ಮೂರನೇ ತಲೆಮಾರಿನ Volkswagen Tiguan ಹೀಗಿದೆ ನೋಡಿ
ವೋಕ್ಸ್ವ್ಯಾಗನ್ ಟಿಗುವಾನ್ 2025 ಗಾಗಿ rohit ಮೂಲಕ ಸೆಪ್ಟೆಂಬರ್ 22, 2023 08:34 am ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಟೈಗುನ್ ಆಕರ್ಷಕ R-ಲೈನ್ ಟ್ರಿಮ್ ನೋಟದಲ್ಲಿ ಸಿದ್ಧಗೊಂಡಿದ್ದು, ಸಂಪೂರ್ಣ EV ಮೋಡ್ ನಲ್ಲಿ 100km ತನಕದ ಶ್ರೇಣಿಯೊಂದಿಗೆ ಮೊದಲ ಬಾರಿಗೆ ಪ್ಲಗ್ ಇನ್ ಹೈಬ್ರೀಡ್ ಆಯ್ಕೆಯನ್ನು ಒದಗಿಸಲಿದೆ
- ಫೋಕ್ಸ್ ವ್ಯಾಗನ್ ಸಂಸ್ಥೆಯು ಜಗತ್ತಿನಾದ್ಯಂತ 2007ರಲ್ಲಿ ʻಟೈಗುನ್ʼ ಎಂಬ ಹೆಸರನ್ನು ಪರಿಚಯಿಸಿತ್ತು.
- ಮೂರನೇ ತಲೆಮಾರಿನ ಮಾದರಿಯ ಹೊರಾಂಗಣವು ಸಂಪರ್ಕಿತ LED ಲೈಟಿಂಗ್ ಸೆಟಪ್ ಮತ್ತು 20 ಇಂಚುಗಳ ವರೆಗಿನ ಅಲೋಯ್ ವೀಲ್ ಗಳನ್ನು ಒಳಗೊಂಡಿದೆ.
- ಇದರ ಕ್ಯಾಬಿನ್, 15 ಇಂಚುಗಳ ಟಚ್ ಸ್ಕ್ರೀನ್, ಚಾಲಕನ ಡಿಜಿಟಲ್ ಡಿಸ್ಪ್ಲೇ ಮತ್ತು ಮನಮೋಹಕ ಲೈಟಿಂಗ್ ಅನ್ನು ಒಳಗೊಂಡಿದೆ.
- ಟರ್ಬೊ ಪೆಟ್ರೋಲ್, ಪ್ಲಗ್ ಇನ್ ಹೈಬ್ರೀಡ್ ಮತ್ತು ಡೀಸೆಲ್ ಘಟಕಗಳು ಸೇರಿದಂತೆ ಬೇರೆ ಬೇರೆ ಪವರ್ ಟ್ರೇನ್ ಆಯ್ಕೆಗಳನ್ನು ಪಡೆಯಲಿದೆ.
- ಭಾರತದಲ್ಲಿ ಇದು 2025ರಲ್ಲಿ ಬಿಡುಗಡೆಯಾಗಲಿದೆ; ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ (ಬಲೆ ರೂ. 35.17 ಲಕ್ಷ, ಎಕ್ಸ್ ಶೋರೂಂ - ದೆಹಲಿ)
ಜಾಗತಿಕವಾಗಿ ಅತ್ಯಂತ ಜನಪ್ರಿಯವಾಗಿರುವ SUV ಗಳಲ್ಲಿ ಒಂದಾಗಿರುವ ಫೋಕ್ಸ್ ವ್ಯಾಗನ್ ಟೈಗುನ್ ಮಾದರಿಯು ತನ್ನ ಮೂರನೇ ತಲೆಮಾರಿನ ಅವತಾರವನ್ನು ಬಿಡುಗಡೆ ಮಾಡಿದೆ. ಈ ಹೊಸ SUV ಯು ಒಳಗಡೆ ಹಾಗೂ ಹೊರಗಡೆ ಅತ್ಯಾಧುನಿಕ ವಿಧಾನಗಳನ್ನು ಅಳವಡಿಸಿಕೊಂಡಿದ್ದು, ಉತ್ಪಾದನೆಗೆ ಸಿದ್ಧವಾಗಿರುವ ರೂಪದಲ್ಲಿ ಕಾಣಿಸಿಕೊಂಡಿದೆ. ಈ ಹೆಸರು 2007ರಿಂದಲೇ ಚಾಲ್ತಿಯಲ್ಲಿದ್ದು, ಇದೀಗ ಮೂರನೇ ತಲೆಮಾರಿನ ಮಾದರಿಯು ಮೊದಲನೇ ಬಾರಿಗೆ ಪ್ಲಗ್ - ಇನ್ ಹೈಬ್ರೀಡ್ ಆವೃತ್ತಿಯೊಂದಿಗೆ ಹೊರಬರಲಿದೆ.
ಹೆಚ್ಚು ಆಕರ್ಷಕ
ಈ ಟೈಗುನ್ನ್ ಮಾದರಿಯ ಮೂರನೇ ತಲೆಮಾರು ಮೊದಲಿಗಿಂತಲೂ ಹೆಚ್ಚು ಸೊಗಸಾಗಿ ಮೂಡಿ ಬಂದಿದ್ದು, ಆಧುನಿಕ ಫೋಕ್ಸ್ ವ್ಯಾಗನ್ ಕಾರುಗಳಲ್ಲಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಫೋಕ್ಸ್ ವ್ಯಾಗನ್ ಸಂಸ್ಥೆಯು ಹೇಳಿರುವ ಪ್ರಕಾರ ಇದರ ಹೊಸ SUV ಯು 30mm ನಷ್ಟು ಹೆಚ್ಚು ಉದ್ದವನ್ನು ಹೊಂದಿದ್ದು, ಎರಡನೇ ತಲೆಮಾರಿನ ಮಾದರಿಯು ಹೊಂದಿರುಷ್ಟೇ ಎತ್ತರ, ಅಗಲ ಮತ್ತು ವೀಲ್ ಬೇಸ್ ಅನ್ನು ಇದು ಹೊಂದಿರಲಿದೆ.
ಜತೆಗೆ, ಈ SUV ಯು ಗ್ರಿಲ್ ಗೆ ನುಣುಪಾದ ಗ್ಲಾಸ್ ಫಿನಿಶ್ ಪಡೆದಿದ್ದರೆ, ಮ್ಯಾಟ್ರಿಕ್ಸ್ ಡ್ಯುವಲ್ ಪಾಡ್ HD LED ಹೆಡ್ ಲೈಟುಗಳನ್ನು ಸಹ (ಹೊಸ ಟೋರೆಗ್ ನಿಂದ ಪಡೆಯಲಾದ) ಇದು ಹೊಂದಿದೆ. ಇದರ ಪ್ರತಿ ಕ್ಲಸ್ಟರ್, 19,200 ಮಲ್ಟಿ-ಪಿಕ್ಸೆಲ್ LED ಗಳನ್ನು ಹೊಂದಿದೆ. ಇದು ಬೋನೆಟ್ ನ ಉದ್ದಕ್ಕೂ ತೆಳ್ಳನೆಯ LED DRL ಪಟ್ಟಿಯನ್ನು ಹೊಂದಿದ್ದು, ಹೆಡ್ ಲೈಟಿನ ಕ್ಲಸ್ಟರ್ ನ ಒಂದು ಭಾಗವು ಇಂಡಿಕೇಟರ್ ಗಳಾಗಿಯೂ ಕಾರ್ಯ ನಿರ್ವಹಿಸಲಿದೆ. ಕೆಳಗೆ ಇದು ದಪ್ಪನಾದ ಬಂಪರ್ (ಮೂರು ಕ್ರೋಂ ಬಾರ್ ಗಳೊಂದಿಗೆ), ಮತ್ತು ಏರ್ ಇನ್ ಟೇಕರ್ ಜೊತೆಗೆ ಸ್ಕಿಡ್ ಪ್ಲೇಟುಗಳನ್ನು ಹೊಂದಿದೆ.
ಪ್ರಸ್ತುತ ಅಂತರಾಷ್ಟ್ರೀಯ ಸ್ಪೆಕ್ ಟೈಗುನ್ ನಲ್ಲಿ ನೋಡಿದಂತೆ, ಹೊಸ ಮಾದರಿಯು ಆಕರ್ಷಕ ʻR-ಲೈನ್ʼ ಟ್ರಿಮ್ ಜೊತೆಗೆ ಬರಲಿದ್ದು, ಕೆಲವೊಂದು ಹೊಸ ಶೈಲಿಯನ್ನು ಪಡೆಯಲಿದೆ. ಹೊಸ ತಲೆಮಾರಿನ SUV ಯ R-ಲೈನ್ ಆವೃತ್ತಿಯು ಗ್ರಿಲ್ ನಲ್ಲಿ ʻR-ಲೈನ್ʼ ಬ್ಯಾಜ್ ಅನ್ನು ಹೊಂದಿದ್ದು, ವಿಭಿನ್ನವಾಗಿ ವಿನ್ಯಾಸಗೊಳಿಸಿದ ಬಂಪರ್ (ವಜ್ರಾಕಾರದ ಅಂಶಗಳನ್ನು ಹೊಂದಿದೆ), ಮೊನಚಾದ ಫಾಕ್ಸ್ ಏರ್ ಇನ್ ಟೇಕ್ ಹೌಸಿಂಗ್ ಗಳು, ಹಾಗೂ ತೀರಾ ಕೆಳಕ್ಕೆ ಕ್ರೋಮ್ ಬಾರ್ ಅನ್ನು ಸಹ ಒಳಗೊಂಡಿದೆ.
ಪ್ರೊಫೈಲ್ ನಲ್ಲಿ ಪ್ರಮಾಣಿತ ಮತ್ತು ʻR-ಲೈನ್ʼ ಆವೃತ್ತಿಗಳೆರಡೂ ಒಂದೇ ರೀತಿ ಕಾಣಿಸಿಕೊಂಡರೂ, ʻR-ಲೈನ್ʼನಲ್ಲಿರುವ ಹೆಚ್ಚು ಆಕರ್ಷಕ ಅಲೋಯ್ ವೀಲುಗಳು (20 ಇಂಚುಗಳ ತನಕ) ಇವುಗಳ ನಡುವಿನ ಪ್ರಮುಖ ವ್ಯತ್ಯಾಸವೆನಿಸಿವೆ . ಪ್ಲಗ್ - ಇನ್ ಹೈಬ್ರೀಡ್ ಆಯ್ಕೆಯು R-ಲೈನ್ ಟ್ರಿಮ್ ಗೆ ಮಾತ್ರವೇ ಸೀಮಿತವಾಗಿದ್ದು, ಇದರ ಚಾರ್ಜಿಂಗ್ ಪೋರ್ಟ್ ಅನ್ನು ಮುಂಭಾಗದ ಎಡ ಫೆಂಡರ್ ನಲ್ಲಿ ಕಾಣಬಹುದು. ಅಲ್ಲದೆ ʻR-ಲೈನ್ʼ ಬ್ಯಾಜ್ ಅನ್ನು ಬಾಗಿಲುಗಳ ಮೇಲೆ ಗಮನಿಸಬಹುದು.
ಹಿಂಭಾಗದಲ್ಲಿ, ಎರಡೂ ಮಾದಿರಗಳು 3-ಪೀಸ್ ಲೈಟಿಂಗ್ ಎಲಿಮೆಂಟ್ ಜೊತೆಗೆ ಸಂಪರ್ಕಿತ LED ಟೇಲ್ ಲೈಟ್ ಸೆಟಪ್ ಅನ್ನು ಹೊಂದಿವೆ. ಎರಡೂ ಕಾರುಗಳು ಟೇಲ್ ಗೇಟ್ ನಲ್ಲಿ ʻತಿಗುವಾನ್ʼ ಹೆಸರನ್ನು ಹೊಂದಿದ್ದರೆ, R-ಲೈನ್ ಆವೃತ್ತಿಯು ‘eHybrid’ ಲಾಂಛನವನ್ನು ಹೊಂದಿದೆ. R-ಲೈನ್ ಕಾರಿನ ಹಿಂದಿನ ಬಂಪರ್ ನಲ್ಲಿ, ಮುಂದಿನ ಬಂಪರ್ ನಲ್ಲಿ ಇರುವ ವಿನ್ಯಾಸವೇ ಇದೆ.
ಇದನ್ನು ಸಹ ನೋಡಿರಿ: ಹೊಸ T-ಕ್ರಾಸ್ ನಿಂದ VW ತೈಗುನ್ ಫೇಸ್ ಲಿಫ್ಟ್ ಪಡೆಯಲಿರುವ 5 ಅಂಶಗಳು
ಐಷಾರಾಮಿ ಕ್ಯಾಬಿನ್
ಹೊಸ ಟೈಗುನ್, ತನ್ನ ಕ್ಯಾಬಿನ್ ಗೆ 2 - ಟೋನ್ ಫಿನಿಶ್ ಅನ್ನು ಪಡೆದರೆ, R-ಲೈನ್ ಆವೃತ್ತಿಯು ಸಂಪೂರ್ಣ ಕಪ್ಪಗಿನ ಥೀಮ್ ಅನ್ನು (ಡೋರ್ ಪ್ಯಾಡ್ ಗಳು ಮತ್ತು ಡ್ಯಾಶ್ ಬೋರ್ಡ್ ಮೇಲ್ಗಡೆ ನೀಲಿ ಹೈಲೈಟ್ ಗಳೊಂದಿಗೆ) ಪಡೆಯಲಿದೆ. ಎರಡೂ ಮಾದರಿಗಳು, ʻಟೈಗುನ್ʼ ಮತ್ತು ʻR-ಲೈನ್ʼ ಲಾಂಛನದೊಂದಿಗೆ ಡ್ಯಾಶ್ ಬೋರ್ಡ್ ನ ಪ್ಯಾಸೆಂಜರ್ ಬದಿಯಲ್ಲಿ ಭಿನ್ನವಾದ ಡಿಜಿಟಲ್ ಗ್ರಾಫಿಕ್ ಗಳನ್ನು ಹೊಂದಿರಲಿವೆ. ಡೋರ್ ಪ್ಯಾಡ್ ಗಳ ಮೇಲೂ ಇದನ್ನು ಗಮನಿಸಬಹುದು. R-ಲೈನ್ ಆವೃತ್ತಿಯು ಪೆಡಲ್ ಗೆ ಆಕರ್ಷಕ ಹೊದಿಕೆಗಳನ್ನು ಪಡೆಯಲಿದೆ. ಚಾಲನೆಯ ಪ್ರೊಫೈಲ್, ಒಳಗಿನ ಲೈಟಿಂಗ್ ಮತ್ತು ರೇಡಿಯೋ ಧ್ವನಿಯನ್ನು ಸಹ ನಿಯಂತ್ರಿಸಲು ಬಳಸಬಹುದಾದ OLED ಡಿಸ್ಪ್ಲೇಯೊಂದಿಗೆ ಸೆಂಟರ್ ಕನ್ಸೋಲ್ ನಲ್ಲಿ ರೋಟರಿ ಡಯಲ್ ಅನ್ನು ಕಾಣಬಹುದು.
ಇದರ ಬೂಟ್ ಸ್ಥಳವು 37 ಲೀಟರ್ ಗಳಷ್ಟು ಹಿಗ್ಗಿದ್ದು ಅದು ಈಗ ᳚̄652 ಲೀಟರ್ ಗಳಿಗೆ ತಲುಪಿದೆ. ಅಲ್ಲದೆ ಎರಡನೇ ಸಾಲನ್ನು ಸಂಪೂರ್ಣವಾಗಿ ಮಡಚಬಹುದಾಗಿದೆ.
ಇನ್ನಷ್ಟು ಗುಣವೈಶಿಷ್ಟ್ಯಗಳು
ಇದರ ಡ್ಯುವಲ್ ಡಿಜಿಟಲ್ ಸ್ಕ್ರೀನ್ ಗಳು (ಒಂದು ಇನ್ಸ್ ಟ್ರುಮೆಂಟೇಶನ್ ಗಾಗಿ, ಇನ್ನೊಂದು ಇನ್ಫೊಟೈನ್ ಮೆಂಟ್ ಗಾಗಿ, 15 ಇಂಚು ಗಾತ್ರ) ಇದರೊಳಗಿನ ಪ್ರಮುಖ ಪರಿಷ್ಕರಣೆಗಳೆನಿಸಲಿವೆ. ಹೊಸ ಟೈಗುನ್ ಮಾದರಿಯು ಹೆಡ್ಸ್ ಅಪ್ ಡಿಸ್ಪ್ಲೇ, ಸೊಂಟವನ್ನು ಆಧರಿಸಲು 4-ವೇ ಅಡ್ಜಸ್ಟ್ ಮೆಂಟ್, ಪ್ಯಾನೊರಾಮಿಕ್ ಸನ್ ರೂಫ್, ಮಸಾಜ್ ಫಂಕ್ಷನ್ ನೊಂದಿಗೆ ಅಟೋ ಹೀಟೆಡ್ ಮತ್ತು ವೆಂಟಿಲೇಟೆಡ್ ಸೀಟುಗಳು ಮತ್ತು ವಾಯ್ಸ್ ಅಸಿಸ್ಟ್ ಆಧರಿತ ಫಂಕ್ಷನ್ ಗಳನ್ನು ಹೊಂದಿರಲಿದೆ.
ಸುರಕ್ಷತೆಯಲ್ಲಿಯೂ ಪರಿಷ್ಕರಣೆ
ಫೋಕ್ಸ್ ವ್ಯಾಗನ್ ಸಂಸ್ಥೆಯು ಹೊಸ ತಿಗುವಾನ್ ಆವೃತ್ತಿಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅನ್ನು ಒದಗಿಸಿದ್ದು, ಇದು ಲೇನ್ ಚೇಂಜ್ ಅಸಿಸ್ಟ್, ಅಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ರಿಮೋಟ್ ಪಾರ್ಕಿಂಗ್ ಸಾಮರ್ಥ್ಯದೊಂದಿಗೆ (ಸ್ಮಾರ್ಟ್ ಫೋನ್ ಆ್ಯಪ್ ಬಳಸಿ ಪಾರ್ಕಿಂಗ್ ತಾಣದ ಒಳಕ್ಕೆ ಮತ್ತು ಹೊರಕ್ಕೆ ಸ್ವಯಂಚಾಲಿತವಾಗಿ ವಾಹನ ಚಲಾಯಿಸುವುದಕ್ಕಾಗಿ) ಪಾರ್ಕ್ ಅಸಿಸ್ಟ್ ಇತ್ಯಾದಿಗಳೊಂದಿಗೆ ಬರಲಿದೆ.
ಪವರ್ ಟ್ರೇನ್ ವಿವರಗಳು
ಫೋಕ್ಸ್ ವ್ಯಾಗನ್ ಸಂಸ್ಥೆಯು ಟೈಗುನ್ ಕಾರಿನ ಪವರ್ ಟ್ರೇನ್ ವಿವರಗಳನ್ನು ನಿಖರವಾಗಿ ಬಹಿರಂಗಪಡಿಸದೆ ಇದ್ದರೂ, ಈ SUV ಯು ಟರ್ಬೊ ಪೆಟ್ರೋಲ್ (TSI), ಡೀಸೆಲ್ (TDI), ಮೈಲ್ಡ್ ಹೈಬ್ರೀಡ್ ಟರ್ಬೊ ಪೆಟ್ರೋಲ್ (eTSI), ಮತ್ತು ಪ್ಲಗ್ ಇನ್ ಹೈಬ್ರೀಡ್ (ಇ-ಹೈಬ್ರೀಡ್) ಆಯ್ಕೆಗಳೊಂದಿಗೆ ಬರುವ ನಿರೀಕ್ಷೆ ಇದೆ. ತನ್ನ ಪ್ಲಗ್ - ಇನ್ ಹೈಬ್ರೀಡ್ ಆವೃತ್ತಿಯಲ್ಲಿ ಈ SUV ಯು ಶುದ್ಧ EV ಮೋಡ್ ನಲ್ಲಿ 100km ತನಕದ ಶ್ರೇಣಿಯನ್ನು ಒದಗಿಸಲಿದೆ ಎನ್ನಲಾಗಿದೆ. ಹೊಸ ತಿಗುವಾನ್ ಕಾರು ವೆಹಿಕಲ್ ಡೈನಾಮಿಕ್ಸ್ ಮ್ಯಾನೇಜರ್ ಅನ್ನು ಹೊಂದಿರಲಿದ್ದು ಇದು ಎಲೆಕ್ಟ್ರಾನಿಕ್ ಡಿಫೆರೆನ್ಶಿಯಲ್ ಲಾಕ್ ಗಳ ಕಾರ್ಯಗಳನ್ನು ನಿಯಂತ್ರಿಸಲಿದೆ.
ಇದು ಭಾರತದಲ್ಲಿ ದೊರೆಯಲಿದೆಯೇ?
ಫೋಕ್ಸ್ ವ್ಯಾಗನ್ ಸಂಸ್ಥೆಯು ಹೊಸ ಟೈಗುನ್ ಕಾರನ್ನು 2024ರ ಸುಮಾರಿಗೆ ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಇದು 2025ರಲ್ಲಿ ರಸ್ತೆಗಿಳಿಯಲಿದೆ. ಹೊಸ ಮಾದರಿಯು ಈಗಿರುವ ತೈಗುನ್ ಗಿಂತ (ಬೆಲೆ ರೂ. 35.17 ಲಕ್ಷ, ಎಕ್ಸ್ ಶೋರೂಂ, ದೆಹಲಿ) ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ಇದು ಹ್ಯುಂಡೈ ಟಕ್ಸನ್, ಸಿಟ್ರನ್ C5 ಏರ್ ಕ್ರಾಸ್, ಮತ್ತು ಜೀಪ್ ಕಂಪಾಸ್ ಇತ್ಯಾದಿ ಮಾದರಿಗಳೊಂದಿಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟೈಗುನ್ ಅಟೋಮ್ಯಾಟಿಕ್