Tata Acti.EV: 600 Km ತನಕದ ಶ್ರೇಣಿ, ವಿವಿಧ ಬಾಡಿ ಗಾತ್ರಗಳು ಮತ್ತು AWD ಸೇರಿದಂತೆ ಪವರ್ ಟ್ರೇನ್ ಆಯ್ಕೆಗಳ ವಿವರಣೆ ಇಲ್ಲಿದೆ
ಈ ಹೊಸ ಪ್ಲಾಟ್ಫಾರ್ಮ್, ಟಾಟಾ ಪಂಚ್ EV ಯಿಂದ ಹಿಡಿದು ಟಾಟಾ ಹ್ಯಾರಿಯರ್ EV ತನಕ ಎಲ್ಲದಕ್ಕೂ ಆಧಾರ ಒದಗಿಸುತ್ತದೆ
ಭಾರತದಲ್ಲಿ ಮಾಸ್ ಮಾರ್ಕೆಟ್ EV ಗಳ ಪ್ರಮುಖ ಬ್ರಾಂಡ್ ಆಗಿರುವ ಟಾಟಾವು ತನ್ನ ಹೊಸ ತಲೆಮಾರಿನ EV ಪ್ಲಾಟ್ಫಾರ್ಮ್ ಅನ್ನು ಘೋಷಿಸಿದ್ದು, ಇದನ್ನು ಆಕ್ಟಿ.EV ಆರ್ಕಿಟೆಕ್ಚರ್ ಎಂದು ಕರೆಯಲಾಗುತ್ತದೆ. ಈ ಪ್ಲಾಟ್ಫಾರ್ಮ್, ವಿವಿಧ ಗಾತ್ರಗಳಲ್ಲಿ ಬರಲಿರುವ ಟಾಟಾದ ಭವಿಷ್ಯದ ಎಲ್ಲಾ ಮಾಸ್ ಮಾರ್ಕೆಟ್ EV ಗಳಿಗೆ ಆಧಾರ ಒದಗಿಸಲಿದೆ. ಈ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ:
ಹೆಸರಿನ ವಿವರಣೆ
ಟಾಟಾದ ಪ್ಲಾಟ್ಫಾರ್ಮ್ ಹೆಸರುಗಳು ಸಾಮಾನ್ಯವಾಗಿ ಸಂಕ್ಷಿಪ್ತ ರೂಪದಲ್ಲಿ ಬರುತ್ತವೆ. ಈ ಹೆಸರು ಸಹ ಇದಕ್ಕಿಂತ ಭಿನ್ನವಾಗಿಲ್ಲ. ಆಕ್ಟಿ.EV ಎಂದರೆ ಅಡ್ವಾನ್ಸ್ಡ್ ಕನೆಕ್ಟೆಡ್ ಟೆಕ್ ಇಂಟೆಲಿಜೆನ್ಸ್ ಎಲೆಕ್ಟ್ರಿಕ್ ವೆಹಿಕಲ್ ಆರ್ಕಿಟೆಕ್ಚರ್ ಎಂದರ್ಥ. ಇದು, ದೀರ್ಘಕಾಲದಿಂದ ಕಾಯುತ್ತಿದ್ದ ಜೆನ್2 ಟಾಟಾ EV ಪ್ಲಾಟ್ಫಾರ್ಮ್ ನ ಅಧಿಕೃತ ಹೆಸರಾಗಿದ್ದು, ಶುದ್ಧ EV ಆರ್ಕಿಟೆಕ್ಚರ್ ಆಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ
ಇದು ಈಗಿನ ಟಾಟಾ EV ಪ್ಲಾಟ್ಫಾರ್ಮ್ ಗಳಿಗಿಂತ ಹೇಗೆ ಭಿನ್ನವಾಗಿದೆ?
ಈಗಿನ ಟಾಟಾ EVಗಳ ಸಾಲು, ಇಂಟರ್ನಲ್ ಕಂಬಷನ್ ಎಂಜಿನ್ (ICE) ಮತ್ತು ಎಲೆಕ್ಟ್ರಿಕ್ ಪವರ್ ಟ್ರೇನ್ ಗಳೆರಡನ್ನೂ ಬೆಂಬಲಿಸುವ ಪ್ಲಾಟ್ಫಾರ್ಮ್ ಗಳನ್ನು ಬಳಸುತ್ತದೆ. ಇದು ಎರಡನ್ನು ಹೊಂದಿರಬೇಕಾಗುವುದರಿಂದ ವಿನ್ಯಾಸದಲ್ಲಿ ಮತ್ತು ಹೊಸ EV ಗಳ ಪ್ಯಾಕೇಜಿಂಗ್ ಆಯ್ಕೆಗಳಲ್ಲಿ ಕೆಲವೊಂದು ಮಿತಿಗಳಿವೆ.
ಆದರೆ ಆಕ್ಟಿ.EV ವಿನ್ಯಾಸವು ಸಂಪೂರ್ಣವಾಗಿ EV ಪ್ಲಾಟ್ಫಾರ್ಮ್ ಆಗಿದ್ದು, ಸ್ಥಳಾವಕಾಶ ಮತ್ತು ಶಕ್ತಿಯ ಬಳಕೆಯ ದಕ್ಷತೆಗೆ ಗಮನ ನೀಡುವ ಮೂಲಕ ಎಲ್ಲಾ ಅಂಶಗಳನ್ನು ಸಂಯೋಜಿಸುವ ಸ್ವಾತಂತ್ರ್ಯವನ್ನು ಟಾಟಾ ಎಂಜಿನಿಯರ್ ಗಳಿಗೆ ನೀಡುತ್ತದೆ. ಅಲ್ಲದೆ ಇದು ವಾಹನದ ಗಾತ್ರ, ಬ್ಯಾಟರಿ ಪ್ಯಾಕ್ ಗಾತ್ರ, ಡ್ರೇವ್ ಟ್ರೇನ್ ಗಳ ಪ್ರಕಾರಗಳು ಮತ್ತು ಚಾರ್ಜಿಂಗ್ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ನಮ್ಯತೆಯನ್ನು ಒದಗಿಸುತ್ತದೆ. ಇದು ಅಪ್ಪಟ EV ಪ್ಲಾಟ್ಫಾರ್ಮ್ ಆಗಿರುವುದರಿಂದ, ಆಕ್ಟಿ.EV ಆಧರಿತ ಮಾದರಿಗಳನ್ನು ಅವುಗಳ ಈಗಿನ ICE ಮಾದರಿಗಳಿಂದ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ.
ತಾಂತ್ರಿಕ ಸಾಮರ್ಥ್ಯಗಳು
ಆಕ್ಟಿ.EV ಪ್ಲಾಟ್ಫಾರ್ಮ್ ಅನ್ನು ಆಧರಿಸಿದ EV ಗಳು 600 km ತನಕದ ಶ್ರೇಣಿಯನ್ನು ನೀಡಲಿವೆ ಎಂದು ಟಾಟಾ ಸಂಸ್ಥೆಯು ಹೇಳಿದೆ. ಈ Evಗಳು 11kW ಯಷ್ಟು AC ಚಾರ್ಜಿಂಗ್ ಮತ್ತು 150kW ತನಕದ DC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿವೆ. ಈ Evಗಳ ಕಾರ್ಯಕ್ಷಮತೆಯ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಹೊಸ ತಲೆಮಾರಿನ ವಿನ್ಯಾಸವು ಫ್ರಂಟ್ ವೀಲ್ ಡ್ರೈವ್ (FWD), ರಿಯರ್ ವೀಲ್ ಡ್ರೇವ್ (RWD) ಮತ್ತು ಆಲ್ ವೀಲ್ ಡ್ರೈವ್ (AWD) ಪವರ್ ಟ್ರೇನ್ ಗಳನ್ನು ಆಧರಿಸಲಿದೆ ಎಂದು ಟಾಟಾವು ಹೇಳಿದೆ.
ಬ್ಯಾಟರಿ ಪ್ಯಾಕ್ ಗಾತ್ರಗಳ ನಿಖರ ಅಂಕಿಅಂಶಗಳನ್ನು ಟಾಟಾ ಸಂಸ್ಥೆಯು ಬಹಿರಂಗಗೊಳಿಸದೆ ಇದ್ದರೂ, ಅನೇಕ ಆಯ್ಕೆಗಳು ದೊರೆಯಲಿದ್ದು ಇದು ವಿವಿಧ ಬಾಡಿ ಗಾತ್ರಗಳನ್ನು ಬೆಂಬಲಿಸಲಿದೆ ಎಂಬುದು ನಮಗೆ ತಿಳಿದಿದೆ. ಆಕ್ಟಿ.EV ಪ್ಲಾಟ್ಫಾರ್ಮ್, ಮುಂಬರುವ ಟಾಟಾ EVಗಳನ್ನು, ಮಾರುಕಟ್ಟೆಯಲ್ಲಿ ಅತ್ಯಧಿಕ ಕಿಲೋಮೀಟರ್ ಶ್ರೇಣಿಯೊಂದಿಗೆ ಕೆಲವು ಅತ್ಯಂತ ವಿಸ್ತೃತ ಆಯ್ಕೆಗಳಾಗಿ ಪರಿವರ್ತಿಸುವುದು ಖಚಿತ.
ಸುರಕ್ಷತೆ ಮತ್ತು ಸುಸ್ಥಿರತೆಗೆ ಗಮನ
ಭಾರತದಲ್ಲಿ ಅತ್ಯಂತ ಸುರಕ್ಷಿತ ಮಾಸ್ ಮಾರ್ಕೆಟ್ ಕಾರುಗಳೊಂದಿಗೆ (NCAP ಪರೀಕ್ಷಿಸಿದಂತೆ), ಈ ಸಂಪೂರ್ಣ ಹೊಸ EV ವಿನ್ಯಾಸವು ಢಿಕ್ಕಿಗೆ ಸಂಬಂಧಿಸಿದಂತೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿದ್ದು, 5 ಸುರಕ್ಷಾ ರೇಟಿಂಗ್ ಗುರಿಯನ್ನು ಹೊಂದಿದೆ. ಇದು ಈಗಾಗಲೇ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ನೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಗಳಿಸಿದ್ದು, ಲೆವೆಲ್ 2+ ವೈಶಿಷ್ಟ್ಯಗಳಿಗೆ ಸಿದ್ಧಗೊಂಡಿದೆ.
ಅಲ್ಲದೆ, ಈ ಪ್ಲಾಟ್ಫಾರ್ಮ್ ನ ಚಾಸಿಸ್ ವಿನ್ಯಾಸವು ಭಾರತೀಯ ಕೇಂದ್ರಿತವಾಗಿದ್ದು ಮಾದರಿಗಳನ್ನು ಸಾಕಷ್ಟು ಗ್ರೌಂಡ್ ಕ್ಲೀಯರೆನ್ಸ್ ಜೊತೆಗೆ ಸಿದ್ಧಪಡಿಸಲಿದೆ ಮಾತ್ರವಲ್ಲದೆ ನಮ್ಮ ಚಾಲನಾ ಸ್ಥಿತಿಗೆ ಹೊಂದಿಕೊಳ್ಳುವಂತೆ ರಾಂಪ್ ಓವರ್ ಆಂಗಲ್ ಗಳನ್ನು ಒದಗಿಸಲಿದೆ.
ಆಕ್ಟಿ.EV ಆಧರಿತ EVಗಳು
ನಾವು ಈಗಾಗಲೇ ಉಲ್ಲೇಖಿಸಿದಂತೆ, ಹೊಸ ತಲೆಮಾರಿನ ಈ ಪ್ಲಾಟ್ಫಾರ್ಮ್, ಭವಿಷ್ಯದ ಎಲ್ಲಾ ಟಾಟಾ EV ಗಳಿಗೆ ಆಧಾರವೆನಿಸಲಿದೆ. 2025ರ ಪೂರ್ವಾರ್ಧವು ಮುಗಿಯುವ ಮೊದಲೇ ಬರಲಿರುವ ಮಾಸ್ ಮಾರ್ಕೆಟ್ EVಗಳ ಪಟ್ಟಿ ಇಲ್ಲಿದೆ:
ಈ ಪಟ್ಟಿಯಲ್ಲಿ, ಪಂಚ್ EVಯು, ಹೊಸ ಪ್ಲಾಟ್ಫಾರ್ಮ್ ಆಧರಿಸಿ ಬಿಡುಗಡೆಯಾಗಲಿರುವ ಮೊದಲ ವಾಹನವೆನಿಸಲಿದ್ದು, ಜನವರಿ 2024ರ ಕೊನೆಗೆ ಹೊರಬರಲಿದೆ. ಬೇರೆ ಪ್ಲಾಟ್ಫಾರ್ಮ್ ಗಳನ್ನು ಆಧರಿಸಿದ, ಪಂಚ್ ಮತ್ತು ಹ್ಯಾರಿಯರ್ ನ ECE ಆವೃತ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದು, ನಂತರದ ದಿನಗಳಲ್ಲಿ ಟಾಟಾ ಕರ್ವ್ ಸಹ ICE ಆವೃತ್ತಿಯನ್ನು ಪಡೆಯಲಿದೆ.