Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಗೂ ಮುನ್ನ ಡೀಲರ್‌ಶಿಪ್‌ಗಳಿಗೆ ಆಗಮಿಸುತ್ತಿದೆ ಟಾಟಾ ಆಲ್ಟ್ರೋಝ್ CNG

published on ಮೇ 12, 2023 05:15 pm by rohit for ಟಾಟಾ ಆಲ್ಟ್ರೋಝ್ 2020-2023

ಆಲ್ಟ್ರೊಜ್ ಭಾರತದಲ್ಲಿ CNG ಆಯ್ಕೆಯನ್ನು ಪಡೆಯುವ ಮೂರನೇ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಆದರೆ ಎರಡು ಟ್ಯಾಂಕ್‌ಗಳು ಮತ್ತು ಸನ್‌ರೂಫ್‌ ಹೊಂದಿರುವ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್.

  • ಆಲ್ಟ್ರೋಝ್ CNG ಅನ್ನು ಟಾಟಾ 2023 ಆಟೋ ಎಕ್ಸ್‌ಪೋನಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿತು.
  • ದು ತನ್ನ ಹೊಸ ಎರಡು-ಸಿಲಿಂಡರ್ ತಂತ್ರಜ್ಞಾನ ಹೊಂದಿರುವ ಮೊದಲನೇ ಟಾಟಾ ಕಾರು ಆಗಿರುತ್ತದೆ.
  • ಸೋರಿಕೆಯಾದ ಮಾಹಿತಿಯ ಪ್ರಕಾರ, ಈ ಆಲ್ಟ್ರೋಝ್ CNG 210 ಲೀಟರ್‌ಗಳಷ್ಟು ಬೂಟ್‌ಸ್ಪೇಸ್ ಅನ್ನು ನೀಡುತ್ತದೆ.
  • ಇದು ಸನ್‌ರೂಫ್, 7-ಇಂಚು ಟಚ್‌ಸ್ಕ್ರೀನ್ ಮತ್ತು ರಿವರ್ಸಿಂಗ್ ಕ್ಯಾಮರಾದೊಂದಿಗೆ ಬರುತ್ತದೆ.
  • 5-ಸ್ಪೀಡ್ MT ಜೊತೆಗಿನ 1.2-ಲೀಟರ್ ಪೆಟ್ರೋಲ್ ಇಂಜಿನ್ (73.5PS/103Nm) ನಿಂದ ಚಾಲಿತವಾಗಿದೆ.
  • ಸಾಮಾನ್ಯ ಪೆಟ್ರೋಲ್ ವೇರಿಯೆಂಟ್‌ಗಳಿಗೆ ಹೋಲಿಸಿದರೆ ಸುಮಾರು ಒಂದು ಲಕ್ಷದಷ್ಟು ದುಬಾರಿಯಾಗಬಹುದೆಂಬ ನಿರೀಕ್ಷೆ ಇದೆ.

ಟಾಟಾ ಆಲ್ಟ್ರೋಝ್ CNG ಶೀಘ್ರದಲ್ಲೇ ಮಾರಾಟಕ್ಕೆ ಬರಲಿದ್ದು, ಏಪ್ರಿಲ್‌ನಿಂದ ಬುಕಿಂಗ್‌ಗಳು ತೆರೆದಿವೆ. ಇದು 2023 ಆಟೋ ಎಕ್ಸ್‌ಪೋನಲ್ಲಿ ಪಾದಾರ್ಪಣೆ ಮಾಡಿತು; ಮತ್ತು ಈಗ , CNG ಕಿಟ್‌ ಜೊತೆಗಿನ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ದೇಶದಾದ್ಯಂತ ಕೆಲವು ಡೀಲರ್‌ಶಿಪ್‌ಗಳನ್ನು ತಲುಪಿದೆ

ಚಿತ್ರಗಳು ಏನು ಹೇಳುತ್ತವೆ?

ಚಿತ್ರಗಳಲ್ಲಿ, ಈ ಆಲ್ಟ್ರೋಝ್ CNG ಡೌನ್‌ಟೌನ್ ರೆಡ್ ಶೇಡ್‌ನದ್ದಾಗಿದೆ. ಈ ಚಿತ್ರದಲ್ಲಿರುವ ಮಾಡೆಲ್ ಟಾಪ್ ಸ್ಪೆಕ್ XZ+ (S) ವೇರಿಯೆಂಟ್‌ನದ್ದಾಗಿದ್ದು, ಇದು ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು ಅಲ್ಲದೇ ಸನ್‌ರೂಫ್ ಅನ್ನು ಪಡೆದಿದೆ. ಅಲ್ಲದೇ ಕೆಲವು ಚಿತ್ರಗಳು ಆಲ್ಟ್ರೋಝ್ CNG ಯ ಬೂಟ್‌ ಸ್ಪೇಸ್ (210 ಲೀಟರ್‌ಗಳು) ಅನ್ನು ಮಾತ್ರವಲ್ಲದೇ ಲಗೇಜ್ ಏರಿಯಾದ ಅಡಿಯಲ್ಲಿ ಎರಡು ಸಿಲಿಂಡರ್‌ಗಳ ಜೋಡಣೆಯನ್ನೂ ತೋರಿಸುತ್ತದೆ.

ಈ ಆಲ್ಟ್ರೋಝ್ CNGಯ ಫೀಚರ್‌ಗಳು

ಸನ್‌ರೂಫ್ ಮತ್ತು 16-ಇಂಚು ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳ ಹೊರತಾಗಿ, ಈ ಆಲ್ಟ್ರೋಝ್ CNG 7-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳಿಂದ ಸುಸಜ್ಜಿತವಾಗಿದೆ. ಅಲ್ಲದೇ ಇದರಲ್ಲಿ ಎತ್ತರ-ಹೊಂದಿಸಬಲ್ಲ ಡ್ರೈವರ್ ಸೀಟು, ನಾಲ್ಕು ಸ್ಪೀಕರ್ ಸೌಂಡ್ ಸಿಸ್ಟಮ್ ಹಾಗು ಎರಡು ಟ್ವೀಟರ್‌ಗಳು ಮತ್ತು ಕೀರಹಿತ ಎಂಟ್ರಿಯನ್ನು ನೀಡಲಾಗಿದೆ.

ಇದರ ಸುರಕ್ಷತಾ ಕಿಟ್ ಡ್ಯುಯಲ್ ಏರ್‌ಬ್ಯಾಗ್‌ಗಳು, ಟೈರ್‌ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಹೊಂದಿದೆ.

ಸಂಬಂಧಿತ: ಟಾಟಾ ಆಲ್ಟ್ರೋಝ್ CNGಯ ಪ್ರತಿಯೊಂದು ವೇರಿಯೆಂಟ್‌ನೊಂದಿಗೆ ನೀವು ಇವುಗಳನ್ನು ಪಡೆಯುತ್ತೀರಿ

ಪವರ್‌ಟ್ರೇನ್ ವಿವರಗಳು

ಆಲ್ಟ್ರೋಝ್ CNG ಗೆ ಟಾಟಾ a 1.2-ಲೀಟರ್ ಪೆಟ್ರೋಲ್ ಇಂಜಿನ್ (73.5PS/103Nm) ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ನೀಡಿದೆ. ಪೆಟ್ರೋಲ್ ಮೋಡ್‌ನಲ್ಲಿ ಇದು 88PS ಅನ್ನು 115Nm ಉತ್ಪಾದಿಸುತ್ತದೆ. ಈ ಟಾಟಾ ಪವರ್‌ಟ್ರೇನ್‌ನ ಇನ್ನೊಂದು ವಿಶಿಷ್ಟ ಫೀಚರ್ ಎಂದರೆ, ಇದು CNG ಮೋಡ್‌ನಲ್ಲೂ ಸ್ಟಾರ್ಟ್ ಆಗುತ್ತದೆ.

ನಿರೀಕ್ಷಿತ ಬೆಲೆ ಮತ್ತು ಸ್ಪರ್ಧೆ

ಈ ಆಲ್ಟ್ರೋಝ್ CNG ಮುಂಬರುವ ದಿನಗಳಲ್ಲಿ ಮಾರಾಟಕ್ಕೆ ಬರಲಿದ್ದು ಇದು ತತ್ಸಮಾನ ಪೆಟ್ರೋಲ್-ಮಾತ್ರ ವೇರಿಯೆಂಟ್‌ಗಳಿಗೆ ಹೋಲಿಸಿದರೆ ಸುಮಾರು ಒಂದು ಲಕ್ಷದಷ್ಟು ದುಬಾರಿಯಾಗಿರುತ್ತದೆ. ಮಾರುತಿ ಬಲೆನೊ CNG ಮತ್ತು ಟೊಯೋಟಾ ಗ್ಲಾನ್ಝಾ CNGಗೆ ಇದು ಪೈಪೋಟಿ ನೀಡುತ್ತದೆ.

ಸಂಬಂಧಿತ: ಟಾಟಾ ಆಲ್ಟ್ರೋಝ್ CNG ನಿರೀಕ್ಷಿತ ಬೆಲೆಗಳು: ಇದು ಬಲೆನೋ CNG ಬೆಲೆಗಳನ್ನು ಕಡಿತಗೊಳಿಸುತ್ತದೆಯೇ?

ಇನ್ನಷ್ಟು ಓದಿ : ಟಾಟಾ ಆಲ್ಟ್ರೋಝ್ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಆಲ್ಟ್ರೋಝ್ 2020-2023

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ