Login or Register ಅತ್ಯುತ್ತಮ CarDekho experience ಗೆ
Login

14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ

ಸೆಪ್ಟೆಂಬರ್ 14, 2023 03:38 pm ರಂದು tarun ಮೂಲಕ ಪ್ರಕಟಿಸಲಾಗಿದೆ

ಮಿಡ್ ರೇಂಜ್ ನ ವೇರಿಯೆಂಟ್ ಗಳು 325 ಕಿಮೀ ನಷ್ಟು ದೂರವನ್ನು ತಲುಪಬಲ್ಲದು, ಆದರೆ ದೀರ್ಘ ಶ್ರೇಣಿಯ ವೇರಿಯೆಂಟ್ ಗಳು 465 ಕಿಮೀ ವರೆಗೆ ಚಲಿಸಬಹುದು

  • ನೆಕ್ಸಾನ್ EV ಫೇಸ್‌ಲಿಫ್ಟ್ ನ ಎಕ್ಸ್ ಶೋರೂಂ ಬೆಲೆ 14.74 ಲಕ್ಷ ರೂ.ನಿಂದ 19.94 ರೂ. ಲಕ್ಷದವರೆಗೆ ಇರುತ್ತದೆ.
  • ಮೂರು ಟ್ರಿಮ್‌ಗಳಲ್ಲಿ ಲಭ್ಯವಿದೆ - ಕ್ರಿಯೇಟಿವ್, ಫಿಯರ್‌ಲೆಸ್ ಮತ್ತು ಎಂಪವರ್ಡ್.
  • ಆಕರ್ಷಕ ನೋಟಕ್ಕಾಗಿ ಒಳಗೆ ಮತ್ತು ಹೊರಗೆ ಸಮಗ್ರ ಸ್ಟೈಲಿಂಗ್ ಅಪ್ಡೇಟ್ ಗಳನ್ನು ಪಡೆಯುತ್ತದೆ.
  • ಈಗ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಸೌಕರ್ಯಗಳನ್ನು ಹೊಂದಿದೆ.
  • ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್), 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್‌ಗಳೊಂದಿಗೆ ಪ್ರಯಾಣಿಕರ ಸುರಕ್ಷತೆಯು ಉತ್ತಮಗೊಳ್ಳುತ್ತದೆ.

ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಇದರ ಎಕ್ಸ್ ಶೋರೂಂ ಬೆಲೆ 14.74 ಲಕ್ಷ ರೂ.ನಿಂದ 19.94 ಲಕ್ಷದವರೆಗೆ ಇರಲಿದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಈ ಎಲೆಕ್ಟ್ರಿಕ್ ಕಾರು, 2020 ರಲ್ಲಿ ಪ್ರಾರಂಭವಾದ ನಂತರ ಅದರ ಮೊದಲ ಬಾರಿಗೆ ಪ್ರಮುಖ ಅಪ್ಡೇಟ್ ಗಳನ್ನು ಪಡೆಯುತ್ತಿದೆ. ಅದರ ಬುಕಿಂಗ್‌ಗಳು ಈಗಾಗಲೇ ಚಾಲ್ತಿಯಲ್ಲಿದ್ದು ಮತ್ತು ಅದರ ಡೆಲಿವರಿ ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

ವೇರಿಯಂಟ್-ವಾರು ಬೆಲೆ

ಆಯ್ಕೆ ಮಾಡಬಹುದಾದ ಮೂರು ವಿಶಾಲವಾದ ಟ್ರಿಮ್‌ಗಳು ಈ ಕೆಳಗಿನಂತಿವೆ:

ವೇರಿಯಂಟ್

ಮಿಡ್-ರೇಂಜ್

ಲಾಂಗ್-ರೇಂಜ್

ಕ್ರಿಯೇಟಿವ್+

14.74 ಲಕ್ಷ ರೂ.

-

ಫಿಯರ್ ಲೆಸ್

16.19 ಲಕ್ಷ ರೂ.

18.19 ಲಕ್ಷ ರೂ.

ಫಿಯರ್ ಲೆಸ್+

16.69 ಲಕ್ಷ ರೂ.

18.69 ಲಕ್ಷ ರೂ.

ಎಂಪವರ್ಡ್

17.84 ಲಕ್ಷ ರೂ.

-

ಎಂಪವರ್ಡ್+

-

19.94 ಲಕ್ಷ ರೂ.

ಮುಂದಿನ ತ್ರೈಮಾಸಿಕದಿಂದ EV-ಕೇಂದ್ರಿತ ಡೀಲರ್‌ಶಿಪ್‌ಗಳನ್ನು ಪರಿಚಯಿಸಲು ಟಾಟಾ ನಿರ್ಧರಿಸಿದೆ. ಮೊದಲ ಹಂತದಲ್ಲಿ, ಐದು ಡೀಲರ್‌ಶಿಪ್‌ಗಳನ್ನು ತೆರೆಯಲು ಯೋಜಿಸಲಾಗುತ್ತಿದೆ, ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತದೆ.

ಹೊಸ ಸ್ಟೈಲಿಂಗ್

ಫೇಸ್‌ಲಿಫ್ಟೆಡ್ ನೆಕ್ಸಾನ್ ಹೆಚ್ಚು ಆಧುನಿಕ ಮತ್ತು ಟ್ರೆಂಡಿ ಸ್ಟೈಲಿಂಗ್ ಅಂಶಗಳನ್ನು ಸ್ಲೀಕರ್ ಗ್ರಿಲ್, ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್‌ಗಳೊಂದಿಗೆ ಅಳವಡಿಸಿಕೊಳ್ಳುತ್ತದೆ. ಇದು ಹೊಸ ಏರೋಡೈನಾಮಿಕಲ್ ಶೈಲಿಯ 16-ಇಂಚಿನ ಅಲಾಯ್ ವೀಲ್ ಗಳಲ್ಲಿ ಕೂಡ ಇರುತ್ತದೆ. ವಿನ್ಯಾಸ ಬದಲಾವಣೆಗಳು ಬಹುತೇಕ ನೆಕ್ಸಾನ್‌ಗೆ ಅನುಗುಣವಾಗಿರುತ್ತವೆ, ಆದರೆ ಅದನ್ನು ಹೆಚ್ಚು ವಿಭಿನ್ನಗೊಳಿಸಲು ಸಹಾಯ ಮಾಡಲು, ಟಾಟಾ ಕೆಲವು ವಿಶೇಷ ಅಂಶಗಳನ್ನು ಸೇರಿಸಿದೆ.

ಕ್ಯಾಬಿನ್ ಹೊಸ ಡ್ಯುಯಲ್-ಟೋನ್ ಥೀಮ್, ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಸ್ಲಿಮ್ಮರ್ ಎಸಿ ವೆಂಟ್‌ಗಳು ಮತ್ತು ಟಚ್-ನಲ್ಲಿ ನಿರ್ವಹಿಸುವ ಎಸಿ ಕಂಟ್ರೋಲ್ ಪ್ಯಾನೆಲ್‌ನೊಂದಿಗೆ ಹೊಸ ಅನುಭವವನ್ನು ನೀಡುತ್ತದೆ. ಟಾಟಾ ಲೋಗೋವನ್ನು ಹೊಂದಿರುವ ಬ್ಯಾಕ್‌ಲಿಟ್ ಡಿಸ್ಪ್ಲೇಯೊಂದಿಗೆ ಟಾಟಾ ಅವಿನ್ಯಾ-ಪ್ರೇರಿತ 2-ಸ್ಪೋಕ್ ಸ್ಟೀರಿಂಗ್ ವೀಲ್ ಸಹ ಇದೆ.

ಹೆಚ್ಚು ಸೌಕರ್ಯ-ಭರಿತ

ನೆಕ್ಸಾನ್ EV ಫೇಸ್‌ಲಿಫ್ಟ್ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ, ಅವುಗಳು ಈ ಕೆಳಗಿನಂತಿವೆ:

  • 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್
  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ
  • 9-ಸ್ಪೀಕರ್ ನ JBL ಸೌಂಡ್ ಸಿಸ್ಟಮ್
  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಜೊತೆಗೆ ಆನ್‌ಸ್ಕ್ರೀನ್ ನ್ಯಾವಿಗೇಶನ್
  • ಎಲೆಕ್ಟ್ರಿಕ್ ಸನ್‌ರೂಫ್
  • ಆಟೋಮ್ಯಾಟಿಕ್ ಎಸಿ
  • ವೈರ್‌ಲೆಸ್ ಫೋನ್ ಚಾರ್ಜರ್
  • ಕ್ರ್ಯುಸ್ ಕಂಟ್ರೋಲ್
  • ಮುಂಭಾಗದ ವೆಂಟಿಲೇಟೆಡ್ ಸೀಟ್ ಗಳು
  • ಎತ್ತರ ಹೊಂದಾಣಿಕೆ ಮಾಡಬಹುದಾದ ಸಹ-ಚಾಲಕನ ಸೀಟ್

ಹಿಂದಿಗಿಂತಲೂ ಸುರಕ್ಷಿತ

ನೆಕ್ಸಾನ್ EV ಫೇಸ್‌ಲಿಫ್ಟ್ ಅದರ ಸುರಕ್ಷತಾ ಅಂಶವನ್ನು ಈ ರೀತಿಯ ಅಂಶಗಳೊಂದಿಗೆ ಹೆಚ್ಚಿಸುತ್ತದೆ:

  • ಆರು ಏರ್ ಬ್ಯಾಗ್ ಗಳು(ಸ್ಟ್ಯಾಂಡರ್ಡ್)
  • 360 ಡಿಗ್ರಿ ಕ್ಯಾಮೆರಾ
  • ಬ್ಲೈಂಡ್ ಸ್ಪಾಟ್ ಮಾನಿಟರಿಂಗ್
  • ಮುಂದಿನ ಪಾರ್ಕಿಂಗ್ ಸೆನ್ಸಾರ್
  • ESC
  • ISOFIX ಚೈಲ್ಡ್ ಸೀಟ್ ಮೌಂಟ್
  • ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು
  • ಮಳೆ-ಸಂವೇದಿ ವೈಪರ್‌ಗಳು

ನವೀಕರಿಸಿದ ಬ್ಯಾಟರಿ ಪ್ಯಾಕ್‌ಗಳು

ಆವೃತ್ತಿ

ಮಿಡ್ ರೇಂಜ್

ಲಾಂಗ್ ರೇಂಜ್

ಬ್ಯಾಟರಿ

30 ಕಿ.ವ್ಯಾಟ್

40.5 ಕಿ.ವ್ಯಾಟ್

ರೇಂಜ್

325 ಕಿ.ಮೀ

465 ಕಿ.ಮೀ

ಪವರ್/ಟಾರ್ಕ್

129ಪಿಎಸ್/ 215ಎನ್ಎಂ

144ಪಿಎಸ್/ 215ಎನ್ಎಂ

ನೆಕ್ಸಾನ್ EV ಫೇಸ್‌ಲಿಫ್ಟ್ 30 ಕಿ.ವ್ಯಾಟ್ ಮತ್ತು 40.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ಗಳನ್ನು ಪಡೆಯುತ್ತದೆ. ಆದುದರಿಂದ, ತಲುಪಬಲ್ಲ ದೂರವು ಕ್ರಮವಾಗಿ 325 ಕಿ.ಮೀ (+13 ಕಿ.ಮೀ) ಮತ್ತು 465 ಕಿ.ಮೀ (+12 ಕಿ.ಮೀ) ವರೆಗೆ ಸುಧಾರಿಸಿದೆ. ಎರಡೂ ವೇರಿಯೆಂಟ್ ಗಳು ಗರಿಷ್ಠ ಟಾರ್ಕ್ ಅಂಕಿಗಳಲ್ಲಿ ಕುಸಿತವನ್ನು ಕಾಣುತ್ತವೆ, ಆದರೆ ಲಾಂಗ್ ರೇಂಜ್ ನ ವೇರಿಯೆಂಟ್ ಕೇವಲ 1PS ನಷ್ಟು ಪವರ್ ಜಂಪ್ ಅನ್ನು ಹೊಂದಿದೆ.

ಚಾರ್ಜಿಂಗ್ ಸಮಯ

ಚಾರ್ಜಿಂಗ್ ಸಮಯ (10-100 ಪ್ರತಿಶತ)

ಮಿಡ್-ರೇಂಜ್

ಲಾಂಗ್ ರೇಂಜ್

15ಎ ಪ್ಲಗ್ ಪಾಯಿಂಟ್

10.5 ಗಂಟೆಗಳು

15 ಗಂಟೆಗಳು

3.3 ಕಿ.ವ್ಯಾಟ್ ಎಸಿ ವಾಲ್‌ಬಾಕ್ಸ್

10.5 ಗಂಟೆಗಳು

15 ಗಂಟೆಗಳು

7.2 ಕಿ.ವ್ಯಾಟ್ AC

4.3 ಗಂಟೆಗಳು

6 ಗಂಟೆಗಳು

ಫಾಸ್ಟ್ ಚಾರ್ಜಿಂಗ್

56 ನಿಮಿಷಗಳು

56 ನಿಮಿಷಗಳು

DC ಫಾಸ್ಟ್ ಚಾರ್ಜರ್‌ ನ ಸಹಾಯದಿಂದ ನೆಕ್ಸಾನ್ EV ಫೇಸ್‌ಲಿಫ್ಟ್ ಅನ್ನು ಕೇವಲ 56 ನಿಮಿಷಗಳಲ್ಲಿ 10 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಇದು ಇತರ ವಾಹನದಿಂದ ಚಾರ್ಜ್ ಮಾಡಲು ಮತ್ತು ವಾಹನದಿಂದ ವಾಹನಕ್ಕೆ ಚಾರ್ಜಿಂಗ್ ಮಾಡುವುದನ್ನು ಬೆಂಬಲಿಸುತ್ತದೆ, ವಿದ್ಯುತ್ ಉಪಕರಣಗಳಿಗೆ ಮತ್ತು ಇತರ ಇವಿ ಗಳಿಗೂ ಪವರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ!.

ಪ್ರತಿಸ್ಪರ್ಧಿಗಳು

ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್, ಮಹೀಂದ್ರಾ XUV400 ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಬೆಲೆಯಲ್ಲಿ ಹೋಲಿಸುವಾಗ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಜೆಡ್ಎಸ್ EV ಗಳಿಗೆ ಕೈಗೆಟುಕುವ ಪರ್ಯಾಯವಾಗಿದೆ.

ಇನ್ನಷ್ಟು ಓದಿ : ಟಾಟಾ ನೆಕ್ಸಾನ್ 2023-ಆಟೋಮ್ಯಾಟಿಕ್

Share via

Write your Comment on Tata ನೆಕ್ಸಾನ್ ಇವಿ

explore ಇನ್ನಷ್ಟು on ಟಾಟಾ ನೆಕ್ಸಾನ್ ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ