Hyundai Creta: ಬಿಡುಗಡೆಯಾದ 7 ತಿಂಗಳಿನಲ್ಲೇ 1 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟದ ದಾಖಲೆ
published on ಜುಲೈ 29, 2024 04:15 pm by anonymous for ಹುಂಡೈ ಕ್ರೆಟಾ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಜನವರಿ 2024 ರಲ್ಲಿ ಲಾಂಚ್ ಆದಾಗಿನಿಂದ ಹೊಸ ಕ್ರೆಟಾ ಭಾರತದಲ್ಲಿ 100,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಹ್ಯುಂಡೈ ಇಂಡಿಯಾ ಪ್ರಕಟಿಸಿದೆ. ಪ್ರತಿದಿನ 550 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ
-
ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಕ್ರೆಟಾ ಹ್ಯುಂಡೈನ ಅತಿ ಹೆಚ್ಚು ಮಾರಾಟವಾದ SUV ಆಗಿದೆ
-
ಹುಂಡೈ ಜನವರಿ 2024 ರಲ್ಲಿ ಫೇಸ್‌ಲಿಫ್ಟ್ ಆಗಿರುವ ಕ್ರೆಟಾವನ್ನು ಲಾಂಚ್ ಮಾಡಿದೆ.
-
ಕ್ರೆಟಾ ಈಗ ಕ್ರೆಟಾ N ಲೈನ್ ಎಂಬ ಸ್ಪೋರ್ಟಿಯರ್ ವರ್ಷನ್ ನಲ್ಲಿ ಕೂಡ ಲಭ್ಯವಿದೆ.
-
ಪ್ರಮುಖ ಫೀಚರ್ ಗಳಲ್ಲಿ 10.25-ಇಂಚಿನ ಇನ್ಫೋಟೈನ್‌ಮೆಂಟ್, ಪನೋರಮಿಕ್ ಸನ್‌ರೂಫ್ ಮತ್ತು ADAS ಸೇರಿವೆ.
-
ಮೂರು ಎಂಜಿನ್‌ಗಳ ಆಯ್ಕೆಯೊಂದಿಗೆ ಬರುತ್ತದೆ, ಅವುಗಳೆಂದರೆ NA ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್.
-
ಈ ಕಾಂಪ್ಯಾಕ್ಟ್ SUV ಬೆಲೆಯು ರೂ 11 ಲಕ್ಷದಿಂದ ರೂ 20.15 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ.
ಹುಂಡೈ ಕ್ರೆಟಾ ಭಾರತದಲ್ಲಿ ಹ್ಯುಂಡೈನ ಅತಿ ಹೆಚ್ಚು ಮಾರಾಟವಾದ SUV ಆಗಿದೆ, ಮತ್ತು ಫೇಸ್‌ಲಿಫ್ಟ್ ಆಗಿರುವ ಮಾಡೆಲ್ ಅನ್ನು ಜನವರಿ 2024 ರಲ್ಲಿ ಬಿಡುಗಡೆ ಮಾಡಿದಾಗಿನಿಂದ 100,000 ಯುನಿಟ್‌ಗಳು ಮಾರಾಟವಾಗಿದೆ. ಹ್ಯುಂಡೈ ಕ್ರೆಟಾ ಕೇವಲ ಆರು ತಿಂಗಳ ಅವಧಿಯಲ್ಲಿ ಈ ಮೈಲಿಗಲ್ಲನ್ನು ತಲುಪಿದೆ. ಲಾಂಚ್ ಆದ ಕ್ಷಣದಿಂದ ಪ್ರತಿದಿನ 550 ಕ್ಕೂ ಹೆಚ್ಚು ಕ್ರೆಟಾಗಳನ್ನು ಮಾರಾಟ ಮಾಡಲಾಗಿದೆ ಎಂದು ಹ್ಯುಂಡೈ ತಿಳಿಸಿದೆ. ಈ ಹಿಂದೆ ಏಪ್ರಿಲ್ 2024 ರಲ್ಲಿ, ಕ್ರೆಟಾ ಭಾರತದಲ್ಲಿ 100,000 ಬುಕಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಹುಂಡೈ ಪ್ರಕಟಿಸಿತ್ತು.
2024 ಹ್ಯುಂಡೈ ಕ್ರೆಟಾ: ಓವರ್ ವ್ಯೂ
ಜನವರಿ 2024 ರಲ್ಲಿ, ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ನೊಂದಿಗೆ ಹೊರಭಾಗದಲ್ಲಿ ಬದಲಾವಣೆಗಳು, ರೀಡಿಸೈನ್ ಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಹೆಚ್ಚು ಶಕ್ತಿಶಾಲಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿತು.
ಮಾರ್ಚ್ 2024 ರಲ್ಲಿ, ಡ್ರೈವಿಂಗ್ ಅನುಭವವನ್ನು ಹೆಚ್ಚಿಸುವ ಈ ಕಾಂಪ್ಯಾಕ್ಟ್ SUV ಯ ಸ್ಪೋರ್ಟಿಯರ್ ವರ್ಷನ್ ಆಗಿರುವ ಕ್ರೆಟಾ N ಲೈನ್ ಅನ್ನು ಹ್ಯುಂಡೈ ಬಿಡುಗಡೆ ಮಾಡಿತು. ಇದು ಸ್ಪೋರ್ಟಿಯರ್ ಡಿಸೈನ್, ಕೆಂಪು ಹೈಲೈಟ್ ಗಳೊಂದಿಗೆ ಆಲ್ ಬ್ಲಾಕ್ ಕ್ಯಾಬಿನ್ ನೊಂದಿಗೆ ಬರುತ್ತದೆ ಮತ್ತು ಈ ವರ್ಷನ್ ನಲ್ಲಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಪಡೆಯಬಹುದು. ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ನೀವು ಈ ಎರಡೂ ಕಾರುಗಳ ಬಗ್ಗೆ ನಮ್ಮ ರಿವ್ಯೂಗಳನ್ನು ಓದಬಹುದು.
ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾಗೆ ಹೋಲಿಸಿದರೆ ಟಾಟಾ ಕರ್ವ್ ಪಡೆಯಲಿದೆ ಈ 3 ಫೀಚರ್ ಗಳು
2024 ಹ್ಯುಂಡೈ ಕ್ರೆಟಾ: ಏನೇನು ಫೀಚರ್ ಗಳಿವೆ
ಹ್ಯುಂಡೈ ಕ್ರೆಟಾ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಫೀಚರ್ ಗಳನ್ನು ಪ್ಯಾಕ್ ಮಾಡಿರುವ SUV ಗಳಲ್ಲಿ ಒಂದಾಗಿದೆ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 7-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪವರ್ಡ್ ಡ್ರೈವರ್ ಸೀಟ್ ಮತ್ತು ಆಂಬಿಯೆಂಟ್ ಲೈಟಿಂಗ್ ನಂತಹ ಫೀಚರ್ ಗಳೊಂದಿಗೆ ಬರುತ್ತದೆ.
ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಮುಖ್ಯವಾಗಿ, ಕೆಲವು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳನ್ನು ಕೂಡ ನೀಡಲಾಗಿದೆ.
2024 ಹ್ಯುಂಡೈ ಕ್ರೆಟಾ: ಎಂಜಿನ್ ಆಯ್ಕೆಗಳು
2024 ಹ್ಯುಂಡೈ ಕ್ರೆಟಾ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್. ಎಲ್ಲಾ ಮೂರು ಎಂಜಿನ್‌ಗಳ ವಿವರವಾದ ಸ್ಪೆಸಿಫಿಕೇಷನ್ ಗಳನ್ನು ಈ ಕೆಳಗೆ ನೀಡಲಾಗಿದೆ:
|
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ (PS) |
115 PS |
160 PS |
116 PS |
ಟಾರ್ಕ್ (Nm) |
144 Nm |
253 Nm |
250 Nm |
ಟ್ರಾನ್ಸ್‌ಮಿಷನ್ ಆಯ್ಕೆಗಳು |
6-ಸ್ಪೀಡ್ MT / CVT |
6-ಸ್ಪೀಡ್ MT* / 7-ಸ್ಪೀಡ್ DCT |
6-ಸ್ಪೀಡ್ MT / 6-ಸ್ಪೀಡ್ AT |
*N ಲೈನ್ ವೇರಿಯಂಟ್ ಗಳಲ್ಲಿ ಮಾತ್ರ ಲಭ್ಯವಿದೆ
2024 ಹ್ಯುಂಡೈ ಕ್ರೆಟಾ: ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024 ಹ್ಯುಂಡೈ ಕ್ರೆಟಾದ ಬೆಲೆಯು ರೂ 11 ಲಕ್ಷದಿಂದ ರೂ 20.15 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್, VW ಟೈಗನ್, MG ಆಸ್ಟರ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಸಿಟ್ರೊಯೆನ್ C3 ಏರ್‌ಕ್ರಾಸ್ ಮತ್ತು ಮುಂಬರುವ SUV-ಕೂಪ್‌ಗಳಾದ ಟಾಟಾ ಕರ್ವ್ ಮತ್ತು ಸಿಟ್ರೊಯೆನ್ ಬಸಾಲ್ಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಇತ್ತೀಚಿನ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಕ್ರೆಟಾ ಆನ್ ರೋಡ್ ಬೆಲೆ
0 out of 0 found this helpful