• English
  • Login / Register

2025ರ ಆಟೋ ಎಕ್ಸ್‌ಪೋದಲ್ಲಿ VinFastನಿಂದ ಹಲವುಎಲೆಕ್ಟ್ರಿಕ್ ವಾಹನಗಳನ್ನು ಅನಾವರಣ

vinfast vf3 ಗಾಗಿ rohit ಮೂಲಕ ಜನವರಿ 17, 2025 01:06 pm ರಂದು ಪ್ರಕಟಿಸಲಾಗಿದೆ

  • 16 Views
  • ಕಾಮೆಂಟ್‌ ಅನ್ನು ಬರೆಯಿರಿ

ವಿಯೆಟ್ನಾಮೀಸ್ ಇವಿ ತಯಾರಕರು 3-ಡೋರ್‌ನ ವಿಎಫ್ 3 ಎಸ್‌ಯುವಿ ಮತ್ತು ವಿಎಫ್ ವೈಲ್ಡ್ ಪಿಕಪ್ ಟ್ರಕ್ ಪರಿಕಲ್ಪನೆ ಸೇರಿದಂತೆ ಹಲವಾರು ಇಲೆಕ್ಟ್ರಿಕ್‌ ವಾಹನಗಳನ್ನು ಪ್ರದರ್ಶಿಸಲಿದ್ದಾರೆ

VinFast lineup confirmed for Bharat Mobility Global Expo 2025

ಇತ್ತೀಚೆಗೆ ವಿನ್‌ಫಾಸ್ಟ್ ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ತನ್ನ ಪ್ರಥಮ ಪ್ರವೇಶವನ್ನು ದೃಢಪಡಿಸಿತು. ವಿಯೆಟ್ನಾಂನ ಈ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯು ಈಗ ಆಟೋ ಶೋನಲ್ಲಿ ಸಣ್ಣ VF3 ಮತ್ತು VF9 ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸುವುದಾಗಿ ಘೋಷಿಸಿದೆ. ಆನ್‌ಲೈನ್ ಟೀಸರ್‌ಗಳಲ್ಲಿ ಸೂಚಿಸಿದಂತೆ VF7 ಅದರ ಪಟ್ಟಿಯಲ್ಲಿ ಇರುವುದನ್ನು ನಾವು ನಿರೀಕ್ಷಿಸುತ್ತೇವೆ. ಪ್ರತಿಯೊಂದು ಮೊಡೆಲ್‌ನ ಪ್ರಮುಖ ವಿವರಗಳನ್ನು ಪರಿಶೀಲಿಸೋಣ:

ವಿನ್‌ಫಾಸ್ಟ್ ವಿಎಫ್3

VinFast VF3

VF3 ಒಂದು ಸಣ್ಣ 3-ಬಾಗಿಲಿನ ಎಸ್‌ಯುವಿ ಆಗಿದ್ದು, 3,190 ಮಿ.ಮೀ. ಉದ್ದ, 2,075 ಮಿ.ಮೀ ವೀಲ್‌ಬೇಸ್ ಮತ್ತು 191 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದು 18.64 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಹೊಂದಿದ್ದು, 215 ಕಿಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಿಂಗಲ್ ರಿಯರ್ ಆಕ್ಸಲ್-ಮೌಂಟೆಡ್ 43.5 ಪಿಎಸ್‌/110 ಎನ್‌ಎಮ್‌ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತದೆ. ಇದನ್ನು 36 ನಿಮಿಷಗಳಲ್ಲಿ ಶೇಕಡಾ 10 ರಿಂದ 70 ರಷ್ಟು ವೇಗವಾಗಿ ಚಾರ್ಜ್ ಮಾಡಬಹುದು.

ವಿನ್‌ಫಾಸ್ಟ್ ವಿಎಫ್9

VinFast VF9

ವಿನ್‌ಫಾಸ್ಟ್ ಆಟೋ ಈವೆಂಟ್‌ಗೆ ದೊಡ್ಡ 7 ಸೀಟರ್‌ನ VF9 SUV ಯನ್ನು ತರುವುದಾಗಿ ಬಹಿರಂಗಪಡಿಸಿದೆ. ಇದು 5.1 ಮೀಟರ್‌ಗಳಿಗಿಂತ ಹೆಚ್ಚು ಉದ್ದ, 3.1 ಮೀಟರ್‌ಗಳಿಗಿಂತ ಹೆಚ್ಚು ವೀಲ್‌ಬೇಸ್ ಮತ್ತು 183.5 ಮಿಮೀ ವರೆಗಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದು 123 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಮತ್ತು ಇದು 531 ಕಿಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. 408 ಪಿಎಸ್‌ ಮತ್ತು 620 ಎನ್‌ಎಮ್‌ (ಸಂಯೋಜಿತ) ಉತ್ಪಾದಿಸುವ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ನಾವು ಧನ್ಯವಾದ ಹೇಳಲೇಬೇಕು, ವಿನ್‌ಫಾಸ್ಟ್ ಇದಕ್ಕೆ ಆಲ್-ವೀಲ್-ಡ್ರೈವ್ (AWD) ಸೆಟಪ್ ಅನ್ನು ಒದಗಿಸಿದೆ. ಇದರ ಬ್ಯಾಟರಿಯನ್ನು DC ಫಾಸ್ಟ್ ಚಾರ್ಜರ್ ಬಳಸಿ 35 ನಿಮಿಷಗಳಲ್ಲಿ ಶೇಕಡಾ 10 ರಿಂದ 70 ರಷ್ಟು ಚಾರ್ಜ್ ಮಾಡಬಹುದು.

ಇದನ್ನೂ ಓದಿ: 2025ರ ಆಟೋ ಎಕ್ಸ್‌ಪೋ ಮೂಲಕ VinFast ಭಾರತಕ್ಕೆ ಬರುವುದು ಫಿಕ್ಸ್‌, VF7 ಎಲೆಕ್ಟ್ರಿಕ್ ಎಸ್‌ಯುವಿಯ ಟೀಸರ್‌ ಔಟ್‌

ವಿನ್‌ಫಾಸ್ಟ್ ವಿಎಫ್ ವೈಲ್ಡ್

VinFast VF Wild pickup truck

ವಿನ್‌ಫಾಸ್ಟ್ ಪ್ರದರ್ಶಿಸುವುದಾಗಿ ದೃಢಪಡಿಸಿದ ಮತ್ತೊಂದು ಮೊಡೆಲ್‌ ಎಂದರೆ 2024 ರ ಮೊದಲಾರ್ಧದಲ್ಲಿ ಯುಎಸ್ ಮಾರುಕಟ್ಟೆಗೆ ಅನಾವರಣಗೊಂಡ ವಿಎಫ್ ವೈಲ್ಡ್. ಎಲೆಕ್ಟ್ರಿಕ್ ಪಿಕಪ್ ಟ್ರಕ್ ಪರಿಕಲ್ಪನೆಯು 5.3 ಮೀಟರ್‌ಗಳಿಗಿಂತ ಹೆಚ್ಚು ಉದ್ದ ಮತ್ತು 1,997 ಮಿಮೀ ಅಗಲವನ್ನು ಹೊಂದಿದೆ. ಇದರ ಹಿಂಬದಿಯ ಸೀಟುಗಳನ್ನು ಆಟೋಮ್ಯಾಟಿಕ್‌ ಆಗಿ ಮಡಚಿದರೆ ಬೆಡ್‌ಅನ್ನು(ಪೇಲೋಡ್ ಬೇ) ಐದರಿಂದ ಎಂಟು ಅಡಿಗಳವರೆಗೆ ವಿಸ್ತರಿಸಬಹುದು. ಇದು ಒಂದು ಪರಿಕಲ್ಪನೆಯಾಗಿರುವುದರಿಂದ, ಅದರ ಅಂತಿಮ ಉತ್ಪಾದನಾ-ವಿಶೇಷ ವಿವರಗಳನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ. ಈ ಪರಿಕಲ್ಪನೆಯು ಸ್ಥಿರವಾದ ಪನೋರಮಿಕ್ ಗ್ಲಾಸ್‌ ರೂಫ್‌ ಮತ್ತು ಡಿಜಿಟಲ್ ORVM ಗಳನ್ನು ಒಳಗೊಂಡಿದೆ.

ವಿನ್‌ಫಾಸ್ಟ್ ವಿಎಫ್7

VinFast VF7

2025 ರ ಆಟೋ ಎಕ್ಸ್‌ಪೋದಲ್ಲಿ ವಿನ್‌ಫಾಸ್ಟ್‌ನ ಪಟ್ಟಿಯಲ್ಲಿ VF7 ಎಸ್‌ಯುವಿ ಇರುವುದನ್ನು ನಾವು ನಿರೀಕ್ಷಿಸುತ್ತೇವೆ. ಇದು 5 ಸೀಟ್‌ನ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, 4,545 ಮಿ.ಮೀ. ಅಳತೆ ಮತ್ತು 2,840 ಮಿಮೀ ವೀಲ್‌ಬೇಸ್ ಹೊಂದಿದೆ. ಇದು 59.6 ಕಿ.ವ್ಯಾಟ್‌ ಮತ್ತು 75.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದ್ದು, 498 ಕಿ.ಮೀ.ವರೆಗಿನ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ. ಜಾಗತಿಕವಾಗಿ, ಇದನ್ನು ಫ್ರಂಟ್-ವೀಲ್-ಡ್ರೈವ್ (FWD) ಮತ್ತು ಆಲ್-ವೀಲ್-ಡ್ರೈವ್ (AWD) ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ವಿನ್‌ಫಾಸ್ಟ್ ಬಗ್ಗೆ ಸಂಕ್ಷಿಪ್ತ ಮಾಹಿತಿ

ವಿಯೆಟ್ನಾಂನ ಎಲೆಕ್ಟ್ರಿಕ್‌ ವಾಹನ ತಯಾರಕ ಸಂಸ್ಥೆಯಾದ ವಿನ್‌ಫಾಸ್ಟ್, ಆಟೋ ಉದ್ಯಮದಲ್ಲಿ ಹೊಸಮುಖವಾಗಿದೆ. 2017ರಲ್ಲಿ ಕಾರ್ಯಾಚರಣೆ ಆರಂಭಿಸಿದ ಇದು, ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದ ವಿಯೆಟ್ನಾಂನ ಏಕೈಕ ಬ್ರಾಂಡ್ ಆಗಿದೆ. 2021ರಲ್ಲಿ, ವಿನ್‌ಫಾಸ್ಟ್ ವಿಯೆಟ್ನಾಂನಲ್ಲಿ ಮೂರು ಎಲೆಕ್ಟ್ರಿಕ್ ಕಾರುಗಳು, ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಒಂದು ಎಲೆಕ್ಟ್ರಿಕ್ ಬಸ್ ಅನ್ನು ಬಿಡುಗಡೆ ಮಾಡಿತ್ತು. ಮೂರು ಕಾರುಗಳಲ್ಲಿ, ಎರಡು ಜಾಗತಿಕ ಮಾರುಕಟ್ಟೆಗಳನ್ನು ಕೇಂದ್ರಿಕೃತವಾಗಿತ್ತು ಮತ್ತು 2022ರಲ್ಲಿ ಈ ಬ್ರ್ಯಾಂಡ್ ತನ್ನ ಶೋರೂಮ್‌ಗಳನ್ನು ಯುಎಸ್, ಯುರೋಪ್ ಮತ್ತು ಕೆನಡಾದಲ್ಲಿ ಸ್ಥಾಪಿಸಿತು. 2024 ರಲ್ಲಿ, ಕಾರು ತಯಾರಕ ಕಂಪನಿಯು ಭಾರತಕ್ಕೆ ತನ್ನ ಪ್ರವೇಶವನ್ನು ದೃಢಪಡಿಸಿತು ಮತ್ತು ತಮಿಳುನಾಡಿನಲ್ಲಿ ತನ್ನ ಇವಿ ಉತ್ಪಾದನಾ ಘಟಕದ ನಿರ್ಮಾಣವನ್ನು ಪ್ರಾರಂಭಿಸಿತು.

ಅದು ಘೋಷಿಸಿರುವ ಲೈನ್ಅಪ್‌ಗಳನ್ನು ಗಮನಿಸುವಾಗ, ವಿಯೆಟ್ನಾಂ EV ತಯಾರಕರು ನಮ್ಮ ಮಾರುಕಟ್ಟೆಗೆ ದೊಡ್ಡ ಯೋಜನೆಗಳನ್ನು ಹೊಂದಿರಬಹುದು ಎಂದು ತೋರುತ್ತಿದೆ. ವಿನ್‌ಫಾಸ್ಟ್ ಭಾರತಕ್ಕೆ ಪ್ರವೇಶಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

 

was this article helpful ?

Write your Comment on VinFast vf3

explore similar ಕಾರುಗಳು

  • vinfast vf3

    Rs.10 Lakh* Estimated Price
    ಜನವರಿ 18, 2025 Expected Launch
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • vinfast vf9

    Rs.65 Lakh* Estimated Price
    ಜನವರಿ 18, 2025 Expected Launch
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • vinfast vf7

    Rs.50 Lakh* Estimated Price
    ಜನವರಿ 18, 2025 Expected Launch
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ವೇವ್ ಮೊಬಿಲಿಟಿ eva
    ವೇವ್ ಮೊಬಿಲಿಟಿ eva
    Rs.7 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • vinfast vf7
    vinfast vf7
    Rs.50 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • ಸ್ಕೋಡಾ elroq
    ಸ್ಕೋಡಾ elroq
    Rs.50 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • vinfast vf3
    vinfast vf3
    Rs.10 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
  • vinfast vf9
    vinfast vf9
    Rs.65 ಲಕ್ಷಅಂದಾಜು ದಾರ
    ಜನವ, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience