• English
  • Login / Register

ಹಿಲಕ್ಸ್‌ನ ಭಾರೀ ರಿಯಾಯಿತಿಗಳನ್ನು ಅಧಿಕೃತವಾಗಿ ನಿರಾಕರಿಸಿದ ಟೊಯೋಟಾ

ಟೊಯೋಟಾ ಹಿಲಕ್ಸ್‌ ಗಾಗಿ tarun ಮೂಲಕ ಜುಲೈ 03, 2023 06:06 pm ರಂದು ಪ್ರಕಟಿಸಲಾಗಿದೆ

  • 42 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಲವು ಲಕ್ಷ ಮೌಲ್ಯದ ಟೊಯೋಟಾ ಹೈಲಕ್ಸ್‌ನ ಅದ್ಭುತ ಪ್ರಯೋಜನಗಳ ವರದಿಗಳಿಗೆ ಈ ಕಾರು ತಯಾರಕರು ಪ್ರತಿಕ್ರಿಯಿಸಿದ್ದಾರೆ

Toyota Hilux

  •  ಅನೇಕ ವರದಿಗಳು ಹೇಳುವಂತೆ, ಈ ಹೈಲಕ್ಸ್ ರೂ 10 ಲಕ್ಷಗಳ ತನಕದ ರಿಯಾಯಿತಿಗಳೊಂದಿಗೆ ಲಭ್ಯವಿದೆ.

  •  ಈ ವರದಿಗಳು ಸತ್ಯವಲ್ಲ ಮತ್ತು ಹೈಲಕ್ಸ್‌ಗೆ ಯಾವುದೇ ರಿಯಾಯಿತಿ ಇರುವುದಿಲ್ಲವೆಂದು ಟೊಯೋಟಾ ದೃಢಪಡಿಸಿದೆ.

  •  ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ಹೊಂದಿದ 2.8-ಲೀಟರ್ ಡೀಸೆಲ್ ಇಂಜಿನ್ ಹಾಗೂ 4X4 ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ.

  •  ಕೇವಲ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗಿದೆ ಮತ್ತು ಕ್ರೂಸ್ ಕಂಟ್ರೋಲ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಪವರ್ ಡ್ರೈವರ್ ಸೀಟ್ ಅನ್ನು ಹೊಂದಿದೆ.

  •  ಈ ಹೈಲಕ್ಸ್ ಬೆಲೆಯನ್ನು 30.40 ಲಕ್ಷದಿಂದ ರೂ 37.90 ತನಕ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ.

  ಟೊಯೋಟಾ ಹೈಲಕ್ಸ್ ಮೇಲೆ ರೂ 6 ಲಕ್ಷದಿಂದ ರೂ 10 ಲಕ್ಷದ ತನಕ, ವೇರಿಯೆಂಟ್ ಆಧರಿಸಿ, ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂದು ಅನೇಕ ವರದಿಗಳು ಸೂಚಿಸಿವೆ. ಆದಾಗ್ಯೂ, ಇಂತಹ ಯಾವುದೇ ಆಫರ್‌ ಕ್ಲೈಮ್‌ಗಳನ್ನು ನಿರಾಕರಿಸಿದೆ. 

 ತನ್ನ ಅಧಿಕೃತ ಹೇಳಿಕೆಯೊಂದರಲ್ಲಿ ಟೊಯೋಟಾ ಪ್ರತಿಕ್ರಿಯೆ ನೀಡುತ್ತಾ,ಟೊಯೋಟಾ ಹೈಲಕ್ಸ್ ಅನ್ನು ಭಾರಿ ರಿಯಾಯಿತಿ ಬೆಲೆಗೆ ನೀಡಲಾಗುತ್ತಿದೆ ಎಂಬ ಕೆಲವೊಂದು ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ, ಅಂತಹ ವರದಿಗಳು ಸತ್ಯವಲ್ಲ ಎಂಬುದನ್ನು ಅಧಿಕೃತವಾಗಿ ಹೇಳುತ್ತಿದ್ದೇವೆ. ಟೊಯೋಟಾ ಕಿರ್ಲೋಸ್ಕರ್ ರೂ 30,40,000 - ರೂ. 37,90,000/- (ಎಕ್ಸ್-ಶೋರೂಂ) ಶ್ರೇಣಿಯ ಅಧಿಕೃತವಾಗಿ ಘೋಷಿಸಿದ ಬೆಲೆ ಪಟ್ಟಿಯನ್ನು ಮಾಡೆಲ್‌ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಮುಂದುವರೆಸಿದೆ.

  ಕ್ಲೈಮ್ ಮಾಡಲಾದ ರಿಯಾಯಿತಿಗಳು

Toyota Hilux

 ಭಾರಿ ರಿಯಾಯಿತಿಗಳ ಬಗೆಗಿನ ವರದಿಗಳ ಪ್ರಕಾರ, ಡೀಲರ್‌ಗಳು ಹೈಲಕ್ಸ್‌ನ ಟಾಪ್-ಎಂಡ್ ಆಟೋಮ್ಯಾಟಿಕ್ ವೇರಿಯೆಂಟ್‌ ಅನ್ನು ಸುಮಾರು ರೂ 44 ಲಕ್ಷದ ನಮ್ಮ ರೆಗ್ಯುಲರ್ ಆನ್-ರೋಡ್ ಬೆಲೆಗೆ ಬದಲಾಗಿ ಸುಮಾರು ರೂ 30 ಲಕ್ಷದ ಆನ್‌-ರೋಡ್ ಬೆಲೆಗೆ ನೀಡುತ್ತಿವೆ. ಇದು ಪೂರ್ಣ-ಲೋಡಡ್ ಇಸುಝು V-ಕ್ರಾಸ್‌ ಬೆಲೆಗೆ ಸಮನಾಗಿದೆ. ಈ ಡೀಲ್ ಖಂಡಿತ ತುಂಬಾ ಆಕರ್ಷಕ ಎನಿಸುತ್ತದೆ, ಆದರೆ ಕಾರುತಯಾರಕರು ಇದನ್ನು ಅಧಿಕೃತವಾಗಿ ನಿರಾಕರಿಸಿದ್ದಾರೆ. ವಾಸ್ತವದಲ್ಲಿ, ಈ ಪಿಕಪ್ ಮೇಲೆ ನೀವು ತಿಳಿದಂತೆ ಯಾವುದೇ ಆಫರ್‌ಗಳಿಲ್ಲ ಮಾತ್ರವಲ್ಲ ಇದು ಮೂರು ತಿಂಗಳ ಸರಾಸರಿ ಕಾಯುವ ಅವಧಿಯನ್ನೂ ಹೊಂದಿದೆ. 

 ಇದನ್ನೂ ಓದಿ: ಟೊಯೋಟಾ ಹೈಲಕ್ಸ್‌ನಲ್ಲಿ ನಮ್ಮ ಆಫ್-ರೋಡ್ ಪ್ರಯಾಣದ ಅನುಭವ!

 ಟೊಯೋಟಾ ಹೈಲಕ್ಸ್ ವಿವರಗಳು

Toyota Hilux

ಈ ಹೈಲಕ್ಸ್ 2.8-ಲೀಟರ್ ಡೀಸೆಲ್ ಇಂಜಿನ್ ಪಡೆದಿದ್ದು, 204PS ಉತ್ಪಾದಿಸುತ್ತದೆ ಮತ್ತು 500Nm ತನಕದ ಅಧಿಕ ಟಾರ್ಕ್ ಅನ್ನು ಹೊಂದಿದೆ. ಟ್ರಾನ್ಸ್‌ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಯೂನಿಟ್‌ಗಳನ್ನು ಒಳಗೊಂಡಿದ್ದು 4X4 ಸ್ಟಾಂಡರ್ಡ್ ಹೊಂದಿದೆ. ಈ ಪಿಕಪ್ ಕಡಿಮೆ ರೇಂಜ್ ಗೇರ್‌ಬಾಕ್ಸ್ ಮತ್ತು ಇದರೊಂದಿಗೆ ಟ್ರಾನ್ಸ್‌ಫರ್ ಕೇಸ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಆಫ್-ರೋಡಿಂಗ್ ಸಾಮರ್ಥ್ಯಕ್ಕೆ ಅನುಕೂಲವಾಗಲು ಇಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಅನ್ನು ಪಡೆದಿದೆ.

 ಈ ಟೊಯೋಟಾ ಹೈಲಕ್ಸ್ ಪಟ್ಟಿಯಲ್ಲಿರುವ ಫೀಚರ್‌ಗಳೆಂದರೆ, LED ಹೆಡ್‌ಲ್ಯಾಂಪ್‌ಗಳು, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಇರುವ 8-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್. ಸುರಕ್ಷತೆಗಾಗಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್/ಡಿಸೆಂಟ್ ಕಂಟ್ರೋಲ್, ಏಳು ಏರ್‌ಬ್ಯಾಗ್‌ಗಳು, ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹಿಂಭಾಗದ ಕ್ಯಾಮರಾ ಇದೆ.

 ಇದನ್ನೂ ಓದಿ: ಟಾಪ್ 5 ಟೊಯೋಟಾ ಹೈಲಕ್ಸ್ ಆ್ಯಕ್ಸಸರಿಸ್ ಬೆಲೆ ಬಹಿರಂಗ - ಟೆಂಟ್, ಕ್ಯಾನೋಪಿ, ಮತ್ತು ಇನ್ನಷ್ಟು

 ಈ ಟೊಯೋಟಾ ಹೈಲಕ್ಸ್ ಹೆಚ್ಚು ಬೆಲೆಯುಳ್ಳದ್ದಾಗಿದ್ದು  ಇಸುಝು D-ಮ್ಯಾಕ್ಸ್ V-ಕ್ರಾಸ್‌ಗೆ ದುಬಾರಿ ಪರ್ಯಾಯವಾಗಿದೆ. 

 ಇನ್ನಷ್ಟು ಓದಿ : ಟೊಯೋಟಾ ಹೈಲಕ್ಸ್ ಡೀಸೆಲ್

was this article helpful ?

Write your Comment on Toyota ಹಿಲಕ್ಸ್‌

explore ಇನ್ನಷ್ಟು on ಟೊಯೋಟಾ ಹಿಲಕ್ಸ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಪಿಕಪ್ ಟ್ರಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience