Tata Nexon EV Facelift ಇಂದು ಅನಾವರಣ: ಇಲ್ಲಿಯವರೆಗಿನ ಬೆಳವಣಿಗೆಗಳ ಬಗ್ಗೆ ಒಂದು ಮೆಲುಕು
ಟಾಟಾ ನೆಕ್ಸಾನ್ ಇವಿ ಗಾಗಿ tarun ಮೂಲಕ ಸೆಪ್ಟೆಂಬರ್ 07, 2023 06:57 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್‌ನ ಅಪ್‌ಡೇಟ್‌ಗಳು ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಫೀಚರ್‌ಗಳಿಗೆ ಸೀಮಿತವಾಗಿರುವ ಸಾಧ್ಯತೆಗಳೇ ಹೆಚ್ಚು, ಆದರೆ ಕೆಲವು ಪವರ್‌ಟ್ರೇನ್ ಬದಲಾವಣೆಗಳೂ ಇರುವ ನಿರೀಕ್ಷೆ ಇದೆ
ಅಪ್‌ಡೇಟ್ ಮಾಡಲಾದ ಟಾಟಾ ನೆಕ್ಸಾನ್ ಅನಾವರಣದ ನಂತರ ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಮುಂದಿನ ಸರದಿಯಲ್ಲಿದ್ದು, ಇದು ನಾಳೆ ಅನಾವರಣಗೊಳ್ಳಲಿದೆ. ನೆಕ್ಸಾನ್ ಫೇಸ್‌ಲಿಫ್ಟ್‌ನ ಅನೇಕ ಸ್ಪೈಶಾಟ್‌ಗಳು ಬಿಡುಗಡೆಗೂ ಮುನ್ನ ದೊರೆತಿದ್ದರೆ, ಇದರ ಇಲೆಕ್ಟ್ರಿಕ್ ಪುನರಾವರ್ತನೆ ಬಗ್ಗೆ ಹೆಚ್ಚೇನು ತಿಳಿದಿಲ್ಲ. ಆದಾಗ್ಯೂ, ಕೆಲವು ಟೀಸರ್‌ಗಳು ಅದರ ಎಕ್ಸ್‌ಟೀರಿಯರ್ ಪ್ರೊಫೈಲ್‌ನಲ್ಲಿರಬಹುದಾದ ಬದಲಾವಣೆಗಳ ನೋಟವನ್ನು ನಮಗೆ ನೀಡಿದೆ.
ಆದ್ದರಿಂದ, ಅನಾವರಣಕ್ಕೂ ಮುನ್ನ, ಆನ್‌ಬೋರ್ಡ್‌ನಲ್ಲಿ ನೀವು ನಿರೀಕ್ಷಿಸಬಹುದಾದ ಬದಲಾವಣೆಗಳ ವಿವರಗಳು ಇಲ್ಲಿವೆ:
ಹೊಸ ಹೆಸರು
ಟಾಟಾ ತನ್ನ ಇಲೆಕ್ಟ್ರಿಕ್ ವಾಹನದ ವಿಭಾಗಕ್ಕೆ ಮರುಬ್ರ್ಯಾಂಡ್ ಮಾಡಿದ್ದು, ಎಲ್ಲಾ ಮಾಡೆಲ್‌ಗಳು “.ev” ಎಂಬ ಪ್ರತ್ಯಯವನ್ನು ಹೊಂದಿರಲಿದೆ. ಆದ್ದರಿಂದ, ಈ ಸಬ್‌ಕಾಂಪ್ಯಾಕ್ಟ್ SUV ಈಗ “ನೆಕ್ಸಾನ್.ev” ಎಂದು ಕರೆಯಲ್ಪಡುತ್ತದೆ.
ತಾಜಾ ಸ್ಟೈಲಿಂಗ್
ಇದು ತಾಜಾ ಸ್ಟೈಲಿಂಗ್ ಹೊಂದಿರಲಿದ್ದು, ತನ್ನ ಪೂರ್ವ ನವೀಕೃತ ಆವೃತ್ತಿಗಿಂತ ಗಮನಾರ್ಹವಾಗಿ ಭಿನ್ನವಾಗಿರಲಿದೆ. ಆದರೆ, ಇದು ನವೀಕೃತ ನೆಕ್ಸಾನ್ ಅನ್ನು ಹೋಲುತ್ತದೆ. ಈ EVಯು ವಿಶಿಷ್ಟ ಕ್ಲೋಸ್-ಅಫ್ ಗ್ರಿಲ್ ಮತ್ತು ಹೊಸ ಸಂಪರ್ಕಿತ LED DRL ಅನ್ನು ಹೊಂದಿರುವುದು ಟೀಸರ್‌ನಲ್ಲಿ ಕಾಣಬಹುದು.
ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್, ನವೀಕೃತ ನೆಕ್ಸಾನ್ ಅನ್ನು ಹೋಲುತ್ತದೆ. ಹೊಸ ಅಲಾಯ್ ವ್ಹೀಲ್‌ಗಳು ಈ ಫೇಸ್‌ಲಿಫ್ಟ್‌ನ ಭಾಗವಾಗಿರುತ್ತದೆ. ಹಿಂಭಾಗದಲ್ಲಿ, ವೆಲ್‌ಕಮ್ ಲೈಟ್ ಕಾರ್ಯದೊಂದಿಗೆ ಸಂಪರ್ಕಿತ LED ಟೇಲ್ ಲ್ಯಾಂಪ್‌ಗಳು ಮತ್ತು ಪರಿಷ್ಕೃತ ಬಂಪರ್ ಡಿಸೈನ್ ಪ್ರದರ್ಶಿಸಿರುವುದನ್ನು ನಾವು ಕಾಣಬಹುದು.
ಇದನ್ನೂ ಓದಿ: ಅನ್ವೇಷಿಸಿ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ವಿವಿಧ ಕ್ಯಾಬಿನ್ ಥೀಮ್‌ಗಳು
ಪರಿಷ್ಕೃತ ಇಂಟೀರಿಯರ್
ನೆಕ್ಸಾನ್ ಫೇಸ್‌ಲಿಫ್ಟ್‌ನಂತೆಯೇ, ಇದರ EV ಪುನರಾವರ್ತನೆ ಕೂಡಾ ಕ್ಯಾಬಿನ್ ಒಳಗೆ ಸಂಪೂರ್ಣ ಬದಲಾವಣೆಗೆ ಒಳಪಟ್ಟಿದೆ. ಇದು ಹೊಸ ಇಂಟೀರಿಯರ್ ಶೇಡ್, ಹೊಚ್ಚ ಹೊಸ ಸೀಟ್ ಅಪ್‌ಹೋಲ್ಸ್‌ಟ್ರಿ ಮತ್ತು ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆದಿದೆ. ಮೇಲಾಗಿ, ತನ್ನ ICE-ಚಾಲಿತ ಆವೃತ್ತಿಯಿಂದ ಭಿನ್ನವಾಗಿ ಕಾಣಲು ಕೆಲವು EV-ವಿಶಿಷ್ಟ ಡಿಸೈನ್ ಅಂಶಗಳನ್ನೂ ನಾವು ನೋಡಬಹುದು
ಹೊಸ ಫೀಚರ್‌ಗಳು
ಟಚ್-ಎನೇಬಲ್ಡ್ AC ಕಂಟ್ರೋಲ್ ಪ್ಯಾನೆಲ್, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಎತ್ತರ ಹೊಂದಿಸಬಲ್ಲ ಕೋ-ಡ್ರೈವರ್ ಸೀಟು ಮತ್ತು 9-ಸ್ಪೀಕರ್ ಸೌಂಡ್ ಸಿಸ್ಟಮ್‌ನಂತಹ ಹೊಸ ಫೀಚರ್‌ಗಳು ಇದನ್ನು ಪ್ರೀಮಿಯಂ ಆಗಿಸಿದೆ. ನೆಕ್ಸಾನ್ EV ಮ್ಯಾಕ್ಸ್ ಡಾರ್ಕ್ ಎಡಿಷನ್ ಈಗಾಗಲೇ 10.25-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಹೊಂದಿದ್ದು, ಇತರ ವೇರಿಯೆಂಟ್‌ಗಳಲ್ಲೂ ಇದನ್ನು ಮುಂದುವರಿಸಲಾಗಿದೆ.
ಸುರಕ್ಷತೆಗಾಗಿ ಇದು, ಆರು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಎಲ್ಲಾ ವೇರಿಯೆಂಟ್‌ಗಳಲ್ಲಿಯೂ ಇದನ್ನು ಸ್ಟಾಂಡರ್ಡ್ ಆಗಿ ಮಾಡಲಾಗಿದೆ.ಇದರ ಹೊರತಾಗಿ, ನೆಕ್ಸಾನ್ EV ಫೇಸ್‌ಲಿಫ್ಟ್ 360-ಡಿಗ್ರಿ ಕ್ಯಾಮರಾ, ಬ್ಲೈಂಡ್ ವ್ಯೂ ಮಾನಿಟರಿಂಗ್ ಸಿಸ್ಟಮ್ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನಲ್ಲಿ ನೀಡಲಾದ 10 ಹೊಸ ಫೀಚರ್‌ಗಳು
ಅಪ್‌ಡೇಟ್ ಮಾಡಲಾದ ಪವರ್‌ಟ್ರೇನ್‌ಗಳು
ಪ್ರಸ್ತುತ, ನೆಕ್ಸಾನ್ EV ಪ್ರೈಮ್ 30.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದ್ದು, ಇದು 312 ಕಿಲೋಮೀಟರ್ ತನಕದ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ. ಮ್ಯಾಕ್ಸ್‌ಗೆ ದೊಡ್ಡದಾದ 40.5kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು 453 ಕಿಲೋಮೀಟರ್ ತನಕದ ರೇಂಜ್ ನೀಡಬೇಕು.
ಪವರ್‌ಟ್ರೇನ್ ಅಪ್‌ಡೇಟ್‌ಗಳ ಕುರಿತು ಈ ತನಕ ಯಾವುದೇ ಮಾಹಿತಿ ದೊರೆತಿಲ್ಲವಾದರೂ, ಹೆಚ್ಚು ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಹೆಚ್ಚು ರೇಂಜ್ ಅಥವಾ ಹೆಚ್ಚಿನ ದಕ್ಷತೆಯನ್ನು ನಾವು ನಿರೀಕ್ಷಿಸಬಹುದು.
ನಿರೀಕ್ಷಿತ ಬೆಲೆಗಳು
ಈ ನೆಕ್ಸಾನ್ ಫೇಸ್‌ಲಿಫ್ಟ್ ತನ್ನ ಪ್ರಸ್ತುತ ಬೆಲೆಗಳಿಗಿಂತ ತುಸು ದುಬಾರಿಯಾಗಿದ್ದು, ಇದು ರೂ 14.49 ಲಕ್ಷದಿಂದ ರೂ 19.54 ಲಕ್ಷದ ತನಕ (ಎಕ್ಸ್-ಶೋರೂಂ) ಇರಲಿದೆ. ಇದು ತನ್ನ ಎಂದಿನ ಪ್ರತಿಸ್ಪರ್ಧಿ ಮಹೀಂದ್ರಾ XUV400 EV ಗೆ ಪೈಪೋಟಿ ನೀಡಲಿದೆ.
ಇನ್ನಷ್ಟು ಓದಿ : ನೆಕ್ಸಾನ್ ಆಟೋಮ್ಯಾಟಿಕ್
0 out of 0 found this helpful