಾವರಣಗೊಂಡ ಹೊಸ ತಲೆಮಾರಿನ ಸೂಪರ್ಬ್ ಅನ್ನು ನಾವು ಪಡೆಯಲು ಆಶಿಸುತ್ತಿರುವಾಗ, ಸ್ಕೋಡಾ ನೀಡುತ್ತಿರುವುದನ್ನು ನಾವು ಸ್ವೀಕರಿಸಬೇಕಾಗಿದೆ. ಸ್ಕೋಡಾ ಸೂಪರ್ಬ್ ಏನನ್ನು ಪಡೆಯುತ್ತದೆ ಎಂಬುವುದು ಇಲ್ಲಿದೆ.

ಬೆಲೆ

ವೇರಿಯೆಂಟ್‌

ಎಕ್ಸ್ ಶೋರೂಂ ಬೆಲೆ

ಎಲ್ & ಕೆ ಆಟೋಮ್ಯಾಟಿಕ್‌

54 ಲಕ್ಷ ರೂ.

ಅದೇ ವಿನ್ಯಾಸ

Skoda Superb Front

ವಿನ್ಯಾಸದ ವಿಷಯದಲ್ಲಿ ಏನೂ ಬದಲಾಗಿಲ್ಲ. ಇದು ಅದೇ ಗ್ರಿಲ್, ಎಲ್-ಆಕಾರದ ಡಿಎಲ್‌ಆರ್‌ಗಳೊಂದಿಗೆ ಆಯತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ನಯವಾದ ಬಂಪರ್ ಮತ್ತು ತೆಳುವಾದ ಕ್ರೋಮ್ ಸ್ಟ್ರಿಪ್‌ನಿಂದ ಕನೆಕ್ಟ್‌ ಆಗಿರುವ ಬಂಪರ್‌ನಲ್ಲಿ ಫಾಗ್ ಲ್ಯಾಂಪ್ ಸೆಟಪ್ ಅನ್ನು ಪಡೆಯುತ್ತದೆ. 

Skoda Superb Rear

ಸೈಡ್ ಪ್ರೊಫೈಲ್ ಅದರ ಉದ್ದವನ್ನು ತೋರಿಸುತ್ತದೆ ಮತ್ತು ನೀವು ವಿಂಡೋ ಲೈನ್‌ನಲ್ಲಿ ತೆಳುವಾದ ಕ್ರೋಮ್ ಸ್ಟ್ರಿಪ್ ಅನ್ನು ಸಹ ಗುರುತಿಸಬಹುದು. ಸ್ಕೋಡಾ ಈಗ ಸೂಪರ್ಬ್ ಅನ್ನು 18-ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ನೀಡುತ್ತದೆ. ಸ್ಥಗಿತಗೊಂಡ ಆವೃತ್ತಿಯ 17-ಇಂಚಿನ ಚಕ್ರಕ್ಕಿಂತ ಇದು ಭಿನ್ನವಾಗಿದೆ. ಹಿಂಬದಿಯಲ್ಲಿ, ಸೆಡಾನ್ ಕ್ರೋಮ್ ಸ್ಟ್ರಿಪ್ ಮತ್ತು ಕ್ರೋಮ್ ಗಾರ್ನಿಶ್‌ನೊಂದಿಗೆ ಸ್ಲಿಮ್ ಬಂಪರ್‌ನಿಂದ ಕನೆಕ್ಟ್‌ ಆಗಿರುವ ನಯವಾದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ.

ಅದೇ ರೀತಿಯ ಕ್ಯಾಬಿನ್‌

Skoda Superb Cabin

ಸುಪರ್ಬ್‌ನ ಈ ಆವೃತ್ತಿಯು ಸರಳವಾದ ಹಾಗು ಸೊಗಸಾದ ಒಳಾಂಗಣವನ್ನು ಹೊಂದಿದೆ, ಆದರೂ ಈಗಿನ ವಿನ್ಯಾಸದ ಪ್ರಕಾರ ಇದು ಸ್ವಲ್ಪ ಹಳೆಯದಾಗಿದ್ದು ಮತ್ತು ಕ್ಯಾಬಿನ್ ಅನ್ನು ಕಪ್ಪು ಮತ್ತು ಕಂದು ಥೀಮ್‌ನಲ್ಲಿ ಹೊಂದಬಹುದು. ಡ್ಯಾಶ್‌ಬೋರ್ಡ್ ಸ್ಲಿಮ್ ಎಸಿ ವೆಂಟ್‌ಗಳನ್ನು ಹೊಂದಿದೆ, ಸೆಂಟರ್ ಕನ್ಸೋಲ್ ಗ್ಲೋಸ್‌ ಬ್ಲ್ಯಾಕ್‌ನಲ್ಲಿ ಫಿನಿಶ್‌ ಮಾಡಲಾಗಿದೆ ಮತ್ತು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಇದೆ. ಕ್ಯಾಬಿನ್ ಎಸಿ ವೆಂಟ್‌ಗಳ ಸುತ್ತಲೂ, ಸೆಂಟರ್ ಕನ್ಸೋಲ್‌ನಲ್ಲಿ, ಬಾಗಿಲುಗಳಲ್ಲಿ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಕ್ರೋಮ್ ಅಂಶಗಳನ್ನು ಪಡೆಯುತ್ತದೆ. ಸ್ಕೋಡಾ ಪವರ್ ನ್ಯಾಪ್ (ಕಿರು ನಿದ್ದೆ) ಪ್ಯಾಕೇಜ್‌ನೊಂದಿಗೆ ಹಿಂಭಾಗದ ಸೌಕರ್ಯವನ್ನು ಅಪ್‌ಗ್ರೇಡ್ ಮಾಡಿದೆ, ಇದು ಹಿಂಭಾಗದ ಹೆಡ್‌ರೆಸ್ಟ್‌ಗಳಿಗೆ ಮಲಗುವಾಗ ಹೆಡ್ ಸಪೋರ್ಟ್‌ಗಾಗಿ ಹೊಂದಾಣಿಕೆ ಮಾಡಬಹುದಾದ ವಿಂಗ್ಸ್‌ಗಳನ್ನು ನೀಡುತ್ತದೆ ಮತ್ತು ಕಂಬಳಿಯನ್ನು ನೀಡುತ್ತದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

Skoda Superb Touchscreen

ವೈಶಿಷ್ಟ್ಯಗಳ ವಿಷಯದಲ್ಲಿ, ಇದು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೂರು-ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಸಂಪೂರ್ಣ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, 12-ಸ್ಪೀಕರ್ 610W ಕ್ಯಾಂಟನ್ ಸೌಂಡ್ ಸಿಸ್ಟಮ್, ಡ್ರೈವರ್ ಸೀಟ್‌ಗಾಗಿ ಮೆಮೊರಿ ಫಂಕ್ಷನ್‌ನೊಂದಿಗೆ 12-ವೇ ಎಲೆಕ್ಟ್ರಿಕಲ್ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟು, ಕೂಲಿಂಗ್ ಮತ್ತು ಹೀಟಿಂಗ್‌ನೊಂದಿಗೆ ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳು ಮತ್ತು ಚಾಲಕ ಸೀಟಿಗೆ ಮಸಾಜ್ ಫಂಕ್ಷನ್‌ಗಳನ್ನು ಪಡೆಯುತ್ತದೆ.  ಆದರೆ, ಸೂಪರ್ಬ್ ಈಗ ಸನ್‌ರೂಫ್‌ನೊಂದಿಗೆ ಬರುವುದಿಲ್ಲ. ಇದು ಈಗ ಡ್ರೈವ್ ಮೋಡ್‌ಗಳೊಂದಿಗೆ ಡೈನಾಮಿಕ್ ಚಾಸಿಸ್ ಕಂಟ್ರೋಲ್‌ನೊಂದಿಗೆ ಬರುತ್ತದೆ.

ಇದನ್ನು ಸಹ ಓದಿ: ಭಾರತದಲ್ಲಿ Toyota Taisor ಬಿಡುಗಡೆ, ಬೆಲೆಗಳು 7.74 ಲಕ್ಷ ರೂ.ನಿಂದ ಪ್ರಾರಂಭ 

ಸುರಕ್ಷತೆಯ ದೃಷ್ಟಿಯಿಂದ, ಇದು 9 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡುತ್ತದೆ. 

ಪವರ್‌ಟ್ರೇನ್‌

Skoda Superb 7-speed DSG

ಇಂಜಿನ್

2-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

190 ಪಿಎಸ್

ಟಾರ್ಕ್

320 ಎನ್ಎಂ

ಟ್ರಾನ್ಸ್‌ಮಿಷನ್‌

7-ಸ್ಪೀಡ್‌ DSG

ಡ್ರೈವ್‌ಟ್ರೈನ್

ಫ್ರಂಟ್‌ ವೀಲ್‌ ಡ್ರೈವ್‌

ಸೂಪರ್ಬ್ ಅದೇ ಎಂಜಿನ್ ಆಯ್ಕೆಯೊಂದಿಗೆ ಬರುವುದನ್ನು ಮುಂದುವರೆಸಿದೆ. ಇದು 7-ಸ್ಪೀಡ್ DSG ಟ್ರಾನ್ಸ್‌ಮಿಷನ್‌ನೊಂದಿಗೆ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುತ್ತದೆ. ಅಂತರಾಷ್ಟ್ರೀಯವಾಗಿ, ಈ ಪವರ್‌ಟ್ರೇನ್ ಅನ್ನು ಆಲ್-ವೀಲ್-ಡ್ರೈವ್ (AWD) ಸಿಸ್ಟಮ್‌ನೊಂದಿಗೆ ನೀಡಲಾಗುತ್ತದೆ, ಆದರೆ ಅದು ಇಂಡಿಯಾ-ಸ್ಪೆಕ್ ಸೂಪರ್ಬ್‌ನ ಆಫರ್‌ನಲ್ಲಿಲ್ಲ.

ಪ್ರತಿಸ್ಪರ್ಧಿಗಳು

 ಇದು 54 ಲಕ್ಷ ರೂ.ನಷ್ಟು ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಸ್ಕೋಡಾ ಸೂಪರ್ಬ್ ಭಾರತದಲ್ಲಿ ಕೇವಲ ಒಬ್ಬ ಪ್ರತಿಸ್ಪರ್ಧಿಯನ್ನು ಹೊಂದಿದೆ ಮತ್ತು ಇದು ಟೊಯೋಟಾ ಕ್ಯಾಮ್ರಿ ಹೈಬ್ರಿಡ್ ಆಗಿದೆ. Mercedes-Benz, Audi, ಮತ್ತು BMW ನಂತಹ ಬ್ರ್ಯಾಂಡ್‌ಗಳ ಐಷಾರಾಮಿ ಸೆಡಾನ್‌ಗಳಿಗೆ ಹಣದ ಮೌಲ್ಯಕ್ಕೆ ಪರ್ಯಾಯವೆಂದು ಪರಿಗಣಿಸಬಹುದು. ಸುಪರ್ಬ್‌ನ ಈ ಆವೃತ್ತಿಯು ಯಾವುದೇ ಪ್ರತಿಸ್ಪರ್ಧಿ ಅಥವಾ ಪರ್ಯಾಯಕ್ಕಿಂತ ಬಹಳ ವಿರಳವಾಗಿರುತ್ತದೆ, ಏಕೆಂದರೆ ಸ್ಕೋಡಾ ದೇಶಕ್ಕೆ ಕೇವಲ 100 ಕಾರುಗಳನ್ನು ತರುತ್ತಿದೆ. ಈ ತಿಂಗಳ ಕೊನೆಯಲ್ಲಿ ಡೆಲಿವರಿಗಳು ಪ್ರಾರಂಭವಾಗುತ್ತವೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸ್ಕೋಡಾ ಸೂಪರ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience