ಟಾಟಾ ಆಲ್ಟ್ರೋಝ್ ಸಿಎನ್‌ಜಿಯ ಪ್ರತಿ ವೇರಿಯೆಂಟ್‌ನೊಂದಿಗೆ ನಿಮಗಿದು ಸಿಗುತ್ತೆ..
ಮೇ 08, 2023 09:42 am ರಂದು ansh ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಇದರ ಹೊಸ ಡ್ಯುಯಲ್-ಟ್ಯಾಂಕ್ ಲೇಔಟ್‌ನಿಂದಾಗಿ ಸಿಎನ್‌ಜಿ ಹ್ಯಾಚ್‌ಬ್ಯಾಕ್ 210 ಲೀಟರ್‌ಗಳ ಬೂಟ್ ಸ್ಪೇಸ್ ಅನ್ನು ಪಡೆಯುತ್ತದೆ
ಟಾಟಾ ಆಟೋ ಎಕ್ಸ್‌ಪೋ 2023 ರಲ್ಲಿ ಆಲ್ಟ್ರೋಝ್ ಸಿಎನ್‌ಜಿಯನ್ನು ಅನಾವರಣಗೊಳಿಸಿತು ಮತ್ತು ಇತ್ತೀಚೆಗೆ ಇದರ ಬುಕ್ಕಿಂಗ್ ಅನ್ನು ಪ್ರಾರಂಭಿಸಿತು. ಈ ಸಿಎನ್‌ಜಿ ಆವೃತ್ತಿಯು ಆರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: XE, XM+, XM+ (S), XZ, XZ+ (S) ಮತ್ತು XZ+ O (S), ಹಾಗೂ ಕಾರು ತಯಾರಕರು ಅದರ ಬೆಲೆಯನ್ನು ಘೋಷಿಸುವವರೆಗೆ, ನಾವು ಪ್ರತಿ ವೇರಿಯೆಂಟ್‌ನಲ್ಲಿ ನೀಡಲಾದ ಫೀಚರ್‌ಗಳನ್ನು ಪರಿಶೀಲಿಸಬಹುದು, ಆದರೆ ಅದಕ್ಕೂ ಮೊದಲು ಅವುಗಳ ವಿಶೇಷತೆಗಳನ್ನು ಪರಿಶೀಲಿಸೋಣ.
ವಿಶೇಷತೆಗಳು |
|
ಎಂಜಿನ್ |
1.2-ಲೀಟರ್ ಪೆಟ್ರೋಲ್ ಎಂಜಿನ್ |
ಪವರ್ |
73.5PS |
ಟಾರ್ಕ್ |
103Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನ್ಯುವಲ್ |
ಬೂಟ್ ಸ್ಪೇಸ್ |
210-ಲೀಟರ್‌ಗಳು |
ಈ ಸಿಎನ್‌ಜಿ ಹ್ಯಾಚ್‌ಬ್ಯಾಕ್ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೆಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಅನ್ನು ಮಾತ್ರ ಹೊಂದಿದೆ. ಈ ಯೂನಿಟ್, ಸಿಎನ್‌ಜಿ ಮೋಡ್‌ನಲ್ಲಿ, 73.5PS ಮತ್ತು 103Nm ಅನ್ನು ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ: ರೂ.15000 ದವರೆಗೆ ದುಬಾರಿಯಾದ ಟಾಟಾ ಕಾರುಗಳು
ಇಲ್ಲಿನ ಪ್ರಮುಖ ಸಾಧನೆಯೆಂದರೆ ಇದರ ಬೂಟ್ ಸ್ಪೇಸ್. ಎಲ್ಲಾ ಅಲ್ಲದಿದ್ದರೂ, ಮಾರುಕಟ್ಟೆಯಲ್ಲಿನ ಕೆಲವು ಸಿಎನ್‌ಜಿ ವಾಹನಗಳು ಬೂಟ್ ಸಾಮರ್ಥ್ಯದ ವಿಷಯದಲ್ಲಿ ಏನನ್ನೂ ನೀಡುವುದಿಲ್ಲ ಮತ್ತು ಟ್ಯಾಂಕ್ ಸಾಮಾನ್ಯ ಜಾಗವನ್ನು ಸಹ ತೆಗೆದುಕೊಳ್ಳುತ್ತದೆ. ಆದರೆ ಇದರ ಅವಳಿ-ಸಿಲೆಂಡರ್ ತಂತ್ರಜ್ಞಾನದೊಂದಿಗೆ, ಟಾಟಾ ಆಲ್ಟ್ರೋಝ್ ಸಿಎನ್‌ಜಿಗೆ 210-ಲೀಟರ್ ಬೂಟ್ ಸ್ಪೇಸ್ ಅನ್ನು ನೀಡುತ್ತಿದೆ, ಮಾತ್ರವಲ್ಲದೇ ಇದು ಅದರ ಪ್ರತಿಸ್ಪರ್ಧಿಗಳು ನೀಡುವುದಕ್ಕಿಂತ ಭಾರಿ ಹೆಚ್ಚಿನದಾಗಿದೆ.
ಬೇಸ್-ಸ್ಪೆಕ್ XE ಇಂದ ಪ್ರಾರಂಭಿಸಿ ಪ್ರತಿಯೊಂದು ವೇರಿಯೆಂಟ್ ಏನನ್ನು ನೀಡುತ್ತದೆ ಎಂಬುದನ್ನು ಈಗ ನೋಡೋಣ:
XE ವೇರಿಯೆಂಟ್

ಎಕ್ಸ್‌ಟೀರಿಯರ್ |
ಇಂಟೀರಿಯರ್ |
ಸೌಕರ್ಯ ಮತ್ತು ಅನುಕೂಲತೆ |
ಇನ್‌ಫೊಟೈನ್‌ಮೆಂಟ್ |
ಸುರಕ್ಷತೆ |
|
|
|
|
ISOFIX ಆ್ಯಂಕರ್‌ಗಳು |
ಸಿಎನ್‌ಜಿ ಹ್ಯಾಚ್‌ಬ್ಯಾಕ್‌ನ ಬೇಸ್-ಸ್ಪೆಕ್ ಆಗಿರುವ XE ವೇರಿಯೆಂಟ್ ಹ್ಯಾಲೊಜಿನ್ ಹೆಡ್‌ಲ್ಯಾಂಪ್‌ಗಳು, ಸ್ಟೀಲ್ ವ್ಹೀಲ್‌ಗಳು ಮತ್ತು ಫ್ಯಾಬ್ರಿಕ್ ಮೇಲ್ಗವಸನ್ನು ಹೊಂದಿದೆ. ಇದು ಇನ್‌ಫೊಟೈನ್‌ಮೆಂಟ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‌ನಂತಹ ಅನುಕೂಲತೆಗಳನ್ನು ಕಳೆದುಕೊಂಡರೆ, ಡ್ರೈವರ್ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳು, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ISOFIX ಆ್ಯಂಕರ್‌ಗಳಂತಹ ಸುರಕ್ಷತಾ ಫೀಚರ್‌ಗಳನ್ನು ಪಡೆಯುತ್ತದೆ.
XM+ ವೇರಿಯೆಂಟ್
XE ವೇರಿಯೆಂಟ್‌ಗಳಿಗಿಂತ XM+ ವೇರಿಯೆಂಟ್‌ಗಳು ಪಡೆಯುವ ಫೀಚರ್‌ಗಳು ಇಲ್ಲಿವೆ.
ಎಕ್ಸ್‌ಟೀರಿಯರ್ |
ಇಂಟೀರಿಯರ್ |
ಸೌಕರ್ಯ ಮತ್ತು ಅನುಕೂಲತೆ |
ಇನ್‌ಫೊಟೈನ್‌ಮೆಂಟ್ |
ಸುರಕ್ಷತೆ |
|
|
|
|
|
XM+ ವೇರಿಯೆಂಟ್‌ನೊಂದಿಗೆ, ಗ್ರಾಹಕರು ದೊಡ್ಡದಾದ ಚಕ್ರಗಳು, 7-ಇಂಚಿನ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಕೀ-ರಹಿತ ಪ್ರವೇಶ, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ಮತ್ತು ಮಡಿಚಬಹುದಾದ ORVಗಳಂತಹ ಆಲ್ಟ್ರೋಝ್ ಅಗತ್ಯತೆಗಳನ್ನು ಪಡೆಯುತ್ತಾರೆ. ಈ ಫೀಚರ್ ಸೇರ್ಪಡೆಗಳು XM+ ವೇರಿಯೆಂಟ್ ಬೇಸ್-ಸ್ಪೆಕ್ ಖರೀದಿದಾರರಿಗೆ ಹೆಚ್ಚು ಸೂಕ್ತವಾಗುವಂತೆ ಮಾಡಿದೆ.
XM+ (S) ವೇರಿಯೆಂಟ್
XM+ ವೇರಿಯೆಂಟ್‌ಗಿಂತ XM+ (S) ವೇರಿಯೆಂಟ್ ಏನನ್ನು ಪಡೆಯುತ್ತದೆ ಎಂಬುದು ಇಲ್ಲಿದೆ.
ಎಕ್ಸ್‌ಟೀರಿಯರ್ |
ಇಂಟೀರಿಯರ್ |
ಸೌಕರ್ಯ ಮತ್ತು ಅನುಕೂಲತೆ |
ಇನ್‌ಫೊಟೈನ್‌ಮೆಂಟ್ |
ಸುರಕ್ಷತೆ |
|
|
|
|
|
ಈ XM+ (S) ವೇರಿಯೆಂಟ್ ಆಲ್ಟ್ರೋಝ್ ಸಿಎನ್‌ಜಿಗೆ ಸನ್‌ರೂಫ್ ಅನ್ನು ಸೇರಿಸುತ್ತದೆ ಮತ್ತು ಈ ಫೀಚರ್ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್/ಡಿಸೇಲ್ ಚಾಲಿತ ಆವೃತ್ತಿಯಲ್ಲಿಯೂ ಸಹ ಇದನ್ನು ನೀಡಲಾಗಿಲ್ಲ. ಇದಲ್ಲದೇ ಈ ವೇರಿಯೆಂಟ್ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ರೇನ್ ಸೆನ್ಸಿಂಗ್ ವೈಪರ್‌ಗಳನ್ನು ಸಹ ಪಡೆಯುತ್ತದೆ.
XZ ವೇರಿಯೆಂಟ್
XM+ (S) ವೇರಿಯೆಂಟ್‌ಗಿಂತ XZ ವೇರಿಯೆಂಟ್ ಇವುಗಳನ್ನು ನೀಡುತ್ತದೆ.
ಎಕ್ಸ್‌ಟೀರಿಯರ್ |
ಇಂಟೀರಿಯರ್ |
ಸೌಕರ್ಯ ಮತ್ತು ಅನುಕೂಲತೆ |
ಇನ್‌ಫೊಟೈನ್‌ಮೆಂಟ್ |
ಸುರಕ್ಷತೆ |
|
|
|
|
|
XZ ವೇರಿಯೆಂಟ್‌ನಿಂದ, ಗ್ರಾಹಕರು ಅಲಾಯ್ ವ್ಹೀಲ್‌ಗಳು, ಪ್ರಾಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳು, ಕ್ಯಾಬಿನ್ ಒಳಗಡೆ ಮೂಡ್ ಲೈಟಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ರಿಯರ್ ವ್ಯೂ ಕ್ಯಾಮರಾವನ್ನು ಪಡೆಯಬಹುದಾಗಿದೆ. ಆದರೆ ಈ ವೇರಿಯೆಂಟ್ ಸನ್‌ರೂಫ್ ಅನ್ನು ನೀಡುವುದಿಲ್ಲ ಮತ್ತು ಅದು XM+ (S), XZ+ (S) ಹಾಗೂ XZ+ O (S) ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತವಾಗಿದೆ.
XZ+ (S) ವೇರಿಯೆಂಟ್

XZ ವೇರಿಯೆಂಟ್‌ಗಿಂತ XZ+ (S) ವೇರಿಯೆಂಟ್ ಏನನ್ನು ನೀಡುತ್ತದೆ ಎಂಬುದು ಇಲ್ಲಿದೆ.
ಎಕ್ಸ್‌ಟೀರಿಯರ್ |
ಇಂಟೀರಿಯರ್ |
ಸೌಕರ್ಯ ಮತ್ತು ಅನುಕೂಲತೆ |
ಇನ್‌ಫೊಟೈನ್‌ಮೆಂಟ್ |
ಸುರಕ್ಷತೆ |
|
|
|
|
|
ಈ ವೇರಿಯೆಂಟ್ ಸನ್‌ರೂಫ್ ಮತ್ತು ಟೈರ್ ಪ್ರೇಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು (TPMS) ಹೊಂದಿರುತ್ತದೆ, ಮಾತ್ರವಲ್ಲದೇ ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಕಪ್ಪು ಬಣ್ಣದ ರೂಫ್ ಅನ್ನು ಕಾಣಬಹುದಾಗಿದೆ.
XZ+ O (S) ವೇರಿಯೆಂಟ್
XZ+ (S) ವೇರಿಯೆಂಟ್‌ಗಿಂತ ಟಾಪ್-ಸ್ಪೆಕ್ XZ+ O (S) ವೇರಿಯೆಂಟ್ ಏನನ್ನು ಪಡೆಯುತ್ತದೆ ಎಂಬುದು ಇಲ್ಲಿದೆ.
ಎಕ್ಸ್‌ಟೀರಿಯರ್ |
ಇಂಟೀರಿಯರ್ |
ಸೌಕರ್ಯ ಮತ್ತು ಅನುಕೂಲತೆ |
ಇನ್‌ಫೊಟೇನ್‌ಮೆಂಟ್ |
ಸುರಕ್ಷತೆ |
|
|
|
|
|
ಈ ಟಾಪ್-ಸ್ಪೆಕ್ ವೇರಿಯೆಂಟ್ ಲೆದರ್ ಮೇಲ್ಗವಸು, ಗಾಳಿ ಶುದ್ಧಿಕಾರಕ, ಮತ್ತು ಸಂಪರ್ಕಿತ ಕಾರ್‌ಟೆಕ್‌ನಂತಹ ಫೀಚರ್‌ಗಳನ್ನು ಮಾತ್ರ ಪಡೆಯುತ್ತದೆ. ಇದು ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಹೆಚ್ಚು ಫೀಚರ್-ಭರಿತ ಸಿಎನ್‌ಜಿ ಕೊಡುಗೆಯಾಗಿದೆ.
ಇದನ್ನೂ ಓದಿ: ಟಾಟಾ ಆಲ್ಟ್ರೋಝ್ ಸಿಎನ್‌ಜಿಯ ನಿರೀಕ್ಷಿತ ಬೆಲೆಗಳು: ಇದು ಬಲೆನೊ ಸಿಎನ್‌ಜಿಗಿಂತ ಕಡಿಮೆಯಿರಬಹುದೇ?
ಆಲ್ಟ್ರೋಝ್ ಸಿಎನ್‌ಜಿಯ ಪ್ರತಿ ವೇರಿಯೆಂಟ್ ಇವುಗಳನ್ನು ನೀಡುತ್ತದೆ. ಈ ಹ್ಯಾಚ್‌ಬ್ಯಾಕ್ ರೂ. 7.35 ಲಕ್ಷದ (ಎಕ್ಸ್-ಶೋರೂಮ್) ನಿರೀಕ್ಷಿತ ಬೆಲೆಯಲ್ಲಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ, ಈ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಇತರ ಸಿಎನ್‌ಜಿ ವೇರಿಯೆಂಟ್‌ಗಳಾದ ಮಾರುತಿ ಬಲೆನೊ ಮತ್ತು ಟೊಯೋಟಾ ಗ್ಲಾನ್ಝಾಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಇಲ್ಲಿ ಓದಿ : ಆಲ್ಟ್ರೋಝ್ ಆಟೋಮ್ಯಾಟಿಕ್