2026ರ ಸುಮಾರಿಗೆ ಹೊಸ ಎಸ್‌ಯುವಿ ಹೊರತರಲಿರುವ ಟೊಯೊಟಾ; ಮಹೀಂದ್ರಾ ಎಕ್ಸ್‌ಯುವಿ700 ಕಾರಿಗೆ ಸ್ಪರ್ಧೆ ನೀಡುವ ಸಾಧ್ಯತೆ
ಸೆಪ್ಟೆಂಬರ್ 29, 2023 06:38 pm ರಂದು sonny ಮೂಲಕ ಪ್ರಕಟಿಸಲಾಗಿದೆ
- 51 Views
- ಕಾಮೆಂಟ್ ಅನ್ನು ಬರೆಯಿರಿ
ವರದಿಗಳ ಪ್ರಕಾರ, ಜಪಾನಿನ ಈ ಕಾರು ತಯಾರಕ ಸಂಸ್ಥೆಯು ಹೈರೈಡರ್ ಕಾಂಪ್ಯಾಕ್ಟ್ SUV ಮತ್ತು ಹೈಕ್ರಾಸ್ MPV ನಡುವಿನ ವಾಹನವನ್ನು ಭಾರತದಲ್ಲಿ ಹೊರತರುವ ಉದ್ದೇಶವನ್ನು ಹೊಂದಿದೆ
- ಇತ್ತೀಚಿನ ವರದಿಗಳು, ಟೊಯೊಟಾ ಸಂಸ್ಥೆಯು ಭಾರತದ ಅಭಿವೃದ್ಧಿ ಯೋಜನೆಗಳನ್ನು ಬಹಿರಂಗಪಡಿಸಿವೆ.
- ಇದರ ಪ್ರಕಾರ, ಈ ಕಾರು ತಯಾರಕ ಸಂಸ್ಥೆಯು ಇಲ್ಲಿ ಕಾರು ತಯಾರಿಸುವ ಮೂರನೇ ಘಟಕವನ್ನು ಸ್ಥಾಪಿಸುವ ಇರಾದೆಯನ್ನು ಹೊಂದಿದೆ.
- ಈ ಮಧ್ಯಮ ಗಾತ್ರದ ಹೊಸ SUV ಗೆ 340D ಎಂಬ ಸಾಂಕೇತಿಕ ಹೆಸರನ್ನು ನೀಡಲಾಗಿದೆ.
- ಟೊಯೊಟಾ ಸಂಸ್ಥೆಯು ಭಾರತದಲ್ಲಿ ಫೋರ್ಚುನರ್ ಮಾದರಿಯ ಮೇಲಿನ, ಆದರೆ ಲ್ಯಾಂಡ್ ಕ್ರೂಸರ್ ನ ಕೆಳಗಿನ ಮಟ್ಟದ ಐಷಾರಾಮಿ SUV ಯನ್ನು ಹೊರತರಲು ಯೋಜಿಸುತ್ತಿದೆ.
ಭಾರತದಲ್ಲಿ ಟೊಯೊಟಾ ಕಾರುಗಳ ಸಾಲು ಅನೇಕ ಪ್ರೀಮಿಯಂ ಮಾದರಿಗಳನ್ನು ಹೊಂದಿದ್ದರೂ, SUV ಬಾಡಿ ಪ್ರಕಾರ ಸೇರಿದಂತೆ ಅನೇಕ ವಿಭಾಗಗಳಲ್ಲಿ ಇನ್ನೂ ಸ್ಪರ್ಧಿಗಳನ್ನು ಹೊಂದಿಲ್ಲ. ರಾಯಿಟರ್ಸ್ ಸುದ್ದಿ ಸಂಸ್ಥೆಯ ಇತ್ತೀಚಿನ ವರದಿಗಳ ಪ್ರಕಾರ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಟೊಯೊಟಾ ಇನೋವಾ ಹೈಕ್ರಾಸ್ನಡುವಿನ ಅಂತರವನ್ನು ತುಂಬಿಸುವುದಕ್ಕಾಗಿ ಜಪಾನಿನ ಈ ಕಾರು ತಯಾರಕ ಸಂಸ್ಥೆಯು ಹೊಸ SUV ಯನ್ನು ಭಾರತದಲ್ಲಿ ಹೊರತರುವುದಕ್ಕಾಗಿ ಕೆಲಸಕ್ಕೆ ಇಳಿದಿದೆ.
ಇಲ್ಲಿಯತನಕ ನಮಗೇನು ತಿಳಿದಿದೆ?
ರಾಯಿಟರ್ಸ್ ಸುದ್ದಿಯಲ್ಲಿ ಉಲ್ಲೇಖಿಸಲಾದ ಟೊಯೊಟಾ ಮೂಲಗಳು ಅನಾಮಿಕರಾಗಿ ಉಳಿದಿದ್ದರೂ, ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ SUV ಗೆ 340D ಎಂಬ ಸಾಂಕೇತಿಕ ಹೆಸರನ್ನು ನೀಡಲಾಗಿದೆ ಎಂದು ತಿಳಿಸಿವೆ. ಹೈರೈಡರ್ ಕಾರು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಹೊಸ SUV ಯು ಭಾರತದ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಮಹೀಂದ್ರಾ XUV700, ಟಾಟಾ ಹ್ಯರಿಯರ್ ಮತ್ತು MG ಹೆಕ್ಟರ್ ಜೊತೆಗೆ ಸ್ಪರ್ಧಿಸುವ ನಿರೀಕ್ಷೆ ಇದೆ. ಈ SUV ಗಳು ರೂ. 15 ಲಕ್ಷದಿಂದ ರೂ. 25 ಲಕ್ಷದ ವರೆಗಿನ ಬೆಲೆಯಲ್ಲಿ (ಎಕ್ಸ್-ಶೋರೂಂ) ಲಭ್ಯ.
ವರದಿಯು ಬಹಿರಂಗಪಡಿಸಿರುವಂತೆ ಹೊಸ SUV ಯು 2026ರಲ್ಲಿ ರಸ್ತೆಗಿಳಿಯಲಿದ್ದು, ಬಲಭಾಗದ ವಾಹನ ಚಾಲನೆ ಹೊಂದಿರುವ ಮಾರುಕಟ್ಟೆಗಳಿಂದ ಭಾರತದಿಂದ ರಫ್ತು ಮಾಡುವ ಉದ್ದೇಶವನ್ನು ಸಹ ಇಟ್ಟುಕೊಳ್ಳಲಾಗಿದೆ. ಒಟ್ಟಾರೆಯಾಗಿ ವರ್ಷಕ್ಕೆ 60,000 ಕಾರುಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಇದನ್ನು ದೇಶದಲ್ಲಿ ಹೊಸದಾಗಿ ಸ್ಥಾಪಿಸಲಾಗುವ ಮೂರನೇ ಉತ್ಪಾದನಾ ಘಟಕದಲ್ಲಿ ತಯಾರಿಸುವ ಸಾಧ್ಯತೆ ಇದೆ. ಈ ಯೋಜನೆಯ ಕುರಿತು ಭಾರತದ ಟೊಯೊಟಾದ ಪ್ರತಿನಿಧಿಯಿಂದ ಯಾವುದೇ ಪ್ರತಿಕ್ರಿಯೆಗಳು ಲಭ್ಯವಾಗಿಲ್ಲ.
ಇನ್ನೊಂದು SUV ಹೊರತರುವ ಉದ್ದೇಶವೇನು?
ದೀರ್ಘ ಕಾಲದಿಂದ, ಉದ್ದನೆಯ ಬಾಡಿ ವಿಭಾಗದಲ್ಲಿ ಟೊಯೊಟಾ ಸಂಸ್ಥೆಯು ತನ್ನ ಜನಪ್ರಿಯ ಮಾದರಿಗಳಾದ ಇನೋವಾ MPV ಮತ್ತು ಫೋರ್ಚುನರ್ ಫುಲ್ ಸೈಜ್ SUV ಗೆ ತನ್ನನ್ನು ತಾನು ಸೀಮಿತಗೊಳಿಸಿದೆ. ಆದರೆ, ಮಾರುತಿ ಸುಝುಕಿ ಜೊತೆಗಿನ ಮಾದರಿಗಳನ್ನು ಹಂಚಿಕೊಳ್ಳುವ ಮೂಲಕ ಅತ್ಯಂತ ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಮಾದರಿಗಳ ವಿಭಾಗಕ್ಕೆ ಇದು ಕಾಲಿಟ್ಟಿತು. ಈ ಸಹಭಾಗಿತ್ವದಿಂದ ದೊರೆತ ಅತ್ಯಂತ ಇತ್ತೀಚಿನ ಯಶಸ್ಸು ಎಂದರೆ ಅರ್ಬನ್ ಕ್ರೂಸರ್ ಹೈರೈಡರ್. ಇದನ್ನು ಮಾರುತಿ ಗ್ರಾಂಡ್ ವಿಟಾರ ಎಂಬ ಹೆಸರಿನಿಂದಲೂ ಮಾರಲಾಗುತ್ತಿದ್ದು, ಎರಡೂ SUV ಗಳು AWD ಮತ್ತು ಪ್ರಬಲ ಹೈಬ್ರಿಡ್ ವೇರಿಯಂಟ್ ಗಳ ವಿಶಿಷ್ಟ ಆಯ್ಕೆಯನ್ನು ಒದಗಿಸುತ್ತಿವೆ.
ಸರ್ಕಾರವು ಡೀಸೆಲ್ ಎಂಜಿನುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ,ಟೊಯೊಟಾ ಸಂಸ್ಥೆಯು ಭಾರತೀಯ SUV ಮಾರುಕಟ್ಟೆಯಲ್ಲಿ, ಮುಖ್ಯವಾಗಿ ಪ್ರಬಲ ಹೈಬ್ರೀಡ್ ಪವರ್ ಟ್ರೇನ್ ಗಳಲ್ಲಿ ಸಾಕಷ್ಟು ಅವಕಾಶವನ್ನು ಎದುರು ನೋಡುತ್ತಿದೆ.
ಮಧ್ಯಮ ಗಾತ್ರದ SUV ಏಕೆ ಹೊರತರಲಾಗುತ್ತಿದೆ?
ಮಾರುತಿ ಸಂಸ್ಥೆಯು ಬ್ರೆಜ್ಜಾ ಮಾದರಿಯ ಮೂಲಕ ಸಬ್ ಕಾಂಪ್ಯಾಕ್ಟ್ SUV ಯಲ್ಲಿ ಪ್ರಾಬಲ್ಯವನ್ನು ಮೆರೆಯುತ್ತಿದ್ದರೂ, 2023 ಟಾಟಾ ನೆಕ್ಸನ್ ಮತ್ತು ಹ್ಯುಂಡೈ ವೆನ್ಯು ಕಾರುಗಳ ಸಾಕಷ್ಟು ಉನ್ನತ ತಂತ್ರಜ್ಞಾನವನ್ನು ಒದಗಿಸುತ್ತಿರುವುದರಿಂದ ಈ ವಿಭಾಗವು ಬೆಲೆ ಮತ್ತು ಗುಣವೈಶಿಷ್ಟ್ಯಗಳ ದೃಷ್ಟಿಯಿಂದ ವಿಪರೀತ ಸ್ಪರ್ಧೆಯನ್ನು ಕಾಣುತ್ತಿದೆ. ಹೀಗಾಗಿ ಅರ್ಬನ್ ಕ್ರೂಸರ್ ಕಾರನ್ನು ಮತ್ತೆ ರಸ್ತೆಗಿಳಿಸುವುದು ಟೊಯೊಟಾದ ಪಾಲಿಗೆ ಸೂಕ್ತ ಆಯ್ಕೆ ಎನಿಸದು. ಹೀಗಾಗಿ ದೊಡ್ಡ ಗಾತ್ರದ SUV ಗಳ ವಿಭಾಗದಲ್ಲಿ ತಾನು ಹೊಂದಿರುವ ಪರಿಣತಿಯನ್ನು ಬಳಸಿ, ಮಹೀಂದ್ರಾ XUV700 ಮತ್ತು ಟಾಟಾ ಹ್ಯರಿಯರ್ ಮಾದರಿಗಳು ಪ್ರಾಬಲ್ಯ ಮೆರೆಯುತ್ತಿರುವ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಗಮನ ಹರಿಸುವುದು ಟೊಯೊಟಾದ ಪಾಲಿಗೆ ಒಳ್ಳೆಯದು.
ಯಾವುದಾದರೂ ಇತರ SUV ಗಳು ರಸ್ತೆಗಿಳಿಯಲಿವೆಯೇ?
ರಾಯಿಟರ್ಸ್ ವರದಿಯ ಪ್ರಕಾರ, ಟೊಯೊಟಾ ಸಂಸ್ಥೆಯು ಲ್ಯಾಂಡ್ ಕ್ರೂಸರ್ ಲಕ್ಷುರಿ SUV ವಾಹನದ ಮಿನಿಯೇಚರ್ ಆವೃತ್ತಿಯನ್ನು ಹೊರತರುವ ಉದ್ದೇಶವನ್ನು ಹೊಂದಿದ್ದು, ಇದು ಟೊಯೊಟಾ ಫಾರ್ಚುನರ್ ಕಾರಿಗಿಂತ ಮೇಲಿನ ಮಟ್ಟದಲ್ಲಿ ಇರಲಿದೆ. ಈ ಯೋಜನೆಯು ಕಾರ್ಯಗತಗೊಂಡಲ್ಲಿ, ಸ್ಥಳೀಯವಾಗಿ ಈ ಕಾರನ್ನು ತಯಾರಿಸುವ ಇರಾದೆ ಇದ್ದು, ಲಕ್ಷುರಿ ವಿಭಾಗದ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಇದು ಹೊಂದಿರಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ XUV700 ಆನ್ ರೋಡ್ ಬೆಲೆ
0 out of 0 found this helpful