Login or Register ಅತ್ಯುತ್ತಮ CarDekho experience ಗೆ
Login

Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ

ಟಾಟಾ ನೆಕ್ಸಾನ್ ಇವಿ ಗಾಗಿ tarun ಮೂಲಕ ಸೆಪ್ಟೆಂಬರ್ 14, 2023 12:33 pm ರಂದು ಪ್ರಕಟಿಸಲಾಗಿದೆ

ನವೀಕೃತ ಟಾಟಾ ನೆಕ್ಸಾನ್‌ ಇವಿಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗಿದ್ದು, ನಾವು ಅದರ ಬೆಲೆಯನ್ನು ತಿಳಿದುಕೊಳ್ಳಲು ಕಾಯುತ್ತಿದ್ದೇವೆ.

  • ನವೀಕೃತ ಟಾಟಾ ನೆಕ್ಸಾನ್ ಕ್ರಿಯೇಟಿವ್, ಫಿಯರ್‌ಲೆಸ್ ಮತ್ತು ಎಮ್‌ಪವರ್ಡ್ ಎಂಬ ಮೂರು ಟ್ರಿಮ್‌ಗಳನ್ನು ಪಡೆಯುತ್ತಿದೆ.
  • ಪರಿಷ್ಕರಿಸಲ್ಪಟ್ಟ ಮುಂಭಾಗ ಮತ್ತು ಹಿಂಭಾಗ ಹಾಗೂ ಸಂಪರ್ಕಿತ ಎಲ್ಇಡಿ ಟೈಲ್‌ಲೈಟ್‌ ಎಲಿಮೆಂಟ್‌ಗಳನ್ನು ಇದಕ್ಕೆ ತಾಜಾ ಶೈಲಿಯನ್ನು ಒದಗಿಸುತ್ತಿವೆ.
  • ಕ್ಯಾಬಿನ್ ಅನ್ನು ಸಹ ಗಮನಾರ್ಹವಾಗಿ ಪರಿಷ್ಕರಿಸಲಾಗಿದ್ದು, ಟಚ್-ಎನೇಬಲ್ಡ್ ಎಸಿ ಪ್ಯಾನಲ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿರುತ್ತದೆ.
  • ಈಗ 10.25-ಇಂಚಿನ ಡಿಜಿಟಲ್ ಕ್ಲಸ್ಟರ್, 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು 9-ಸ್ಪೀಕರ್ ಜೆಬಿಲ್ ಸೌಂಡ್ ಸಿಸ್ಟಮ್ ಅನ್ನು ಇದು ಹೊಂದಿದೆ.
  • ಆರು ಏರ್‌ಬ್ಯಾಗ್‌ಗಳು (ಪ್ರಮಾಣಿತ). 360-ಡಿಗ್ರಿ ಕ್ಯಾಮಾರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ರೇನ್-ಸೆನ್ಸಿಂಗ್ ವೈಪರ್‌ಗಳನ್ನು ಹೊಂದಿದೆ.
  • ಮಧ್ಯಮ-ಶ್ರೇಣಿಯ ವೇರಿಯೆಂಟ್‌ಗಳು 325km ವರೆಗಿನ ರೇಂಜ್ ನೀಡಿದರೆ ದೀರ್ಘ-ಶ್ರೇಣಿಯು 465km ವರೆಗಿನ ರೇಂಜ್ ನೀಡುತ್ತವೆ.

ನವೀಕೃತ ಟಾಟಾ ನೆಕ್ಸಾನ್ ಇವಿ ಇಂದು ಬಿಡುಗಡೆಗೆ ಸಿದ್ಧವಾಗಿದೆ. ತಳೆದ ಮೂರು ವರ್ಷಗಳಲ್ಲಿ ಇದು ಪಡೆದ ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಈ ಎಲೆಕ್ಟ್ರಿಕ್ ಎಸ್‌ಯುವಿಯ ಮೊದಲ ಪ್ರಮುಖ ಅಪ್‌ಡೇಟ್ ಆಗಿದೆ. ಈಗಾಗಲೇ ಬುಕ್ಕಿಂಗ್‌ಗಳು ನಡೆಯುತ್ತಿದ್ದು, ಡೀಲರ್‌ಶಿಪ್‌ಗಳನ್ನು ತಲುಪಿದೆ.

ನವೀಕೃತ ಟಾಟಾ ನೆಕ್ಸಾನ್ ಕುರಿತು ನೀವು ತಿಳಿದುಕೊಳ್ಳಬೇಕಾದ ವಿವರಗಳು ಇಲ್ಲಿವೆ:

ವೇರಿಯೆಂಟ್‌ಗಳು

ನವೀಕೃತ ನೆಕ್ಸಾನ್ ಇವಿ ಮೂರು ವಿಶಾಲವಾದ ಟ್ರಿಮ್‌ಗಳಲ್ಲಿ ಲಭ್ಯವಿದೆ - ಕ್ರಿಯೇಟಿವ್, ಫಿಯರ್‌ಲೆಸ್ ಮತ್ತು ಎಮ್‌ಪವರ್ಡ್. ಮೂಲ ವೇರಿಯೆಂಟ್ ಮಧ್ಯಮ ರೇಂಜ್ (ಎಂಆರ್) ಬ್ಯಾಟರಿ ಪ್ಯಾಕ್‌ನೊಂದಿಗೆ ಮಾತ್ರ ಲಭ್ಯವಿದ್ದರೆ ಉಳಿದೆರಡು ಎಂಆರ್ ಮತ್ತು ದೀರ್ಘ ಶ್ರೇಣಿ (ಎಲ್ಆರ್) ಎರಡರ ಆಯ್ಕೆಯನ್ನು ಪಡೆಯುತ್ತದೆ.

ಎಕ್ಸ್‌ಟೀರಿಯರ್ ಶೈಲಿ

ನವೀಕೃತ ಟಾಟಾ ನೆಕ್ಸಾನ್ ಇವಿ ಸಂಪೂರ್ಣವಾಗಿ ತಾಜಾ ಗುರುತನ್ನು ಪಡೆಯಲು ಪೂರ್ಣಪ್ರಮಾಣದಲ್ಲಿ ನವೀಕರಣವನ್ನು ಪಡೆದಿದೆ. ಮುಂಭಾಗದಲ್ಲಿ ಸಂಪರ್ಕಿತ ಎಲ್‌ಇಡಿ ಡಿಆರ್‌ಎಲ್‌ಗಳು, ಸ್ಲೀಕರ್ ಕ್ಲೋಸ್ಡ್-ಆಫ್ ಗ್ರಿಲ್ ಮತ್ತು ಹ್ಯಾರಿಯರ್ ಪ್ರೇರಿತ ಸ್ಪ್ಲೀಟ್ ಹೆಡ್‌ಲೈಟ್‌ ಸೆಟಪ್‌ನೊಂದಿಗೆ ಹೆಚ್ಚು ಆಧುನಿಕ ಮತ್ತು ಭವಿಷ್ಯದ ದೃಷ್ಟಿಯಿಂದ ಆಕರ್ಷಣೆಯನ್ನು ಪಡೆದಿದೆ.

ಪಾರ್ಶ್ವ ಬದಲಾವಣೆಗಳು ಹೊಸ 16-ಇಂಚಿನ ಆ್ಯರೋಡೈನಾಮಿಕಲ್ ಶೈಲಿಯ ಅಲಾಯ್ ವ್ಹೀಲ್‌ಗಳನ್ನು ಪಡೆದಿದೆ. ಡಿಆರ್‌ಎಲ್‌ಗಳಂತೆ ವೆಲ್‌ಕಮ್ ಲೈಟ್ ಕಾರ್ಯವನ್ನು ಬೆಂಬಲಿಸುವ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಡಿರ್ರಿಯರ್ ಹೊಂದಿದೆ. ಬೂಡ್ ಲಿಡ್ ಮತ್ತು ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದ್ದು ಹೆಚ್ಚು ಪ್ರಮುಖ ಮತ್ತು ಗಟ್ಟಿಮುಟ್ಟಾದ ನೋಟವನ್ನು ಇದು ಹೊಂದಿದೆ. ಇದರೊಂದಿಗೆ ಹಿಂದಿನ ವೈಪರ್ ಅನ್ನು ಸ್ಪಾಯ್ಲರ್‌ಗೆ ಉತ್ತಮ ರೀತಿಯಲ್ಲಿ ಜೋಡಿಸಲಾಗಿದೆ. ಸ್ಟೈಲಿಂಗ್ ಬದಲಾವಣೆಗಳು ಐಸಿಇ-ಚಾಲಿತ ನೆಕ್ಸಾನ್‌ಗೆ ಅನುಗುಣವಾಗಿದ್ದು ಇನ್ನೂ ಕೆಲವು ವಿಶಿಷ್ಟವಾದ ಅಪ್‌ಡೇಟ್‌ಗಳಿವೆ.

ಸಂಬಂಧಿತ: ವೀಕ್ಷೀಸಿ: ನವೀಕೃತ ನೆಕ್ಸಾನ್ ಇವಿಗೆ ಬ್ಯಾಕ್‌ಲಿಟ್ ಸ್ಟೀರಿಂಗ್ ವ್ಹೀಲ್‌ಗೆ ಟಾಟಾ ಏರ್‌ಬ್ಯಾಗ್‌ ಅನ್ನು ಹೇಗೆ ಹೊಂದಿಸಿದೆ

ಇಂಟೀರಿಯರ್ ಸ್ಟೈಲಿಂಗ್

ಹೊಸ ಡ್ಯುಯಲ್-ಟೋನ್ ಥೀಮ್ ಮತ್ತು ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಲೇಔಟ್‌ನೊಂದಿಗೆ ಕ್ಯಾಬಿನ್ ಅನ್ನು ನವೀಕರಣಗೊಳಿಸಲಾಗಿದೆ. ಟಾಟಾ ಅವಿನ್ಯೂ ಪರಿಕಲ್ಪನೆಯಿಂದ ಪ್ರೇರಿತವಾದ ಹೊಸ ಟು-ಸ್ಪೋಕ್ ಸ್ಟೀರಿಂಗ್ ವ್ಹೀಲ್, ಬ್ಯಾಕ್‌ಲಿಟ್ ಡಿಸ್‌ಪ್ಲೇ ಜೊತೆಗೆ ಟಾಟಾ ಲೋಗೋವನ್ನು ಹೊಂದಿದೆ.

ಸಾಮಾನ್ಯ ನೆಕ್ಸಾನ್‌ನಂತೆಯೇ ಹೊಸ ಟಚ್-ಎನೇಬಲ್ಡ್ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ಹೊಂದಿದೆ. ಕೊನೆಯದಾಗಿ ವೇರಿಯೆಂಟ್ ಅನ್ನು ಅವಲಂಬಿಸಿ ಇವಿ ವಿಶೇಷವಾದ ಸೀಟುಗಳ ಮೇಲ್ಗವಸನ್ನು ಹೊಂದಿದೆ.

ಹೊಸ ಫೀಚರ್‌ಗಳು

ಹೊಸ 10.25 –ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಸೇರಿಸಲಾಗಿದ್ದು ಇದು ಆನ್‌ಸ್ಕ್ರೀನ್ ನ್ಯಾವಿಗೇಷನ್ ಅನ್ನು ಸಹ ಹೊಂದಿದೆ. ಟಾಟಾ ಇನ್ನೂ ಅತಿದೊಡ್ಡ ಟಚ್‌ಸ್ಕ್ರೀನ್ ಆಗಿರುವ ತನ್ನ 12.3-ಇಂಚಿನ ಲ್ಯಾಂಡ್-ಸ್ಕೇಪ್-ಆಧಾರಿತ ಯೂನಿಟ್ ಅನ್ನು ಬಳಸುತ್ತಿದೆ.

ಇತರ ಹೊಸ ಫೀಚರ್‌ಗಳು 9-ಸ್ಪ್ಲೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು ಮುಂಭಾಗದ ಪ್ರಯಾಣಿಕರ ಸೀಟುಗಳ ಎತ್ತರದ ಹೊಂದಾಣಿಕೆಯನ್ನು ಒಳಗೊಂಡಿವೆ. ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಈಗಾಗಲೇ ನೆಕ್ಸಾನ್ ಇವಿಯ ಫೀಚರ್ ಪಟ್ಟಿಯ ಭಾಗವಾಗಿತ್ತು.

ಇವಿಯ ನಿರ್ದಿಷ್ಟ ಸಾಮರ್ಥ್ಯಗಳ ವಿಷಯದಲ್ಲಿ, ಹೊಸ ನೆಕ್ಸಾನ್ ಇವಿ V2L ಮತ್ತು V2V ಚಾರ್ಜಿಂಗ್ ಅನ್ನು ಸಹ ಹೊಂದಿದೆ. ಇವುಗಳನ್ನು ಮುಖ್ಯವಾಗಿ ನಿಮ್ಮ ಎಲೆಕ್ಟ್ರಿಕ್ ಎಸ್‌ಯುವಿ ಉಪಕರಣವನ್ನು ನಿರ್ವಹಿಸಲು ಬೃಹತ್ ಪವರ್ ಬ್ಯಾಂಕ್ ಆಗಿ ಬಳಸಬಹುದು (ಕ್ಯಾಂಪಿಂಗ್ ಮಾಡುವಾಗ) ಅಥವಾ ಸ್ವಲ್ಪ ಹೆಚ್ಚುವರಿ ರೇಂಜ್‌ಗಾಗಿ ಮತ್ತೊಂದು ಇವಿಗೆ ಸಹಾಯ ಮಾಡುತ್ತದೆ

ಇದನ್ನೂ ಪರಿಶೀಲಿಸಿ: ವೀಕ್ಷಿಸಿ: ನವೀಕೃತ ಟಾಟಾ ನೆಕ್ಸಾನ್ ಇವಿ V2L ಫೀಚರ್ ಕಾರ್ಯ

ಅಧಿಕ ಸುರಕ್ಷತೆ

ಆರು ಏರ್‌ಬ್ಯಾಗ್‌ಗಳು (ಪ್ರಮಾಣಿತ), ಇಎಸ್‌ಸಿ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, 360 ಡಿಗ್ರಿ ಕ್ಯಾಮರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ರೇನ್-ಸೆನ್ಸಿಂಗ್ ವೈಪರ್‌ಗಳು ಇದರಲ್ಲಿನ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸುತ್ತವೆ.

ಸುಧಾರಿತ ರೇಂಜ್

ಸ್ಪೆಕ್‌ಗಳು

ಮಧ್ಯಮ ರೇಂಜ್

ದೀರ್ಘ ರೇಂಜ್

ಬ್ಯಾಟರಿ

30.2kWh

40.5kWh

ರೇಂಜ್

325 kms

465 kms

ಪವರ್/ಟಾರ್ಕ್

129PS/ 215Nm

144PS/ 215Nm

ನವೀಕೃತ ನೆಕ್ಸಾನ್ ಇವಿ 30.2kWh ಮತ್ತು 40.5kWh ಬ್ಯಾಟರಿ ಪ್ಯಾಕ್ ಅನ್ನು ಉಳಿಸಿಕೊಂಡಿದ್ದು ಅದರ ಶ್ರೇಣಿ ಮತ್ತು ಶಕ್ತಿಯು ಅಧಿಕವಾಗಿದೆ. ಮಧ್ಯಮ-ಶ್ರೇಣಿಯ (ಹಿಂದಿನ ಪ್ರೈಮ್) ವೇರಿಯೆಂಟ್ ಈಗ 13 ಕಿಲೋಮೀಟರ್‌ಗಳಷ್ಟು ಹೆಚ್ಚು ಓಡಬಲ್ಲದು ಮತ್ತು ದೀರ್ಘ ಶ್ರೇಣಿಯು (ಹಿಂದಿನ ಮ್ಯಾಕ್ಸ್) ಹೆಚ್ಚುವರಿ 12 ಕಿಲೋಮೀಟರ್ ವ್ಯಾಪ್ತಿಯನ್ನು ನೀಡಬಲ್ಲದು.

ನಿರೀಕ್ಷಿತ ಬೆಲೆ

ಈ ನವೀಕೃತ ನೆಕ್ಸಾನ್ ಇವಿ ಅದರ ಪ್ರಸ್ತುತ ಬೆಲೆ ರೇಂಜ್‌ನ ರೂ.14.49 ಲಕ್ಷದಿಂದ ರೂ. 19.54 ಲಕ್ಷ (ಎಕ್ಸ್-ಶೋರೂಮ್)ದವರೆಗೆ ಪ್ರೀಮಿಯಂ ಅನ್ನು ಪಡೆಯುತ್ತದೆ. ಈ ಟಾಟಾ ಎಲೆಕ್ಟ್ರಿಕ್ ಎಸ್‌ಯುವಿ ಮಹೀಂದ್ರಾ XUV400 ಇವಿ ಗೆ ಸ್ಪರ್ಧೆಯನ್ನು ಒಡ್ಡುತ್ತದೆ ಹಾಗೂ MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗಳಿಗೆ ಕೈಗೆಟಕುವ ಪರ್ಯಾಯವಾಗಿದೆ.

ಇನ್ನಷ್ಟು ಇಲ್ಲಿ ಓದಿ : ಟಾಟಾ ನೆಕ್ಸಾನ್ ಆಟೋಮ್ಯಾಟಿಕ್

Share via

Write your Comment on Tata ನೆಕ್ಸಾನ್ ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ