2025ರ ಆಟೋ ಎಕ್ಸ್‌ಪೋ ಮೂಲಕ VinFast ಭಾರತಕ್ಕೆ ಬರುವುದು ಫಿಕ್ಸ್, VF7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್ ಔಟ್
vinfast vf7 ಗಾಗಿ rohit ಮೂಲಕ ಜನವರಿ 16, 2025 01:03 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ವಿನ್‌ಫಾಸ್ಟ್ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿ 5 ಆಸನಗಳ ಕಾರು ಆಗಿದ್ದು, ಇದು ನಮ್ಮ ಮಾರುಕಟ್ಟೆಗೆ ಕಾರು ತಯಾರಕರಿಂದ ಬಂದ ಮೊದಲ ಇವಿ ಆಗಿರಬಹುದು ಮತ್ತು ಸಂಪೂರ್ಣವಾಗಿ ನಿರ್ಮಿಸಲಾದ ಕಾರು (ಸಿಬಿಯು) ಆಗಿ ಬರುವ ನಿರೀಕ್ಷೆಯಿದೆ
ವಿಯೆಟ್ನಾಂನ ಇವಿ ತಯಾರಕರಾದ VinFast ನ ಮೊದಲ ಆಪ್‌ಡೇಟ್ ನಮಗೆ 2023ರ ಅಕ್ಟೋಬರ್‌ನಲ್ಲಿ ಸಿಕ್ಕಿತು, ಅದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಯೋಜಿಸುತ್ತಿತ್ತು. ಪರಿಣಾಮವಾಗಿ, ಕಾರು ತಯಾರಕರು ಭಾರತಕ್ಕೆ ತನ್ನ ಪ್ರವೇಶವನ್ನು ದೃಢಪಡಿಸಿದರು ಮತ್ತು ತಮಿಳುನಾಡಿನಲ್ಲಿ ತನ್ನ ಇವಿ ಉತ್ಪಾದನಾ ಘಟಕದ ನಿರ್ಮಾಣವನ್ನು ಪ್ರಾರಂಭಿಸಿದರು. ವಿನ್‌ಫಾಸ್ಟ್ ಈಗ ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದೆ ಮತ್ತು ನಮ್ಮ ಮಾರುಕಟ್ಟೆಗಾಗಿ VF7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್‌ನ ಬಿಡುಗಡೆ ಮಾಡಿದೆ.
ವಿನ್‌ಫಾಸ್ಟ್‌ನ ಒಂದು ಅವಲೋಕನ
ವಿಯೆಟ್ನಾಂನ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯಾದ ವಿನ್‌ಫಾಸ್ಟ್, ಆಟೋ ಉದ್ಯಮದಲ್ಲಿ ಹೊಸಮುಖವಾಗಿದೆ. 2017ರಲ್ಲಿ ಕಾರ್ಯಾಚರಣೆ ಆರಂಭಿಸಿದ ಇದು, ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದ ವಿಯೆಟ್ನಾಂನ ಏಕೈಕ ಬ್ರಾಂಡ್ ಆಗಿದೆ. 2021ರಲ್ಲಿ, ವಿನ್‌ಫಾಸ್ಟ್ ವಿಯೆಟ್ನಾಂನಲ್ಲಿ ಮೂರು ಎಲೆಕ್ಟ್ರಿಕ್ ಕಾರುಗಳು, ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಒಂದು ಎಲೆಕ್ಟ್ರಿಕ್ ಬಸ್ ಅನ್ನು ಬಿಡುಗಡೆ ಮಾಡಿತ್ತು. ಮೂರು ಕಾರುಗಳಲ್ಲಿ, ಎರಡು ಜಾಗತಿಕ ಮಾರುಕಟ್ಟೆಗಳನ್ನು ಕೇಂದ್ರಿಕೃತವಾಗಿತ್ತು ಮತ್ತು 2022ರಲ್ಲಿ ಈ ಬ್ರ್ಯಾಂಡ್ ತನ್ನ ಶೋರೂಮ್‌ಗಳನ್ನು ಯುಎಸ್, ಯುರೋಪ್ ಮತ್ತು ಕೆನಡಾದಲ್ಲಿ ಸ್ಥಾಪಿಸಿತು.
ಏನಿದು ವಿಎಫ್7?
VF7 5 ಸೀಟರ್‌ನ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, 4,545 ಮಿ.ಮೀ. ಅಳತೆ ಮತ್ತು 2,840 ಮಿ.ಮೀ. ವ್ಹೀಲ್‌ಬೇಸ್ ಹೊಂದಿದೆ. ಇದರ ಟೀಸರ್ ಅನ್ನು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಇದರ ವಿಶೇಷಣಗಳು ಮಹೀಂದ್ರಾ XEV 9e ಮತ್ತು ಹುಂಡೈ ಐಯೋನಿಕ್ 5 ಗಳಿಗೆ ಸಮನಾಗಿದೆ. ಬ್ರ್ಯಾಂಡ್ ಭಾರತಕ್ಕೆ ಪ್ರವೇಶಿಸಿದ ನಂತರ VF7 ಅನ್ನು ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಿಸಿ ಭಾರತಕ್ಕೆ ತರಬಹುದು ಮತ್ತು ನಂತರ, ಮೊಡೆಲ್‌ಗಳನ್ನು ಸ್ಥಳೀಯವಾಗಿ ಜೋಡಿಸಬಹುದು.
ಇದು 75.3 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, WLTP ಕ್ಲೈಮ್ ಮಾಡಿದ 450 ಕಿ.ಮೀ ರೇಂಜ್ ಅನ್ನು ಹೊಂದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ಇದು ಸಿಂಗಲ್ (204 ಪಿಎಸ್/310 ಎನ್‌ಎಮ್) ಮತ್ತು ೧ಡ್ಯುಯಲ್ ಮೋಟಾರ್ (354 ಪಿಎಸ್/500 ಎನ್‌ಎಮ್) ಎರಡರಲ್ಲೂ ಲಭ್ಯವಿದೆ. ಮೊದಲನೆಯದನ್ನು ಫ್ರಂಟ್-ವೀಲ್-ಡ್ರೈವ್ (FWD) ಆಯ್ಕೆಯೊಂದಿಗೆ ನೀಡಲಾಗಿದ್ದರೆ, ಎರಡನೆಯದು ಆಲ್-ವೀಲ್ ಡ್ರೈವ್‌ಟ್ರೇನ್ (AWD) ಅನ್ನು ಪಡೆಯುತ್ತದೆ.
ಇದನ್ನೂ ಓದಿ: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ನಲ್ಲಿ ಭಾರತದಕ್ಕೆ ಪಾದಾರ್ಪಣೆ ಮಾಡಲಿರುವ BYD ಸೀಲಿಯನ್ 7
VinFast VF7 ಫೀಚರ್‌ಗಳು ಮತ್ತು ಸುರಕ್ಷತೆ
ವಿನ್‌ಫಾಸ್ಟ್ VF7 ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಪನೋರಮಿಕ್ ಸನ್‌ರೂಫ್, 12.9-ಇಂಚಿನ ಟಚ್‌ಸ್ಕ್ರೀನ್, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲಾಜಿಯನ್ನು ಅಳವಡಿಸಿದೆ. ಎಂಟು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸಹ ಕಾರಿನಲ್ಲಿರುವ ಪ್ರಮುಖ ಸುರಕ್ಷತಾ ಫೀಚರ್‌ಗಳಾಗಿವೆ.
VinFast VF7 ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ವಿನ್‌ಫಾಸ್ಟ್ ವಿಎಫ್7 ಕಾರಿನ ಬೆಲೆ 50 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಮಹೀಂದ್ರಾ XEV 9e, BYD ಸೀಲಿಯನ್ 7, ಹುಂಡೈ ಅಯೋನಿಕ್ 5, ಮತ್ತು ಕಿಯಾ EV6 ಗೆ ಪರ್ಯಾಯವಾಗಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ