ವೀಕ್ಷಿಸಿ: Nexon EV Facelift ವಾಹನದಲ್ಲಿ ಬ್ಯಾಕ್ ಲಿಟ್ ಸ್ಟೀಯರಿಂಗ್ ವೀಲ್ ಗೆ ಟಾಟಾ ಸಂಸ್ಥೆಯು ಏರ್ ಬ್ಯಾಗ್ ಅಳವಡಿಸಿದ್ದು ಹೇಗೆ
ನೆಕ್ಸನ್ EV ಕಾರಿನ ಸ್ಟೀಯರಿಂಗ್ ವೀಲ್ ನ ಬ್ಯಾಕ್ ಲಿಟ್ ಸೆಂಟರ್ ಪ್ಯಾಡ್ ಗಾಜಿನಂತಹ ಫಿನಿಶ್ ಹೊಂದಿದ್ದರೂ ಅದು ನಿರ್ದಿಷ್ಟ ರೀತಿಯ ಪ್ಲಾಸ್ಟಿಕ್ ಆಗಿದೆ.
ಈ ಸ್ಟೀಯರಿಂಗ್ ವೀಲ್ ಅತ್ಯಾಧುನಿಕ ನೋಟವನ್ನು ಹೊಂದಿದ್ದರೂ, ಬ್ಯಾಕ್ ಲಿಟ್ ಸೆಂಟರ್ ಪ್ಯಾಡ್ ಅನ್ನು ಅನೇಕರು ಇನ್ನೂ ಗಾಜು ಎಂದು ಭಾವಿಸಿದ್ದಾರೆ. ಒಂದು ವೇಳೆ ಚಾಲಕನ ಏರ್ ಬ್ಯಾಗ್ ಸಕ್ರಿಯಗೊಂಡರೆ, ಇದು ಸೆಂಟರ್ ಪ್ಯಾಡ್ ಅನ್ನು ಪುಡಿ ಪುಡಿ ಮಾಡಿ ಇನ್ನಷ್ಟು ಗಾಯವನ್ನುಂಟು ಮಾಡಬಹುದು ಎಂಬ ಭೀತಿ ವ್ಯಕ್ತವಾಗಿತ್ತು. ಟಾಟಾದ ಚೀಫ್ ಪ್ರಾಡಕ್ಟ್ ಆಫಿಸರ್ ಆನಂದ್ ಕುಲಕರ್ಣಿ ಅವರು ಈ ಕಳವಳದ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ಲಾಸ್ ಫಿನಿಶ್ ಹೊಂದಿರುವ ಪ್ಲಾಸ್ಟಿಕ್
ವೀಡಿಯೋದಲ್ಲಿ ಕಾಣುವಂತೆ, ನೆಕ್ಸನ್ EV ಯ 2 ಸ್ಪೋಕ್ ಸ್ಟೀಯರಿಂಗ್ ವೀಲ್ ನ ಬ್ಯಾಕ್ ಲಿಟ್ ಸೆಂಟರ್ ಪ್ಯಾಡ್ ಅನ್ನು ಉನ್ನತ ಗುಣಮಟ್ಟದ ಪ್ಲಾಸ್ಟಿಕ್ ಬಳಸಿ ತಯಾರಿಸಲಾಗಿದೆಯೇ ಹೊರತು ಗಾಜಿನಿಂದ ಅಲ್ಲ ಎಂದು ಟಾಟಾ ಮೋಟರ್ಸ್ ಸಂಸ್ಥೆಯ ಚೀಫ್ ಪ್ರಾಡಕ್ಟ್ ಆಫಿಸರ್ ಆನಂದ್ ಕುಲಕರ್ಣಿ ಅವರು ವಿವರಿಸಿದ್ದಾರೆ. ಅವರು ವಿವರಿಸುವಂತೆ, ಪ್ಯಾಡ್ ಕೆಳಗಡೆ ಸೀಮ್ ಇದ್ದು, ಇಲ್ಲಿಂದ ಏರ್ ಬ್ಯಾಗುಗಳು ಸಕ್ರಿಯಗೊಳ್ಳಬೇಕು. ಸೀಮ್ ಅಲ್ಲದೆ, ಸ್ಟೀಯರಿಂಗ್ ಪ್ಯಾಡ್ ನ ಉಳಿದ ಭಾಗಗಳು ಸಹ ಬಲವರ್ಧನೆಗೆ ಒಳಪಟ್ಟಿವೆ. ಏರ್ ಬ್ಯಾಗ್ ಸಕ್ರಿಯಗೊಂಡಾಗ ಇದು ಪುಡಿಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಈ ಸ್ಟೀಯರಿಂಗ್ ಪ್ಯಾಡ್ ಗಾಗಿ ಸರಿಯಾದ ಪ್ಲಾಸ್ಟಿಕ್ ಅನ್ನು ಆರಿಸಲಾಗಿದ್ದು, ಇದು ಏನು ಮಾಡಬೇಕೋ ಅದನ್ನೇ ಮಾಡುವುದಕ್ಕಾಗಿ ಟಾಟಾ ಮಾತ್ರವಲ್ಲದೆ ಸಂಬಂಧಿತ ನಿಯಂತ್ರಕ ಸಂಸ್ಥೆಗಳಿಂದ ಅನೇಕ ಪರೀಕ್ಷೆಗಳಿಗೆ ಒಳಗಾಗಿದೆ.
ಇದನ್ನು ಸಹ ನೋಡಿರಿ: ವೀಕ್ಷಿಸಿ: ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ V2L ವೈಶಿಷ್ಟ್ಯಗಳು
ಇತರ ಸುರಕ್ಷಾ ಗುಣಲಕ್ಷಣಗಳು
ನೆಕ್ಸನ್ EV ಕಾರಿನ ಸುರಕ್ಷಾ ಬತ್ತಳಿಕೆಯು, ಆರು ಏರ್ ಬ್ಯಾಗುಗಳು (ಪ್ರಮಾಣಿತ), 360 ಡಿಗ್ರಿ ಕ್ಯಾಮರಾ, ಬ್ಲೈಂಡ್ ವ್ಯೂ ಮಾನಿಟರಿಂಗ್ ಸಿಸ್ಟಂ, ಮತ್ತು ಮುಂದಿನ ಹಾಗೂ ಹಿಂದಿನ ಪಾರ್ಕಿಂಗ್ ಸೆನ್ಸಾರ್ ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ SUV ಯು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಜೊತೆಗೆ EBD ಯೊಂದಿಗೆ ABS, ರೋಲ್ ಓವರ್ ಮಿಟಿಗೇಶನ್, ಎಲ್ಲಾ ಪ್ರಯಾಣಿಕರಿಗಾಗಿ 3-ಪಾಯಿಂಟ್ ಸೀಟ್ ಬೆಲ್ಟ್ ಗಳು, ಮಗುವಿನ ಸೀಟ್ ಗಾಗಿ ISOFIX ಆಂಕರೇಜ್ ಪಾಯಿಂಟುಗಳು, ಮುಂದಿನ ಮತ್ತು ಹಿಂದಿನ ಪಾರ್ಕಿಂಗ್ ಸೆನ್ಸಾರ್ ಗಳು, ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಅನ್ನು ಹೊಂದಿದೆ.
2023ರ ನೆಕ್ಸನ್ Evಯ ಪರಿಷ್ಕೃತ ಪವರ್ ಟ್ರೇನ್ ಮತ್ತು ಹೊಸ ಗುಣಲಕ್ಷಣಗಳ ಕುರಿತು ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿ ಕ್ಲಿಕ್ ಮಾಡಿ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ಕಾರಿನ ಬೆಲೆಯು ಸೆಪ್ಟೆಂಬರ್ 14 ರಂದು ಘೋಷಣೆಯಾಗಲಿದ್ದು, ಅದು ರೂ. 15 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ. ಟಾಟಾದ ಈ ಎಲೆಕ್ಟ್ರಿಕ್ SUV ಯು ಮಹೀಂದ್ರಾ XUV400 ಜೊತೆಗೆ ಸ್ಪರ್ಧಿಸಲಿದ್ದು, MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಬದಲಿಗೆ ಅಗ್ಗದ ಆಯ್ಕೆ ಎನಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ನೆಕ್ಸನ್ ಆಟೋಮ್ಯಾಟಿಕ್