• English
  • Login / Register

Honda Amaze ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮೊದಲು vs ಈಗ

ಹೋಂಡಾ ಅಮೇಜ್‌ 2nd gen ಗಾಗಿ shreyash ಮೂಲಕ ಏಪ್ರಿಲ್ 29, 2024 07:27 pm ರಂದು ಪ್ರಕಟಿಸಲಾಗಿದೆ

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

2019 ರಲ್ಲಿ, ಹೋಂಡಾ ಅಮೇಜ್ 4 ಸ್ಟಾರ್‌ಗಳನ್ನು ಪಡೆದುಕೊಂಡಿತ್ತು, ಆದರೆ ಇತ್ತೀಚಿನ ಕ್ರ್ಯಾಶ್ ಟೆಸ್ಟ್‌ನಲ್ಲಿ, ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (AOP) ಕೇವಲ 2 ಸ್ಟಾರ್‌ಗಳನ್ನು ಪಡೆಯಲಷ್ಟೇ ಶಕ್ತವಾಗಿದೆ. ಕಾರಣ ಇಲ್ಲಿದೆ…

Honda Amaze Crash Test: 2019 vs 2024

ಇತ್ತೀಚಿನ ಇಂಡಿಯಾ-ಸ್ಪೆಕ್ ಹೋಂಡಾ ಅಮೇಜ್ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದ ಕೊನೆಯ ಬ್ಯಾಚ್‌ನ ಕಾರ್ ಕ್ರ್ಯಾಶ್‌ಗಳಲ್ಲಿ ಒಂದಾಗಿದೆ. ಮತ್ತು ಅಂತಿಮವಾಗಿ ಫಲಿತಾಂಶಗಳು ಹೊರಬಂದಿವೆ, ಆದರೆ ಅವುಗಳು ಉತ್ತಮ ಪ್ರದರ್ಶನ ನೀಡಿಲ್ಲ. ಸಬ್-4 ಮೀಟರ್ ಸೆಡಾನ್ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (AOP-ಅಡಲ್ಟ್ ಒಕ್ಯುಪೆಂಟ್‌ ಪ್ರೋಟೆಕ್ಷನ್‌) ಕೇವಲ 2 ರೇಟಿಂಗ್‌ಗಳನ್ನು ಮತ್ತು ಮಕ್ಕಳ ನಿವಾಸಿ ಸುರಕ್ಷತೆಯಲ್ಲಿ (COP) ಶೂನ್ಯ ರೇಟಿಂಗ್‌ಗಳನ್ನು ನಿರ್ವಹಿಸುತ್ತದೆ. ಇದಕ್ಕೂ ಮೊದಲು, ಭಾರತದಲ್ಲಿ ತಯಾರಿಸಲಾದ ದಕ್ಷಿಣ ಆಫ್ರಿಕಾ-ಸ್ಪೆಕ್ ಅಮೇಜ್ ಅನ್ನು 2019ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾಡಿತ್ತು, ವಯಸ್ಕರ ಸುರಕ್ಷತೆಯಲ್ಲಿ 4 ಸ್ಟಾರ್‌ಗಳನ್ನು ಗಳಿಸಿತ್ತು. 2019 ಮತ್ತು 2024ರ ಹೋಂಡಾ ಅಮೇಜ್‌ನ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳನ್ನು ಹೋಲಿಕೆ ಮಾಡೋಣ.

ನಾವು ಪ್ರತಿ ಕ್ರ್ಯಾಶ್ ಪರೀಕ್ಷೆಯ ವಿವರಗಳನ್ನು ಪಡೆಯುವ ಮೊದಲು, ಬಿಡುಗಡೆಯಾದಗಿನಿಂದ ಹೋಂಡಾ ಅಮೇಜ್  ಹೇಗೆ ವಿಕಸನಗೊಂಡಿದೆ ಎಂಬುದನ್ನು ನೋಡೋಣ. 

ಹೋಂಡಾ ಅಮೇಜ್‌: ಮೊದಲು vs ಈಗ

Honda Amaze

ಹೋಂಡಾ ಅಮೇಜ್ ಅನ್ನು 2013 ರಲ್ಲಿ ಮೊದಲಬಾರಿಗೆ ಭಾರತದಲ್ಲಿ ಪರಿಚಯಿಸಲಾಯಿತು, ಇದನ್ನು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳ ಆಯ್ಕೆಯೊಂದಿಗೆ ನೀಡಲಾಗಿತ್ತು. ಆ ಸಮಯದಲ್ಲಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳು ಮತ್ತು EBD ಜೊತೆಗೆ ABS ಅನ್ನು ಸ್ಟ್ಯಾಂಡರ್ಡ್‌ ಸಾಧನವಾಗಿ ನೀಡಲಾಗಲಿಲ್ಲ. 2018 ರಲ್ಲಿ, ಎರಡನೇ ತಲೆಮಾರಿನ ಅಮೇಜ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು ಮತ್ತು ದಕ್ಷಿಣ ಆಫ್ರಿಕಾದಂತಹ ಇತರ ಮಾರುಕಟ್ಟೆಗಳಿಗೆ ರಫ್ತು ಮಾಡಲಾಯಿತು. ನಂತರ ಈ ಅಮೇಜ್ ಅನ್ನು 2019ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ಗೆ ಒಳಪಡಿಸಲಾಯಿತು, ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (ಎಒಪಿ) 4 ಸ್ಟಾರ್ ಮತ್ತು ಮಕ್ಕಳ ರಕ್ಷಣೆಯಲ್ಲಿ (ಸಿಒಪಿ) 1 ಸ್ಟಾರ್ ಗಳಿಸಿತು. ಅದೇ ವರ್ಷ ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ರಮಾಣಿತವಾಗಿ ಪಡೆದುಕೊಂಡಿದೆ.

2021 ರಲ್ಲಿ, ಎರಡನೇ ತಲೆಮಾರಿನ ಅಮೇಜ್ ಸಣ್ಣ ವಿನ್ಯಾಸದ ಬದಲಾವಣೆಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿತ್ತು ಮತ್ತು ಇದು ಇಂದಿಗೂ ಮಾರಾಟದಲ್ಲಿದೆ. ಇದರ ಸುರಕ್ಷತಾ ಕಿಟ್ ಈಗ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಎಲ್ಲಾ ಸೀಟ್‌ಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ.

ಇದನ್ನು ಸಹ ಓದಿ: JNCAP ಮೂಲಕ 2024ರ ಸ್ವಿಫ್ಟ್‌ನ ಕ್ರ್ಯಾಶ್‌ ಟೆಸ್ಟ್‌; ನಾವು ತಿಳಿದುಕೊಂಡ 3 ವಿಷಯಗಳು

ಜಾಗತಿಕ NCAP ಪರೀಕ್ಷಾ ಮಾನದಂಡದ ಆಪ್‌ಡೇಟ್‌ಗಳು

Honda Amaze Side Impact Crash test

ಮೊದಲು, ಭಾರತೀಯ ಕಾರುಗಳಿಗೆ ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಯ ವೇಳೆಯಲ್ಲಿ ಮುಂಭಾಗದ ಏರ್‌ಬ್ಯಾಗ್‌ಗಳು, ABS ಮತ್ತು ಒಟ್ಟಾರೆ ಕಾರಿನ ಬಾಡಿಯ ಸಮಗ್ರತೆಯನ್ನು ಒದಗಿಸುವುದರ ಮೇಲೆ ಮಾತ್ರ ಕೇಂದ್ರೀಕೃತವಾಗಿತ್ತು. ಇದು ಫ್ರಂಟ್ ಆಫ್‌ಸೆಟ್ ಬ್ಯಾರಿಯರ್ ಕ್ರ್ಯಾಶ್ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುತ್ತಿತ್ತು ಮತ್ತು ಪರೀಕ್ಷಿತ ಮೊಡೆಲ್‌ಗಳನ್ನು ವಯಸ್ಕ ಪ್ರಯಾಣಿಕರ ರಕ್ಷಣೆ (17 ಅಂಕಗಳಲ್ಲಿ) ಮತ್ತು ಮಕ್ಕಳ ರಕ್ಷಣೆ (49 ಅಂಕಗಳಲ್ಲಿ) ಎಂಬ ಎರಡು ವಿಭಾಗಗಳಲ್ಲಿ ರೇಟ್ ಮಾಡಲಾಗುತ್ತಿತ್ತು. 

2022 ರಲ್ಲಿ, ಗ್ಲೋಬಲ್ NCAP ತನ್ನ ಮೌಲ್ಯಮಾಪನ ಮಾನದಂಡಗಳನ್ನು ನವೀಕರಿಸಿದೆ. ಈಗ ಇದು ಮುಂಭಾಗದ ಆಫ್‌ಸೆಟ್ ಪರೀಕ್ಷೆಯನ್ನು ನಿರ್ವಹಿಸುವುದಲ್ಲದೆ ಅದರ ಸುರಕ್ಷತಾ ಮೌಲ್ಯಮಾಪನಗಳಲ್ಲಿ ಸೈಡ್‌ ಡಿಕ್ಕಿ, ಸೈಡ್ ಕಂಬ ಡಿಕ್ಕಿ ಮತ್ತು ಪಾದಚಾರಿ ರಕ್ಷಣೆಯ ಪರೀಕ್ಷೆಗಳನ್ನು ಸೇರ್ಪಡೆಗೊಳಿಸಿದೆ.  ಹೆಚ್ಚುವರಿಯಾಗಿ, ಮೊಡೆಲ್‌ ಅತ್ಯಧಿಕ 5-ಸ್ಟಾರ್ ರೇಟಿಂಗ್ ಅನ್ನು ಸಾಧಿಸಲು ಸಾಧ್ಯವಾಗಲು ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC), ಆರು ಏರ್‌ಬ್ಯಾಗ್‌ಗಳು ಮತ್ತು ISOFIX ನಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್‌ ಆಗಿ ಸೇರಿಸುವ ಅಗತ್ಯವಿದೆ. ಇದು ಈಗ 34 ಅಂಕಗಳ ಪ್ರಮಾಣದಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಅಂಕಗಳನ್ನು ನಿಯೋಜಿಸುತ್ತದೆ.

ಹೋಂಡಾ ಅಮೇಜ್ ಗ್ಲೋಬಲ್ NCAP ಸ್ಕೋರ್‌ಗಳು: ಹೋಲಿಕೆ

ಮಾನದಂಡ

2019

2024

ವಯಸ್ಕ ಪ್ರಯಾಣಿಕರ ರಕ್ಷಣೆ

4-ಸ್ಟಾರ್‌ (14.08 / 17)

2-ಸ್ಟಾರ್‌ (27.85 / 34)

ಮಕ್ಕಳ ರಕ್ಷಣೆ 

1-ಸ್ಟಾರ್‌ (8.16 / 49)

0-ಸ್ಟಾರ್‌ (8.58 / 49)

ವಯಸ್ಕ ಪ್ರಯಾಣಿಕರ ರಕ್ಷಣೆ

Honda Amaze 2019 Results

2019

ಹೋಂಡಾ ಅಮೇಜ್‌ನ ಎರಡೂ ಆವೃತ್ತಿಗಳು ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ತಲೆ ಮತ್ತು ಕುತ್ತಿಗೆಗೆ 'ಉತ್ತಮ' ರಕ್ಷಣೆಯನ್ನು ನೀಡುತ್ತವೆ. ಹೋಂಡಾ ಅಮೇಜ್‌ನ ಎರಡೂ ಆವೃತ್ತಿಗಳಲ್ಲಿನ ಎದೆಯ ರಕ್ಷಣೆಯು ಸಹ 'ಸಮರ್ಪಕ'ವಾಗಿದೆ, ಆದರೆ ಈ ಸಬ್‌ಕಾಂಪ್ಯಾಕ್ಟ್ ಸೆಡಾನ್‌ನ ಎರಡೂ ಆವೃತ್ತಿಗಳಲ್ಲಿ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ಮೊಣಕಾಲುಗಳು 'ಸರಾಸರಿ' ರಕ್ಷಣೆಯನ್ನು ಹೊಂದಿದೆ.

Adult Occupant Protection test For Honda Amaze

2024

ಅಮೇಜ್‌ನ 2019 ಮತ್ತು 2024 ಆವೃತ್ತಿಗಳಲ್ಲಿ ಬಾಡಿ ಶೆಲ್ ಸಮಗ್ರತೆ ಮತ್ತು ಫುಟ್‌ವೆಲ್ ಪ್ರದೇಶವನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ. ಅಮೇಜ್ ಕಳಪೆ AOP ಸುರಕ್ಷತಾ ರೇಟಿಂಗ್‌ಗಳನ್ನು ಏಕೆ ಪಡೆದುಕೊಂಡಿದೆ ಎಂಬುದರ ಮುಖ್ಯ ಕಾರಣವೆಂದರೆ 2024 ರ ಆವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC) ಮತ್ತು ಸೈಡ್ ಕರ್ಟನ್‌ ಏರ್‌ಬ್ಯಾಗ್‌ಗಳು, ಇತ್ತೀಚಿನ ಗ್ಲೋಬಲ್ NCAP ಪ್ರೋಟೋಕಾಲ್ ಪ್ರಕಾರ ಎಲ್ಲಾ ಕಡ್ಡಾಯ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಲೋಪ ಕಂಡುಬಂದಿದೆ. 

ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆ

2019ರ ಆವೃತ್ತಿಯಲ್ಲಿ, ISOFIX ಅನ್ನು ಬಳಸಿಕೊಂಡು 3 ವರ್ಷದ ಮಗುವಿಗೆ ಮುಂಭಾಗಕ್ಕೆ ಮುಖಮಾಡಿರುವ ಚೈಲ್ಡ್ ಸೀಟ್‌ಗಳನ್ನು ನೀಡಲಾಗಿದೆ. ಇದು ಡಿಕ್ಕಿಯ ಸಮಯದಲ್ಲಿ ಅತಿಯಾದ ಮುಂದಕ್ಕೆ ಚಲನೆಯನ್ನು ತಡೆಯುತ್ತದೆ. ಆದರೆ ಈ ಸಂದರ್ಭದಲ್ಲಿ ಹಿಂದಕ್ಕೆ ಬರುವಾಗ, ತಲೆಗೆ ಮತ್ತು ಎದೆಯ ಭಾಗಕ್ಕೆ ಹೆಚ್ಚಿನ ಹೊಡೆತವನ್ನು ಅನುಭವಿಸಿತು. 18-ತಿಂಗಳ ಮಗುವಿಗೆ, ಮಕ್ಕಳ ಆಸನಗಳನ್ನು ಹಿಂಬದಿಗೆ ಮುಖಮಾಡುವಂತೆ ಜೋಡಿಸಲಾಗಿದೆ. ಡಿಕ್ಕಿಯ ಸಮಯದಲ್ಲಿ, ಮಗುವಿನ ಸಂಯಮ ವ್ಯವಸ್ಥೆಯನ್ನು ತಿರುಗಿಸುವ ಮೂಲಕ ಆರ್ಮ್‌ರೆಸ್ಟ್ ಅನ್ನು ತೆರೆಯಲಾಯಿತು, ಇದು ತಲೆಗೆ ಗಾಯಗೊಳಿಸುತ್ತದೆ. 

2024ರ ಆವೃತ್ತಿಯಲ್ಲಿ, 3 ವರ್ಷ ವಯಸ್ಸಿನ ಮಗುವಿಗೆ ISOFIX ಆಂಕಾರೇಜ್‌ಗಳನ್ನು ಬಳಸಿಕೊಂಡು ಮುಂಭಾಗಕ್ಕೆ ಮುಖಮಾಡಿರುವ ಚೈಲ್ಡ್ ಸೀಟ್‌ಗಳನ್ನು ನೀಡಲಾಗಿದೆ. ತಲೆಗೆ ಹೆಚ್ಚಿನ ಹಾನಿಯಾಗದಿದ್ದರೂ, ತಲೆಯು ವಾಹನದ ಇಂಟಿರೀಯರ್‌ನ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. 18-ತಿಂಗಳ ವಯಸ್ಸಿನ ಮಗುವಿನ ರಕ್ಷಣೆಯಲ್ಲಿ, ಹಿಂಬದಿಗೆ ಮುಖ ಮಾಡಿರುವ ಮಗುವಿನ ಆಸನವು ರಕ್ಷಣೆಯನ್ನು ಒದಗಿಸಲು ಅಥವಾ ಹೊರಹಾಕುವಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಈ ಪರೀಕ್ಷೆಯಲ್ಲಿ ಶೂನ್ಯ ರೇಟಿಂಗ್‌ ಅನ್ನು ಪಡೆಯಿತು. 

ಇದನ್ನು ಕೂಡ ಓದಿ: ವೀಕ್ಷಿಸಿ: ಬೇಸಿಗೆಯಲ್ಲಿ ನಿಮ್ಮ ಕಾರಿನ AC ಉತ್ತಮವಾಗಿ ಕೆಲಸ ಮಾಡುವಂತೆ ಮಾಡುವುದು ಹೇಗೆ

ಗಮನಿಸಿದ ಅಂತಿಮ ಸಂಗತಿಗಳು

Honda Amaze Frontal Impact Crash test

ಗ್ಲೋಬಲ್ NCAP ಪರೀಕ್ಷಾ ಷರತ್ತುಗಳ ನವೀಕರಿಸಿದ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಸ್ಕೋರಿಂಗ್ ಮಾನದಂಡಗಳ ಪ್ರಕಾರ ಹೋಂಡಾ ಅಮೇಜ್ ಕಡಿಮೆ ಸುರಕ್ಷತಾ ರೇಟಿಂಗ್‌ಗಳನ್ನು ಗಳಿಸಿದೆ. ಅಂತೆಯೇ, ವೈಶಿಷ್ಟ್ಯದ ಲೋಪಗಳಿಗಾಗಿ ಇದು ದಂಡನೆಗೆ ಒಳಪಟ್ಟಿದೆ, ಆದರೆ ಪ್ರವೇಶ ಮಟ್ಟದ ಹೋಂಡಾ ಸೆಡಾನ್‌ನಲ್ಲಿ ಮಕ್ಕಳ ರಕ್ಷಣೆಯು ಕಳವಳಕಾರಿ ದೌರ್ಬಲ್ಯವಾಗಿ ಉಳಿದಿದೆ. ಆದಾಗ್ಯೂ, ಈ ಹೋಲಿಕೆಯಿಂದ ಧನಾತ್ಮಕ ಅಂಶಗಳೆಂದರೆ ಎರಡೂ ಸಂದರ್ಭಗಳಲ್ಲಿ ಹೋಂಡಾ ಅಮೇಜ್‌ನ ಬಾಡಿಶೆಲ್ ಅನ್ನು ಸ್ಥಿರವಾಗಿ ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಲೋಡ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ದೆಹಲಿಯಲ್ಲಿ ಹೋಂಡಾ ಅಮೇಜ್‌ನ ಎಕ್ಸ್ ಶೋರೂಂ ಬೆಲೆ 7.20 ಲಕ್ಷ ರೂ.ನಿಂದ 9.96 ಲಕ್ಷ ರೂ.ವರೆಗೆ ಇದೆ. ಇದು ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್‌ಗಳಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.

ಇನ್ನಷ್ಟು ಓದಿ : ಹೋಂಡಾ ಅಮೇಜ್ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಅಮೇಜ್‌ 2nd Gen

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience