ಅಲ್ಪ ಬೆಲೆಯೇರಿಕೆಯೊಂದಿಗೆ ಹೊಸ ಫೀಚರ್‌ಗಳನ್ನು ಪಡೆಯುತ್ತಿರುವ ಫೋಕ್ಸ್‌ವ್ಯಾಗನ್ ಟೈಗನ್
ವೋಕ್ಸ್ವ್ಯಾಗನ್ ಟಿಗುವಾನ್ ಗಾಗಿ tarun ಮೂಲಕ ಮೇ 20, 2023 02:00 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಪ್ರಮುಖ ಫೋಕ್ಸ್‌ವ್ಯಾಗನ್ ಹೆಚ್ಚು ಪರಿಣಾಮಕಾರಿಯಾದ BS6 ಫೇಸ್ 2 ಕಾಂಪ್ಲಿಯೆಂಟ್ ಎಂಜಿನ್ ಅನ್ನು ಸಹ ಪಡೆಯುತ್ತದೆ
- ನವೀಕೃತ ಟೈಗನ್ ಈಗ ರೂ. 34.69 ಲಕ್ಷ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿದೆ.
- ಹೊಸ ಡ್ಯುಯಲ್-ಟೋನ್ ಇಂಟೀರಿಯರ್, ವೈರ್‌ಲೆಸ್ ಚಾರ್ಜಿಂಗ್, ಪಾರ್ಕಿಂಗ್ ಅಸಿಸ್ಟ್ ಮತ್ತು ರಿಯರ್ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಪಡೆಯುತ್ತದೆ.
- ವಿಹಂಗಮ ಸನ್‌ರೂಫ್, ಮೂರು-ಝೋನ್ ಎಸಿ, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸಹ ಪಡೆಯುತ್ತದೆ
- 7-ಸ್ಪೀಡ್ ಡಿಎಸ್‌ಜಿ ಮತ್ತು ಎಡಬ್ಲ್ಯೂಡಿಯೊಂದಿಗೆ ಅದೇ (ಆದರೆ ನವೀಕೃತ) 2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.
ಫೋಕ್ಸ್‌ವ್ಯಾಗನ್ BS6 ಫೇಸ್ 2 ಕಾಂಪ್ಲಿಯೆಂಟ್ ಟೈಗನ್ ಎಸ್‌ಯುವಿ ಅನ್ನು ರೂ. 34.69 ಲಕ್ಷ (ಎಕ್ಸ್-ಶೋರೂಮ್)ಕ್ಕೆ ಬಿಡುಗಡೆ ಮಾಡಿದ್ದು ಇದು ಅದರ ಹಿಂದಿನ ಆವೃತ್ತಿಗಿಂತ ರೂ. 50,000 ದುಬಾರಿಯಾಗಿದೆ. ಈ ಎಸ್‌ಯುವಿ ಹೊಸದೇನನ್ನು ಹೊಂದಿದೆ ಎಂಬುದು ಇಲ್ಲಿದೆ:
ಹೊಸದೇನಿದೆ?
ಈ ನವೀಕೃತ ಟೈಗನ್ ತನ್ನ ಬಾಹ್ಯ ಶೈಲಿಯಲ್ಲಿ ಯಾವುದೇ ಬದಲಾವಣೆಯನ್ನು ಪಡೆದಿಲ್ಲ. ಆದಾಗ್ಯೂ, ಇದರ ಇಂಟೀರಿಯರ್ ಈಗ ಡ್ಯುಯಲ್-ಟೋನ್ ಸ್ಟಾರ್ಮ್ ಗ್ರೇ ಶೇಡ್‌ನ ಫಿನಿಶಿಂಗ್ ಅನ್ನು ಹೊಂದಿದೆ. ಫೀಚರ್ ವಿಷಯದಲ್ಲಿ ಇದು ವೈರ್‌ಲೆಸ್ ಚಾರ್ಜಿಂಗ್ ಮತ್ತು ಪಾರ್ಕ್ ಅಸಿಸ್ಟ್ ಅನ್ನು ಪಡೆಯುತ್ತದೆ. ಮತ್ತು ಎರಡನೆಯ ಫೀಚರ್ ಹಂತ 1 ADAS ಫೀಚರ್ ಆಗಿದ್ದು ಇದು ಕ್ಯಾಮರಾಗಳು ಮತ್ತು ಸೆನ್ಸಾರ್‌ಗಳನ್ನು ಆಧರಿಸಿದೆ ಹಾಗೂ ಪಾರ್ಕಿಂಗ್ ಮಾಡುವಾಗ ಸ್ಟಿಯರಿಂಗ್ ವ್ಹೀಲ್ ಅನ್ನು ನಿರ್ವಹಿಸುತ್ತದೆ. ಹೆಚ್ಚಿನ ಸುರಕ್ಷತೆಗಾಗಿ, ಹಿಂದಿನ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಇದರಲ್ಲಿ ಪರಿಚಯಿಸಲಾಗಿದೆ.
ಇದನ್ನೂ ಓದಿ: ಉತ್ಸಾಹಿ ಖರೀದಿದಾರರು ಬಯಸುವ ರೂ.15 ಲಕ್ಷದೊಳಗಿನ ಟಾಪ್ 10 ಟರ್ಬೋ-ಪೆಟ್ರೋಲ್ ಕಾರುಗಳು
ಅಸ್ತಿತ್ವದಲ್ಲಿರುವ ಫೀಚರ್‌ಸೆಟ್
ಈ ಟೈಗನ್ ಈಗಾಗಲೇ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳು, ವಿಹಂಗಮ ಸನ್‌ರೂಫ್, ಮೂರು-ಝೋನ್ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಮೂಲಕ ಹೊಂದಿಸಬಹುದಾದ ಡ್ರೈವರ್ ಸೀಟ್, ಹೀಟೆಡ್ ಮುಂಭಾಗದ ಸೀಟುಗಳು, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿದೆ. ಇದರಲ್ಲಿನ ಸುರಕ್ಷತಾ ಫೀಚರ್‌ಗಳೆಂದರೆ, ಆರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮಾರಾಗಳಾಗಿವೆ.
ನವೀಕೃತ ಪವರ್‌ಟ್ರೇನ್
ಟೈಗನ್ ಅದೇ 2-ಲೀಟರ್ ಟರ್ಬೋ-ಪೆಟ್ರೋಲ್ ಟಿಎಸ್ಐ ಎಂಜಿನ್ ಅನ್ನು ಹೊಂದಿದ್ದು ಈಗ ಅದು ಆರ್‌ಡಿಇ ಕಾಂಪ್ಲಿಯೆಂಟ್ ಆಗಿದೆ. ಇದು 190PS ಮತ್ತು 320Nm ಹೊರಹಾಕುತ್ತದೆ ಹಾಗೂ 7-ಸ್ಪೀಡ್ ಡಿಎಸ್‌ಜಿ (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್) ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ. 4ಮೋಷನ್ ಡ್ರೈವ್, ಫೋಕ್ಸ್‌ವ್ಯಾಗನ್ ಆಲ್-ವ್ಹೀಲ್ ಡ್ರೈವ್ ಬಗ್ಗೆ ಹೇಳಿದ್ದು ಇದನ್ನು ಪ್ರಮಾಣಿತವಾಗಿ ನೀಡಲಾಗುತ್ತಿದೆ. ಎಮಿಷನ್ ನಾರ್ಮ್ಸ್ ಅಪ್‌ಡೇಟ್ ಜೊತೆಗೆ, ಟೈಗನ್ 13.54kmpl ಡೆಲಿವರಿ ಮಾಡುವ 7 ಶೇಕಡಾ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಕ್ಲೈಮ್ ಮಾಡಿಕೊಂಡಿದೆ.
ಪ್ರತಿಸ್ಪರ್ಧಿಗಳು
ಈ ಫೋಕ್ಸ್‌ವ್ಯಾಗನ್ ಟೈಗನ್ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್, ಮತ್ತು ಸಿಟ್ರಾನ್ C5 ಏರ್‌ಕ್ರಾಸ್‌ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ
ಇದನ್ನೂ ಓದಿ : ಫೋಕ್ಸ್‌ವ್ಯಾಗನ್ ಟೈಗನ್ ಆಟೋಮ್ಯಾಟಿಕ್