Login or Register ಅತ್ಯುತ್ತಮ CarDekho experience ಗೆ
Login

ವೋಲ್ವೋ C40 ರೀಚಾರ್ಜ್ EV ಯ ಬೆಲೆ 1.70ಲಕ್ಷ ರೂ.ನಷ್ಟು ದುಬಾರಿ, ತಿಂಗಳೊಳಗೆ 100 ಕ್ಕೂ ಹೆಚ್ಚು ಬುಕಿಂಗ್‌

ವೋಲ್ವೋ ಸಿ40 ರೀಚಾರ್ಜ್ ಗಾಗಿ shreyash ಮೂಲಕ ಅಕ್ಟೋಬರ್ 13, 2023 04:42 pm ರಂದು ಪ್ರಕಟಿಸಲಾಗಿದೆ

ವೋಲ್ವೋ C40 ರೀಚಾರ್ಜ್‌ನ ಬೆಲೆ ಈಗ ರೂ. 62.95 ಲಕ್ಷ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ) ಆಗಿದೆ.

  • ವೋಲ್ವೋ C40 ರೀಚಾರ್ಜ್ ಬಿಡುಗಡೆಯಾದ ಒಂದು ತಿಂಗಳೊಳಗೆ 100 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸ್ವೀಕರಿಸಿದೆ.
  • ಇದು XC40 ರೀಚಾರ್ಜ್‌ನೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ.
  • C40 ರೀಚಾರ್ಜ್ 78kWh ಬ್ಯಾಟರಿ ಪ್ಯಾಕ್‌ನೊಂದಿಗೆ WLTP-ಕ್ಲೈಮ್ ಮಾಡಲಾದ 530km ರೇಂಜ್ ಅನ್ನು ನೀಡುತ್ತದೆ.
  • ಇದು ಡ್ಯುಯಲ್ ಮೋಟಾರ್‌ಗಳೊಂದಿಗೆ ಆಲ್-ವೀಲ್-ಡ್ರೈವ್ ಸೆಟಪ್ ಅನ್ನು ಹೊಂದಿದೆ (408PS /660Nm).
  • ವೋಲ್ವೋ C40 ರೀಚಾರ್ಜ್‌ಗಾಗಿ ಬುಕ್ಕಿಂಗ್‌ಗಳನ್ನು ಪ್ರಸ್ತುತ ರೂ. 1 ಲಕ್ಷದ ಮುಂಗಡ ಮೊತ್ತದೊಂದಿಗೆ ಸ್ವೀಕರಿಸಲಾಗುತ್ತಿದೆ.

ವೋಲ್ವೋ C40 ರೀಚಾರ್ಜ್ ಅನ್ನು ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ, ಈ ವಾಹನವು 100 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಸ್ವೀಕರಿಸಿದೆ. ಇದು ವೋಲ್ವೋದ ಎರಡನೇ ಎಲೆಕ್ಟ್ರಿಕ್ ಕಾರ್ ಆಗಿದ್ದು, ಇದುವರೆಗೆ ರೂ. 61.25 ಲಕ್ಷ ಬೆಲೆಗೆ ಲಭ್ಯವಾಗುತ್ತಿತ್ತು (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ), ಆದರೆ ಈಗ ವೋಲ್ವೋ ಕಂಪನಿಯು ಈ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆಯನ್ನು ರೂ. 1.70 ಲಕ್ಷ ಹೆಚ್ಚಿಸಿದೆ, ಅಂದರ ಅದರ ಬೆಲೆಯೀಗ ರೂ. 62.95 ಲಕ್ಷ (ಎಕ್ಸ್ ಶೋ ರೂಂ) ಆಗಿದೆ. ವೋಲ್ವೋ C40 ರೀಚಾರ್ಜ್‌ನ ವಿಶೇಷತೆಗಳ ಬಗ್ಗೆ ಕೆಳಗೆ ನೀಡಲಾಗಿದೆ:

C40 ರೀಚಾರ್ಜ್ ಎಂಬುದು XC40 ರೀಚಾರ್ಜ್‌ನ ಕೂಪ್-ಶೈಲಿಯ ಆವೃತ್ತಿಯಾಗಿದೆ ಮತ್ತು ಈ ಎರಡೂ ಕಾರುಗಳನ್ನು ಒಂದೇ ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ (CMA) ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿ ನಿರ್ಮಿಸಲಾಗಿದೆ. ಸ್ಪೋರ್ಟಿಯರ್- ರಿಯರ್ ವಿಭಾಗವನ್ನು ಹೊರತುಪಡಿಸಿ, C40 ರೀಚಾರ್ಜ್ XC40 ರೀಚಾರ್ಜ್‌ನೊಂದಿಗೆ ಅನೇಕ ಇತರ ಹೋಲಿಕೆಗಳನ್ನು ಹೊಂದಿದೆ.

ಕ್ಯಾಬಿನ್‌ನ ತಂತ್ರಜ್ಞಾನ

ವೋಲ್ವೋದ ಈ ಎಲೆಕ್ಟ್ರಿಕ್ ಎಸ್‌ಯುವಿ 9-ಇಂಚಿನ ವರ್ಟಿಕಲ್ ಟಚ್‌ಸ್ಕ್ರೀನ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಹೀಟಿಂಗ್ ಮತ್ತು ಕೂಲಿಂಗ್ ಕಾರ್ಯದೊಂದಿಗೆ ಪವರ್ಡ್ ಫ್ರಂಟ್ ಸೀಟುಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, 600W 13-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್ ಮತ್ತು ಪನೋರಮಿಕ್ ಗ್ಲಾಸ್ ರೂಫ್‌ನಂತಹ ಫೀಚರ್‌ಗಳನ್ನು ಹೊಂದಿದೆ.

ಪ್ರಯಾಣಿಕರ ಸುರಕ್ಷತೆಗಾಗಿ, C40 ರೀಚಾರ್ಜ್ ಎಲೆಕ್ಟ್ರಿಕ್ ಕಾರಿನಲ್ಲಿ ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಹಿಲ್-ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಕೊಲಿಷನ್ ಅವಾಯ್ಡನ್ಸ್ ಮತ್ತು ಬ್ಲೈಂಡ್-ಸ್ಪಾಟ್ ಡಿಟೆಕ್ಷನ್‌ನಂತಹ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟಂಟ್ ಸಿಸ್ಟಂ (ADAS) ಸೂಟ್‌ಗಳನ್ನು ಒದಗಿಸಲಾಗಿದೆ.

ಬ್ಯಾಟರಿ ಮತ್ತು ರೇಂಜ್

ವೋಲ್ವೋ C40 ರೀಚಾರ್ಜ್ XC40 ರೀಚಾರ್ಜ್‌ನಂತೆಯೇ ಅದೇ 78kWh ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಆದರೆ XC40 ರೀಚಾರ್ಜ್‌ನ 418km ಕ್ಲೈಮ್ ಮಾಡಲಾದ ರೇಂಜ್‌ಗೆ ಹೋಲಿಸಿದರೆ ಇದರ WLTP-ಕ್ಲೈಮ್ ಮಾಡಲಾದ ರೇಂಜ್ 530km ಆಗಿದೆ. ಈ ಹೆಚ್ಚಿನ ರೇಂಜ್‌ಗೆ ಕಾರಣ ಬ್ಯಾಟರಿ ಪ್ಯಾಕ್‌ನ ವರ್ಧಿತ ಶಕ್ತಿಯ ದಕ್ಷತೆ ಮತ್ತು C40 ರೀಚಾರ್ಜ್‌ನ ಸ್ಲೀಕರ್ ಮತ್ತು ಹೆಚ್ಚು ಏರೋಡೈನಾಮಿಕ್ ವಿನ್ಯಾಸವಾಗಿದೆ.

ಈ ಬ್ಯಾಟರಿ ಪ್ಯಾಕ್ ಜೊತೆಗೆ, ಇದು ಆಲ್-ವೀಲ್-ಡ್ರೈವ್ (AWD) ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಹೊಂದಿದೆ, ಇದರ ಪವರ್ ಔಟ್‌ಪುಟ್ 408PS ಮತ್ತು 660Nm ಆಗಿದೆ. ಈ ಕಾರು ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು 4.7 ಸೆಕೆಂಡುಗಳಲ್ಲಿ ತಲುಪುತ್ತದೆ.

ಈ ವಾಹನವು 150kW DC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. DC ಫಾಸ್ಟ್ ಚಾರ್ಜರ್ ಮೂಲಕ, ಅದರ ಬ್ಯಾಟರಿಯನ್ನು 27 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ವೋಲ್ವೋ ಎಸ್‌ಯುವಿಗೆ 11kW AC ಚಾರ್ಜರ್ ಅನ್ನು ಸಹ ಒದಗಿಸುತ್ತದೆ.

ಇದನ್ನೂ ಪರಿಶೀಲಿಸಿ: ಭಾರತದಲ್ಲಿ ಲಭ್ಯವಿರುವ ಈ 11 ಎಲೆಕ್ಟ್ರಿಕ್ ಕಾರುಗಳ ಕ್ಲೈಮ್ ಮಾಡಲಾದ ರೇಂಜ್ 500km ಗಿಂತ ಹೆಚ್ಚು!

ಪ್ರತಿಸ್ಪರ್ಧಿಗಳು

ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು BMW i4, ಹುಂಡೈ ಅಯಾನಿಕ್ 5, ಕಿಯಾ EV6 ಮತ್ತು ವೋಲ್ವೋ XC40 ರೀಚಾರ್ಜ್ ಗಳೊಂದಿಗೆ ಸ್ಪರ್ಧಿಸುತ್ತದೆ.

ಇನ್ನಷ್ಟು ಓದಿ: C40 ರೀಚಾರ್ಜ್ ಆಟೋಮ್ಯಾಟಿಕ್

Share via

Write your Comment on Volvo ಸಿ40 ರೀಚಾರ್ಜ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ