ಟೊಯೋಟಾ ಇನ್ನೋವಾ ಕ್ರಿಸ್ಟಾ : ನೀವು ತಿಳಿಯಬೇಕಾದ ಎಲ್ಲಾ ವಿಷಯಗಳು

ಪ್ರಕಟಿಸಲಾಗಿದೆ ನಲ್ಲಿ ಮಾರ್ಚ್‌ 19, 2019 03:13 pm ಇವರಿಂದ nabeel ಟೊಯೋಟಾ ಇನೋವಾ crysta 2016-2020 ಗೆ

  • 77 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

Toyota Innova Crysta

ಆಟೋ ಎಕ್ಸ್ಪೋ ೨೦೧೬ ರಲ್ಲಿ ಟೊಯೋಟಾ ಇನ್ನೋವಾ ಕ್ರಿಸ್ಟಾ ಒಂದು ಮುಖ್ಯವಾದ ಬಿಡುಗಡೆ ಆಗಿತ್ತು. ಭಾರತದಲ್ಲೆಲ್ಲ ಪ್ರಕಟಿ ಹೊಂದಿರುವ ಹೊಸ ಇನ್ನೋವಾ ಒಂದು ವಿಶೇಷವಾದ ಆಕರ್ಷಣೆ ಹೊಂದಿತ್ತು.ಆ ಕಾರು ನವೀಕರಗೋಡಿತುವಂತೆ ಹಾಗು ವೇದಿಕೆಯ ಮೇಲೆ ಆಕರ್ಷಕವಾಗಿ ಕಾಣುವಂತಿತ್ತು, ನಮಗೆ ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿತು ಮತ್ತು ನಾವು ಅದನ್ನು ಮೆಚ್ಚಿದೆವು ಕೂಡ. ಈ ಕಾರು ಅಳತೆಯಲ್ಲಿ ಹಾಗು ಆಕರ್ಷಣೆಯಲ್ಲಿ ಬೆಳೆದಿದೆ ಕೂಡ.

Toyota Innova Crysta

ಟೊಯೋಟಾ ಪ್ರಪಂಚದ ಅತಿ  ದೊಡ್ಡ ಆಟೊಮಕೇರ್ ಆಗಿದ್ದು ಪ್ರಪಂಚದ್ತ್ಯಂತ ಪ್ರಖ್ಯಾತಿ ಪಡೆದಿದೆ. ಇದು ಭಾರತದ್ಲಲೂ ಸಹ ಬಹಳ ಪ್ರಖ್ಯಾತಿ ಪಡೆದಿದೆ. ಟೊಯೋಟಾ ಹೆಚ್ಚು ಶ್ರೇಣಿಯ ಕಾರುಗಳನ್ನು ಹೊಂದಿಲ್ಲದಿದ್ದರೂ , ಎಲ್ಲ ಅವಶ್ಯಕ ಶ್ರೇಣಿಗಳಲ್ಲಿ ಕಾರುಗಳನ್ನು ಬಿಡುಗಡೆ ಮಾಡಿದೆ. ಕ್ವಾಲಿಸ್ ಭಾರತದಲ್ಲಿ ಗೆ ಹೆಚ್ಚು ಯಶಸ್ಸು ಸಿಕ್ಕಿತ್ತು ಮತ್ತು ಅದನ್ನು ಇನ್ನೋವಾ ಮುಂದುವರೆಸಿತು. ಭಾರತೀಯರು ಇದನ್ನು MPV ಎಂದಷ್ಟೇ ಅಲ್ಲದ ಒಂದು ಫ್ಯಾಮಿಲಿ ಕಾರ್ ಆಗಿಯೂ ಸಹ ಸ್ವೀಕರಿಸಿದರು. ಎರೆಡು ಜೆನೆರೇಷನ್ ಗಾಲ ಯಶಸ್ಸಿನ ನಂತರ ಜಪಾನಿನ ಆಟೋ ದೈತ್ಯ ಮತ್ತೆ ಜಾದು  ಮಾಡಿದೆ. ಟೊಯೋಟಾ ಇನ್ನೋವಾ ಕ್ರಿಸ್ಟಾ ದಲ್ಲಿ ಅಂತದ್ದು ಏನಿದೆ ಎಂದು ತಿಳಿಯೋಣ.

Toyota Innova Crysta

ಟೊಯೋಟಾ ಈ MPV ಯನ್ನು ಮಾಡಿ ಒಂದು ಅದ್ಭುತವಾದ ಕಾರ್ಯ ಮಾಡಿದೆ. ನಮಗೆ ತಿಳಿದಿರುವಂತೆ MPV ಗಳು ನೋಡಲು ಸ್ವಲ್ಪ ನೀರಸವಾಗಿರುತ್ತದೆ, ಆದರೆ ಇನ್ನೋವಾ ಸುಂದರ ಹಾಗು ಆಕರ್ಷಕವಾಗಿದೆ ಸಹ, ಮುಂಬಾಗದಮಟ್ಟಿಗಾದರೂ .  ಹೊಸ ಹೆಡ್ ಲ್ಯಾಂಪ್ ನೋಡಲು ಚೆನ್ನಾಗಿದೆ, ಮತ್ತು ಅದನ್ನು ಹೊಳೆಯುವ ಮತ್ತು ಗ್ರಿಲ್ ತನಕ ಚಾಚಿರುವ  ಎರೆಡು ಪಟ್ಟಿಗಳ ಮದ್ಯೆ ಇದೆ. ಹೆಕ್ಸಾಗೋನಾಲ್  ಏರ್ ಡ್ಯಾಮ್  ಕಾರು ಧೀಮಂತವಾಗಿ ಕಾಣುವಂತೆ ಮಾಡುತ್ತದೆ. ಹೆಡ್ ಲ್ಯಾಂಪ್ ಕ್ಲಸ್ಟರ್ ಒಂದು ಮೂರು ಪಾರ್ಟ್ ಗಳ ಯೂನಿಟ್ ಆಗಿದ್ದು ಪ್ರೊಜೆಕ್ಟರ್ ಗಳನ್ನೂ ಹೊಂದಿದ್ದು , ನಾಲ್ಕು LED ಲೈಟ್ ಗಳು ನೋಡಲು ಅಂದವಾಗಿ ಕಾಣುವಂತೆ ಮಾಡಲಾಗಿದೆ.

Toyota Innova Crysta

ಮುಂಭಾಗದ ಗ್ರಿಲ್ ನಲ್ಲಿರುವ ದೊಡ್ಡದಾದ ಟೊಯೋಟಾ ಇನ್ಸಿಗ್ನಿಯ ದ ಬಳಿ ಎರೆಡು ಸ್ಲಾಟ್ ಗಳು ಸೇರುತ್ತವೆ. ಇದು ಮತ್ತು ದೊಡ್ಡದಾದ ಬಾನೆಟ್ ಮೇಲೇರುವ ಗೆರೆಗಳು ವಿನ್ಯಾಸಕ್ಕೆ ಮೆರುಗು ಕೊಡುತ್ತದೆ. ಪಕ್ಕದ ಬಾಗಗಳನ್ನು ನೋಡಿದಾಗ, ಇನ್ನೋವಾ ಉದ್ದವಾಗಿ ಕಾಣುತ್ತದೆ.  C -ಪಿಲ್ಲರ್ ಬಳಿಯ ಗ್ಲಾಸ್ ಲೇಔಟ್ ಗಳು ಇನ್ನೋವಾ ಗೆ ಆಕರ್ಷಣೆ ಕೊಡುತ್ತದೆ. ಅದರ ಹೊರತು ಅಲಾಯ್ ವೀಲ್ ಗಳು  ನೋಡಲು  ಹೆಚ್ಚು ಸುಂದರವಾಗಿರುವಂತೆ ಮಾಡುತ್ತದೆ. ಇದು ಒಂದು MPV  ಯಾಗಿಯೇ ಉಳಿಯುತ್ತದೆ. ಬೂಮರ್ಯಾಂಗ್ ಶೈಲಿಯ  ಟೈಲ್ ಲ್ಯಾಂಪ್ ಕ್ಲಸ್ಟರ್ ಹಿಂದಿನ ಬಾಗಕ್ಕೆ ಹೆಚ್ಚು ಆಕರ್ಷಣೆ ಕೊಡುತ್ತದೆ, ರೂಫ್ ಸ್ಪೋಇಲೆರ್ ಒಟ್ಟಿನ ಪ್ಯಾಕೇಜ್ ಗೆ ಹೊಂದಿಕೊಳ್ಳುತ್ತದೆ.

Toyota Innova Crysta

ಆಂತರಿಕಗಳಲ್ಲಿ  ಬಹಳಷ್ಟು ಕೊಡಲಾಗಿದೆ. ಟೊಯೋಟಾ ಇದನ್ನು ಸಮಾನ್ಯ ಆಂತರಿಕ ಹೊಂದಿರುವ ಕಾರಿನ ಗುಣಗಳನ್ನು ತೆಗೆದು ನವ್ಯ ವಾಗಿ ಕಾಣುವಂತೆ ಮಾಡಿದೆ. ಕಾರಿನ ಅಂತರಿಕಗಳು ಬೆಲೆಬಾಳುವಂತೆ ಹಾಗು ಅಪ್ ಮಾರ್ಕೆಟ್ ಆಗಿದೆ. ಹೊಸ ವಿನ್ಯಾಸದಲ್ಲಿ ವುಡ್ ಫಿನಿಷ್ ಮತ್ತು ೭-ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ನ್ಯಾವಿಗೇಷನ್ ಸಹ ಇದೆ.

Toyota Innova Crysta

ಡ್ಯಾಶ್ ಬೋರ್ಡ್  ನ ಲೇಔಟ್ ಡ್ರೈವರ್ ನ ಸುತ್ತು ಹಾಗು ಎರ್ಗೊನೊಮಿಕ್ಸ್ ಗಾಗಿ ವಿನ್ಯಾಸಮಾಡಲಾಗಿದೆ. ಗೇರ್ ಶಿಫ್ಟರ್ ಅನ್ನು ಸ್ವಲ್ಪ ಎತ್ತರದಲ್ಲಿಟ್ಟಿದ್ದು ಹೆಚ್ಚು ಬೆಳೆಯ SUV  ಯನ್ನು ಹೋಲುತ್ತದೆ. ಇದರಲ್ಲಿ ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಫೋನ್ ಕಾಲ್ ಬಟನ್, ಹಾಗು ಕ್ರೂಸ್  ಕಂಟ್ರೋಲ್ ಬಟನ್ ಸಹ ಇದೆ. ಎಲ್ಲ ಸಲಕರಣೆಗಳು ಅಚ್ಚು ಕಟ್ಟಾಗಿ ಮಾಡಲಾಗಿದೆ ಮತ್ತು ಇದು ಪ್ರೀಮಿಯಂ ಆಗಿರುವಂತೆ ಮಾಡಿದೆ, ಹಾಗು ಭಾರತೀಯ ಗ್ರಾಹಕರು ಮೆಚ್ಚುತ್ತಾರೆ ಕೂಡ.

ಇಂಜಿನ್

Toyota Innova Crysta

ಆಶ್ಚರ್ಯಕರ ಸಂಗತಿಗಳು ಇಲ್ಲಿವೆ. ಹೊಸ ಟೊಯೋಟಾ ಇನ್ನೋವಾ ಕ್ರಿಸ್ಟಾ 2.4-ಲೀಟರ್ 2GD FTV ೪-ಸಿಲಿಂಡರ್ ಡೀಸೆಲ್ ಎಂಜಿನ್ ಸ್ಟ್ಯಾಂಡರ್ಡ್ ಆಗಿ ಹೊಂದಿದೆ ಮತ್ತು ವೇದಿಕೆಯಲ್ಲಿ ತೋರಿಸಲಾದಂತಹ 2.8- ಲೀಟರ್ Z ವೇರಿಯೆಂಟ್ ಶಕ್ತಿಯುತ ಟಾಪ್ ಎಂಡ್ ವೇರಿಯೆಂಟ್ ನ ಬಗ್ಗೆ ಸೂಚಿಸುತ್ತದೆ. 2.4-ಲೀಟರ್ ನಲ್ಲಿ 142bhp ಪವರ್ ಮತ್ತು 342 Nm  ಟಾರ್ಕ್ ಸಿಗುತ್ತದೆ. ಈ ಎಂಜಿನ್ ನ ಮೈಲೇಜ್ 14-16 kmpl ಸುತ್ತ ಇದೆ. ಟ್ರಾನ್ಸ್ಮಿಷನ್ ೨ ರೀತಿ ಇದ್ದು , ೫-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್, ಹಾಗು ೬-ಸ್ಪೀಡ್ ಆಟೋಮ್ಯಾಟಿಕ್ ಸೆಕ್ಯುನ್ಟ್ರಿಯಾಲ್ ಶಿಫ್ಟ್ ನೊಂದಿಗೆ ಹಾಗು ಕ್ರೂಸ್ ಕಂಟ್ರೋಲ್ ನೊಂದಿಗೆ ಬರುತ್ತದೆ.

ಫೀಚರ್ ಗಳು

Toyota Innova Crysta

ಆಂತರಿಕ :ಹೊಸ ಇನ್ನೋವಾ ವನ್ನು ಫೀಚರ್ ಗಳಿಂದ ಭರಿಸಲಾಗಿದೆ. ಇದರಲ್ಲಿ ಲೆಥರ್ ಇಂಟೀರಿಯರ್ , ಅಂಬಿಯೆಂಟ್ ಲೈಟಿಂಗ್ , ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ಹಿಂಬದಿಯ ಆಟೋ ಕೂಲರ್, ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್ , ಸುಲಭವಾಗಿ ಮುಚ್ಚಬಹುದಾದ ಟೈಲ್ ಗೇಟ್, ೭-ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನ್ಯಾವಿಗೇಶನ್ ನೊಂದಿಗೆ, ಸ್ಮಾರ್ಟ್ ಎಂಟ್ರಿ ಮತ್ತು ಪುಶ್ ಬಟನ್ ಸ್ಟಾರ್ಟ್.

ಬಾಹ್ಯ :ಇನ್ನೋವ೧೭-ಇಂಚು ಅಲಾಯ್ ವೀಲ್ ಗಳು , ಮುಂದುವರೆದ ಸಸ್ಪೆನ್ಷನ್  ಪಿಚ್ ಮತ್ತು ಬೌನ್ಸ್ ಕಂಟ್ರೋಲ್ ನೊಂದಿಗೆ, ಮೂರು ಹೊಸ ಬಣ್ಣಗಳು,ಮತ್ತು ಕ್ರೋಮ್ ವಿಂಡೋ ಲೈನಿಂಗ್ ಬಾಹ್ಯದಲ್ಲಿ ಹೊಂದಿದೆ.

ಸುರಕ್ಷತೆ ಮತ್ತು ದಕ್ಷತೆ

Toyota Innova Crysta

ಇನ್ನೋವಾ ಕ್ರಿಸ್ತ ದಲ್ಲಿ ಡುಯಲ್ SRS ಏರ್ಬ್ಯಾಗ್ ಗಳು, Anti-Lock Braking System ಮತ್ತು  Electronic Brake Force Distribution ಮಾತು  Brake Assist ಗಳನ್ನೂ ಸ್ಟ್ಯಾಂಡರ್ಡ್ ಆಗಿ ಎಲ್ಲ ವೇರಿಯೆಂಟ್ ಗಳಲ್ಲೂ ಹೊಂದಿದೆ. ಹೊಸ ಇನ್ನೋವಾ 4735mm ಉದ್ದ (ಹಳೆಯದಕ್ಕಿಂತ 150mm ಹೆಚ್ಚು ಉದ್ದ ),1795mm ಎತ್ತರ (ಹಳೆಯದಕ್ಕಿಂತ 35mm ಎತ್ತರ) ಮತ್ತು  1830mm ಅಗಳ  ( ಹಳೆಯದಕ್ಕಿಂತ 65mm  ಹೆಚ್ಚು ಅಗಳ ), ವೀಲ್ ಬೇಸ್ ಹಳೆಯದ್ದರಂತೆ 2750mm ಆಗಿ  ಉಳಿದಿದೆ.

ಪ್ಯಾಕೇಜ್

Toyota Innova Crysta

ಹಿಂದೆ ಹೇಳಿದಂತೆ, ಇನ್ನೋವಾ ಪ್ರಬಲವಾಗಿ  ಬೆಳೆದಿದೆ. ಇದು ದೊಡ್ಡದಾಗಿದೆ, ವೇಗವಾಗಿದೆ, ಮತ್ತು ಹಿಂದನದಕ್ಕಿಂತ ಹೆಚ್ಚು ಪ್ರೀಮಿಯಂ ಆಗಿದೆ.  ಈ ಎಲ್ಲ ಸುಧಾರಣೆಗಳು ಹೆಚ್ಚು ಬೆಳೆಯನ್ನು ಸಹ ತರುತ್ತದೆ.  ನಾವು ಇನ್ನೋವಾದ ಟಾಪ್ ವೇರಿಯೆಂಟ್ ಗಳು ೨೨ಲಕ್ಷ ಸುತ್ತ ಇರಬಹುದು ಎಂದು ಅಂದುಕೊಂಡಿದ್ದೇವೆ. ಕಾರು ಅದ್ಭುತವಾಗಿದೆ ಆದರೆ, ಇದು ಭಾರತೀಯ ಯೋಚನಾ ಲಹರಿಗೆ ಕ್ಲಿಷ್ಟವಾಗಬಹುದು, ಜನಗಳು ಇದನ್ನು ಕಂಮ್ಯುಟೇರ್ MPV ಎಂದು ಒಪ್ಪಿಕೊಳ್ಳುತ್ತಾರೋ ಇಲ್ಲವೋ ನೋಡಬೇಕು. ಹಾಗು ಇನ್ನೋವಾ ಕ್ರಿಸ್ಟಾ ದ ಫೋಟೋ ಗ್ಯಾಲರಿಯನ್ನು ನೋಡಲು ಮರೆಯಬೇಡಿ.

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟೊಯೋಟಾ ಇನೋವಾ Crysta 2016-2020

Read Full News

trendingಎಮ್‌ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience