ಜನವರಿ 2023ರ ಟಾಪ್ 10 ಅತಿ ಹೆಚ್ಚು-ಮಾರಾಟದ ಕಾರು ಬ್ರ್ಯಾಂಡ್‌ಗಳಿವು
ಫೆಬ್ರವಾರಿ 10, 2023 01:48 pm ರಂದು ansh ಮೂಲಕ ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಎರಡನೆ ಸ್ಥಾನಕ್ಕಾಗಿ ಪೈಪೋಟಿ, ಕೂದಲೆಳೆ ಅಂತರದಲ್ಲಿ ಟಾಟಾಗಿಂತ ಮುನ್ನಡೆ ಕಾಯ್ದುಕೊಂಡಿದೆ ಹ್ಯುಂಡೈ
ಹೊಸ ವರ್ಷಾರಂಭವು ಭಾರತೀಯ ಕಾರು ಮಾರುಕಟ್ಟೆಗೆ ಸಾಕಷ್ಟು ಉತ್ತಮವಾಗಿದೆ ಯಾಕೆಂದರೆ, ಹೆಚ್ಚಿನ ಕಾರುತಯಾಕರರು ತಮ್ಮ ತಿಂಗಳಿಂದ ತಿಂಗಳು(MoM) ಅಥವಾ ವರ್ಷದಿಂದ ವರ್ಷದ (YoY) ಮಾರಾಟದ ಅಂಕಿ ಅಂಶಗಳಲ್ಲಿ ಗಣನೀಯ ಪ್ರಗತಿಯನ್ನು ಕಂಡಿದ್ದಾರೆ. ಜನವರಿ 2023ರಲ್ಲಿ ಟಾಪ್ 10 ಬ್ರ್ಯಾಂಡ್‌ಗಳ ದರಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:
ಕಾರುತಯಾರಕರು |
ಜನವರಿ 2023 |
ಡಿಸೆಂಬರ್ 2022 |
MoM ಪ್ರಗತಿ (%) |
ಜನವರಿ 2022 |
YoY ಪ್ರಗತಿ (%) |
ಮಾರುತಿ ಸುಝುಕಿ |
1,47,348 |
1,12,010 |
31.50% |
1,28,924 |
14.30% |
ಹ್ಯುಂಡೈ |
50,106 |
38,831 |
29.00% |
44,022 |
13.80% |
ಟಾಟಾ |
47,990 |
40,045 |
19.80% |
40,780 |
17.70% |
ಮಹೀಂದ್ರಾ |
33,040 |
28,333 |
16.60% |
19,860 |
66.40% |
ಕಿಯಾ |
28,634 |
15,184 |
88.60% |
19,319 |
48.20% |
ಟೊಯೋಟಾ |
12,728 |
10,421 |
22.10% |
7,328 |
73.70% |
ಹೋಂಡಾ |
7,821 |
7,062 |
10.70% |
10,427 |
-25.00% |
MG |
4,114 |
3,899 |
5.50% |
4,306 |
-4.50% |
ಸ್ಕೋಡಾ |
3,818 |
4,789 |
-20.30% |
3,009 |
26.90% |
ರೆನಾಲ್ಟ್ |
3,008 |
6,126 |
-50.90% |
8,119 |
-63.00% |
ಸಾರಾಂಶ
-
ಮಾರುತಿ 31 ಪ್ರತಿಶತಕ್ಕೂ ಹೆಚ್ಚು MoM ಹಾಗೂ 14 ಪ್ರತಿಶತಕ್ಕೂ ಹೆಚ್ಚು YoY ಪ್ರಗತಿಯನ್ನು ಕಂಡಿದೆ.
- ಹ್ಯುಂಡೈ ಜನವರಿಯಲ್ಲಿ 29 ಪ್ರತಿಶತದಷ್ಟು M0M ಪ್ರಗತಿಯೊಂದಿಗೆ 50,000 ಯೂನಿಟ್-ಮಾರಾಟದ ಗಡಿಯನ್ನು ದಾಟಿದೆ
- ಟಾಟಾ ಕೂಡಾ ಸುಮಾರು 48,000 ಯೂನಿಟ್‌ನಷ್ಟು ಮಾರಾಟದೊಂದಿಗೆ MoM ಮತ್ತು YoY ಮಾರಾಟ ಅಂಕಿಅಂಶಗಳಲ್ಲಿ ಪ್ರಗತಿಯನ್ನು ದಾಖಲಿಸಿದೆ.
- ಹಾಗೆಯೇ ಕೇವಲ 16.6 ಪ್ರತಿಶತದಷ್ಟು ಇದ್ದ ಮಹೀಂದ್ರಾದ MoM ಪ್ರಗತಿಯು, 2023ರಲ್ಲಿ 2022ಕ್ಕಿಂತ 66 ಪ್ರತಿಶತಕ್ಕಿಂತಲೂ ಹೆಚ್ಚಿನ YoY ಪ್ರಗತಿಯೊಂದಿಗೆ ದೊಡ್ಡ ಏರಿಕೆಯನ್ನು ಕಂಡಿದೆ.
- ಹಿಂದಿನ ತಿಂಗಳಿಗೆ ಹೋಲಿಸಿದರೆ ಜನವರಿ 2023ರಲ್ಲಿ ಕಿಯಾ ತನ್ನ ಮಾರಾಟ ಅಂಕಿಅಂಶಗಳನ್ನು ದ್ವಿಗುಣಗೊಳಿಸಿದ್ದು, 48 ಪ್ರತಿಶತಕ್ಕೂ ಹೆಚ್ಚಿನ YoY ಪ್ರಗತಿಯನ್ನು ಕಂಡಿದೆ.
- ಈ ಪಟ್ಟಿಯಲ್ಲಿರುವ ಕೊನೆಯ ಬ್ರ್ಯಾಂಡ್ ಟೊಯೋಟಾ 10,000 ಯೂನಿಟ್‌ಗಳಿಗಿಂತಲೂ ಹೆಚ್ಚಿನ ಮಾರಾಟವನ್ನು ದಾಖಲಿಸಿಕೊಂಡು MoM (22 ಪ್ರತಿಶತ) ಮತ್ತು YoY (73 ಪ್ರತಿಶತಕ್ಕೂ ಹೆಚ್ಚು) ಮಾರಾಟ ಅಂಕಿಅಂಶಗಳಲ್ಲಿಯೂ ಪ್ರಗತಿಯನ್ನು ಕಂಡಿದೆ. ಈ ಕಾರುತಯಾರಕ ಸಂಸ್ಥೆಯು ಜನವರಿ 2023ರಲ್ಲಿ 13,000 ಯೂನಿಟ್‌ಗಳನ್ನು ಮಾರಾಟ ಮಾಡಿದೆ.
-
ಹೋಂಡಾದ MoM ಮಾರಾಟವು ಡಿಸೆಂಬರ್ 2022ಕ್ಕೆ ಹೋಲಿಸಿದರೆ ತುಸು ಹೆಚ್ಚಾಗಿದೆ ಆದರೆ ಮಾರ್ಕ್ YoY ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಎಂಜಿಯ ಕಥೆಯೂ ಇದೇ ರೀತಿಯಲ್ಲೇ ಇದೆ, ಆದರೆ ವ್ಯತ್ಯಾಸದ ರೇಂಜ್ ತುಲನಾತ್ಮಕವಾಗಿ ಸ್ಥಿರವಾಗಿದ್ದು, ಶೇಕಡಾ ಆರರಲ್ಲಿದೆ.
- ಹಾಗೆಯೇ ಸ್ಕೋಡಾ ತನ್ನ MoM ಮಾರಾಟದಲ್ಲಿ ಕುಸಿತ ಕಂಡಿದ್ದು, ಈ ಜರ್ಮನ್ ಕಾರು ತಯಾರಕ ಸಂಸ್ಥೆಯು ಜನವರಿ 2022ಕ್ಕೆ ಹೋಲಿಸಿದರೆ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.
- ಈ ಪಟ್ಟಿಯಲ್ಲಿ ಯಾವುದೇ ಬೆಳವಣಿಗೆ ಕಾಣದಿರುವ ಏಕೈಕ ಬ್ರ್ಯಾಂಡ್ ಅಂದರೆ ರೆನಾಲ್ಟ್ ಮಾತ್ರ. ಈ ಕಾರು ತಯಾರಕ ಕಂಪನಿಯ MoM ಮಾರಾಟವು 50 ಪ್ರತಿಶತಕ್ಕಿಂತಲು ಹೆಚ್ಚಿನ ಕುಸಿತ ಕಂಡಿದ್ದು ಇದರ YoY ಅಂಕಿಅಂಶಗಳು 63 ಪ್ರತಿಶತದಷ್ಟು ಕುಸಿತ ಕಂಡಿದೆ. ಹಾಗೆಯೇ, ತನ್ನ ಶ್ರೇಣಿಯಲ್ಲಿ ಕೆಲವು ವಾರ್ಷಿಕ ನವೀಕರಣಗಳು ಮತ್ತು ವಿಶೇಷ ಆವೃತ್ತಿಗಳನ್ನು ಹೊರತಂದಿದ್ದರೂ 2022ರಲ್ಲಿ ಯಾವುದೇ ಹೊಸ ಅಥವಾ ನವೀಕೃತ ಉತ್ಪನ್ನವನ್ನು ಪರಿಚಯಿಸದ ಏಕೈಕ ಕಾರುತಯಾರಕ ಸಂಸ್ಥೆ ಇದಾಗಿದೆ.
ಇದನ್ನೂ ಓದಿ: ಜನವರಿ 2023 ಮಾರುತಿಯದ್ದೇ ಪ್ರಾಬಲ್ಯ- ಅತಿಹೆಚ್ಚು ಬೇಡಿಕೆಯ 15 ಕಾರುಗಳ ಪಟ್ಟಿಯಲ್ಲಿ ಮೇಲುಗೈ