ಜನವರಿ 2023 ಮಾರುತಿಯದ್ದೇ ಪ್ರಾಬಲ್ಯ- ಅತಿಹೆಚ್ಚು ಬೇಡಿಕೆಯ 15 ಕಾರುಗಳ ಪಟ್ಟಿಯಲ್ಲಿ ಮೇಲುಗೈ
ಮಾರುತಿ ಆಲ್ಟೊ 800 ಗಾಗಿ rohit ಮೂಲಕ ಫೆಬ್ರವಾರಿ 09, 2023 12:36 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
2023ರ ಪ್ರಾರಂಭದಲ್ಲಿ, ಎರಡು ಮಾಡೆಲ್‌ಗಳು 20,000-ಯೂನಿಟ್ ಮಾಸಿಕ ಮಾರಾಟದ ಮೈಲಿಗಲ್ಲನ್ನು ದಾಟಲು ಸಾಧ್ಯವಾಯಿತು
ಹೆಚ್ಚು ಬೇಡಿಕೆಯಿರುವ ಮಾಡೆಲ್‌ಗಳ ಮಾರಾಟ ಸಂಖ್ಯೆಗಳಿಂದ ಸೂಚಿಸಲ್ಪಟ್ಟಂತೆ ಆಟೋಮೇಟಿವ್ ವಲಯಕ್ಕೆ 2023ರ ವರ್ಷವು ಪ್ರಬಲ ಪ್ರಾರಂಭವಾಗಿದೆ. ಜನವರಿಯ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಗಳನ್ನು ಪಡೆದುಕೊಳ್ಳಲು ಯಾವ ಕಾರುತಯಾರಕ ಕಂಪನಿಯು ಯಶಸ್ವಿಯಾಗಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದಾಗಿದೆ. ಇದಕ್ಕಾಗಿ ಆಲ್ಟೋ, ವ್ಯಾಗನ್ ಆರ್ ಮತ್ತು ಸ್ವಿಫ್ಟ್‌ಗೆ ಧನ್ಯವಾದಗಳು.
ಜನವರಿ 2023ರಲ್ಲಿ ಹೆಚ್ಚಿನ ಗ್ರಾಹಕರನ್ನು ಹೊಂದಿದ 15 ಕಾರುಗಳ ನೋಟ ಇಲ್ಲಿದೆ:
ಮಾಡೆಲ್ |
ಜನವರಿ 2023 |
ಜನವರಿ 2022 |
ಡಿಸೆಂಬರ್ 2022 |
ಮಾರುತಿ ಆಲ್ಟೋ |
21,411 |
12,342 |
8,648 |
ಮಾರುತಿ ವ್ಯಾಗನ್ ಆರ್ |
20,466 |
20,334 |
10,181 |
ಮಾರುತಿ ಸ್ವಿಫ್ಟ್ |
16,440 |
19,108 |
12,061 |
ಮಾರುತಿ ಬಲೆನೊ |
16,357 |
6,791 |
16,932 |
ಟಾಟಾ ನೆಕ್ಸಾನ್ |
15,567 |
13,816 |
12,053 |
ಹ್ಯುಂಡೈ ಕ್ರೆಟಾ |
15,037 |
9,869 |
10,205 |
ಮಾರುತಿ ಬ್ರೀಝಾ |
14,359 |
9,576 (ವಿಟಾರಾ ಬ್ರೀಝಾ) |
11,200 |
ಟಾಟಾ ಪಂಚ್ |
12,006 |
10,027 |
10,586 |
ಮಾರುತಿ ಇಕೋ |
11,709 |
10,528 |
10,581 |
ಮಾರುತಿ ಡಿಝೈರ್ |
11,317 |
14,967 |
11,997 |
ಹ್ಯುಂಡೈ ವೆನ್ಯೂ |
10,738 |
11,377 |
8,285 |
ಕಿಯಾ ಸೆಲ್ಟೋಸ್ |
10,470 |
11,483 |
5,995 |
ಮಾರುತಿ ಎರ್ಟಿಗಾ |
9,750 |
11,847 |
12,273 |
ಕಿಯಾ ಸೋನೆಟ್ |
9,261 |
6,904 |
5,772 |
ಟಾಟಾ ಟಿಯಾಗೊ |
9,032 |
5,195 |
6,052 |
ಇದನ್ನೂ ಓದಿ: ಮಾರುತಿ ನೀಡುತ್ತಿದೆ ಎರ್ಟಿಗಾ ಮತ್ತು XL6 ವೈರ್‌ಲೈಸ್ ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಕಾರ್‌ಪ್ಲೇ ಮತ್ತು ಇನ್ನಷ್ಟು ಟೆಕ್
ಟೇಕ್ ಅವೇ
- 70 ಪ್ರತಿಶತದಷ್ಟು ಇಯರ್-ಆನ್-ಇಯರ್ (YoY) ಬೆಳವಣಿಗೆಯೊಂದಿಗೆ ಮಾರುತಿ ಆಲ್ಟೋ 21,000 ಯೂನಿಟ್‌ಗಳನ್ನು ಶಿಪ್ ಮಾಡುವುದರೊಂದಿಗೆ ಜನವರಿಯಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಸಂಖ್ಯೆಗಳು ಆಲ್ಟೋ 800 ಮತ್ತು ಆಲ್ಟೋ K10 ಅನ್ನೂ ಒಳಗೊಂಡಿದೆ.
-
ಜನವರಿ 2023ರಲ್ಲಿ 20,000 ಯೂನಿಟ್‌ಗಳಿಗಿಂತಲೂ ಹೆಚ್ಚು ಮಾರಾಟವಾದ ಏಕಮಾತ್ರ ಇನ್ನೊಂದು ಮಾಡೆಲ್ ಎಂದರೆ ಮಾರುತಿ ವ್ಯಾಗನ್ ಆರ್. ಇದರ ಮಂತ್-ಆನ್-ಮಂತ್ (MoM) ಮಾರಾಟ ಸಂಖ್ಯೆಯು ಎರಡು ಪಟ್ಟು ಹೆಚ್ಚು ಬೆಳದಿದ್ದು, ವರ್ಷದಲ್ಲಿ ಸುಮಾರು 130 ಯೂನಿಟ್‌ಗಳಷ್ಟು ಹೆಚ್ಚಾಯಿತು.
- ಸ್ವಿಫ್ಟ್ ಮತ್ತು ಬಲೆನೊ ತಲಾ ಒಟ್ಟು 16,000 ಕ್ಕೂ ಹೆಚ್ಚು ಯೂನಿಟ್‌ಗಳಷ್ಟು ಮಾರಾಟ ಮಾಡುವ ಮೂಲಕ ವ್ಯಾಗನ್ ಆರ್ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ಬಲೆನೊದ ಇಯರ್ ಆನ್ ಇಯರ್ ಸಂಖ್ಯೆಯು ಶೇ.140ರಷ್ಟು ಭಾರೀ ಹೆಚ್ಚಿದೆ.
-
ಟಾಟಾ ನೆಕ್ಸಾನ್ ಜನವರಿ 2023 ಕ್ಕೆ 15,000 ಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಹೆಚ್ಚು ಮಾರಾಟವಾದ SUV ಆಗಿದ್ದು ಇದು ನೆಕ್ಸಾನ್ EV ಪ್ರೈಮ್ ಮತ್ತು ಮ್ಯಾಕ್ಸ್ ಒಳಗೊಂಡಿದೆ.
-
ಹ್ಯುಂಡೈ ಕ್ರೆಟಾ ಕೂಡಾ ಪಟ್ಟಿಯಲ್ಲಿ ಮುಂಚೂಣಿಯಲ್ಲೇ ಇದ್ದು 2023ರ ಮೊದಲ ತಿಂಗಳಿನಲ್ಲಿ 15,000 ಯೂನಿಟ್‌ಗಳಿಗಿಂತಲೂ ಹೆಚ್ಚು ಮಾರಾಟ ಮಾಡಿದೆ, ಇದು ಡಿಸೆಂಬರ್ 2022 ರಿಂದ ಸುಮಾರು 5,000 ಯೂನಿಟ್‌ಗಳಷ್ಟು ಅಧಿಕವಾಗಿತ್ತು.
-
ಕ್ರೆಟಾ ನಂತರ ಬಂದಂತಹ ಇನ್ನೊಂದು ಜನಪ್ರಿಯ ಮತ್ತು ಆಗಾಗ್ಗೆ ಅಗ್ರಸ್ಥಾನಿಯಾಗುವ ಮಾರುತಿ ಬ್ರೆಝಾ. ಇದರ YoY ಸಂಖ್ಯೆಯು 50 ಪ್ರತಿಶತದಷ್ಟು ಹೆಚ್ಚಾಗಿದೆ
-
ಟಾಟಾ ಮೈಕ್ರೋ SUV, ಪಂಚ್ 2023ರ ಮೊದಲ ತಿಂಗಳಿನಲ್ಲಿ 12,000ಕ್ಕೂ ಹೆಚ್ಚು ಟೇಕರ್‌ಗಳನ್ನು ಹೊಂದಿದ್ದು, ಇದರ MoM ಮತ್ತು YoY ಅಂಕಿಅಂಶಗಳೂ ಬೆಳೆಯುತ್ತಿವೆ.
-
ನಂತರ ಬಂದಂತಹ ಎರಡು ಮಾರುತಿ ಮಾಡೆಲ್‌ಗಳಾದ, ಇಕೋ ಮತ್ತು ಡಿಝೈರ್ ಜನವರಿ 2023ರಲ್ಲಿ 11,000ಕ್ಕೂ ಅಧಿಕ ಮಾರಾಟವನ್ನು ರೆಜಿಸ್ಟರ್ ಮಾಡಿದೆ. ಅದೇ ರೀತಿ ಇಕೋ YoY ಅಂಕಿಅಂಶವು 10 ಪ್ರತಿಶತಕ್ಕಿಂತಲೂ ಅಧಿಕವಾಗಿದ್ದು, ಇಲ್ಲಿ ಪಟ್ಟಿಮಾಡಲಾದ ಎಲ್ಲಾ ಮಾಡಲ್‌ಗಳ YoY ಅಂಕಿಅಂಶದಲ್ಲಿ ಡಿಝೈರ್ ಗರಿಷ್ಠ ಇಳಿಕೆ ಕಂಡಿದೆ (ಸಮಾರು 25 ಪ್ರತಿಶತದಷ್ಟು).
-
ನಂತರದ ಹೆಚ್ಚು ಮಾರಾಟವಾದ ಕಾರುಗಳು ಮತ್ತೆ SUVಗಳಾಗಿವೆ ಹ್ಯುಂಡೈ ವೆನ್ಯೂ ಹಾಗೂ ಕಿಯಾ ಸೆಲ್ಟೋಸ್. ಕಿಯೋ ಸೆಲ್ಟೋಸ್ 10,000 ಯುನಿಟ್ ಮಾರಾಟದ ಗಡಿ ದಾಟಿದ ಪಟ್ಟಿಯ ಕೊನೆಯ ಕಾರಾಗಿದೆ.
-
ಮಾರುತಿ ಎರ್ಟಿಗಾ ಇಲ್ಲಿ ಹೆಚ್ಚು ಮಾರಾಟವಾಗುವ ನೈಜ MPV ಆಗಿದೆ ಆದರೆ ಅದರ YoY ಮತ್ತು MoM ಹೋಲಿಕೆಗಳೆರಡರಲ್ಲೂ ಮಾರಾಟ ಕುಸಿದಿದೆ. ಇನ್ನೊಂದೆಡೆಯಲ್ಲಿ ಕಿಯಾ ಸೊನೆಟ್‌ನ 9,000 ಯೂನಿಟ್‌ಗಳಿಗಿಂತಲೂ ಅಧಿಕವಾದ ದೊಡ್ಡ ಮಾರಾಟವನ್ನು ಕಂಡಿದೆ.
- ಕೊನೆಯದಾಗಿ, ಟಾಟಾ ಟಿಯಾಗೊ ಸೊನೆಟ್‌ನಂತೆಯೇ 9,000- ಯೂನಿಟ್‌ಗಳಿಗೂ ಹೆಚ್ಚು ಒಟ್ಟು ಮಾರಾಟವನ್ನು ಕಂಡಿದೆ. ಇಲ್ಲಿ ಟಿಯಾಗೊ ಸಂಖ್ಯೆಗಳು ಟಿಯಾಗೊ EV ಯನ್ನೂ ಒಳಗೊಂಡಿದೆ ಎಂಬುದನ್ನು ಗಮನಿಸಬೇಕು.
ಇನ್ನಷ್ಟು ಓದಿ: ಆಲ್ಟೋ 800 ಆನ್‌ರೋಡ್ ಬೆಲೆ
0 out of 0 found this helpful