• English
  • Login / Register

Toyota Taisor India ಬಿಡುಗಡೆಗೆ ದಿನಾಂಕ ನಿಗದಿ, ಮಾರುತಿ ಫ್ರಾಂಕ್ಸ್ ಆಧಾರಿತ ಈ ಕ್ರಾಸ್ಒವರ್ ಇನ್ನೂ ಅನಾವರಣಗೊಂಡಿಲ್ಲ

ಮಾರ್ಚ್‌ 21, 2024 06:36 pm ರಂದು ansh ಮೂಲಕ ಪ್ರಕಟಿಸಲಾಗಿದೆ

  • 53 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿ ಫ್ರಾಂಕ್ಸ್ ಆಧಾರಿತ ಟೊಯೊಟಾ ಎಸ್‌ಯುವಿ ನ್ಯಾಚುರಲಿ ಎಸ್ಪಿರೇಟೆಡ್‌ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. 

Toyota Taisor Launch On April 3

ಉಲ್ಲೇಖಕ್ಕಾಗಿ ಮಾರುತಿ ಫ್ರಾಂಕ್ಸ್‌ನ ಚಿತ್ರ ಬಳಸಲಾಗಿದೆ

  • ಇದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ, ಆದರೆ ಫ್ರಾಂಕ್ಸ್‌ನಿಂದ ಭಿನ್ನತೆಗಾಗಿ ಮುಂಭಾಗದ ತುದಿಯಲ್ಲಿ ವಿನ್ಯಾಸ ಬದಲಾವಣೆಗಳನ್ನು ನಾವು ನಿರೀಕ್ಷಿಸುತ್ತೇವೆ. 
  • ವೈಶಿಷ್ಟ್ಯಗಳು 9-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.
  • ಇದು ಭಾರತದಲ್ಲಿ ಮಾರಾಟವಾಗುವ ಟೊಯೋಟಾ ಮತ್ತು ಮಾರುತಿ ಸುಜುಕಿ ನಡುವಿನ 6 ನೇ ಶೇರ್‌ಡ್‌ ಪ್ರಾಡಕ್ಟ್‌ ಆಗಿದೆ.
  • ಇದರ ಎಕ್ಸ್ ಶೋ ರೂಂ ಬೆಲೆಯು 8 ಲಕ್ಷ ರೂ.ನಿಂದ 13 ಲಕ್ಷ ರೂ.ವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ.

 ಮಾರುತಿ ಫ್ರಾಂಕ್ಸ್ ಆಧಾರಿತ ಕ್ರಾಸ್‌ಒವರ್ ಎಸ್‌ಯುವಿಯಾದ ಟೊಯೊಟಾ ಟೈಸರ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧವಾಗಿದ್ದು,  ಏಪ್ರಿಲ್ 3 ರಂದು ಬಿಡುಗಡೆ ಮಾಡಲಾಗುವುದು ಎಂದು ಜಪಾನಿನ ಕಾರು ತಯಾರಕರು ಖಚಿತಪಡಿಸಿದ್ದಾರೆ. ಫ್ರಾಂಕ್ಸ್‌ನ ಮರುಬ್ಯಾಡ್ಜ್ ಮಾಡಲಾದ ಈ ಆವೃತ್ತಿಯು ಅದೇ ಎಂಜಿನ್ ಆಯ್ಕೆಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಆದರೆ ಅದನ್ನು ಫ್ರಾಂಕ್ಸ್‌ನಿಂದ ಭಿನ್ನವಾಗಿ ಕಾಣಲು ಸ್ವಲ್ಪ ವಿಭಿನ್ನ ವಿನ್ಯಾಸದೊಂದಿಗೆ ಬರುತ್ತದೆ. ಇದು ಯಾವುದೆಲ್ಲಾ ಆಫರ್‌ಗಳನ್ನು ಕೊಡುಗೆಯಾಗಿ ನೀಡುತ್ತದೆ ಎಂಬುವುದು ಇಲ್ಲಿವೆ.

ಪವರ್‌ಟ್ರೇನ್‌ಗಳು

Maruti Fronx Engine

ಉಲ್ಲೇಖಕ್ಕಾಗಿ ಮಾರುತಿ ಫ್ರಾಂಕ್ಸ್‌ನ ಎಂಜಿನ್‌ನ ಚಿತ್ರಗಳನ್ನು ಬಳಸಲಾಗಿದೆ

ಇತರ ಮಾರುತಿ-ಟೊಯೊಟಾ ಸಹಭಾಗಿತ್ವದ ಪ್ರಾಡಕ್ಟ್‌ಗಳಂತೆ, ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಫ್ರಾಂಕ್ಸ್‌ನಂತೆಯೇ ಇರುತ್ತವೆ. ಟೈಸರ್ 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ (90 PS/113 Nm) ಅನ್ನು ಪಡೆಯುತ್ತದೆ, ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಯೊಂದಿಗೆ ಜೋಡಿಯಾಗಲಿದೆ. ಇದು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100 PS/148 Nm) ನೊಂದಿಗೆ ಸಹ ಬರಲಿದೆ, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತದೆ. ಇದು ಭಾರತದಲ್ಲಿ ಮೊದಲ ಟೊಯೋಟಾ ಸಂಸ್ಥೆಯ ಮಾಸ್‌-ಮಾರ್ಕೆಟ್‌ ಟರ್ಬೊ-ಪೆಟ್ರೋಲ್ ಕೊಡುಗೆಯಾಗಿರಬಹುದು.

ಇದನ್ನೂ ಓದಿ:  Tata Curvv: ಕಾಯಲು ಯೋಗ್ಯವಾಗಿದೆಯೇ ಅಥವಾ ನೀವು ಅದರ ಪ್ರತಿಸ್ಪರ್ಧಿಗಳಲ್ಲಿ ಒಂದನ್ನು ಆರಿಸಬೇಕೇ? 

ಫ್ರಾಂಕ್ಸ್ ತನ್ನ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಪವರ್‌ಟ್ರೇನ್‌ನ ಆಯ್ಕೆಯೊಂದಿಗೆ ಬರುತ್ತದೆ ಮತ್ತು ಟೊಯೋಟಾ ಸಹ ಅದನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ, ಬಿಡುಗಡೆ ಸಮಯದಲ್ಲಿ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ನೀಡುವ ಸಾಧ್ಯತೆ ಬಹಳ ಕಡಿಮೆ. ಟೊಯೋಟಾ ಭವಿಷ್ಯದಲ್ಲಿ ಈ ಪವರ್‌ಟ್ರೇನ್ ಅನ್ನು ಸೇರಿಸಬಹುದು.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

Maruti Fronx Cabin

ಉಲ್ಲೇಖಕ್ಕಾಗಿ ಮಾರುತಿ ಫ್ರಾಂಕ್ಸ್‌ನ ಕ್ಯಾಬಿನ್‌ನ ಚಿತ್ರ ಬಳಸಲಾಗಿದೆ

ಇಲ್ಲಿಯೂ ಸಹ, ನೀವು ಫ್ರಾಂಕ್ಸ್‌ನಲ್ಲಿ ಪಡೆಯುವ ಎಲ್ಲವನ್ನೂ ಟೈಸರ್ ಸಹ ನೀಡಬಹುದು. ಇದರ ವೈಶಿಷ್ಟ್ಯಗಳ ಪಟ್ಟಿಯು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹೆಡ್ಸ್-ಅಪ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಫೋರ್ಡ್ ಎಂಡೀವರ್ Vs ಟೊಯೋಟಾ ಫಾರ್ಚೂನರ್: ವಿಶೇಷಣಗಳ ಹೋಲಿಕೆ

ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡುತ್ತದೆ. ಆದಾಗಿಯೂ, ಕ್ಯಾಬಿನ್ ಅನ್ನು ಬ್ಯಾಡ್ಜ್‌ಗಳಿಂದ ಮಾತ್ರವಲ್ಲ, ಬಣ್ಣದ ಸ್ಕೀಮ್‌ನ ದೃಷ್ಟಿಯಿಂದಲೂ ಪ್ರತ್ಯೇಕಿಸಬಹುದು. ಮಾರುತಿ ಮೊಡೆಲ್‌ಗಳಲ್ಲಿ ಕಂಡುಬರುವ ಕಪ್ಪು ಮತ್ತು ಬರ್ಗಂಡಿಗೆ ಹೋಲಿಸಿದರೆ ಟೊಯೊಟಾ ಆವೃತ್ತಿಯು ಹಗುರವಾದ ಒಳಾಂಗಣವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Maruti Fronx

ಉಲ್ಲೇಖಕ್ಕಾಗಿ ಮಾರುತಿ ಫ್ರಾಂಕ್ಸ್‌ನ ಚಿತ್ರ ಬಳಸಲಾಗಿದೆ

ಮಾರುತಿ ಫ್ರಾಂಕ್ಸ್‌ನ ಬೆಲೆಯನ್ನು ಗಮನಿಸಿದರೆ, ಟೊಯೊಟಾ ಟೈಸರ್‌ನ ಎಕ್ಸ್‌ಶೋರೂಮ್‌ ಬೆಲೆ 8 ಲಕ್ಷ  ರೂ.ನಿಂದ 13 ಲಕ್ಷ ರೂ.ವರೆಗೆ ಇರಬಹುದೆಂದು ನಿರೀಕ್ಷಿಸಬಹುದು. ಇದರ ಆವೃತ್ತಿಗಳು ತಮ್ಮ ಮಾರುತಿ-ಬ್ಯಾಡ್ಜ್ ಪ್ರತಿರೂಪಗಳಿಗಿಂತ ಸ್ವಲ್ಪ ಬೆಲೆ ಏರಿಕೆಯನ್ನು ಪಡೆಯಬಹುದು. ಟೊಯೋಟಾ ಪ್ರಸ್ತುತ ಸಬ್‌-4ಎಮ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸ್ಪರ್ಧಿಸುತ್ತಿಲ್ಲವಾದ್ದರಿಂದ, ಈ ಕ್ರಾಸ್ಒವರ್ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್‌ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಗೆ ಪ್ರತಿಸ್ಪರ್ಧಿಯಾಗಲಿದೆ.

ಇದರ ಬಗ್ಗೆ ಹೆಚ್ಚು ಓದಿ: ಮಾರುತಿ ಫ್ರಾಂಕ್ಸ್ ಎಎಂಟಿ 

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience