Volvo XC40 Recharge; ಭಾರತದ ಫೆಸಿಲಿಟಿಯಿಂದ ಹೊರಬರುತ್ತಿರುವ 10,000 ನೇ ಮಾಡೆಲ್
ಈ ಐಷಾರಾಮಿ ಕಾರು ತಯಾರಕ ಕಂಪನಿಯು 2017 ರಲ್ಲಿ ತನ್ನ ಬೆಂಗಳೂರಿನ ಫೆಸಿಲಿಟಿಯಲ್ಲಿ XC90 ಅನ್ನು ಮೊದಲು ಜೋಡಿಸುವ ಮೂಲಕ ಸ್ಥಳೀಯವಾಗಿ ಕಾರುಗಳನ್ನು ಜೋಡಿಸಲು ಪ್ರಾರಂಭಿಸಿತು.
ವೋಲ್ವೋ ಇಂಡಿಯಾ ತನ್ನ ಸ್ಥಳೀಯ ಫೆಸಿಲಿಟಿಯಿಂದ 10,000 ಯುನಿಟ್‌ಗಳನ್ನು ಹೊರತರುವ ಮೂಲಕ ಇದೀಗ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ವೋಲ್ವೋ XC40 ರೀಚಾರ್ಜ್ ಎಲೆಕ್ಟ್ರಿಕ್ SUVಯು ಈ ಮೈಲಿಗಲ್ಲನ್ನು ಸಾಧಿಸಿದ ಮಾಡೆಲ್ ಆಗಿದೆ.
ಭಾರತದಲ್ಲಿ ವೋಲ್ವೋ ಇತಿಹಾಸ
ಈ ಸ್ವೀಡಿಷ್ ಮೂಲದ ಐಷಾರಾಮಿ ಕಾರು ತಯಾರಕರು 2017 ರಲ್ಲಿ ವೋಲ್ವೋ XC90 ಅನ್ನು ಮೊದಲು ಜೋಡಿಸುವ ಮೂಲಕ ಅದರ ಮಾಡೆಲ್ ಗಳನ್ನು ಬೆಂಗಳೂರಿನ ಫೆಸಿಲಿಟಿಯಲ್ಲಿ ಜೋಡಿಸಲು ಪ್ರಾರಂಭಿಸಿದರು. ವೋಲ್ವೋ XC60 ತನ್ನ ಭಾರತೀಯ ಉತ್ಪಾದನಾ ಫೆಸಿಲಿಟಿಯಲ್ಲಿ ಅತಿ ಹೆಚ್ಚು ಉತ್ಪಾದಿಸಲ್ಪಟ್ಟ ಮಾಡೆಲ್ ಆಗಿದೆ ಮತ್ತು ಇಲ್ಲಿಯವರೆಗೆ 4,000 ಯೂನಿಟ್ ಗಳನ್ನು ಹೊರತಂದಿದೆ. ಈ ಮಾಡೆಲ್ ಗಳನ್ನು ಇಲ್ಲಿ ಕೇವಲ ಜೋಡಿಸಲಾಗುತ್ತದೆ ಆದರೆ ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ವೋಲ್ವೋ ಪ್ರಸ್ತುತ ಇಲ್ಲಿ ಯಾವ ಮಾಡೆಲ್ ಗಳನ್ನು ಉತ್ಪಾದಿಸುತ್ತದೆ?
ವೋಲ್ವೋ ಪ್ರಸ್ತುತ ತನ್ನ ಸಂಪೂರ್ಣ ಭಾರತದ ಲೈನ್ ಅಪ್ ಅನ್ನು ಹೊಸಕೋಟೆ ಮೂಲದ ಫೆಸಿಲಿಟಿಯಲ್ಲಿ ಜೋಡಿಸುತ್ತದೆ. ಇದು ವೋಲ್ವೋದ ಇಂಟರ್ನಲ್ ಕಮ್ಬಾಷನ್ ಎಂಜಿನ್‌ಗಳು (ICE) ಮತ್ತು EV ಶ್ರೇಣಿಯನ್ನು ಒಳಗೊಂಡಿದೆ, ಇವುಗಳಲ್ಲಿ XC60 ಮತ್ತು XC90 SUV ಗಳು, S90 ಸೆಡಾನ್, XC40 ರೀಚಾರ್ಜ್ ಮತ್ತು ಹೊಸದಾಗಿ ಬಿಡುಗಡೆಯಾದ C40 ರೀಚಾರ್ಜ್ ಸೇರಿವೆ.
ಭಾರತದಲ್ಲಿ ವೋಲ್ವೋ ಕಂಪನಿಯ ಮುಂದಿನ ದಿನಗಳ ಪ್ಲಾನ್
2025 ರ ವೇಳೆಗೆ ಭಾರತದಲ್ಲಿ ತನ್ನ EV ಪೋರ್ಟ್‌ಫೋಲಿಯೊದಿಂದ ಅರ್ಧದಷ್ಟು ಮಾರಾಟವನ್ನು ಸಾಧಿಸುವ ಬಯಕೆಯನ್ನು ಈ ಹಿಂದೆ ವೋಲ್ವೋ ವ್ಯಕ್ತಪಡಿಸಿದೆ. ಇದರ ಪ್ರಸ್ತುತ ಭಾರತದ ಲೈನ್ ಅಪ್ ನಲ್ಲಿ ಕೇವಲ ಎರಡು EVಗಳನ್ನು ಒಳಗೊಂಡಿದೆ, ಅವುಗಳೆಂದರೆ XC40 ರೀಚಾರ್ಜ್ ಮತ್ತು C40 ರೀಚಾರ್ಜ್. ಹೊಸ ಫ್ಲ್ಯಾಗ್‌ಶಿಪ್ EX90 ಮತ್ತು ಹೊಸ ಎಂಟ್ರಿ ಲೆವೆಲ್ EX30 ಎಲೆಕ್ಟ್ರಿಕ್ SUV ಗಳ ಸಂಭವನೀಯ ಸೇರ್ಪಡೆಗಳೊಂದಿಗೆ ಇದು ಶೀಘ್ರದಲ್ಲೇ ವಿಸ್ತರಿಸಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ.
ಸದ್ಯಕ್ಕೆ, ವೋಲ್ವೋದ ಸಂಪೂರ್ಣ ಭಾರತೀಯ ಲೈನ್ ಅಪ್ ಬೆಲೆಯು ರೂ 57.90 ಲಕ್ಷದಿಂದ ಶುರುವಾಗಿ ರೂ 1.01 ಕೋಟಿಯವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.
ಇನ್ನಷ್ಟು ಓದಿ: ವೋಲ್ವೋ XC40 ರೀಚಾರ್ಜ್ ಆಟೋಮ್ಯಾಟಿಕ್