• English
    • Login / Register

    MG Comet EVಗೆ ಮೊಡೆಲ್‌ ಇಯರ್‌ನ ಆಪ್‌ಡೇಟ್‌ಗಳ ಸೇರ್ಪಡೆ; ಬೆಲೆಯಲ್ಲಿಯೂ 27,000 ರೂ.ವರೆಗೆ ಏರಿಕೆ

    ಎಂಜಿ ಕಾಮೆಟ್ ಇವಿ ಗಾಗಿ dipan ಮೂಲಕ ಮಾರ್ಚ್‌ 20, 2025 08:12 pm ರಂದು ಪ್ರಕಟಿಸಲಾಗಿದೆ

    • 16 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮೊಡೆಲ್‌ ಇಯರ್‌ನ ಆಪ್‌ಡೇಟ್‌ ಕಾಮೆಟ್ ಇವಿಯಲ್ಲಿನ ವೇರಿಯೆಂಟ್‌-ವಾರು ಫೀಚರ್‌ಗಳನ್ನು ಮರುರೂಪಿಸುತ್ತದೆ, ಕೆಲವು ವೇರಿಯೆಂಟ್‌ಗಳಿಗೆ ಬೆಲೆಗಳನ್ನು 27,000 ರೂ.ಗಳವರೆಗೆ ಹೆಚ್ಚಿಸಲಾಗಿದೆ

    MG Comet EV Receives Model Year 2025 (MY25) Update; Prices Hiked By Up To Rs 27,000

    • ಮಿಡ್-ಸ್ಪೆಕ್ ಎಕ್ಸೈಟ್ ಟ್ರಿಮ್ ಈಗ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಬಟನ್‌ನಿಂದ ಮಡಿಸಬಹುದಾದ ORVM ಗಳನ್ನು ಪಡೆಯುತ್ತದೆ.

    • ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ವೇರಿಯೆಂಟ್‌ ಈಗ ಲೆದರೆಟ್ ಸೀಟ್ ಕವರ್‌ ಮತ್ತು 4 ಸ್ಪೀಕರ್‌ಗಳನ್ನು ಪಡೆಯುತ್ತದೆ.

    • ಬ್ಯಾಟರಿ ಪ್ಯಾಕ್ ಹೊಂದಿರುವ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ವೇರಿಯೆಂಟ್‌ಗಳ ಬೆಲೆಗಳು ಕ್ರಮವಾಗಿ 6,000 ಮತ್ತು 10,000 ರೂ.ಗಳಷ್ಟು ಹೆಚ್ಚಾಗಿದೆ.

    • ಬ್ಯಾಟರಿ ಸಬ್‌ಸ್ಕ್ರಿಪ್ಶನ್‌ ಪ್ಲಾನ್‌ ಹೊಂದಿರುವ ಕಾಮೆಟ್ ಇವಿಯ ಬೆಲೆ ಈಗ ಮೊದಲಿಗಿಂತ 27,000 ರೂ.ಗಳಷ್ಟು ಹೆಚ್ಚಾಗಿದೆ.

    • 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು ಮತ್ತು ಮ್ಯಾನ್ಯುವಲ್‌ ಎಸಿಯಂತಹ ಪ್ರಮುಖ ಫೀಚರ್‌ಗಳನ್ನು ಉಳಿಸಿಕೊಂಡಿದೆ.

    • ಇದರ ಸುರಕ್ಷತಾ ಜಾಲವು 2 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

    • ARAI- ಕ್ಲೈಮ್ ಮಾಡಿದ 230 ಕಿಮೀ ರೇಂಜ್‌ಅನ್ನು ಹೊಂದಿರುವ 17.4 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆಯುತ್ತದೆ.

    • ಈಗ ಬೆಲೆಗಳು 7 ಲಕ್ಷ ರೂ.ನಿಂದ 9.81 ಲಕ್ಷ ರೂ.ಗಳವರೆಗೆ ಇವೆ (ಎಕ್ಸ್ ಶೋ ರೂಂ, ಭಾರತಾದ್ಯಂತ).

    ಎಮ್‌ಜಿ ಕಾಮೆಟ್ EV ಬ್ಲಾಕ್‌ಸ್ಟಾರ್ಮ್ ಎಡಿಷನ್‌ಅನ್ನು 2025ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಯಿತು, ಇದು ರೆಗ್ಯುಲರ್‌ ವೇರಿಯೆಂಟ್‌ಗಳಲ್ಲಿ ಲಭ್ಯವಿಲ್ಲದ ಲೆದರೆಟ್ ಸೀಟ್ ಕವರ್‌ಅನ್ನು ಪರಿಚಯಿಸಿತು. ಕಾರು ತಯಾರಕರು ಈಗ ಇದನ್ನು ಕಾಮೆಟ್ ಇವಿಯ ರೆಗ್ಯುಲರ್‌ ವೇರಿಯೆಂಟ್‌ಗಳಲ್ಲಿ ಅದರ ಮೊಡೆಲ್‌ ಇಯರ್‌ 2025 (MY25) ಆಪ್‌ಡೇಟ್‌ನೊಂದಿಗೆ ಪರಿಚಯಿಸಿದ್ದಾರೆ. ಆದರೆ, ಇಷ್ಟೇ ಅಲ್ಲದೇ, ಎಮ್‌ಜಿಯ ಅತ್ಯಂತ ಕೈಗೆಟುಕುವ ಈ ಎಲೆಕ್ಟ್ರಿಕ್‌ ಕಾರಿಗೆ ಇನ್ನೂ ಕೆಲವು ಆಪ್‌ಡೇಟ್‌ಗಳನ್ನು ಪರಿಚಯಿಸಲಾಗಿದೆ. ಬೆಲೆಗಳನ್ನು 27,000 ರೂ.ಗಳವರೆಗೆ ಹೆಚ್ಚಿಸಲಾಗಿದ್ದು, ಅದರ ವಿವರಗಳು ಈ ಕೆಳಗಿನಂತಿವೆ:

    ಪರಿಷ್ಕೃತ ವೇರಿಯಂಟ್-ವಾರು ಬೆಲೆಗಳು

    ವೇರಿಯೆಂಟ್‌

    ಹಳೆಯ ಬೆಲೆ

    ಹೊಸ ಬೆಲೆ

    ಬೆಲೆಯಲ್ಲಿನ ವ್ಯತ್ಯಾಸ

    ಎಕ್ಸ್‌ಕ್ಯೂಟಿವ್‌

    7 ಲಕ್ಷ ರೂ.

    7 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸೈಟ್‌

    8.20 ಲಕ್ಷ ರೂ.

    8.26 ಲಕ್ಷ ರೂ.

    +   6,000 ರೂ.

    ಎಕ್ಸೈಟ್‌ ಫಾಸ್ಟ್‌ ಚಾರ್ಜಿಂಗ್‌

    8.73 ಲಕ್ಷ ರೂ.

    8.78 ಲಕ್ಷ ರೂ.

    +   6,000 ರೂ.

    ಎಕ್ಸ್‌‌ಕ್ಲೂಸಿವ್‌

    9.26 ಲಕ್ಷ ರೂ.

    9.36 ಲಕ್ಷ ರೂ.

    +   10,000 ರೂ.

    ಎಕ್ಸ್‌‌ಕ್ಲೂಸಿವ್‌ ಫಾಸ್ಟ್‌ ಚಾರ್ಜಿಂಗ್‌

    9.68 ಲಕ್ಷ ರೂ.

    9.78 ಲಕ್ಷ ರೂ.

    +  10,000 ರೂ.

    ಬ್ಲ್ಯಾಕ್‌ಸ್ಟಾರ್ಮ್‌ ಎಡಿಷನ್‌

    9.81 ಲಕ್ಷ ರೂ.

    9.81 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    100- ಇಯರ್‌ ಲಿಮಿಟೆಡ್‌ ಎಡಿಷನ್‌

    9.84 ಲಕ್ಷ ರೂ.

    ಸ್ಥಗಿತಗೊಂಡಿದೆ

    ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.

    ಮಿಡ್‌-ಸ್ಪೆಕ್ ಎಕ್ಸೈಟ್ ವೇರಿಯೆಂಟ್‌ಗಳ ಬೆಲೆಗಳು 6,000 ರೂ.ಗಳಷ್ಟು ಏರಿಕೆಯಾಗಿದ್ದು, ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ವೇರಿಯೆಂಟ್‌ಗಳ ಬೆಲೆಗಳು 10,000 ರೂ.ಗಳಷ್ಟು ಏರಿಕೆಯಾಗಿವೆ.

    MG Comet EV

    ಹಾಗೆಯೇ, ಕಾಮೆಟ್ ಇವಿಯನ್ನು ಬ್ಯಾಟರಿ ಚಂದಾದಾರಿಕೆ ಯೋಜನೆಯೊಂದಿಗೆ ಸಹ ಪಡೆಯಬಹುದು, ಅದರ ಹೊಸ ಬೆಲೆಗಳು ಈ ಕೆಳಗಿನಂತಿವೆ:

    ವೇರಿಯೆಂಟ್‌

    ಹಳೆಯ ಬೆಲೆ

    ಹೊಸ ಬೆಲೆ

    ಬೆಲೆಯಲ್ಲಿನ ವ್ಯತ್ಯಾಸ

    ಎಕ್ಸ್‌ಕ್ಯೂಟಿವ್‌

    5 ಲಕ್ಷ ರೂ.

    5 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಎಕ್ಸೈಟ್‌

    6.09 ಲಕ್ಷ ರೂ.

    6.25 ಲಕ್ಷ ರೂ.

    + 16,000 ರೂ.

    ಎಕ್ಸೈಟ್‌ ಫಾಸ್ಟ್‌ ಚಾರ್ಜಿಂಗ್‌

    6.57 ಲಕ್ಷ ರೂ.

    6.77 ಲಕ್ಷ ರೂ.

    + 20,000 ರೂ.

    ಎಕ್ಸ್‌‌ಕ್ಲೂಸಿವ್‌

    7.13 ಲಕ್ಷ ರೂ.

    7.35 ಲಕ್ಷ ರೂ.

    + 22,000 ರೂ.

    ಎಕ್ಸ್‌‌ಕ್ಲೂಸಿವ್‌ ಫಾಸ್ಟ್‌ ಚಾರ್ಜಿಂಗ್‌

    7.50 ಲಕ್ಷ ರೂ.

    7.77 ಲಕ್ಷ ರೂ.

    + 27,000 ರೂ.

    100- ಇಯರ್‌ ಲಿಮಿಟೆಡ್‌ ಎಡಿಷನ್‌

    7.66 ಲಕ್ಷ ರೂ.

    ಸ್ಥಗಿತಗೊಂಡಿದೆ

    ಬ್ಲ್ಯಾಕ್‌ಸ್ಟಾರ್ಮ್‌ ಎಡಿಷನ್‌

    7.80 ಲಕ್ಷ ರೂ.

    7.80 ಲಕ್ಷ ರೂ.

    ಯಾವುದೇ ವ್ಯತ್ಯಾಸವಿಲ್ಲ

    ಬ್ಯಾಟರಿ ಚಂದಾದಾರಿಕೆ ಯೋಜನೆಯು ಕಾಮೆಟ್ EV ಯ ಖರೀದಿ ವೆಚ್ಚವನ್ನು ಸಾಮಾನ್ಯವಾಗಿ ಕಡಿಮೆ ಮಾಡುತ್ತದೆ ಏಕೆಂದರೆ ನೀವು ಬ್ಯಾಟರಿ ಪ್ಯಾಕ್ ಇಲ್ಲದೆ EV ಖರೀದಿಸುತ್ತೀರಿ. ಆದರೆ, ಈ ಯೋಜನೆಯನ್ನು ಆರಿಸುವುದರಿಂದ ಪ್ರತಿ ಕಿ.ಮೀ.ಗೆ 2.5 ರೂ. ಚಂದಾದಾರಿಕೆ ವೆಚ್ಚವನ್ನು ಪಾವತಿಸಬೇಕಾಗುತ್ತದೆ.

    ಎಮ್‌ಜಿ ಕಾಮೆಟ್ ಇವಿಯಲ್ಲಿ ಹೊಸತಾಗಿರುವ ಎಲ್ಲವನ್ನೂ ಈಗ ನೋಡೋಣ.

    ಏನಿದೆ ಹೊಸತು ?

    ಎಂಜಿ ಕಾಮೆಟ್ ಎಕ್ಸಿಕ್ಯುಟಿವ್, ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎಂಬ ಮೂರು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಆದರೆ ವೇರಿಯೆಂಟ್‌-ವಾರು ಫೀಚರ್‌ಗಳ ವಿತರಣೆಯನ್ನು ಮರುರೂಪಿಸಲಾಗಿದೆ. ಈ ಆಪ್‌ಡೇಟ್‌ ಮಿಡ್-ಸ್ಪೆಕ್ ಎಕ್ಸೈಟ್ ಟ್ರಿಮ್‌ಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಬಟನ್‌ನಿಂದ ಮಡಿಸಬಹುದಾದ ಔಟ್‌ಸೈಡ್‌ ರಿಯರ್‌ ವ್ಯೂ ಮಿರರ್‌ಗಳನ್ನು (ORVM ಗಳು) ಪರಿಚಯಿಸುತ್ತದೆ, ಇವೆರಡನ್ನೂ ಆಪ್‌ಡೇಟ್‌ನ ಮೊದಲು ಟಾಪ್-ಸ್ಪೆಕ್ ವೇರಿಯೆಂಟ್‌ಗಳಲ್ಲಿ ಮಾತ್ರ ನೀಡಲಾಗುತ್ತಿತ್ತು.

    ಇದಲ್ಲದೆ, ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ಟ್ರಿಮ್ ಈಗ ಬಿಳಿ ಲೆದರೆಟ್ ಸೀಟ್ ಕವರ್‌ ಮತ್ತು 4-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ. ಆಪ್‌ಡೇಟ್‌ಗೂ ಮೊದಲು, ಸಂಪೂರ್ಣವಾಗಿ ಲೋಡ್ ಮಾಡಲಾದ ವೇರಿಯೆಂಟ್‌, ಫ್ಯಾಬ್ರಿಕ್ ಸೀಟ್ ಕವರ್‌ ಮತ್ತು ಬೇಸಿಕ್‌ 2-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿತ್ತು.

    ಆದಾಗ್ಯೂ, ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ವಿನ್ಯಾಸ ಮತ್ತು ಇತರ ಸೌಕರ್ಯಗಳು ಆಪ್‌ಡೇಟ್‌ನ ಮೊದಲ ಮೊಡೆಲ್‌ಗೆ ಹೋಲುತ್ತವೆ.

    ಇದನ್ನೂ ಓದಿ: ಶಾಕಿಂಗ್‌.. ಎಪ್ರಿಲ್‌ನಿಂದ Kia ಕಾರುಗಳ ಬೆಲೆಯಲ್ಲಿ ಏರಿಕೆ

    ಫೀಚರ್‌ಗಳು ಮತ್ತು ಸುರಕ್ಷತೆ

    MG Comet EV

    ಹೊಸ 4-ಸ್ಪೀಕರ್ ಸೌಂಡ್ ಸಿಸ್ಟಮ್ ಜೊತೆಗೆ, ಎಮ್‌ಜಿ ಕಾಮೆಟ್ ಇವಿಯು 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ) ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ ಸೇರಿದಂತೆ ಸೌಲಭ್ಯಗಳೊಂದಿಗೆ ಬರುತ್ತದೆ. ಇದು ಮ್ಯಾನ್ಯುವಲ್‌ ಎಸಿ, ಬಟನ್‌ನಿಂದ ಮಡಿಸಬಹುದಾದ ORVM ಗಳು (ಹೊರಗಿನ ರಿಯರ್‌ವ್ಯೂ ಮಿರರ್‌ಗಳು) ಮತ್ತು ಕೀ-ಲೆಸ್‌ ಎಂಟ್ರಿಯನ್ನು ಸಹ ಹೊಂದಿದೆ.

    ಸುರಕ್ಷತಾ ಸೂಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಕಾಮೆಟ್ ಇವಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಒಳಗೊಂಡಿದೆ. ಇದು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಸಹ ಪಡೆಯುತ್ತದೆ.

    ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್‌ನ ವಿವರಗಳು

    MG Comet EV

    ಎಮ್‌ಜಿ ಕಾಮೆಟ್‌ ಇವಿಯು ಹಿಂಭಾಗದ ಆಕ್ಸಲ್‌ಗೆ ಅಳವಡಿಸಲಾದ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾದ ಒಂದೇ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬರುವುದನ್ನು ಮುಂದುವರೆಸಿದೆ, ಅದರ ವಿವರಗಳು ಈ ಕೆಳಗಿನಂತಿವೆ:

    ಬ್ಯಾಟರಿ ಪ್ಯಾಕ್‌

    17.4 ಕಿ.ವ್ಯಾಟ್‌

    ಎಲೆಕ್ಟ್ರಿಕ್ ಮೋಟರ್ (ಗಳ) ಸಂಖ್ಯೆ

    1

    ಪವರ್‌

    42 ಪಿಎಸ್‌

    ಟಾರ್ಕ್‌

    110 ಎನ್‌ಎಮ್‌

    ಡ್ರೈವ್‌ಟ್ರೈನ್‌

    ರಿಯರ್‌-ವೀಲ್‌-ಡ್ರೈವ್‌ (RWD)

    ಕ್ಲೈಮ್‌ ಮಾಡಿದ ರೇಂಜ್ (ARAI)

    230 ಕಿ.ಮೀ.

    ಪ್ರತಿಸ್ಪರ್ಧಿಗಳು

    ಎಮ್‌ಜಿ ಕಾಮೆಟ್ ಇವಿಯು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ eC3 ಸೇರಿದಂತೆ ಇತರ ಎಂಟ್ರಿ-ಲೆವೆಲ್‌ನ EVಗಳೊಂದಿಗೆ ಸ್ಪರ್ಧಿಸುತ್ತದೆ.

    ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on M g ಕಾಮೆಟ್ ಇವಿ

    explore ಇನ್ನಷ್ಟು on ಎಂಜಿ ಕಾಮೆಟ್ ಇವಿ

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience