Login or Register ಅತ್ಯುತ್ತಮ CarDekho experience ಗೆ
Login

Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್‌ಲೈನ್‌ನಲ್ಲಿ ಅಲ್ಲ..!

ಹುಂಡೈ ಕ್ರೇಟಾ ಎನ್ ಲೈನ್ ಗಾಗಿ ansh ಮೂಲಕ ಮಾರ್ಚ್‌ 01, 2024 07:33 pm ರಂದು ಪ್ರಕಟಿಸಲಾಗಿದೆ

ಹ್ಯುಂಡೈ ಕ್ರೆಟಾದ ಸ್ಪೋರ್ಟಿಯರ್ ಆವೃತ್ತಿಯು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ

  • 25,000 ರೂ.ನಷ್ಟು ಟೋಕನ್ ಮೊತ್ತವನ್ನು ಪಾವತಿಸಿ ಈ ಅನಧಿಕೃತ ಬುಕಿಂಗ್ ಮಾಡಬಹುದು.

  • ಬಿಡುಗಡೆಯ ದಿನಾಂಕವು ದೂರದಲ್ಲಿಲ್ಲದ ಕಾರಣ, ಎಸ್‌ಯುವಿಗಾಗಿ ಅಧಿಕೃತ ಬುಕಿಂಗ್ ಕೂಡ ಶೀಘ್ರದಲ್ಲೇ ತೆರೆಯಬಹುದು.

  • ಕ್ರೆಟಾ ಎನ್-ಲೈನ್ ಕೆಲವು ಬಾಹ್ಯ ವಿನ್ಯಾಸ ವ್ಯತ್ಯಾಸಗಳು ಮತ್ತು ರೆಗುಲರ್‌ ಎಸ್‌ಯುವಿಗಿಂತ ವಿಭಿನ್ನ ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ.

  • ಇದು ಅದೇ 160 ಪಿಎಸ್‌ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಆದರೆ ಸ್ಪೋರ್ಟಿಯರ್ ಡ್ರೈವ್‌ಗಾಗಿ ಸಣ್ಣ ಸುಧಾರಣೆಗಳನ್ನು ನಿರೀಕ್ಷಿಸುತ್ತದೆ.

  • ಇದರ ಎಕ್ಸ್ ಶೋರೂಂ ಬೆಲೆ 17.5 ಲಕ್ಷ ರೂ.ಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಹುಂಡೈ ಕ್ರೆಟಾ ಎನ್-ಲೈನ್ ಮಾರ್ಚ್ 11 ರಂದು ಬಿಡುಗಡೆಯಾಗಲು ಸಕಲ ರೀತಿಯಲ್ಲಿ ಸಿದ್ಧವಾಗಿದೆ, ಆದರೆ ಹ್ಯುಂಡೈ ತನ್ನ ಬುಕಿಂಗ್ ಪ್ರಾರಂಭವಾಗಿದೆ ಎಂದು ಅಧಿಕೃತವಾಗಿ ಘೋಷಿಸುವ ಮೊದಲು, ದೇಶಾದ್ಯಂತ ಕೆಲವು ಡೀಲರ್‌ಶಿಪ್‌ಗಳು ಈ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಈಗಾಗಲೇ 25,000 ರೂ. ಟೋಕನ್ ಮೊತ್ತಕ್ಕೆ ಅನಧಿಕೃತ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ನೀವು ಸ್ಪೋರ್ಟಿಯರ್ ಹ್ಯುಂಡೈ ಕ್ರೆಟಾವನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಆರ್ಡರ್ ಪುಸ್ತಕಗಳಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದೇ ಎಂದು ನಿಮ್ಮ ಹತ್ತಿರದ ಹ್ಯುಂಡೈ ಡೀಲರ್‌ಶಿಪ್‌ನಲ್ಲಿ ನೀವು ಪರಿಶೀಲಿಸಬಹುದು. ಆದರೆ ಇದಕ್ಕಿಂತ ಮೊದಲು, ನಾವು ಕ್ರೆಟಾ ಎನ್-ಲೈನ್ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.

ವಿನ್ಯಾಸದಲ್ಲಿನ ವ್ಯತ್ಯಾಸಗಳು

ಕ್ರೆಟಾ ಎನ್-ಲೈನ್ ಅನ್ನು ಈಗಾಗಲೇ ರಹಸ್ಯವಾಗಿ ಕ್ಯಾಮೆರಾಗಳ ಕಣ್ಣಿನಲ್ಲಿ ಸೆರೆಯಾಗಿವೆ ಮತ್ತು ಇದು ಬದಲಾವಣೆ ಮಾಡಲಾದ ಮುಂಭಾಗದ ಗ್ರಿಲ್, ಕನೆಕ್ಟೆಡ್‌ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಚಂಕಿಯರ್ ಫ್ರಂಟ್ ಬಂಪರ್‌ನೊಂದಿಗೆ ಬರುತ್ತದೆ ಎಂದು ನಮಗೆ ತಿಳಿದಿದೆ. ಮುಂಭಾಗದಲ್ಲಿರುವ ಹ್ಯುಂಡೈ ಲೋಗೋವನ್ನು ರೆಗುಲರ್‌ ಆವೃತ್ತಿಗಿಂತ ವಿಭಿನ್ನವಾಗಿ ಇರಿಸಲಾಗುತ್ತದೆ. ಉಳಿದ ವಿನ್ಯಾಸವು ಹೆಚ್ಚು ಕಡಿಮೆ ರೆಗುಲರ್‌ ಕ್ರೆಟಾದಂತೆಯೇ ಇರುತ್ತದೆ, ಆದಾಗಿಯೂ, N-ಲೈನ್ ಕೆಲವು ಸ್ಪೋರ್ಟಿ ರೆಡ್‌ ಸಾರವನ್ನು ಮತ್ತು ಅಲಾಯ್‌ ವೀಲ್‌ಗಳಿಗೆ ತನ್ನದೇ ಆದ ವಿನ್ಯಾಸವನ್ನು ಪಡೆಯುತ್ತದೆ. ಇದು ಡ್ಯುಯಲ್-ಟಿಪ್ ಎಕ್ಸಾಸ್ಟ್‌ನೊಂದಿಗೆ ಸ್ಪೋರ್ಟಿಯರ್ ರಿಯರ್ ಬಂಪರ್ ಅನ್ನು ಸಹ ಪಡೆಯುತ್ತದೆ.

ಇದನ್ನು ಸಹ ಓದಿ: Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್‌

ಇದರ ಕ್ಯಾಬಿನ್ ನ ಬಗ್ಗೆ ಮಾಹಿತಿ ನೀಡುವ ಯಾವುದೇ ರಹಸ್ಯ ಪೋಟೋಗಳು ಇನ್ನು ಇಂಟರ್ನೆಟ್‌ನಲ್ಲಿ ಲಭ್ಯವಿಲ್ಲ. ಆದರೆ ಇದು ರೆಡ್‌ ಎಕ್ಸೆಂಟ್‌ಗಳೊಂದಿಗೆ ಸಂಪೂರ್ಣ-ಬ್ಲ್ಯಾಕ್‌ ಕ್ಯಾಬಿನ್ ಥೀಮ್ ಮತ್ತು ಸ್ಟೀರಿಂಗ್ ವೀಲ್ ಮತ್ತು ಹೆಡ್‌ರೆಸ್ಟ್‌ಗಳಲ್ಲಿ "N-ಲೈನ್" ಬ್ಯಾಡ್ಜಿಂಗ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪವರ್‌ಟ್ರೇನ್‌

ಕ್ರೆಟಾ ಎನ್-ಲೈನ್ ಅನ್ನು ಪವರ್ ಮಾಡುವುದು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿರುತ್ತದೆ, ಇದು ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್‌ ಆಗಿದೆ. ಈ ಎಂಜಿನ್ 160 PS ಮತ್ತು 253 Nm ನಷ್ಟು ಉತ್ಪಾದಿಸುತ್ತದೆ, ಮತ್ತು ಹೆಚ್ಚಾಗಿ ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ರೆಗುಲರ್‌ ಕ್ರೆಟಾದೊಂದಿಗೆ ನೀಡಲಾಗುವುದಿಲ್ಲ) ಅಥವಾ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ನೊಂದಿಗೆ ಜೋಡಿಸಲಾಗುತ್ತದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

ಇದರ ವೈಶಿಷ್ಟ್ಯಗಳ ಪಟ್ಟಿಯು ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಸ್ಕ್ರೀನ್‌ಗಳನ್ನು (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇ) ಪಡೆಯುವ ಕ್ರೆಟಾದ ಟಾಪ್‌ ವೇರಿಯೆಂಟ್‌ಗಳಂತೆಯೇ ಇರುತ್ತದೆ. ಇದು ವೈರ್‌ಲೆಸ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಸಹ ಹೊಂದಿದೆ.

ಇದನ್ನು ಸಹ ಓದಿ: ಯುರೋಪ್‌ಗಾಗಿ ಹ್ಯುಂಡೈ i20 N ಲೈನ್ ಫೇಸ್‌ಲಿಫ್ಟ್ ಬಹಿರಂಗ; ಇದು ಭಾರತ-ಸ್ಪೆಕ್ ಮಾಡೆಲ್‌ನಿಂದ ಹೇಗೆ ಭಿನ್ನವಾಗಿದೆ ಎಂಬುದು ಇಲ್ಲಿದೆ

ಪ್ರಯಾಣಿಕರ ಸುರಕ್ಷತೆಗಾಗಿ, ಹ್ಯುಂಡೈ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX-ಚೈಲ್ಡ್ ಸೀಟ್ ಆಂಕರ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ವೈಶಿಷ್ಟ್ಯಗಳ ಹೋಸ್ಟ್ ಅನ್ನು ಪಡೆಯುತ್ತದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹ್ಯುಂಡೈ ಕ್ರೆಟಾ ಎನ್-ಲೈನ್‌ನ ಎಕ್ಸ್-ಶೋರೂಂ ಬೆಲೆಗಳು ಸುಮಾರು 17.5 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಅದರ ಹತ್ತಿರದ ಪ್ರತಿಸ್ಪರ್ಧಿ ಎಂದರೆ ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಲೈನ್ ವೇರಿಯೆಂಟ್‌ ಮತ್ತು ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ವೇರಿಯೆಂಟ್‌ಗಳಾಗಿವೆ.

ಇಲ್ಲಿ ಇನ್ನಷ್ಟು ಓದಿ: ಹುಂಡೈ ಕ್ರೆಟಾದ ಆನ್‌ರೋಡ್‌ ಬೆಲೆ

Share via

Write your Comment on Hyundai ಕ್ರೇಟಾ ಎನ್ ಲೈನ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ