ರೂ 15 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 10 ಟರ್ಬೋ-ಪೆಟ್ರೋಲ್ ಕಾರುಗಳು ಇಲ್ಲಿವೆ
ಹುಂಡೈ ಸ್ಥಳ ಎನ್ ಲೈನ್ ಗಾಗಿ tarun ಮೂಲಕ ಮಾರ್ಚ್ 31, 2023 08:15 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಈ ಟರ್ಬೋಚಾರ್ಜ್ ಇಂಜಿನ್‌ಗಳು ಹೆಚ್ಚು ಪವರ್ ಮತ್ತು ಟಾರ್ಕ್ ಹಾಗೂ ಉತ್ತಮ ಇಂಧನ ದಕ್ಷತೆಯ ಪ್ರಯೋಜನಗಳನ್ನು ನೀಡುತ್ತವೆ.
ಟರ್ಬೋಚಾರ್ಜ್ ಪೆಟ್ರೋಲ್ ಇಂಜಿನ್‌ಗಳು ಸಮೂಹ-ಮಾರುಕಟ್ಟೆ ಆಫರಿಂಗ್‌ಗಳಲ್ಲಿ ನೆಲೆಗೊಂಡ ಸ್ಥಾನದಿಂದ ಸಾಮಾನ್ಯ ಸ್ಥಳಕ್ಕೆ ಹೋಗಿವೆ. ತಯಾರಕರು ಉತ್ತಮ ಡ್ರೈವ್ ಅನುಭವ ಮತ್ತು ಯೋಗ್ಯ ಇಂಧನ ದಕ್ಷತೆಯನ್ನು ನೀಡುವ ಟರ್ಬೋ-ಪೆಟ್ರೋಲ್ ಕಾರುಗಳನ್ನು ಮುಖ್ಯವಾಹಿನಿಗೆ ತರುತ್ತಿದ್ದಾರೆ. ಈಗಿನ ದಿನಗಳಲ್ಲಿ, 100PS ಗೂ ಮಿಕ್ಕಿದ ಕಾರ್ಯಕ್ಷಮತೆಯನ್ನು ನೀಡುವ ಟರ್ಬೋ-ಚಾರ್ಜ್ ಪೆಟ್ರೋಲ್ ಇಂಜಿನ್‌ಗಳನ್ನು ಹೊಂದಿರುವ ರೂ 15 ಲಕ್ಷ ಬೆಲೆ ಹೊಂದಿರುವ ಅನೇಕ ಕಾರುಗಳು ಇವೆ.
ಆ ಬೆಲೆಯಲ್ಲಿ ಪರಿಗಣಿಸಬಹುದಾದ ಟಾಪ್ 10 ಟರ್ಬೋ-ಪೆಟ್ರೋಲ್ ಕಾರುಗಳು ಇಲ್ಲಿವೆ:
ಮಹೀಂದ್ರಾ XUV700
ಅತ್ಯುತ್ತಮ ವೇರಿಯೆಂಟ್ |
MX |
ಬೆಲೆ |
ರೂ 13.95 ಲಕ್ಷ |
ಇಂಜಿನ್ |
2-ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
200PS |
ಟಾರ್ಕ್ |
380Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT |
ಇಂಧನ ದಕ್ಷತೆ |
- |
ಪ್ರಾಯಶಃ ಈ ಪಟ್ಟಿಯಲ್ಲಿ ಅತ್ಯಂತ ಪ್ರಭಾವಶಾಲಿ ಆಯ್ಕೆಯೆಂದರೆ ಆರಂಭಿಕ ಹಂತದ XUV700. ಇದು ಹೆಚ್ಚಿನ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರದಿದ್ದರೂ, ಸಾಕಷ್ಟು ಸ್ಥಳಾವಕಾಶ ಹೊಂದಿರುವ ಮಧ್ಯಮ-ಗಾತ್ರದ SUV ಆಗಿದ್ದು 200PS ಅನ್ನು ಹೊಂದಿದೆ. ನಮ್ಮ ರೋಡ್ ಟೆಸ್ಟ್‌ಗಳಲ್ಲಿ ನಾವು 9.48 ಸೆಕೆಂಡುಗಳಲ್ಲಿ 0-100kmph ಸ್ಪ್ರಿಂಟ್ ಟೈಂ ಸಾಧಿಸಲು ಸಾಧ್ಯವಾಗಿದೆ. 185PS 2.2-ಲೀಟರ್ ಡೀಸೆಲ್ ಇಂಜಿನ್ ಆಫರ್‌ನಲ್ಲಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಜೊತೆಗೆ ಜೋಡಿಸಲಾಗಿದೆ. XUV700 ಈ ಟಾಪ್-ಸ್ಪೆಕ್ ವೇರಿಯೆಂಟ್ ಬೆಲೆ ರೂ 25.48 ಲಕ್ಷವಾಗಿದ್ದು ಎಲ್ಲಾ-ವ್ಹೀಲ್-ಡ್ರೈವ್ ಮತ್ತು ADAS ಫೀಚರ್‌ಗಳನ್ನು ಹೊಂದಿದೆ.
ಮಹೀಂದ್ರಾ ಸ್ಕಾರ್ಪಿಯೋ ಎನ್
ಅತ್ಯುತ್ತಮ ವೇರಿಯೆಂಟ್ |
Z4 E |
ಬೆಲೆ |
ರೂ 14.74 ಲಕ್ಷ |
ಇಂಜಿನ್ |
2- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
203PS |
ಟಾರ್ಕ್ |
380Nm |
ಟ್ರಾನ್ಸ್‌ಮಿಷನ್ |
6-speed MT |
ಇಂಧನ ದಕ್ಷತೆ (ಪರೀಕ್ಷಿಸಲಾಗಿದೆ) |
11.72kmpl (AVG) |
ಈ ಸ್ಕಾರ್ಪಿಯೋ ಎನ್ ಕೂಡಾ XUV700 ನಲ್ಲಿ ಕಾರ್ಯನಿರ್ವಹಿಸುವ ಅದೇ ಇಂಜಿನ್ ಅನ್ನು ಬಳಸುತ್ತದೆ. ಈ SUV ಏಳು-ಸೀಟರ್ ಅನ್ನು ಸ್ಟಾಂಡರ್ಡ್ ಆಗಿ ಹೊಂದಿದ್ದು, ಇದರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಿದೆ. ಈ ಬಜೆಟ್‌ನಲ್ಲಿರುವ ಏಕೈಕ ವೇರಿಯೆಂಟ್ ಅಂದರೆ, ಆರಂಭಿಕ ಹಂತಕ್ಕಿಂತ ಮೇಲಿನದು, ಇದು ಕೇವಲ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಮಾತ್ರ ಲಭ್ಯವಿದ್ದು ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಅನ್ನು ನೀವು ರೂ 1.5 ಲಕ್ಷದಷ್ಟು ಹೆಚ್ಚಿನ ಬೆಲೆಗೆ ಪಡೆದುಕೊಳ್ಳಬಹುದು. ಸ್ಕಾರ್ಪಿಯೋ ಎನ್ ಪೆಟ್ರೋಲ್ AT ಅನ್ನು ನಾವು ಪರೀಕ್ಷಿಸಿದಾಗ, ಇದು 10.16 ಸೆಕೆಂಡುಗಳಲ್ಲಿ 0-100kmph ಸ್ಪ್ರಿಂಟ್ ಟೈಂ ಸಾಧಿಸಿದೆ. ಇದು 2.2-ಲೀಟರ್ ಡೀಸೆಲ್ ಇಂಜಿನ್ ಆಯ್ಕೆಯನ್ನೂ ಹೊಂದಿದ್ದು, ವೇರಿಯೆಂಟ್‌ಗಳನ್ನು ಆಧರಿಸಿ ಇದನ್ನು ಎರಡು ಟ್ಯೂನ್‌ಗಳಲ್ಲಿ ಪಡೆಯಬಹುದು. ಇದರ ಬೆಲೆಯನ್ನು ರೂ 12.74 ಲಕ್ಷದಿಂದ ರೂ.24.05 ಲಕ್ಷದ ತನಕ ನಿಗದಿಪಡಿಸಲಾಗಿದೆ.
ಹ್ಯುಂಡೈ ವರ್ನಾ 2023
ಅತ್ಯುತ್ತಮ ವೇರಿಯೆಂಟ್ |
SX ಟರ್ಬೋ MT |
ಬೆಲೆ |
ರೂ 14.84 ಲಕ್ಷ |
ಇಂಜಿನ್ |
1.5- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
160PS |
ಟಾರ್ಕ್ |
253Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT |
ಇಂಧನ ದಕ್ಷತೆ(ಪ್ರತಿಪಾದಿಸಲಾಗಿದೆ) |
20kmpl |
ಈ ಹೊಸ ಹ್ಯುಂಡೈ ವರ್ನಾದ ಆರಂಭಿಕ ಹಂತದ SX ಟರ್ಬೋ MT ಬೆಲೆ ಬಜೆಟ್‌ನೊಳಗೇ ಇದೆ. ಈ ಆರನೇ-ಪೀಳಿಗೆ ಸೆಡಾನ್ 60PS 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಆಗಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಆಯ್ಕೆಗಳನ್ನು ಹೊಂದಿದೆ. 20kmpl ಇಂಧನ ಮಿತ್ಯವ್ಯಯತೆಯನ್ನು ಕ್ಲೈಮ್ ಮಾಡುವುದರೊಂದಿಗೆ, ಈ ವರ್ನಾ ಟರ್ಬೋ 8.1 ಸೆಕಂಡುಗಳಲ್ಲಿ 0-100kmph ಸ್ಪ್ರಿಂಟ್ ಟೈಮ್ ಸಾಧಿಸುತ್ತದೆ ಎಂದು ಕ್ಲೈಮ್ ಮಾಡಲಾಗಿದೆ. ಇದನ್ನು 115PS 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಮೋಟಾರ್‌ನೊಂದಿಗೆ ಪಡೆಯಬಹುದು. ಈ ಸೆಡಾನ್ ರೂ 10.90 ಲಕ್ಷದಿಂದ 17.38 ಲಕ್ಷದ ತನಕ ಬೆಲೆಯನ್ನು ಹೊಂದಿದೆ.
ಫೋಕ್ಸ್‌ವಾಗನ್ ವರ್ಟಸ್/ಟೈಗನ್
ಅತ್ಯುತ್ತಮ ವೇರಿಯೆಂಟ್ |
ವರ್ಟಸ್ – ಟಾಪ್‌ಲೈನ್ / ಟೈಗನ್ – ಹೈಲೈನ್ AT |
ಬೆಲೆ |
ರೂ 14.70 ಲಕ್ಷ / ರೂ 14.96 ಲಕ್ಷ |
ಇಂಜಿನ್ |
1- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
115PS |
ಟಾರ್ಕ್ |
178Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT / 6- ಸ್ಪೀಡ್ AT |
Fuel Efficiency (Claimed) |
19.4kmpl / 18.12kmpl |
ಟೈಗನ್ ಮತ್ತು ವರ್ಟಸ್ ಅನ್ನು ಟರ್ಬೋ-ಪೆಟ್ರೋಲ್ ಇಂಜಿನ್‌ಗಳಲ್ಲಿ ಮಾತ್ರ ನೀಡಲಾಗಿದ್ದು, ತಾಂತ್ರಿಕವಾಗಿ ಇದರ ಯಾವುದೇ ವೇರಿಯೆಂಟ್ ಅನ್ನೂ ನೀವು ರೂ15 ಲಕ್ಷದ ಒಳಗೆ ಪಡೆಯಬಹುದು. ಆದಾಗ್ಯೂ ಕೇವಲ 1-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ ಮಾತ್ರ ಅಗ್ಗವಾಗಿ ದೊರೆಯುತ್ತದೆ. ಈ ಬಜೆಟ್‌ನಲ್ಲಿ ದೊರೆಯುವ ಟೈಗನ್‌ನ ಅತ್ಯುತ್ತಮ ವೇರಿಯೆಂಟ್ ಅಂದರೆ ಮಿಡ್ ಸ್ಪೆಕ್ ಹೈಲೈನ್ AT, ಹಾಗೆಯೇ ವರ್ಟಸ್‌ಗೆ ಅತ್ಯುತ್ತಮ ಆಯ್ಕೆಯೆಂದರೆ, ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಇಂಜಿನ್‌ಗೆ ಜೋಡಿಸಲಾದ ಟಾಪ್ ವೇರಿಯಂಟ್. ಈ ಸೆಡಾನ್‌ನ ಪವರ್‌ಟ್ರೇನ್ ಕೇವಲ 10.66 ಸೆಕೆಂಡುಗಳಲ್ಲಿ 0-100kmph ಸ್ಪ್ರಿಂಟ್ ಟೈಂ ಸಾಧಿಸುತ್ತದೆ. ಎರಡೂ ಮಾಡೆಲ್‌ಗೂ ಹೆಚ್ಚಿನ ಬೆಲೆಯ ಇತರ ಟರ್ಬೋ ಆಯ್ಕೆಯೆಂದರೆ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಆಯ್ಕೆಯನ್ನು ಹೊಂದಿರುವ 150PS 1.5-ಟರ್ಬೋ ಪೆಟ್ರೋಲ್ ಇಂಜಿನ್ ಆಗಿದೆ.
ಸ್ಕೋಡಾ ಸ್ಲೇವಿಯಾ / ಕುಶಾಕ್
ಅತ್ಯುತ್ತಮ ವೇರಿಯೆಂಟ್ |
ಆ್ಯಂಬಿಷನ್ MT |
ಬೆಲೆ |
ರೂ14.94 ಲಕ್ಷ (ಸ್ಲೇವಿಯಾ) / ರೂ 14.99 ಲಕ್ಷ (ಕುಶಾಕ್) |
ಇಂಜಿನ್ |
1.5- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
150PS |
ಟಾರ್ಕ್ |
250Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT |
ಇಂಧನ ದಕ್ಷತೆ (ಪರೀಕ್ಷಿಸಲಾಗಿದೆ) |
15.85kmpl (AVG) |
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್‌ನ ಇತ್ತೀಚಿನ ನವೀಕರಣದಿಂದಾಗಿ ಫೋಕ್ಸ್‌ವಾಗನ್‌ನ ಮಾದರಿಗಳಿಗಿಂತ ಮೇಲುಗೈ ಸಾಧಿಸಿದೆ. ಈ ಸ್ಕೋಡಾ ಅವಳಿಗಳು ಈಗ 6-ಸ್ಪೀಡ್ ಮ್ಯಾನುವಲ್‌ಗೆ ಜೋಡಿಸಲಾದ 150PS 1.5-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು ಮಿಡ್-ಸ್ಪೆಕ್ ಆ್ಯಂಬಿಷನ್ ವೇರಿಯೆಂಟ್‍ನೊಂದಿಗೆ ಲಭ್ಯವಿದ್ದು ಇದರ ಬೆಲೆ ರೂ. 15 ಲಕ್ಷದ ಕೆಳಗೆ ಇದೆ. ಈ ಸ್ಲಾವಿಯಾ 1.5 ಟರ್ಬೋನ ಪರೀಕ್ಷಿಸಲಾದ 0-100kmph ಸಾಧಿಸುವ ಸಮಯವು ಒಂಭತ್ತು ಸೆಂಕೆಂಡುಗಳು.
ಅದೇ ಬಜೆಟ್‌ನಲ್ಲಿ, ನೀವು ಆಟೋಮ್ಯಾಟಿಕ್‌ನ ಆಯ್ಕೆಯನ್ನು ಬಯಸಿದರೆ, ಆ್ಯಂಬಿಷನ್ 1-ಲೀಟರ್ AT ಅನ್ನು ನೋಡಬಹುದು,ಅಥವಾ ಇನ್ನಷ್ಟು ಸುಧಾರಿತ ವೇರಿಯೆಂಟ್ ಬೇಕೆಂದರೆ ಟಾಪ್-ಎಂಡ್ ಸ್ಟೈಲ್ 1-ಲೀಟರ್ MT ಅನ್ನು ಪರಿಶೀಲಿಸಬಹುದು. ಈ ಸ್ಕೋಡಾ ಸ್ಲಾವಿಯಾದ ಬೆಲೆ ರೂ 11.29 ಲಕ್ಷದಿಂದ ರೂ 18.40 ತನಕ ಇದ್ದು, ಕುಶಾಕ್‌ನ ಬೆಲೆ ರೂ 11.59 ಲಕ್ಷದಿಂದ ರೂ19.69 ಲಕ್ಷದ ತನಕ ಇದೆ.
ಮಹೀಂದ್ರಾ ಥಾರ್
ಅತ್ಯುತ್ತಮ ವೇರಿಯೆಂಟ್ |
LX P MT ಹಾರ್ಡ್ ಟಾಪ್ |
ಬೆಲೆ |
ರೂ 14.28 ಲಕ್ಷ |
ಇಂಜಿನ್ |
2- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
150PS |
ಟಾರ್ಕ್ |
320Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT / 6-ಸ್ಪೀಡ್ AT |
ಇಂಧನ ದಕ್ಷತೆ (ಪರೀಕ್ಷಿಸಲಾಗಿದೆ) |
10.98kmpl (AVG) |
ಕಾರು ಪ್ರಿಯರಿಗೆ ಪೆಟ್ರೋಲ್ ಆಫ್-ರೋಡರ್ ಆದ್ಯತೆಯಾಗಿರದಿದ್ದರೂ, ಅದನ್ನು ಲೈಫ್‌ಸ್ಟೈಲ್ SUV ಆಗಿಯೇ ನೋಡಲಾಗುತ್ತದೆ. ಈ ಬೆಲೆಯಲ್ಲಿ ನೀವು 4WD ಥಾರ್‌ನ ಎಲ್ಲಾ ಫೀಚರ್‌ಗಳನ್ನೂ ಹೊಂದಿರುವಂಥ ಮ್ಯಾನುವಲ್ ವೇರಿಯೆಂಟ್ ಅನ್ನು ಪಡೆಯಬಹುದು. ಅಲ್ಲದೇ ನೀವು ಪೆಟ್ರೋಲ್ ಆಟೋಮ್ಯಾಟಿಕ್ ಸಂಯೋಜನೆ ಹೊಂದಿರುವ ಥಾರ್‌ನ ರಿಯರ್-ವ್ಹೀಲ್ ಡ್ರೈವ್ ವೇರಿಯೆಂಟ್ ಅನ್ನೂ ಪಡೆಯಬಹುದು. ಥಾರ್ LX P ATನಲ್ಲಿ, ನಾವು 10.21 ಸೆಕೆಂಡುಗಳಲ್ಲಿ 0-100km ಪೂರ್ಣವೇಗದ ಓಟವನ್ನು ಕ್ರಮಿಸಬಹುದು. ಈ SUV 130PS 2.2-ಡೀಸೆಲ್ ಇಂಜಿನ್‌ನೊಂದಿಗೆ ಆಯ್ಕೆ ಮಾಡಬಹುದು, ಹಾಗೆಯೇ ಇದರ RWD ವೇರಿಯೆಂಟ್ 117PS 1.5-ಡೀಸೆಲ್ ಯೂನಿಟ್ ಅನ್ನು ಹೊಂದಿದೆ.
ಹ್ಯುಂಡೈ ವೆನ್ಯೂ ಎನ್ ಲೈನ್
ಅತ್ಯುತ್ತಮ ವೇರಿಯೆಂಟ್ |
N8 DCT ಡ್ಯುಯಲ್ ಟೋನ್ |
ಬೆಲೆ |
ರೂ 13.74 ಲಕ್ಷ |
ಇಂಜಿನ್ |
1- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
120PS |
ಟಾರ್ಕ್ |
172Nm |
ಟ್ರಾನ್ಸ್‌ಮಿಷನ್ |
7-ಸ್ಪೀಡ್ DCT |
ಇಂಧನ ದಕ್ಷತೆ |
- |
ಈ ಹ್ಯುಂಡೈ ವೆನ್ಯೂ ಎನ್ ಲೈನ್‌ನ ಟಾಪ್ ಸ್ಪೆಕ್ ವೇರಿಯೆಂಟ್ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಇದು ಆನ್‌ರೋಡ್ ಬೆಲೆಯೂ ಇದರಲ್ಲಿ ಒಳಗೊಂಡಿರಬಹುದು. ಈ SUV ಅನ್ನು 120PS 1-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ನೊಂದಿಗೆ ನೀಡಲಾಗಿದ್ದು 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಯನ್ನು ಪಡೆದಿದೆ. ಇದು ಎನ್ ಲೈನ್ ಆಗಿರುವುದರಿಂದ ಸ್ಪೋರ್ಟಿಯರ್ ರೈಡ್ ಮತ್ತು ನಿರ್ವಹಣೆಗಾಗಿ ಕಾರು ತಯಾರಕ ಸಂಸ್ಥೆಯು ಇದರ ಸಸ್ಪೆನ್ಷನ್ ಮತ್ತು ಸ್ಟೀರಿಂಗ್ ವ್ಹೀಲ್ ಫೀಡ್‌ಬ್ಯಾಕ್ ಅನ್ನು ಸುಧಾರಿಸಿದೆ. ಈ ಎನ್ ಲೈನ್‌ನ ಬೆಲೆ ರೂ 12.60 ಲಕ್ಷದಿಂದ ರೂ 13.74 ಲಕ್ಷದ ತನಕ ಇದೆ.
ಟಾಟಾ ನೆಕ್ಸಾನ್
ಅತ್ಯುತ್ತಮ ವೇರಿಯೆಂಟ್ |
XZA ಪ್ಲಸ್ ರೆಡ್ ಡಾರ್ಕ್ AMT |
ಬೆಲೆ |
ರೂ 13 ಲಕ್ಷ |
ಇಂಜಿನ್ |
1.2- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
120PS |
ಟಾರ್ಕ್ |
170Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT / 6-ಸ್ಪೀಡ್ AMT |
ಇಂಧನ ದಕ್ಷತೆ (ಕ್ಲೈಮ್ ಮಾಡಲಾಗಿದೆ) |
17.1kmpl |
ನೆಕ್ಸಾನ್‌ನೊಂದಿಗೆ ಟಾಟಾ, ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಸ್ಟಾಂಡರ್ಡ್ ಆಗಿ ನೀಡುತ್ತಿದೆ. ಈ ಬಜೆಟ್‌ನಲ್ಲಿ ನೀವು ಮ್ಯಾನವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಿಮಿಟಡ್-ರನ್ ರೆಡ್ ಡಾರ್ಕ್ ಎಡಿಷನ್‌ನಲ್ಲಿ ನೆಕ್ಸಾನ್‌ನ ಟಾಪ್-ಸ್ಪೆಕ್ ವೇರಿಯೆಂಟ್ ಅನ್ನು ಆಯ್ಕೆ ಮಾಡಬಹುದು. 120PS ಟರ್ಬೋ-ಪೆಟ್ರೋಲ್ ಮೋಟಾರ್ ಈ SUVಯ ಮ್ಯಾನುವಲ್ ವೇರಿಯೆಂಟ್ 13.33 ಸೆಕೆಂಡುಗಳಲ್ಲಿ ಸೊನ್ನೆಯಿಂದ 100kmph ವೇಗವನ್ನು ಸಾಧಿಸುತ್ತದೆ. ಲಭ್ಯವಿರುವ ಇನ್ನೊಂದು ಆಯ್ಕೆಯೆಂದರೆ 110PS 1.5-ಲೀಟರ್ ಡೀಸೆಲ್ ಇಂಜಿನ್, ಇದು ಮ್ಯಾನುವಲ್ ಅಥವಾ AMT ಆಯ್ಕೆಯನ್ನು ಹೊಂದಿದೆ. ಈ ಸಬ್‌ಕಾಂಪ್ಯಾಕ್ಟ್ SUV ಬೆಲೆ ರೂ 7.80 ಲಕ್ಷದಿಂದ ರೂ14.35 ಲಕ್ಷ ತನಕ ಇದೆ.
ಹ್ಯುಂಡೈ i20 ಎನ್ ಲೈನ್
ಅತ್ಯುತ್ತಮ ವೇರಿಯೆಂಟ್ |
N8 DCT |
ಬೆಲೆ |
ರೂ 12.27 ಲಕ್ಷ |
ಇಂಜಿನ್ |
1- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
120PS |
ಟಾರ್ಕ್ |
172Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ iMT / 7-ಸ್ಪೀಡ್ DCT |
ಇಂಧನ ದಕ್ಷತೆ (ಕ್ಲೈಮ್ ಮಾಡಲಾಗಿದೆ) |
20kmpl / 20.25kmpl |
ಟರ್ಬೋ ಹ್ಯಾಚ್ ಬಯಸುವವರಿಗೆ ಹ್ಯುಂಡೈ i20 ಎನ್ ಲೈನ್ ಅನ್ನು ಪಡೆಯಬಹುದು ಮತ್ತು ಹೆಚ್ಚಿನ ಆ್ಯಕ್ಸಸರಿಗಳು ಅಥವಾ ಸುಧಾರಣೆಗಳಲ್ಲಿನ ತುಸು ಬದಲಾವಣೆಯೊಂದಿಗೆ ನೀವು ಈ ಬಜೆಟ್‌ನಲ್ಲಿ ಎಲ್ಲಾ ಫೀಚರ್‌ಗಳನ್ನು ಹೊಂದಿರುವಂಥ ಟಾಪ್ ವೇರಿಯೆಂಟ್ ಅನ್ನು ಸುಲಭವಾಗಿ ಪಡೆಯಬಹುದು. ಈ ಎನ್ ಲೈನ್ ಆವೃತ್ತಿಯಲ್ಲಿ ಸ್ಪೋರ್ಟಿಯರ್ ಅನುಭವಕ್ಕಾಗಿ ಈಗಾಗಲೇ ಇರುವ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಬಿಗಿಯಾದ ಸಸ್ಪೆನ್ಷನ್ ಮತ್ತು ಭಾರವಾದ ಸ್ಟಿಯರಿಂಗ್ ಹೊಂದಿದೆ. ಇಷ್ಟೇ ಅಲ್ಲ, ಇದರ ಸೈಲೆನ್ಸರ್‌ನಿಂದ ಹೊರಡುವ ಶಬ್ದವು ‘ಎನ್ ಲೈನ್’ ಗೆ ಹೆಚ್ಚಿನ ಮೌಲ್ಯ ನೀಡಿದೆ. ಮ್ಯಾನುವಲ್ ಸ್ಟಿಕ್ ಬಯಸುವವರಿಗೆ, iMT (ಕ್ಲಚ್ ಪೆಡಲ್ ಇಲ್ಲದಿರುವ ಮ್ಯಾನುವಲ್) ಆಯ್ಕೆ ಲಭ್ಯವಿದೆ. ಈ iMT ವೇರಿಯೆಂಟ್ 0-100kmph ಸ್ಪ್ರಿಂಟ್ ಅನ್ನು 11.21 ಸೆಕೆಂಡುಗಳಲ್ಲಿ ತಲುಪಿದರೆ, ಸಾಮಾನ್ಯ i20ಯ ಟರ್ಬೋ -DCT ವೇರಿಯೆಂಟ್ ಅದನ್ನು 10.88 ಸೆಕೆಂಡುಗಳಲ್ಲಿ ಸಾಧಿಸಿದೆ. ಈ ಹೊಸ ಹ್ಯಾಚ್ ಬೆಲೆ ರೂ 10.16 ಲಕ್ಷದಿಂದ ರೂ 12.27 ಲಕ್ಷದ ತನಕ ಇದೆ.
ಮಹೀಂದ್ರಾ XUV300 ಟರ್ಬೋ ಸ್ಪೋರ್ಟ್
ಅತ್ಯುತ್ತಮ ವೇರಿಯೆಂಟ್ |
W8 (O) ಟರ್ಬೋಸ್ಪೋರ್ಟ್ |
ಬೆಲೆ |
ರೂ 12.90 ಲಕ್ಷ |
ಇಂಜಿನ್ |
1.2- ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ |
130PS |
ಟಾರ್ಕ್ |
250Nm ತನಕ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT |
ಇಂಧನ ದಕ್ಷತೆ (ಕ್ಲೈಮ್ ಮಾಡಲಾಗಿದೆ) |
- |
ಈ XUV300 110PS 1.2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದರೆ, ಟರ್ಬೋಸ್ಪೋರ್ಟ್ ವೇರಿಯೆಂಟ್ ಇದರ ಹೆಚ್ಚು ಶಕ್ತಿಶಾಲಿಯಾದ 130PS ಆವೃತ್ತಿಯನ್ನು ಹೊಂದಿದೆ. ನೀವು ಟರ್ಬೋ-ಪೆಟ್ರೋಲ್ ಇಂಜಿನ್‌ಗಾಗಿ XUV300ಯ ಎಲ್ಲಾ ವೇರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು ಆದರೆ, ಕಾರುಪ್ರಿಯರಿಗೆ ಟರ್ಬೋಸ್ಪೋರ್ಟ್ ಸೂಕ್ತ ಆಯ್ಕೆಯಾಗಿದೆ. ಈ ಸಬ್‌ಕಾಂಪ್ಯಾಕ್ಟ್ SUV ಬೆಲೆ ರೂ 8.41 ಲಕ್ಷದಿಂದ ರೂ14.07 ಲಕ್ಷದ ತನಕ ಇದೆ.
ನೀವು ರೂ 10 ಲಕ್ಷದ ಕೆಳಗಿನ ಕೆಲವು ಟರ್ಬೋ-ಪೆಟ್ರೋಲ್ ಕಾರುಗಳನ್ನೂ ಆಯ್ಕೆ ಮಾಡಬಹುದು ಆದರೆ, ಇವುಗಳು ತುಸು ಹೆಚ್ಚಿನ ಬಜೆಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಆತ್ಯುತ್ತಮ ಆಯ್ಕೆಯ ಕಾರುಗಳಾಗಿವೆ.
(ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳಾಗಿವೆ)
ಗಮನಿಸಿ: ನಮ್ಮ ಪರೀಕ್ಷಿಸಲಾದ 0-100kmph ಸಮಯಗಳು ಮತ್ತು ಇಂಧನ ದಕ್ಷತೆ ಅಂಕಿಗಳನ್ನು ನಮ್ಮ ರೋಡ್ ಟೆಸ್ಟ್‌ಗಳಲ್ಲಿ ದಾಖಲಾಗಿರುವಂತೆ ನಾವು ಸಾಧ್ಯವಾದಲ್ಲೆಲ್ಲಾ ಬಳಸಿಕೊಳ್ಳಲು ಪ್ರಯತ್ನಿಸಿದ್ದೇವೆ.
ಇನ್ನಷ್ಟು ಓದಿ : ಹ್ಯುಂಡೈ ವೆನ್ಯೂ ಎನ್ ಲೈನ್ ಆಟೋಮ್ಯಾಟಿಕ್