Login or Register ಅತ್ಯುತ್ತಮ CarDekho experience ಗೆ
Login

Tata Avinya X EV ಇವಿ ಕಾನ್ಸೆಪ್ಟ್‌ನ ಸ್ಟೀರಿಂಗ್ ವೀಲ್ ವಿನ್ಯಾಸದ ಪೇಟೆಂಟ್ ಇಮೇಜ್ ಆನ್‌ಲೈನ್‌ನಲ್ಲಿ ಸೋರಿಕೆ

ಟಾಟಾ ಅವಿನ್ಯಾ ಎಕ್ಸ್ ಗಾಗಿ kartik ಮೂಲಕ ಮಾರ್ಚ್‌ 20, 2025 09:28 pm ರಂದು ಪ್ರಕಟಿಸಲಾಗಿದೆ

ವಿನ್ಯಾಸ ಪೇಟೆಂಟ್‌ನಲ್ಲಿ ಕಂಡುಬರುವ ಸ್ಟೀರಿಂಗ್ ವೀಲ್, 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮೊಡೆಲ್‌ನಲ್ಲಿರುವ ಸ್ಟೀರಿಂಗ್ ವೀಲ್‌ಗೆ ಹೋಲುತ್ತದೆ

ಟಾಟಾ ಅವಿನ್ಯಾ ಎಕ್ಸ್ ಇವಿ ಪರಿಕಲ್ಪನೆಯ ಸ್ಟೀರಿಂಗ್ ವೀಲ್ ವಿನ್ಯಾಸದ ವಿನ್ಯಾಸ ಪೇಟೆಂಟ್‌ನ ಚಿತ್ರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯು ಏನನ್ನು ಹೊಂದಿರಬಹುದು ಎಂಬುದರ ಕಲ್ಪನೆಯನ್ನು ನೀಡುತ್ತದೆ. ಅವಿನ್ಯಾ ಎಕ್ಸ್ ಅನ್ನು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು ಮತ್ತು ಇದು 'ಅವಿನ್ಯಾ' ನಾಮಫಲಕದ ಅಡಿಯಲ್ಲಿ ಕಾಣಿಸಿಕೊಂಡ ಎರಡನೇ ಮೊಡೆಲ್‌ ಆಗಿದೆ (ಮೊದಲನೆಯದನ್ನು 2022 ರಲ್ಲಿ ಅನಾವರಣಗೊಳಿಸಲಾಗಿತ್ತು). ವಿನ್ಯಾಸದಿಂದ ಏನನ್ನು ನಿರ್ಧರಿಸಬಹುದು ಮತ್ತು ಹಿಂದೆ ಪ್ರದರ್ಶಿಸಲಾದ ಸ್ಟೀರಿಂಗ್ ವೀಲ್‌ಗೆ ಅದು ಹೇಗೆ ಸಾಮ್ಯತೆಯನ್ನು ಹೊಂದಿದೆ ಎಂಬುದನ್ನು ನೋಡೋಣ.

ಏನನ್ನು ಗಮನಿಸಿದ್ದೇವೆ ?

ಸ್ಟೀರಿಂಗ್ ವೀಲ್ ವಿನ್ಯಾಸವು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮೊಡೆಲ್‌ನಲ್ಲಿರುವ ಒಂದನ್ನು ನೆನಪಿಸುತ್ತದೆ. ಇತರ ಮೊಡೆಲ್‌ಗಳು ಪಡೆಯುವ ಟಾಟಾ ಲೋಗೋ (ಕೆಲವು ಕಾರುಗಳಲ್ಲಿ ಪ್ರಕಾಶಿಸಲ್ಪಟ್ಟಿದೆ) ಬದಲಿಗೆ ಅವಳಿ-ಸ್ಪೋಕ್ ಸ್ಟೀರಿಂಗ್ ವೀಲ್ ಮಧ್ಯದಲ್ಲಿ 'ಅವಿನ್ಯಾ' ಅಕ್ಷರದೊಂದಿಗೆ ಬರುತ್ತದೆ.

ಸ್ಟೀರಿಂಗ್ ವೀಲ್ ಆಡಿಯೋ ಮತ್ತು ಮೀಡಿಯಾ ಕಂಟ್ರೋಲ್‌ಗಳನ್ನು ಹೊಂದಿದೆ, ಜೊತೆಗೆ ADAS ಫೀಚರ್‌ಗಳನ್ನು ನಿಯಂತ್ರಿಸಲು ಇತರ ಬಟನ್‌ಗಳನ್ನು ಹೊಂದಿದೆ. ಆದರೆ, ಅದೇ ಪೇಟೆಂಟ್ ಪಡೆದ ಸ್ಟೀರಿಂಗ್ ವೀಲ್ ವಿನ್ಯಾಸವು ಉತ್ಪಾದನೆಗೆ ಸಿದ್ಧವಾದ ಮೊಡೆಲ್‌ಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಟಾಟಾ ಅವಿನ್ಯಾ ಎಕ್ಸ್ ಅವಲೋಕನ

ಅವಿನ್ಯಾ ಎಕ್ಸ್ ಕಾನ್ಸೆಪ್ಟ್‌ ಸರಳವಾಗಿರುವ ಬಾಹ್ಯ ವಿನ್ಯಾಸವನ್ನು ಹೊಂದಿರುವ ಕ್ರಾಸ್ಒವರ್ ಎಸ್‌ಯುವಿ ಆಗಿದೆ. ಸಂಪೂರ್ಣ-ಎಲೆಕ್ಟ್ರಿಕ್‌ ಪರಿಕಲ್ಪನೆಯ ಮುಂಭಾಗವು ಲಂಬವಾದ ಹೆಡ್‌ಲ್ಯಾಂಪ್‌ಗಳ ಜೊತೆಗೆ T-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಸೈಡ್‌ ಪ್ರೊಫೈಲ್‌ನ ಪ್ರಮುಖ ಅಂಶವೆಂದರೆ ಇಳಿಜಾರಾದ ರೂಫ್‌ ಲೈನ್‌ ಆಗಿದೆ. ಅವಿನ್ಯಾ ಎಕ್ಸ್ ಮುಂಭಾಗದಲ್ಲಿ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಪಡೆದರೆ, ಹಿಂಭಾಗದಲ್ಲಿ ಬಾಗಿಲುಗಳನ್ನು ನಿರ್ವಹಿಸಲು ಟಚ್‌-ಆಧಾರಿತ ಪ್ಯಾನಲ್‌ಅನ್ನು ಹೊಂದಿದೆ.

ಹಿಂಭಾಗದಲ್ಲಿ 'ಅವಿನ್ಯಾ' ಮತ್ತು 'ಎಕ್ಸ್' ಬ್ಯಾಡ್ಜಿಂಗ್ ಜೊತೆಗೆ ಟಿ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳಿವೆ.

ಅವಿನ್ಯಾ ಎಕ್ಸ್ ಕಾನ್ಸೆಪ್ಟ್‌ನ ಇಂಟೀರಿಯರ್‌ ಸಂಪೂರ್ಣ ಬೀಜ್ ಬಣ್ಣದ ಥೀಮ್‌ನಲ್ಲಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಇವಿಯಲ್ಲಿರುವ ಮೂರನೇ ಎಲ್‌-ಆಕಾರದ ಲೈಟಿಂಗ್‌ ಅಂಶವಿದೆ, ಜೊತೆಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಸಂಪೂರ್ಣ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಇದೆ. ಅವಿನ್ಯಾ ಎಕ್ಸ್ ದೊಡ್ಡ ಗ್ಲಾಸ್‌ ರೂಫ್‌ಅನ್ನು ಪಡೆಯುವ ನಿರೀಕ್ಷೆಯಿದೆ.

ಪವರ್‌ಟ್ರೇನ್ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಅವಿನ್ಯಾ ಎಕ್ಸ್ 600 ಕಿ.ಮೀ ವರೆಗಿನ ಕ್ಲೈಮ್‌ ಮಾಡಿದ ರೇಂಜ್‌ಅನ್ನು ನೀಡುವ ನಿರೀಕ್ಷೆಯಿದೆ. ಇದನ್ನು ಬಹು ಬ್ಯಾಟರಿ ಪ್ಯಾಕ್‌ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಬಹುದು.

ಅವಿನ್ಯ ಎಕ್ಸ್, ಟಾಟಾದ ಹೊಸ ಪ್ಲಾಟ್‌ಫಾರ್ಮ್‌ ಆದ ಎಲೆಕ್ಟ್ರಿಫೈಡ್ ಮಾಡ್ಯುಲರ್ ಆರ್ಕಿಟೆಕ್ಚರ್ (EMA) ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್‌ ಇವಿ ಕಾರುಗಳಿಗೆ ಸೀಮಿತವಾಗಿರುತ್ತದೆ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಜೊತೆಗೆ ಹಂಚಿಕೊಳ್ಳಲ್ಪಡುತ್ತದೆ. ಇದು 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಆದರೆ ಅವಿನ್ಯಾ ನಾಮಫಲಕದ ಅಡಿಯಲ್ಲಿರುವ ಮೊಡೆಲ್‌ಗಳು 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನೂ ಸಹ ಓದಿ: MG Comet EVಗೆ ಮೊಡೆಲ್‌ ಇಯರ್‌ನ ಆಪ್‌ಡೇಟ್‌ಗಳ ಸೇರ್ಪಡೆ; ಬೆಲೆಯಲ್ಲಿಯೂ 27,000 ರೂ.ವರೆಗೆ ಏರಿಕೆ

ನಿರೀಕ್ಷಿತ ಬೆಲೆ

ಎಂಜಿ ಸೆಲೆಕ್ಟ್‌ನಂತೆಯೇ ಅವಿನ್ಯಾ ಸಹ ಟಾಟಾದ ಐಷಾರಾಮಿ ಇವಿ ಬ್ರಾಂಡ್ ಆಗುವ ನಿರೀಕ್ಷೆಯಿದೆ.

ಈ ಬ್ರಾಂಡ್‌ನ ಅಡಿಯಲ್ಲಿ ಮೊದಲ ಮೊಡೆಲ್‌ಅನ್ನು 2026 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಸಂಪೂರ್ಣ ಎಲೆಕ್ಟ್ರಿಕ್ ಆಗಿರುವ ಅವಿನ್ಯಾ ಎಕ್ಸ್‌ನ ಬೆಲೆ 40 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on Tata ಅವಿನ್ಯಾ X

explore ಇನ್ನಷ್ಟು on ಟಾಟಾ ಅವಿನ್ಯಾ ಎಕ್ಸ್

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ