Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ VinFast VF e34 ನ ಟೆಸ್ಟಿಂಗ್‌ ಶುರು, ಇದು ಹ್ಯುಂಡೈ ಕ್ರೆಟಾ EV ಪ್ರತಿಸ್ಪರ್ಧಿಯಾಗಬಹುದೇ?

ಜುಲೈ 01, 2024 07:00 pm ರಂದು samarth ಮೂಲಕ ಪ್ರಕಟಿಸಲಾಗಿದೆ
51 Views

ಸ್ಪೈ ಶಾಟ್‌ಗಳು ಎಲೆಕ್ಟ್ರಿಕ್ ಎಸ್‌ಯುವಿಯ ಹೊರಭಾಗದ ವಿವರಗಳನ್ನು ಬಹಿರಂಗಪಡಿಸುತ್ತವೆ, ಅದರ ಎಲ್‌ಇಡಿ ಲೈಟಿಂಗ್ ಸೆಟಪ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಪ್ರದರ್ಶಿಸುತ್ತವೆ

  • VinFast ಬ್ರ್ಯಾಂಡ್ 2025ರಲ್ಲಿ ತನ್ನ ಭಾರತಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.
  • ಅಂತರಾಷ್ಟ್ರೀಯವಾಗಿ, ಇದು 10-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 7-ಇಂಚಿನ ಹಿಂಬದಿಯ ಸ್ಕ್ರೀನ್‌ ಮತ್ತು ಆಟೋ ಎಸಿಯನ್ನು ಪಡೆಯುತ್ತದೆ.
  • ಬೋರ್ಡ್‌ನಲ್ಲಿರುವ ಸುರಕ್ಷತಾ ತಂತ್ರಜ್ಞಾನವು 6 ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಒಳಗೊಂಡಿರಬಹುದು.
  • ಅಂತರಾಷ್ಟ್ರೀಯವಾಗಿ, ಇದನ್ನು 41.9 ಕಿವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುತ್ತದೆ, 318 ಕಿ.ಮೀ (NEDC) ರೇಂಜ್‌ಅನ್ನು ಹೊಂದಿದೆ.
  • ಭಾರತದಲ್ಲಿ ಇದನ್ನು 25 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆಗೆ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ.

ವಿನ್‌ಫಾಸ್ಟ್ ವಿಯೆಟ್ನಾಂ ಮೂಲದ ವಾಹನ ತಯಾರಕರಾಗಿದ್ದು, ಇದನ್ನು 2017 ರಲ್ಲಿ ಸ್ಥಾಪಿಸಲಾಯಿತು ಮತ್ತು ಅವರ ತವರು ದೇಶದ ಮಾರುಕಟ್ಟೆಯಲ್ಲಿ ಈಗಾಗಲೇ ಅನೇಕ ಇವಿಗಳನ್ನು ಬಿಡುಗಡೆ ಮಾಡಿದೆ ಮತ್ತು ಅದನ್ನು ಜಾಗತಿಕವಾಗಿ ವಿಸ್ತರಿಸಿದೆ. ಇದೀಗ ವಿನ್‌ಫಾಸ್ಟ್‌ ಈಗ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿಯಲ್ಲಿದೆ. 2024 ರ ಆರಂಭದಲ್ಲಿ ತಮಿಳುನಾಡಿನಲ್ಲಿ ತನ್ನ ಮೊದಲ ಘಟಕವನ್ನು ಸ್ಥಾಪಿಸುವ ಕುರಿತು ವಿನ್‌ಫಾಸ್ಟ್‌ನ ಘೋಷಿಸಿದ ನಂತರ, ಅದರ VF e34 ಎಲೆಕ್ಟ್ರಿಕ್ ಎಸ್‌ಯುವಿಯು ಇತ್ತೀಚೆಗೆ ಭಾರತೀಯ ರಸ್ತೆಗಳಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿತು, ಈ ಬಾರಿ ಭಾರೀ ಮರೆಮಾಚುವಿಕೆಯಿಂದ ಕೂಡಿದೆ. ಎಲೆಕ್ಟ್ರಿಕ್ ಎಸ್‌ಯುವಿಯ ಈ ಸ್ಪೈ ಶಾಟ್‌ಗಳನ್ನು ಹತ್ತಿರದಿಂದ ಗಮನಿಸೋಣ.

ಎಕ್ಸ್‌ಟಿರೀಯರ್‌

ಪರೀಕ್ಷಾ ಅವೃತ್ತಿಯು ಜಾಗತಿಕ-ಸ್ಪೆಕ್ ಮೊಡೆಲ್‌ನಂತೆಯೇ ಅದೇ ವಿನ್ಯಾಸದ ಬಿಟ್‌ಗಳನ್ನು ಹೊಂದಿತ್ತು, ಇದರಲ್ಲಿ ನಯವಾದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಲೈಟಿಂಗ್ ಸೆಟಪ್ ಸೇರಿವೆ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳಲ್ಲಿ (ADAS) ಮುಂಭಾಗದ ಬಂಪರ್-ಮೌಂಟೆಡ್ ರಾಡಾರ್ ಮತ್ತು ಗಮನಿಸಲಾದ ಇತರ ಬಾಹ್ಯ ವಿವರಗಳಲ್ಲಿ ದಪ್ಪನಾದ ಹಿಂಭಾಗದ ಬಂಪರ್ ಸೇರಿವೆ.

ಫೀಚರ್‌ಗಳು ಮತ್ತು ಸುರಕ್ಷತೆ

ಇತ್ತೀಚಿನ ಸ್ಪೈ ಶಾಟ್‌ಗಳು ಇಂಟಿರೀಯರ್‌ನ ಯಾವುದೇ ಮಾಹಿತಿಯನ್ನು ನೀಡದಿದ್ದರೂ, ಇದು ಜಾಗತಿಕ-ಸ್ಪೆಕ್ ಕೊಡುಗೆಯಂತೆ ಅದೇ ರೀತಿಯ ಕ್ಯಾಬಿನ್ ವಿನ್ಯಾಸವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಗ್ಲೋಬಲ್-ಸ್ಪೆಕ್ ವಿಎಫ್‌ ಇ34 ಸಂಪೂರ್ಣ ಗ್ರೇ ಕ್ಯಾಬಿನ್ ಥೀಮ್ ಮತ್ತು ಲಂಬವಾಗಿ ಜೋಡಿಸಲಾದ 10-ಇಂಚಿನ ಇನ್ಫೋಟೈನ್ಮೆಂಟ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರಿಂದಾಗಿ ಸೆಂಟ್ರಲ್ ಎಸಿ ವೆಂಟ್‌ಗಳು ಇರುವುದಿಲ್ಲ, ಇದರ ಬದಲಾಗಿ ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್‌ನಲ್ಲಿ ವಿಸ್ತೃತ ವೆಂಟ್‌ ಪ್ಯಾನೆಲ್‌ ಇರಲಿದೆ.

ವೈಶಿಷ್ಟ್ಯಗಳ ವಿಷಯದಲ್ಲಿ, ಇದು ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, ಕೀಲೆಸ್ ಎಂಟ್ರಿ, 6-ಸ್ಪೀಕರ್ ಸೆಟಪ್, ಆಟೋಮ್ಯಾಟಿಕ್‌ ಎಸಿ, 6-ವೇ ಮ್ಯಾನ್ಯುವಲ್ ಆಗಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 7-ಇಂಚಿನ ಹಿಂಬದಿಯ ಸ್ಕ್ರೀನ್‌ ಅನ್ನು ಪಡೆಯುವ ಸಾಧ್ಯತೆ ಇದೆ.

ಸುರಕ್ಷತೆಯ ದೃಷ್ಟಿಯಿಂದ, ಗ್ಲೋಬಲ್-ಸ್ಪೆಕ್ ಮಾಡೆಲ್ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಸೇರಿದಂತೆ ADAS ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್‌ ಫಾಸ್ಟ್‌; ಈ ಬ್ರಾಂಡ್‌ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ

ಪವರ್‌ಟ್ರೈನ್‌

ವಿಎಫ್‌ ಇ34 ಈ ಕೆಳಗಿನ ಪವರ್‌ಟ್ರೈನ್‌ ಆಯ್ಕೆಯೊಂದಿಗೆ ಜಾಗತಿಕವಾಗಿ ಲಭ್ಯವಿದೆ:

ಬ್ಯಾಟರಿ ಪ್ಯಾಕ್‌

41.9 ಕಿ.ವ್ಯಾಟ್‌

ಎಲೆಟ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

1

ಪವರ್‌

150 ಪಿಎಸ್‌

ಟಾರ್ಕ್‌

242 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌ (WLTP)

318 ಕಿ.ಮೀ (NEDC)

ಈ ಎಸ್‌ಯುವಿಯು ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವ್ ಮೋಡ್‌ಗಳನ್ನು ನೀಡುತ್ತದೆ. ಡಿಸಿ ಫಾಸ್ಟ್‌ ಚಾರ್ಜರ್ ಅನ್ನು ಬಳಸಿಕೊಂಡು, ವಿನ್‌ಫಾಸ್ಟ್‌ ವಿಎಫ್‌ ಇ34 ಅನ್ನು 27 ನಿಮಿಷಗಳಲ್ಲಿ 10 ರಿಂದ 70 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

ಬೆಲೆ, ಪ್ರತಿಸ್ಪರ್ಧಿಗಳು ಮತ್ತು ನಿರೀಕ್ಷಿತ ಬಿಡುಗಡೆ

ವಿನ್‌ಫಾಸ್ಟ್‌ ವಿಎಫ್‌ ಇ34 ಅನ್ನು 2025ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದರ ಬೆಲೆಗಳು 25 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಮುಂಬರುವ ಮಾರುತಿ eVX ಮತ್ತು ಹ್ಯುಂಡೈ ಕ್ರೆಟಾ EVಯೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.

ಭಾರತಕ್ಕಾಗಿ ರೂಪಿಸಲಾಗಿರುವ ಯೋಜನೆ

ಭಾರತದಲ್ಲಿ, ವಿಯೆಟ್ನಾಮೀಸ್-ಬ್ರಾಂಡ್ ವಿನ್‌ಫಾಸ್ಟ್‌, ತಮಿಳುನಾಡಿನಲ್ಲಿ ತನ್ನ ಘಟಕದ ಮೂಲಕ ಸ್ಥಳೀಯವಾಗಿ ಜೋಡಣೆಯ ಮೊದಲು ಸಂಪೂರ್ಣವಾಗಿ ಬಿಲ್ಟ್-ಅಪ್ ಕಾರುಗಳ(CBUs) ಮೊಡೆಲ್‌ಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ವಿನ್‌ಫಾಸ್ಟ್ ವಿಎಫ್ 7, ವಿಎಫ್ 8 ಮತ್ತು ವಿಎಫ್ 6 ಇತರ ಮೊಡೆಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಫೋಟೋದ ಮೂಲ

ಇತ್ತೀಚಿನ ವಾಹನ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ WhatsApp ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್‌ರೋಡ್‌ ಬೆಲೆ

Share via

Write your Comment on VinFast ವಿಎಫ್‌ ಇ34

ಇನ್ನಷ್ಟು ಅನ್ವೇಷಿಸಿ on ವಿನ್‌ಫಾಸ್ಟ್ ವಿಎಫ್‌ ಇ34

ವಿನ್‌ಫಾಸ್ಟ್ ವಿಎಫ್‌ ಇ34

51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
Rs.25 ಲಕ್ಷ* Estimated Price
ಫೆಬ್ರವಾರಿ 13, 2026 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ