ಗ್ರಾಹಕರಿಗೆ ಹೊಸ ಕಾರುಗಳ ಸುರಕ್ಷತೆ ರವಾನೆ ಖಾತರಿಪಡಿಸಲು ಫ್ಲಾಟ್‌ಬೆಟ್ ಟ್ರಕ್ ವಿತರಣಾ ವ್ಯವಸ್ಥೆಯನ್ನು ಪರಿಚಯಿಸಿದ Toyota
ಫೆಬ್ರವಾರಿ 19, 2024 01:27 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಇದು ದಾಸ್ತಾನು ಕೇಂದ್ರಗಳಿಂದ ಮಾರಾಟ ಮಳಿಗೆಗಳಿಗೆ ಹೊಸ ಕಾರುಗಳನ್ನು ಡ್ರೈವ್ ಮಾಡುವ ಅಗತ್ಯವನ್ನು ನಿವಾರಿಸುವುದರ ಜೊತೆಗೆ ವಾಹನಗಳ ಸುರಕ್ಷಿತ ರವಾನೆಯನ್ನು ಖಾತರಿಪಡಿಸುತ್ತದೆ.
ಹೊಸ ಕಾರನ್ನು ಖರೀದಿಸುವಾಗ, ಓಡೋಮೀಟರ್‌ನಲ್ಲಿ ಶೂನ್ಯ ಕಿಲೋಮೀಟರ್ ಅಥವಾ ಅದಕ್ಕೆ ಸಾಧ್ಯವಾದಷ್ಟು ಸಮೀಪವಿರುವ ಸಂಖ್ಯೆಯಿರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಗ್ರಾಹಕರು ತಮ್ಮ ಹೊಸ ಕಾರುಗಳ ವಿತರಣೆಯನ್ನು ಪಡೆಯುವ ಸಮಯದಲ್ಲಿ ಆ ಕಾರು ಹತ್ತಾರು ಕಿಲೋಮೀಟರ್ ಕ್ರಮಿಸಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣವೆಂದರೆ, ಡೀಲರ್‌ಶಿಪ್ ಸಿಬ್ಬಂದಿ ಆ ವಾಹನವನ್ನು ಸ್ಟಾಕ್‌ಯಾರ್ಡ್‌ನಿಂದ ಮಾರಾಟದ ಔಟ್‌ಲೆಟ್‌ಗೆ ಚಾಲನೆ ಮಾಡಿರುತ್ತಾರೆ.
ಟೊಯೋಟಾದ ಹೊಸ ಉಪಕ್ರಮ- ʼಅತ್ಯದ್ಭುತ ಹೊಸ ಕಾರುಗಳ ವಿತರಣಾ ಪರಿಹಾರʼ ಗ್ರಾಹಕರಿಗೆ ಅತ್ಯಂತ ಕಡಿಮೆ ಕಿಲೋಮೀಟರ್ ಕ್ರಮಿಸಿರುವ ಹೊಸ ಕಾರುಗಳನ್ನು ವಿತರಿಸುವುದನ್ನು ಖಾತರಿಪಡಿಸುತ್ತದೆ. ಈ ಉಪಕ್ರಮದಡಿ ಹೊಸ ವಾಹನಗಳನ್ನು ಫ್ಲಾಟ್‌ಬೆಡ್ ಟ್ರಕ್‌ಗಳ ಮೂಲಕ ಟೊಯೋಟಾದ ಮಾರಾಟ ಔಟ್‌ಲೆಟ್‌ಗಳಿಗೆ ರವಾನಿಸಲಾಗುತ್ತದೆ.
ಈ ವಿತರಣಾ ಉಪಕ್ರಮವು ವಾಹನಗಳ ಸುರಕ್ಷಿತ ರವಾನೆಯ ಭರವಸೆ ನೀಡುತ್ತದೆ. ಹೆಚ್ಚುವರಿಯಾಗಿ, ಸಾಗಣೆಯ ಸಮಯದಲ್ಲಿ ಸಂಭವಿಸಬಹುದಾದ ಯಾವುದೇ ಹಾನಿಗಳಿಗೆ ಈ ವಾಹನಗಳನ್ನು ವಿಮೆ ಮಾಡಲಾಗುತ್ತದೆ. ಟೊಯೊಟಾ ಪ್ರಕಾರ, ಈ ಹೊಸ ವಿತರಣಾ ಪ್ರಕ್ರಿಯೆಗೆ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ.
ಇವುಗಳನ್ನೂ ಓದಿ: ಹೊಸ ಕಾರು ಖರೀದಿಸಲು ಯೋಚಿಸುತ್ತಿರುವಿರಾ? ನಿಮ್ಮ ಹಳೆಯದನ್ನು ಗುಜರಿಗೆ ಹಾಕುವುದರಿಂದಾಗುವ ಎಲ್ಲಾ ಪ್ರಯೋಜನಗಳನ್ನು ಗಮನಿಸಿ
ದೊಡ್ಡ ಟ್ರಕ್‌ಗಳ ಮೂಲಕ ಸಾಗಣೆ ಮಾಡುವುದು ಸವಾಲಾಗಿರುವ ಗ್ರಾಮೀಣ ಮತ್ತು ಉಪ-ನಗರ ಪ್ರದೇಶಗಳಲ್ಲಿಯೂ ಈ ಹೊಸ ವಿತರಣಾ ಸೇವೆ ಲಭ್ಯವಿರಲಿದೆ. ಮೊದಲ ಹಂತದಲ್ಲಿ, ಭಾರತದ 26 ರಾಜ್ಯಗಳಲ್ಲಿ 130 ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಈ ವಿತರಣಾ ಸೇವೆಯನ್ನು ಒದಗಿಸಲಾಗುವುದು.
ಈ ಹೊಸ ವಿತರಣಾ ಉಪಕ್ರಮದ ಬಗ್ಗೆ ಕಾರು ತಯಾರಕರು ಏನು ಹೇಳುತ್ತಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ:
ಉದ್ಯಮದ ಪ್ರಪ್ರಥಮ ಪ್ರಯತ್ನವಾದ "ಹೊಸ ಕಾರು ವಿತರಣೆಯ ಅತ್ಯುದ್ಭುತ ಪರಿಹಾರ”ದೊಂದಿಗೆ ಗ್ರಾಹಕರ ಅನುಭವವನ್ನು ಮರುವ್ಯಾಖ್ಯಾನಿಸಲಿದೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
'ಗ್ರಾಹಕರು-ಮೊದಲು ಧೋರಣೆ' ಕುರಿತ ಬದ್ಧತೆಗೆ ಅನುಗುಣವಾಗಿ ಮತ್ತು ಮೌಲ್ಯವರ್ಧಿತ ಸೇವೆಗಳ ಮೂಲಕ ಅದ್ಭುತ ಖರೀದಿ ಅನುಭವವನ್ನು ಸೃಷ್ಟಿಸುತ್ತದೆ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ. (Toyota Kirloskar Motor/TKM) ಇಂದು ತನ್ನ "ಹೊಸ ಕಾರು ವಿತರಣೆಯ ಅತ್ಯದ್ಭುತ ಪರಿಹಾರ" ವನ್ನು ಪರಿಚಯಿಸುವುದಾಗಿ ಘೋಷಿಸಿತು. ಈ ಉಪಕ್ರಮವನ್ನು TKM ನ ಅಧಿಕೃತ ವಿತರಕರು ತಮ್ಮ ಮಾರಾಟ ಪ್ರಕ್ರಿಯೆಯ ಭಾಗವಾಗಿ ಜಾರಿಗೆ ತರಲಿದ್ದಾರೆ. ಹೊಸ ಉಪಕ್ರಮವು ವಾಹನದ ಲಾಜಿಸ್ಟಿಕ್ ಸೇವೆಗಳನ್ನು ವಿತರಣಾ ಟಚ್‌ಪಾಯಿಂಟ್‌ಗಳವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಇದರಿಂದ ಡೀಲರ್ ಸಿಬ್ಬಂದಿಗಳು ಹೊಸ ಕಾರುಗಳನ್ನು ವಿತರಣಾ ಸ್ಥಳಕ್ಕೆ ಚಾಲನೆ ಮಾಡುವುದು ತಪ್ಪುತ್ತದೆ. ಉದ್ಯಮದ ಮೊದಲ ಉಪಕ್ರಮವಾಗಿರುವ ಇದು ಟೊಯೋಟಾ ಡೀಲರ್‌ಗಳಿಗೆ ಹೊಸ ವಾಹನಗಳನ್ನು ಡೀಲರ್ ಸ್ಟಾಕ್‌ಯಾರ್ಡ್‌ಗಳಿಂದ ತಮ್ಮ ಮಾರಾಟ ಮಳಿಗೆಗಳಿಗೆ ಫ್ಲಾಟ್-ಬೆಡ್ ಟ್ರಕ್‌ನಲ್ಲಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಕೊನೆಯ ಹಂತದ ಲಾಜಿಸ್ಟಿಕ್ಸ್ ಸವಾಲುಗಳನ್ನು ಹೊಂದಿರುವ ಗ್ರಾಮೀಣ ಮತ್ತು ಉಪ-ನಗರ ಸ್ಥಳಗಳಲ್ಲಿಯೂ ಸಹ, ಹೊಸ ವಾಹನಗಳನ್ನು ರಸ್ತೆಯಲ್ಲಿ ಚಾಲನೆ ಮಾಡದೆಯೇ ಹೊಸ ವಾಹನಗಳು ಡೀಲರ್‌ಶಿಪ್‌ಗಳ ಅಂತಿಮ ವಿತರಣಾ ಮಳಿಗೆ ತಲುಪುವುದನ್ನು ಇದು ಖಾತರಿಪಡಿಸುತ್ತದೆ.
ಈ ಕಾರ್ಯಕ್ರಮದ ಮೊದಲ ಹಂತದ ಪ್ರಾರಂಭದೊಂದಿಗೆ, 130 ಡೀಲರ್‌ಶಿಪ್‌ಗಳನ್ನು ಹೊಂದಿರುವ 26 ರಾಜ್ಯಗಳ ಗ್ರಾಹಕರು ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಈ ವಿಶ್ವಾಸಾರ್ಹ ಮತ್ತು ಸಂತೋಷಕರ ಕಾರು ಖರೀದಿಯ ಅನುಭವವನ್ನು ಆನಂದಿಸಲಿದ್ದಾರೆ. ಇದರ ಪ್ರಮುಖ ಮುಖ್ಯಾಂಶಗಳು ಇವುಗಳನ್ನು ಒಳಗೊಂಡಿವೆ:
1. ಮನಸ್ಸಿಗೆ ಶಾಂತಿ ಮತ್ತು ಅದ್ಭುತ ವಿತರಣಾ ಅನುಭವ - ಎಲ್ಲಾ ಗ್ರಾಹಕ ವಿತರಣಾ ಟಚ್‌ಪಾಯಿಂಟ್‌ಗೆ ಸುರಕ್ಷಿತ ಸಾರಿಗೆ ಸೇವೆ
2. ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿಲ್ಲ
3. ಹೊಸ ಉದ್ಯಮ ಮಾನದಂಡವನ್ನು ಸೆಟ್ ಮಾಡುವುದು - ದೇಶಾದ್ಯಂತ ಗ್ರಾಹಕರಿಗೆ ಸ್ಥಿರವಾದ, ಪ್ರಮಾಣೀಕೃತ ಮತ್ತು ವಿಶ್ವಾಸಾರ್ಹ ಖರೀದಿ ಅನುಭವ ಒದಗಿಸುವುದು
4. ಅತ್ಯಂತ ಅನುಕೂಲಕಾರಿ ಮತ್ತು ಕಾಳಜಿ - ಸುರಕ್ಷಿತ ಸಾರಿಗೆಗಾಗಿ ಫ್ಲಾಟ್‌ಬೆಡ್ ವಾಹಕಗಳು, ಸಾರಿಗೆ ವಿಮೆಯಿಂದ ಬೆಂಬಲಿತವಾಗಿದೆ.
ಉಪಕ್ರಮದ ಕುರಿತು ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟರ್‌ನ ಮಾರಾಟ-ಸೇವೆ-ಬಳಕೆಯ ಕಾರು ವ್ಯಾಪಾರದ ಉಪಾಧ್ಯಕ್ಷರಾದ ಶ್ರೀ ಶಬರಿ ಮನೋಹರ್, "ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಲ್ಲಿ, ಗ್ರಾಹಕರ ಕುರಿತು ನಮ್ಮ ಬದ್ಧತೆ ಪ್ರಮುಖವಾಗಿದೆ. ನಾವು ನಿರಂತರವಾಗಿ ಹೊಸತನಕ್ಕೆ ಶ್ರಮಿಸುತ್ತೇವೆ ಮತ್ತು ಸೇವೆಯನ್ನು ಉತ್ಕೃಷ್ಟಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಗ್ರಾಹಕರ ಪ್ರಯಾಣದ ಅನುಭವವನ್ನು ಹೆಚ್ಚಿಸಲು " ಹೊಸ ಕಾರು ವಿತರಣೆಯ ಅತ್ಯದ್ಭುತ ಪರಿಹಾರ" ಉಪಕ್ರಮದ ಪರಿಚಯವು ಉತ್ತಮ ಹೆಜ್ಜೆಯಾಗಿದೆ. ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮನಸ್ಸಿನ ಶಾಂತಿಯನ್ನು ತರುವುದು ಮಾತ್ರವಲ್ಲದೆ ಸಾರಿಗೆ-ಸಂಬಂಧಿತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ಮೂಲಕ ಏಕರೂಪದ ಖರೀದಿಯ ಅನುಭವವನ್ನು ನೀಡುತ್ತದೆ. ನಮ್ಮ ವಿಶ್ವ ದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಲಭ್ಯತೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸುವ ಜೊತೆಗೆ, ಈ ಉಪಕ್ರಮವು ಈ ಉಪಕ್ರಮವು ವಿಶೇಷವಾಗಿ ದೊಡ್ಡ ಟ್ರಕ್‌ಗಳ ಚಲನೆಯು ಒಂದು ಸವಾಲಾಗಿ ಉಳಿದಿರುವ ಗ್ರಾಮೀಣ ಮತ್ತು ಉಪ-ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ. ಇದರಿಂದ ಹೊಸ ವಾಹನಗಳನ್ನು ವಿತರಕರ ಸ್ಟಾಕ್‌ನಿಂದ ನೇರವಾಗಿ ರಸ್ತೆಯ ಮೂಲಕ ವಿತರಣಾ ಸ್ಥಳಕ್ಕೆ ತಲುಪಿಸಲಾಗುತ್ತದೆ" ಎಂದರು.
"ಹೊಸ ಕಾರು ವಿತರಣೆಯ ಅತ್ಯದ್ಭುತ ಡೆಲಿವರಿ ಪರಿಹಾರ" ಉಪಕ್ರಮವು ಅಸಾಧಾರಣ ಅನುಭವಗಳನ್ನು ರೂಪಿಸುವುದು ಮತ್ತು ಸೃಜನಾತ್ಮಕ ಪರಿಹಾರಗಳನ್ನು ತರುವ ಮೂಲಕ ನಮ್ಮ ಗ್ರಾಹಕರಿಗೆ ವರ್ಧಿತ ಮೌಲ್ಯವನ್ನು ತಲುಪಿಸುತ್ತದೆ.
ಇದನ್ನು ಪರಿಶೀಲಿಸಿ:ಆಪ್‌ಡೇಟ್: ಟೊಯೋಟಾದಿಂದ ತನ್ನ ಡೀಸೆಲ್-ಚಾಲಿತ ಮೊಡೆಲ್‌ಗಳ ಉತ್ಪಾದನೆಯ ಪುನರಾರಂಭ
ಕಾರ್ಯಕ್ರಮದ ಭಾಗವಾಗಿ, ಡೀಲರ್‌ಶಿಪ್‌ಗಳು ಪರಿಣಿತ ಲಾಜಿಸ್ಟಿಕ್ ಕಂಪನಿಯೊಂದಿಗೆ ತಡೆರಹಿತ "ಹೊಸ ಕಾರು ವಿತರಣೆಯ ಅತ್ಯುದ್ಭುತ ಪರಿಹಾರ" ವನ್ನು ಕಾರ್ಯಗತಗೊಳಿಸಲು ಒಪ್ಪಂದ ಮಾಡಿಕೊಂಡಿವೆ. ಈ ನವೀನ ವಿಧಾನವು ಫ್ಲಾಟ್‌ಬೆಡ್ ಸಿಂಗಲ್ ಕಾರು ಕ್ಯಾರಿಯರ್‌ಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಹೊಸ ವಾಹನಗಳ ಸಾಗಣೆಗೆ ಸಂಬಂಧಿಸಿದ ಅಪಾಯಗಳನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ ಮತ್ತು ವಾಹನ ಸಾರಿಗೆ ಪ್ರಕ್ರಿಯೆಯ ಒಟ್ಟಾರೆ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಸಾರಿಗೆ ಸಮಯದಲ್ಲಿ ವಾಹನಗಳ ರಕ್ಷಣೆ ಖಾತರಿಪಡಿಸಲು ವಿಮಾ ಕಂಪನಿಗಳ ಮೂಲಕ ಸಾರಿಗೆ ವಿಮೆಯನ್ನು ಕೂಡ ಒದಗಿಸಲಾಗುತ್ತದೆ. ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಗ್ರಾಹಕರಿಗೆ ಹೊಸ ವಾಹನಗಳನ್ನು ತಲುಪಿಸುವಲ್ಲಿ ಈ ಹೆಚ್ಚುವರಿ ಕವರೇಜ್ ಪದರವು ಅತ್ಯಂತ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.
ಕಳೆದ ಹಲವು ವರ್ಷಗಳಲ್ಲಿ, ಹೊಸದಾಗಿ ಪರಿಚಯಿಸಲಾದ 5 ವರ್ಷಗಳ ಕಾಂಪ್ಲಿಮೆಂಟರಿ ರೋಡ್‌ಸೈಡ್ ಅಸಿಸ್ಟೆನ್ಸ್ ಪ್ರೋಗ್ರಾಂ ಮತ್ತು ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಲ್ಲಿಒಳಗೊಂಡಿರುವ ಮೌಲ್ಯವರ್ಧಿತ ಸೇವೆಗಳ ಮೂಲಕ ಸಮಯೋಚಿತ ಮತ್ತು ಸಂಬಂಧಿತ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಂಪೂರ್ಣ ಖರೀದಿ ಮತ್ತು ಮಾಲೀಕತ್ವದ ಚಕ್ರದಲ್ಲಿ ಗ್ರಾಹಕರ ಅನುಭವಗಳನ್ನು ಸುಧಾರಿಸಲು TKM ಶ್ರಮಿಸುತ್ತಿದೆ. ಈ ಮೂಲಕ ಜನರ ಟೊಯೊಟಾ ವಾಹನವನ್ನು ಹೊಂದುವ ಕನಸು ನಿಜವಾಗಿಸಲು ಮತ್ತು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸಂತೋಷದಾಯಕ ಮಾಲೀಕತ್ವದ ಅನುಭವವನ್ನು ಖಾತ್ರಿಪಡಿಸುತ್ತದೆ.
0 out of 0 found this helpful