• English
  • Login / Register

ಈ ಜೂನ್‌ನಲ್ಲಿ Toyota ಡೀಸೆಲ್ ಕಾರ್ ಖರೀದಿಸಲು ನೀವು 6 ತಿಂಗಳು ಕಾಯಬೇಕು

ಟೊಯೋಟಾ ಫ್ರಾಜುನರ್‌ ಗಾಗಿ ansh ಮೂಲಕ ಜೂನ್ 13, 2024 10:54 pm ರಂದು ಪ್ರಕಟಿಸಲಾಗಿದೆ

  • 45 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಕಾರು ತಯಾರಕರು ಭಾರತದಲ್ಲಿ ಕೇವಲ ಮೂರು ಡೀಸೆಲ್ ಮಾಡೆಲ್ ಗಳನ್ನು ಹೊಂದಿದ್ದಾರೆ, ಅವುಗಳೆಂದರೆ ಫಾರ್ಚುನರ್, ಹಿಲಕ್ಸ್ ಮತ್ತು ಇನ್ನೋವಾ ಕ್ರಿಸ್ಟಾ. 

Toyota Diesel Cars June 2024 Waiting Period

ಟೊಯೊಟಾ ಭಾರತದಲ್ಲಿ ಅನೇಕ ಮಾಡೆಲ್ ಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಕೆಲವು ಅದರದೇ ಬ್ರಾಂಡ್ ಗೆ ಸೇರಿವೆ, ಮತ್ತು ಕೆಲವು ಮಾರುತಿಯೊಂದಿಗೆ ಹಂಚಿಕೊಂಡ ಮಾಡೆಲ್ ಗಳಾಗಿವೆ. ಪೆಟ್ರೋಲ್ ಅನ್ನು ಮಾತ್ರ ಬಳಸುವ ಅದರ ಹಂಚಿಕೆಯ ಮಾಡೆಲ್ ಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಟೊಯೋಟಾದ ಸ್ವಂತ ಕಾರುಗಳು ಡೀಸೆಲ್ ಎಂಜಿನ್‌ಗಳನ್ನು ಹೊಂದಿವೆ. ಟೊಯೋಟಾ ಇದೀಗ ತನ್ನ ಡೀಸೆಲ್ ಕಾರುಗಳ ಕಾಯುವ ಅವಧಿಯನ್ನು ಈ ಜೂನ್‌ನಲ್ಲಿ ನವೀಕರಿಸಿದೆ ಮತ್ತು ನೀವು ಟೊಯೋಟಾ ಡೀಸೆಲ್ ಮಾಡೆಲ್ ಅನ್ನು ಖರೀದಿಸಲು ನೋಡುತ್ತಿದ್ದರೆ, ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

 ಮಾಡೆಲ್

 ಕಾಯುವ ಅವಧಿ*

 ಇನ್ನೋವಾ ಕ್ರಿಸ್ಟಾ

 ಸುಮಾರು 6 ತಿಂಗಳು

 ಹಿಲಕ್ಸ್

 ಸುಮಾರು 1 ತಿಂಗಳು

 ಫಾರ್ಚುನರ್

 ಸುಮಾರು 2 ತಿಂಗಳು

  •  ಇದು ಭಾರತದಾದ್ಯಂತ ಇರುವ ಸರಾಸರಿ ಕಾಯುವ ಅವಧಿಯಾಗಿದೆ

 ಇಲ್ಲಿ ನೀಡಿರುವ ಮೂರು ಡೀಸೆಲ್ ಮಾಡೆಲ್ ಗಳಲ್ಲಿ, ಹಿಲಕ್ಸ್ ಶೀಘ್ರವಾಗಿ ಲಭ್ಯವಿದೆ. ಫಾರ್ಚುನರ್ ನಂತರದ ಸ್ಥಾನದಲ್ಲಿದ್ದು ಸರಾಸರಿ 2 ತಿಂಗಳ ಕಾಯುವ ಅವಧಿಯನ್ನು ಹೊಂದಿದೆ. ಆದರೆ, ಇನ್ನೋವಾ ಕ್ರಿಸ್ಟಾ ಹೆಚ್ಚು ಕಾಯುವ ಸಮಯವನ್ನು ಹೊಂದಿದ್ದು, ಇದನ್ನು ಖರೀದಿಸಲು ನೀವು ಸರಿಸುಮಾರು ಆರು ತಿಂಗಳ ಕಾಯಬೇಕಾಗುತ್ತದೆ.

 ಪವರ್‌ಟ್ರೇನ್ ವಿವರಗಳು

 ಇನ್ನೋವಾ ಕ್ರಿಸ್ಟಾ

ಇಂಜಿನ್

 2.4-ಲೀಟರ್ ಡೀಸೆಲ್ ಎಂಜಿನ್

 ಪವರ್

150 PS

 ಟಾರ್ಕ್

343 Nm

 ಟ್ರಾನ್ಸ್‌ಮಿಷನ್

 5-ಸ್ಪೀಡ್ MT

 ಇನ್ನೋವಾ ಕ್ರಿಸ್ಟಾ ಕೇವಲ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡುತ್ತದೆ. ನೀವು ಆಟೋಮ್ಯಾಟಿಕ್ ಖರೀದಿಸಲು ಬಯಸಿದರೆ, ಪೆಟ್ರೋಲ್-ಮಾತ್ರ ಇರುವ ಇನ್ನೋವಾ ಹೈಕ್ರಾಸ್ ಅನ್ನು ನೋಡಬಹುದು, ಇದು ಸಾಮಾನ್ಯ 2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ CVT ಅಥವಾ ಪೆಟ್ರೋಲ್-ಹೈಬ್ರಿಡ್ ಸೆಟಪ್‌ ಇರುವ e-CVT ಯೊಂದಿಗೆ ಲಭ್ಯವಿದೆ.

 ಫಾರ್ಚುನರ್/ಹಿಲಕ್ಸ್

 ಇಂಜಿನ್

 2.8-ಲೀಟರ್ ಡೀಸೆಲ್ ಎಂಜಿನ್

 ಪವರ್

204 PS

 ಟಾರ್ಕ್

420 Nm, 500 Nm

ಟ್ರಾನ್ಸ್‌ಮಿಷನ್ 

6-ಸ್ಪೀಡ್ MT, 6-ಸ್ಪೀಡ್ AT

 ಇದನ್ನು ಕೂಡ ಓದಿ: ಟೊಯೋಟಾ ಟೈಸರ್‌ನ ಡೆಲಿವರಿಗಳು ಶುರವಾಗಿವೆ

 ಹಿಲಕ್ಸ್ ಮತ್ತು ಫಾರ್ಚುನರ್ (ಫಾರ್ಚುನರ್ ಲೆಜೆಂಡರ್ ಸೇರಿದಂತೆ) ಎರಡೂ ಒಂದೇ ರೀತಿಯ ಎಂಜಿನ್ ಅನ್ನು ಫೋರ್-ವೀಲ್-ಡ್ರೈವ್ (4WD) ಸಿಸ್ಟಮ್ ನೊಂದಿಗೆ ಪಡೆಯುತ್ತದೆ. ಆದರೆ, ಫಾರ್ಚುನರ್ ಮತ್ತು ಫಾರ್ಚ್ಯೂನರ್ ಲೆಜೆಂಡರ್ ರಿಯರ್-ವೀಲ್-ಡ್ರೈವ್ (RWD) ಸೆಟಪ್‌ನೊಂದಿಗೆ ಲಭ್ಯವಿದೆ.

 ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

kia carens vs toyota innova crysta

 ಟೊಯೊಟಾ ಇನ್ನೋವಾ ಕ್ರಿಸ್ಟಾ ಬೆಲೆಯು ರೂ. 19.99 ಲಕ್ಷದಿಂದ ರೂ 26.55 ಲಕ್ಷದವರೆಗೆ ಇದೆ, ಫಾರ್ಚುನರ್ ಬೆಲೆಯು ರೂ 33.43 ಲಕ್ಷದಿಂದ ರೂ 51.44 ಲಕ್ಷದವರೆಗೆ ಇದೆ, ಮತ್ತು ಹಿಲಕ್ಸ್ ಬೆಲೆಯು ರೂ 30.40 ಲಕ್ಷದಿಂದ ರೂ 37.90 ಲಕ್ಷದ ನಡುವೆ ಇದೆ.

 ಇನ್ನೋವಾ ಕ್ರಿಸ್ಟಾ ಮಾರುತಿ ಎರ್ಟಿಗಾ ಮತ್ತು ಕಿಯಾ ಕ್ಯಾರೆನ್ಸ್‌ಗೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಿದೆ, ಮತ್ತು ಫಾರ್ಚುನರ್ MG ಗ್ಲೋಸ್ಟರ್, ಸ್ಕೋಡಾ ಕೊಡಿಯಾಕ್ ಮತ್ತು ಜೀಪ್ ಮೆರಿಡಿಯನ್ ಗೆ ಪ್ರತಿಸ್ಪರ್ಧಿಯಾಗಿದೆ. ಇಸುಜು ವಿ-ಕ್ರಾಸ್‌ಗೆ ಹೋಲಿಸಿದರೆ ಹಿಲಕ್ಸ್ ಮೇಲ್ಮಟ್ಟದ ಆಯ್ಕೆಯಾಗಿದೆ ಮತ್ತು ಫಾರ್ಚುನರ್ ಮತ್ತು ಗ್ಲೋಸ್ಟರ್‌ನಂತಹ ದೊಡ್ಡ SUVಗಳಿಗೆ ಪಿಕಪ್ ಟ್ರಕ್ ರೀತಿಯ ಪರ್ಯಾಯ ಆಯ್ಕೆಯಾಗಿದೆ.

 ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ

 ಗಮನಿಸಿ: ಇಲ್ಲಿರುವ ವಿವರಗಳು ಕಾರು ತಯಾರಕರು ಒದಗಿಸಿದ ಟೊಯೊಟಾ ಮಾಡೆಲ್ ಗಳ ಮೇಲೆ ಇರುವ ಸರಾಸರಿ ಪ್ಯಾನ್-ಇಂಡಿಯಾ ಕಾಯುವ ಅವಧಿಗಳಾಗಿವೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು, ನಿಮ್ಮ ಹತ್ತಿರದ ಟೊಯೋಟಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಸಲಹೆ ನೀಡುತ್ತವೆ.

 ಇನ್ನಷ್ಟು ಓದಿ: ಫಾರ್ಚುನರ್ ಆನ್ ರೋಡ್ ಬೆಲೆ

was this article helpful ?

Write your Comment on Toyota ಫ್ರಾಜುನರ್‌

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience