• ಕಿಯಾ ಸೆಲ್ಟೋಸ್ ಮುಂಭಾಗ left side image
1/1
  • Kia Seltos
    + 57ಚಿತ್ರಗಳು
  • Kia Seltos
  • Kia Seltos
    + 8ಬಣ್ಣಗಳು
  • Kia Seltos

ಕಿಯಾ ಸೆಲ್ಟೋಸ್

with ಫ್ರಂಟ್‌ ವೀಲ್‌ option. ಕಿಯಾ ಸೆಲ್ಟೋಸ್ Price starts from ₹ 10.90 ಲಕ್ಷ & top model price goes upto ₹ 20.30 ಲಕ್ಷ. It offers 27 variants in the 1482 cc & 1497 cc engine options. This car is available in ಡೀಸಲ್ ಮತ್ತು ಪೆಟ್ರೋಲ್ options with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's & . This model has safety airbags. This model is available in 9 colours.
change car
336 ವಿರ್ಮಶೆಗಳುrate & win ₹ 1000
Rs.10.90 - 20.30 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮಾರ್ಚ್‌ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಕಿಯಾ ಸೆಲ್ಟೋಸ್ ನ ಪ್ರಮುಖ ಸ್ಪೆಕ್ಸ್

engine1482 cc - 1497 cc
ಪವರ್113.42 - 157.81 ಬಿಹೆಚ್ ಪಿ
torque253 Nm - 250 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage17 ಗೆ 20.7 ಕೆಎಂಪಿಎಲ್
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
powered ಚಾಲಕ seat
ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
ಸನ್ರೂಫ್
powered ಮುಂಭಾಗ ಸೀಟುಗಳು
ವೆಂಟಿಲೇಟೆಡ್ ಸೀಟ್‌ಗಳು
ಡ್ರೈವ್ ಮೋಡ್‌ಗಳು
360 degree camera
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸೆಲ್ಟೋಸ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹಳೆಯ ಮತ್ತು ಹೊಸ ಕಿಯಾ ಸೆಲ್ಟೋಸ್‌ನ ಟರ್ಬೊ-ಪೆಟ್ರೋಲ್ DCT ಆವೃತ್ತಿಗಳ ಕಾರ್ಯಕ್ಷಮತೆಯನ್ನು ನಾವು ಹೋಲಿಸಿದ್ದೇವೆ. ಈ ಎಸ್‌ಯುವಿಯು ಕೆಲವು ಉಪಯುಕ್ತ ಆದರೆ ಕಡಿಮೆ-ತಿಳಿದಿರುವ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಆಗಿದೆ, ಅದರ ಕುರಿತು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ.

ಬೆಲೆ: ಕಿಯಾ ಸೆಲ್ಟೋಸ್‌  ಫೇಸ್‌ಲಿಫ್ಟ್‌ನ ಪ್ಯಾನ್-ಇಂಡಿಯಾ ಪರಿಚಯಾತ್ಮಕ ಬೆಲೆ ರೂ 10.90 ಲಕ್ಷದಿಂದ 20.00 ಲಕ್ಷ ರೂ ವರೆಗೆ ಇದೆ.

ವೇರಿಯೆಂಟ್ ಗಳು: ಕಿಯಾದ ಕಾಂಪ್ಯಾಕ್ಟ್ SUV ಅನ್ನು ಮೂರು ವಿಶಾಲವಾದ ವೇರಿಯೆಂಟ್ ಗಳಲ್ಲಿ ಹೊಂದಬಹುದು: ಟೆಕ್ (HT) ಲೈನ್, GT ಲೈನ್ ಮತ್ತು X-ಲೈನ್. ಟೆಕ್ ಲೈನ್ ಅನ್ನು ಮತ್ತಷ್ಟು HTE, HTK, HTK+, HTX ಮತ್ತು HTX+ ಟ್ರಿಮ್‌ಗಳಾಗಿ ವರ್ಗೀಕರಿಸಲಾಗಿದೆ, ಆದರೆ GT ಲೈನ್ ಅನ್ನು ಈಗ GTX+ (S) ಮತ್ತು GTX+ ಎಂಬ ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಈ ಹಬ್ಬದ ಸೀಸನ್ ನಲ್ಲಿ ಎಕ್ಸ್-ಲೈನ್ ಆವೃತ್ತಿಯು ಕೈಗೆಟುಕುವ ಬೆಲೆಯ ಎಕ್ಸ್-ಲೈನ್ (ಎಸ್) ವೇರಿಯೆಂಟ್ ನ್ನು ಸಹ ಪಡೆದುಕೊಂಡಿದೆ.

ಬಣ್ಣಗಳು: ಗ್ರಾಹಕರು ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಎಂಟು ಮೊನೊಟೋನ್, ಎರಡು ಡ್ಯುಯಲ್-ಟೋನ್ ಮತ್ತು ಒಂದು ಮ್ಯಾಟ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು: ಸ್ಪಾರ್ಕ್ಲಿಂಗ್ ಸಿಲ್ವರ್, ಕ್ಲಿಯರ್ ವೈಟ್, ಗ್ರಾವಿಟಿ ಗ್ರೇ, ಪ್ಯೂಟರ್ ಆಲಿವ್, ಅರೋರಾ ಬ್ಲಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್, ಇಂಟೆನ್ಸ್ ರೆಡ್, ಇಂಪೀರಿಯಲ್ ಬ್ಲ್ಯಾಕ್ ವಿತ್ ವೈಟ್ ಪರ್ಲ್, ಇಂಪೀರಿಯಲ್ ಬ್ಲ್ಯಾಕ್ ರೂಫ್, ಇಂಪೀರಿಯಲ್ ಬ್ಲ್ಯಾಕ್ ರೂಫ್ ಬ್ಲ್ಯಾಕ್ ಪರ್ಲ್ ರೂಫ್ ಮತ್ತು ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್.

ಆಸನ ಸಾಮರ್ಥ್ಯ: ಇದು 5-ಆಸನಗಳ ಸಂರಚನೆಯಲ್ಲಿ ಲಭ್ಯವಿದೆ.

ಬೂಟ್ ಸ್ಪೇಸ್: ಸೆಲ್ಟೋಸ್ 433 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ನೀಡುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ ಮಿಷನ್: 2023 ಸೆಲ್ಟೋಸ್ ಅನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: 1.5-ಲೀಟರ್ ಪೆಟ್ರೋಲ್ (115PS/144Nm) ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ CVT ಗೆ ಜೋಡಿಸಲಾಗಿದೆ, ಮತ್ತು 1.5-ಲೀಟರ್ ಡೀಸೆಲ್ (116PS/250Nm)  6-ಸ್ಪೀಡ್ ಐಎಂಟಿಪಿ ಅಥವಾ 6-ಸ್ಪೀಡ್ ಟಾರ್ಕ್ ಕನ್ವೆರ್ಟರ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗಿದೆ. ಇದು ಕ್ಯಾರೆನ್ಸ್‌ನಿಂದ ಮೂರನೆಯ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160PS/253Nm) ಅನ್ನು ಸಹ ಪಡೆಯುತ್ತದೆ, ಇದನ್ನು 6-ಸ್ಪೀಡ್ iMT (ಕ್ಲಚ್‌ಲೆಸ್ ಮ್ಯಾನುಯಲ್) ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಗೆ ಜೋಡಿಸಲಾಗಿದೆ.

ಕಂಪೆನಿ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • 1.5 N.A. ಪೆಟ್ರೋಲ್ MT - ಪ್ರತಿ ಲೀ.ಗೆ 17 ಕಿ.ಮೀ

  • 1.5 N.A. ಪೆಟ್ರೋಲ್ CVT - ಪ್ರತಿ ಲೀ.ಗೆ 17.7 ಕಿ.ಮೀ

  • 1.5 ಟರ್ಬೊ-ಪೆಟ್ರೋಲ್ iMT - ಪ್ರತಿ ಲೀ.ಗೆ 17.7 ಕಿ.ಮೀ

  • 1.5 ಟರ್ಬೊ-ಪೆಟ್ರೋಲ್ DCT - ಪ್ರತಿ ಲೀ.ಗೆ17.9 ಕಿ.ಮೀ

  • 1.5 ಡೀಸೆಲ್ iMT - ಪ್ರತಿ ಲೀ.ಗೆ  20.7 ಕಿ.ಮೀ

  • 1.5 ಡೀಸೆಲ್ AT - ಪ್ರತಿ ಲೀ.ಗೆ 19.1 ಕಿ.ಮೀ

ವೈಶಿಷ್ಟ್ಯಗಳು: ಹೊಸ ಕಿಯಾ ಸೆಲ್ಟೋಸ್‌ನಲ್ಲಿರುವ ವೈಶಿಷ್ಟ್ಯಗಳು ಸಂಯೋಜಿತ ಡಿಸ್ಪ್ಲೇ ಸೆಟಪ್ (10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ. ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ಎಲ್ಇಡಿ ಸೌಂಡ್ ಮೂಡ್ ಲೈಟಿಂಗ್, ಹೆಡ್ಸ್ ಅಪ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗಿದೆ. 

ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಅಸಿಸ್ಟ್ ಕಂಟ್ರೋಲ್ (HAC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ ಗಳಾದ (ADAS) ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನ್ನು ಸಹ ಪಡೆಯುತ್ತದೆ.

 ಪ್ರತಿಸ್ಪರ್ಧಿಗಳು: ಕಿಯಾದ ಈ  ಕಾಂಪ್ಯಾಕ್ಟ್ SUVಯು MG ಆಸ್ಟರ್, ಹ್ಯುಂಡೈ ಕ್ರೆಟಾ, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸಿಟ್ರೊಯೆನ್ C3 ಏರ್‌ಕ್ರಾಸ್, ಹೋಂಡಾ ಎಲಿವೇಟ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸುತ್ತದೆ.

ಮತ್ತಷ್ಟು ಓದು
ಕಿಯಾ ಸೆಲ್ಟೋಸ್ Brochure

ಡೌನ್ಲೋಡ್ the brochure to view detailed specs and features

download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
ಸೆಲ್ಟೋಸ್ ಹೆಚ್‌ಟಿಇ(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.10.90 ಲಕ್ಷ*
ಸೆಲ್ಟೋಸ್ ಹೆಚ್‌ಟಿಇ ಡೀಸಲ್(Base Model)1497 cc, ಮ್ಯಾನುಯಲ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.12 ಲಕ್ಷ*
ಸೆಲ್ಟೋಸ್ ಹೆಚ್‌ಟಿಇ ಡೀಸೆಲ್ ಐಎಮ್‌ಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.12 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.12.10 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.13.50 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.13.60 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಡೀಸೆಲ್ ಐಎಮ್‌ಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.13.60 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.15 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ಡೀಸೆಲ್ ಐಎಮ್‌ಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.15 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ಟರ್ಬೊ ಐಎಂಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.15 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.15.20 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಐವಿಟಿ1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್
ಅಗ್ರ ಮಾರಾಟ
more than 2 months waiting
Rs.16.60 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್more than 2 months waitingRs.16.68 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಡೀಸೆಲ್ ಐಎಮ್‌ಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.16.70 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಡೀಸೆಲ್ ಆಟೋಮ್ಯಾಟಿಕ್‌1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.18.20 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಡೀಸಲ್1497 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.18.28 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಡೀಸೆಲ್ ಐಎಮ್‌ಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.18.30 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಐಎಂಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.18.30 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.19.20 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್ ಪ್ಲಸ್ ಎಸ್‌ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.19.40 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್ ಪ್ಲಸ್ ಹ್ಯುಂಡೈ ವೆನ್ಯೂ ಎಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.19.40 ಲಕ್ಷ*
ಸೆಲ್ಟೋಸ್ x-line ಎಸ್‌ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.19.60 ಲಕ್ಷ*
ಸೆಲ್ಟೋಸ್ ಎಕ್ಸ್-ಲೈನ್ ಎಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.19.60 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್ ಪ್ಲಸ್ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್
ಅಗ್ರ ಮಾರಾಟ
more than 2 months waiting
Rs.20 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.20 ಲಕ್ಷ*
ಸೆಲ್ಟೋಸ್ ಎಕ್ಸ್-ಲೈನ್ ಡೀಸೆಲ್ ಆಟೋಮ್ಯಾಟಿಕ್‌(Top Model)1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.20.30 ಲಕ್ಷ*
ಸೆಲ್ಟೋಸ್ ಎಕ್ಸ್-ಲೈನ್ ಟರ್ಬೊ ಡಿಸಿಟಿ(Top Model)1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.20.30 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಕಿಯಾ ಸೆಲ್ಟೋಸ್ ಇದೇ ಕಾರುಗಳೊಂದಿಗೆ ಹೋಲಿಕೆ

ಕಿಯಾ ಸೆಲ್ಟೋಸ್ ವಿಮರ್ಶೆ

2023 Kia Seltos

20 ಲಕ್ಷ ರೂಪಾಯಿಯ ರೇಂಜ್ ನಲ್ಲಿ ಒಂದು ಉತ್ತಮ SUV ಯನ್ನು ನಾವು ಹುಡುಕುವುದಾದರೆ ಕಿಯಾ ಸೆಲ್ಟೋಸ್ ಒಂದು ಉತ್ತಮ ಆಯ್ಕೆಯಾಗಲಿದೆ. ಈ ವಿಭಾಗದಲ್ಲಿ ಉತ್ತಮ ವೈಶಿಷ್ಟ್ಯಗಳು, ನೋಟ ಮತ್ತು ಗುಣಮಟ್ಟದೊಂದಿಗೆ ಇದನ್ನು ಬಿಡುಗಡೆ ಮಾಡಲಾಗಿದೆ. ಮತ್ತು 3-ಸ್ಟಾರ್ GNCAP ಸುರಕ್ಷತಾ ರೇಟಿಂಗ್ ಪಡೆಯುವ ಮೂಲಕ ಸಾಮಾನ್ಯಕ್ಕಿಂತ ಕಡಿಮೆಯಿದ್ದರೂ, ಇದು ನೀಡುವ ಸೌಲಭ್ಯಗಳ ಮೂಲಕ ತನ್ನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಫೇಸ್‌ಲಿಫ್ಟ್‌ನೊಂದಿಗೆ, ಉತ್ತಮ ವೈಶಿಷ್ಟ್ಯಗಳು, ಹೆಚ್ಚು ಶಕ್ತಿ ಮತ್ತು ಆಕ್ರಮಣಕಾರಿ ನೋಟಗಳೊಂದಿಗೆ ಇನ್ನಷ್ಟು ಸುಧಾರಿಸುತ್ತಿದೆ. ಆದರೆ ಖಂಡಿತವಾಗಿಯೂ ಈ ಕಾರಿನಲ್ಲಿ ಕೆಲವು ನ್ಯೂನತೆಗಳಿವೆ, ಹೌದಾ? ವಿಮರ್ಶೆಯಲ್ಲಿ ಅವುಗಳನ್ನು ಬೇಟೆಯಾಡೋಣ.

ಎಕ್ಸ್‌ಟೀರಿಯರ್

2023 Kia Seltos Front

ಈ ಕಿಯಾ ಸೆಲ್ಟೋಸ್ ನ ಫೇಸ್‌ಲಿಫ್ಟ್ ಹೆಚ್ಚು ವಿಭಿನ್ನವಾಗಿ ಕಾಣುತ್ತಿಲ್ಲ, ಆದರೆ ಇದು ಮೊದಲಿಗಿಂತ ಉತ್ತಮವಾಗಿ ಕಾಣುತ್ತದೆ. ಮತ್ತು ಇದು ಅದರ ಹೊಸ ಗ್ರಿಲ್ ಮತ್ತು ಬಂಪರ್‌ಗಳೊಂದಿಗೆ ಸಾಧ್ಯವಾಗಿದೆ. ಗ್ರಿಲ್ ಈಗ ದೊಡ್ಡದಾಗಿದೆ ಮತ್ತು ಹೆಚ್ಚು ದುಂಡಾಗಿದೆ.ಹಾಗೆಯೇ ಬಂಪರ್ ಗಳು ಮೊದಲಿಗಿಂತ ಸ್ಪೋರ್ಟಿಯರ್ ಮತ್ತು ಹೆಚ್ಚು ಆಕ್ರಮಣಕಾರಿಯಾಗಿರುವ ಲುಕ್ ಹೊಂದಿದೆ.  ಇದರಲ್ಲಿ ಮತ್ತೊಂದು ಹೈಲೈಟ್ ಎಂದರೆ,  ಅದು ಖಂಡಿತವಾಗಿಯೂ ಲೈಟಿಂಗ್ ಸೆಟಪ್ ಆಗಿದೆ. ನೀವು ಹೆಚ್ಚು ಡೀಟೈಲ್ಡ್ ಆಗಿರುವ ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತೀರಿ. ಅದು ಗ್ರಿಲ್ ಒಳಗೆ ವಿಸ್ತರಿಸುತ್ತದೆ ಮತ್ತು ನಂತರ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಸಹ ನೀಡುತ್ತದೆ. ಮತ್ತೊಂದು ಹೈಲೈಟ್‌ ಆಗಿರುವ ಡೈನಾಮಿಕ್ ಟರ್ನ್‌ ಇಂಡಿಕೇಟರ್‌ಗಳನ್ನು ಹೊಂದಿದೆ. ಇದರ ಸಂಪೂರ್ಣ ಲೈಟಿಂಗ್ ಸೆಟಪ್ ಈ ಸೆಗ್ಮೆಂಟ್‌ನಲ್ಲಿ ಮಾತ್ರ ಉತ್ತಮವಾಗಿಲ್ಲ. ಆದರೆ ಮುಂದಿನ ಸೆಗ್ಮೆಂಟ್‌ನ್ನು ಮೀರಿಸುತ್ತದೆ.  

Kia Seltos Profile

ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. 18-ಇಂಚಿನ ಚಕ್ರಗಳು ಮೊದಲು ಎಕ್ಸ್-ಲೈನ್‌ಗೆ ಮಾತ್ರ ಸೀಮಿತವಾಗಿತ್ತು, ಆದರೆ ಈಗ ಜಿಟಿ-ಲೈನ್ ಟ್ರಿಮ್‌ನಲ್ಲಿಯೂ ಲಭ್ಯವಿದೆ. ಇದರ ಹೊರತಾಗಿ ಸೂಕ್ಷ್ಮವಾದ ಕ್ರೋಮ್ ಟಚ್‌, ಡ್ಯುಯಲ್-ಟೋನ್ ಪೇಂಟ್ ಮತ್ತು ರೂಫ್ ರೈಲ್‌ಗಳು ಸ್ವಲ್ಪ ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಸಹಾಯ ಮಾಡುತ್ತದೆ. 

ಸೆಲ್ಟೋಸ್ ಹಿಂಭಾಗದಿಂದಲೂ ಉತ್ತಮವಾಗಿ ಕಾಣುತ್ತದೆ. ವಿನ್ಯಾಸದಲ್ಲಿ ಹಿಂದಿನದಕ್ಕಿಂತ ಸ್ವಲ್ಪ ದಪ್ಪವಾಗಿದೆ ಮತ್ತು ಟಾಪ್ ನಲ್ಲಿ ಸ್ಪಾಯ್ಲರ್ ಇದೆ, ಇದು ಲುಕ್ ನ್ನು ಆಸಕ್ತಿದಾಯಕವಾಗಿರಿಸುತ್ತದೆ.  ಮತ್ತು ನೀವು ಅದನ್ನು ಒಟ್ಟಾರೆ ಪ್ರಮಾಣದಲ್ಲಿ ನೋಡಿದರೆ, ಈ ಕಾರಿನ ವಿನ್ಯಾಸವು  ಎಲ್ಲಾ ರೀತಿಯಲ್ಲಿ ಪೂರ್ಣಗೊಂಡಿದೆ.  ಇದರ ಮುಂದುವರಿದ ಭಾಗವಾಗಿ, ಜಿಟಿ ಲೈನ್ ಮತ್ತು ಎಕ್ಸ್ ಲೈನ್ ವೇರಿಯೆಂಟ್ ಗಳು, ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ, ಡ್ಯುಯಲ್-ಟಿಪ್ ಎಕ್ಸಾಸ್ಟ್‌ಗಳನ್ನು ಪಡೆಯುತ್ತವೆ, ಅದು ತುಂಬಾ ಸ್ಪೋರ್ಟಿಯಾಗಿ ಕಾಣುತ್ತದೆ ಮತ್ತು ಸೌಂಡ್ ಗೆ ಉತ್ತಮವಾದ ಬಾಸ್ ಅನ್ನು ಸೇರಿಸುತ್ತದೆ.   

Kia Seltos Tailliights

ಆದರೆ ಇಲ್ಲಿ ಮತ್ತೆ ಹೈಲೈಟ್ ಆಗಿರುವುದು ಬೆಳಕಿನ ಸೆಟಪ್ ಆಗಿದೆ. ನೀವು LED ಕನೆಕ್ಟೆಡ್ ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತೀರಿ ಮತ್ತು ಅದರ ಕೆಳಗೆ ನೀವು ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳನ್ನು ಪಡೆಯುತ್ತೀರಿ. ನಂತರ ಎಲ್ಇಡಿ ಬ್ರೇಕ್ ಲೈಟ್ ಗಳು ಮತ್ತು ಅಂತಿಮವಾಗಿ ಎಲ್ಇಡಿ ರಿವರ್ಸ್ ಲೈಟ್ ಗಳು ಬರುತ್ತದೆ. ನೀವು ಈ ಕಾರನ್ನು ಕಚೇರಿಗೆ ಅಥವಾ ಪಾರ್ಟಿಗೆ ತೆಗೆದುಕೊಂಡು ಹೋಗಲು ಬಯಸುವುದಾದರೆ, ನೀವು ಅದನ್ನು ಚಾಲನೆ ಮಾಡುವುದನ್ನು ಆನಂದಿಸುವಿರಿ. ಏಕೆಂದರೆ ಇದು ಶೋ ಆಫ್ ಮಾಡಲು ಒಂದು ಉತ್ತಮ ಕಾರಾಗಿದೆ. 

ಇಂಟೀರಿಯರ್

Kia Seltos Interior

ಸೆಲ್ಟೋಸ್‌ನ ಡ್ಯಾಶ್‌ಬೋರ್ಡ್ ನ ಲೇಔಟ್ ಈಗ ಮೊದಲಿಗಿಂತ ಹೆಚ್ಚು ಅತ್ಯಾಧುನಿಕ ಮತ್ತು ಪ್ರಬುದ್ಧವಾಗಿ ಕಾಣುತ್ತದೆ. ಟಚ್‌ಸ್ಕ್ರೀನ್ ಈಗ ಮೊದಲಿಗಿಂತ ಸ್ವಲ್ಪ ಕಡಿಮೆಯಾಗಿದೆ ಏಕೆಂದರೆ ಡಿಸ್‌ಪ್ಲೇಯ ಅಡಿಯಲ್ಲಿದ್ದ ಟಚ್ ಕಂಟ್ರೋಲ್‌ಗಳನ್ನು ತೆಗೆದುಹಾಕಲಾಗಿದೆ. ಇದು ಡ್ಯಾಶ್ ಬೋರ್ಡ್‌ ಅನ್ನು ಸ್ವಲ್ಪ ಕೆಳಗೆ ತಂದಿದೆ ಮತ್ತು ವಿಸಿಬಿಲಿಟಿ ಕೂಡ ಸುಧಾರಿಸಿದೆ. ಹಾಗೆಯೇ ಇದು ಫಿಟ್, ಫಿನಿಶ್ ಮತ್ತು ಗುಣಮಟ್ಟದೊಂದಿಗೆ ಬರುತ್ತದೆ. ಈ ಕ್ಯಾಬಿನ್‌ನಲ್ಲಿರುವ ವಸ್ತುಗಳ ಗುಣಮಟ್ಟ ತುಂಬಾ ಒಳ್ಳೆಯದಿದೆ. ಸ್ಟೀರಿಂಗ್ ಲೆದರ್ ಕವರ್‌, ಬಟನ್‌ಗಳ ಟಚ್‌ ನ ಅನುಭವ ಅಥವಾ ಡ್ಯಾಶ್‌ಬೋರ್ಡ್ ನಲ್ಲಿನ ಸಾಫ್ಟ್-ಟಚ್ ಮೆಟೀರಿಯಲ್ಸ್, ಡೋರ್ ಪ್ಯಾಡ್‌ಗಳು ಮತ್ತು ಮೊಣಕೈ ರೆಸ್ಟ್‌ಗಳು, ಇವೆಲ್ಲವೂ ಒಟ್ಟಾಗಿ ಕ್ಯಾಬಿನ್ ಅನುಭವವನ್ನು ಹೆಚ್ಚಿಸುತ್ತವೆ ಮತ್ತು ಈ ಎಲ್ಲಾ ಅಂಶಗಳು ಹೊಸ ಸೆಲ್ಟೋಸ್‌ನ ಒಳಾಂಗಣವನ್ನು ಅತ್ಯುತ್ತಮವಾಗಿಸುತ್ತದೆ. ಹಾಗೆಯೇ ಈ ಸೆಗ್ಮೆಂಟ್‌ನಲ್ಲಿ ಇದು ಬೆಸ್ಟ್‌ ಎನಿಸಿದೆ.  

ವೈಶಿಷ್ಟ್ಯಗಳು

Kia Seltos features

ಸೆಲ್ಟೋಸ್ ಎಂದಿಗೂ ಯಾವುದೇ ಪ್ರಮುಖ ವೈಶಿಷ್ಟ್ಯಗಳಲ್ಲಿ ಕೊರತೆಯನ್ನು ಹೊಂದಿಲ್ಲ. ಆದರೆ ಸುರಕ್ಷಿತವಾಗಿರಲು, ಕಿಯಾ ಅನೇಕ ವೈಶಿಷ್ಟ್ಯಗಳನ್ನು ಸೇರಿಸಿದೆ. ಈಗ, ನೀವು ಹೆಚ್ಚುವರಿಯಾಗಿ ದೊಡ್ಡ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ರೈನ್ ಸೆನ್ಸಿಂಗ್  ವೈಪರ್‌ಗಳು, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, ಟೈಪ್ ಸಿ ಚಾರ್ಜಿಂಗ್ ಪೋರ್ಟ್‌ಗಳು, ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಏರ್ ಪ್ಯೂರಿಫೈಯರ್‌ಗಾಗಿ ಇಂಟಿಗ್ರೇಟೆಡ್ ಕಂಟ್ರೋಲ್‌ಗಳು, ವೇಗದ ಕ್ರೂಸ್ ಕಂಟ್ರೋಲ್, ಎಲ್ಲಾ ಪವರ್ ವಿಂಡೋಗಳು ಆಟೋಮ್ಯಾಟಿಕ್ ಆಗಿ ಮೇಲೆ ಕೆಳಗೆ ಆಗುತ್ತವೆ. ಇದರ ಹೊರತಾಗಿ, ಹೆಚ್ಚು ಜನರು ಇಷ್ಟಪಡುವ ಪನೋರಮಿಕ್ ಸನ್‌ರೂಫ್ ನ್ನು ಸಹ ಪಡೆಯುತ್ತೀರಿ. 

Kia Seltos Speaker

ಇದಲ್ಲದೆ, ಪವರ್ ಡ್ರೈವರ್ ಸೀಟ್, ಸೀಟ್ ವೆಂಟಿಲೇಶನ್, ಆಟೋ ಹೆಡ್‌ಲ್ಯಾಂಪ್‌ಗಳು, ಬೋಸ್‌ನ 8-ಸ್ಪೀಕರ್ ಸೌಂಡ್ ಸಿಸ್ಟಮ್, ಸೌಂಡ್ ಮೂಡ್ ಲೈಟಿಂಗ್, 360-ಡಿಗ್ರಿ ಕ್ಯಾಮೆರಾಗಳು, ವೈರ್‌ಲೆಸ್ ಚಾರ್ಜರ್ ಮತ್ತು ಸ್ಟೀರಿಂಗ್ ವೀಲ್‌ನ ರೀಚ್ ಮತ್ತು ಟಿಲ್ಟ್ ಇನ್ನೂ ಈ ಹಿಂದಿನಂತೆಯೇ ಇದೆ.

Kia Seltos Center Console

ಏನು ಮಿಸ್ ಆಗಿದೆ? ಹೌದು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್‌ನಲ್ಲಿ ಬಹಳಷ್ಟು ಬಟನ್‌ಗಳಿವೆ, ಆದ್ದರಿಂದ ಕಾರ್ಯವನ್ನು ಸುಧಾರಿಸುವ ಹೊರತಾಗಿಯೂ ಇದು ಸ್ವಲ್ಪ ಹಿಂದುಳಿದಂತೆ ಕಾಣುತ್ತದೆ. ಹಾಗೆಯೇ ಇದು ಇನ್ಫೋಟೈನ್‌ಮೆಂಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್ಪ್ಲೇ ಅನ್ನು ಪಡೆಯುವುದಿಲ್ಲ ಮತ್ತು ಅಂತಿಮವಾಗಿ, ಪ್ರಯಾಣಿಕರ ಆಸನವು ಎತ್ತರ ಹೊಂದಾಣಿಕೆಯನ್ನು ಪಡೆಯುವುದಿಲ್ಲ. ಅಷ್ಟೇ.

ಕ್ಯಾಬಿನ್ ಪ್ರಾಯೋಗಿಕತೆ

Kia Seltos dashboard

ಈ ಅಂಶವನ್ನು ಸಹ ವಿಂಗಡಿಸಲಾಗಿದೆ. ನೀವು ಎಲ್ಲಾ ಬಾಗಿಲಿನ ಪಾಕೆಟ್‌ಗಳಲ್ಲಿ 1-ಲೀಟರ್ ಬಾಟಲಿಯ ಜೊತೆಗೆ ಸ್ವಚ್ಛಗೊಳಿಸುವ ಬಟ್ಟೆಯಂತಹ ಇತರ ವಸ್ತುಗಳನ್ನು ಸುಲಭವಾಗಿ ಇಡಬಹುದು. ಮಧ್ಯದಲ್ಲಿ, ನೀವು ಕೂಲಿಂಗ್‌ನೊಂದಿಗೆ ಉತ್ತಮವಾದ ಫೋನ್ ಚಾರ್ಜಿಂಗ್ ಟ್ರೇ ಅನ್ನು ಪಡೆಯುತ್ತೀರಿ ಮತ್ತು ಸಣ್ಣ-ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಸೆಂಟರ್ ಕನ್ಸೋಲ್‌ನಲ್ಲಿ ಮತ್ತೊಂದು ದೊಡ್ಡದಾದ ತೆರೆದ ಸ್ಟೋರೇಜ್ ನ್ನು ಪಡೆಯುತ್ತೀರಿ. ಆದಾಗಿಯೂ, ಎರಡನೆಯದು ರಬ್ಬರ್ ಚಾಪೆಯನ್ನು ಪಡೆಯುವುದಿಲ್ಲ ಮತ್ತು ಆದ್ದರಿಂದ ವಸ್ತುಗಳನ್ನು ಇಡಲು ಸ್ವಲ್ಪಮಟ್ಟಿಗೆ ಹರಸಾಹಸ ಪಡಬೇಕಾಗುತ್ತದೆ. 

ಇದಾದ ನಂತರ, ನೀವು ಮಧ್ಯದಲ್ಲಿ ಎರಡು ಕಪ್ ಹೋಲ್ಡರ್ ಗಳನ್ನು ಪಡೆಯುತ್ತೀರಿ. ನೀವು  ವಿಭಜನೆಯನ್ನು ತೆಗೆದುಹಾಕಬಹುದು ಮತ್ತು ಅದನ್ನು ದೊಡ್ಡ ಸಂಗ್ರಹಣೆಯನ್ನಾಗಿ ಮಾಡಬಹುದು. ಹಾಗೆಯೇ ಫೋನ್ ಅನ್ನು ಮೇಲ್ಭಾಗದಲ್ಲಿ ಇರಿಸಿಕೊಳ್ಳಲು ಹೊಸ ಟ್ಯಾಂಬೋರ್ ಬಾಗಿಲನ್ನು ಸಹ ಮುಚ್ಚಬಹುದು.  ಕೀಗಳನ್ನು ಬದಿಯಲ್ಲಿ ಇರಿಸಲು ಆಳವಾದ ಪಾಕೆಟ್ ಅನ್ನು ಸಹ ನೀಡಲಾಗುತ್ತದೆ.  ಸನ್ ಗ್ಲಾಸ್ ಹೋಲ್ಡರ್ ಉತ್ತಮವಾದ ಮೃದುವಾದ ಪ್ಯಾಡಿಂಗ್ ಅನ್ನು ಹೊಂದಿದೆ. ಆರ್ಮ್‌ರೆಸ್ಟ್ ಅಡಿಯಲ್ಲಿ  ಸಾಕಷ್ಟು ಸ್ಟೋರೇಜ್ ನ್ನು ನೀಡಲಾಗಿದೆ. ಮತ್ತು ಅಂತಿಮವಾಗಿ, ಗ್ಲೋವ್‌ಬಾಕ್ಸ್ ಉತ್ತಮ ಗಾತ್ರದ್ದಾಗಿದ್ದರೂ, ಅದು ತಂಪಾಗಿಸುವಿಕೆಯನ್ನು ಹೊಂದಿರುವುದಿಲ್ಲ.

ಹಿಂದಿನ ಸೀಟಿನ ಅನುಭವ

Kia Seltos Rear seat

ಸೆಲ್ಟೋಸ್ ತನ್ನ ಇತರ ಎಲ್ಲಾ ವಿಭಾಗಗಳಲ್ಲಿ ಚೌಕಟ್ಟುಗಳನ್ನು ನೀಡುತ್ತಿರುವಾಗ, ಹಿಂದಿನ ಸೀಟಿನ ಅನುಭವವು ಸಾಧಾರಣವಾಗಿ ಉಳಿದಿದೆ. ಹೌದು, ಇಲ್ಲಿ ಜಾಗದ ಕೊರತೆಯಿಲ್ಲ ಮತ್ತು ನೀವು ನಿಮ್ಮ ಕಾಲುಗಳನ್ನು ಚಾಚಿ ಆರಾಮವಾಗಿ ಕುಳಿತುಕೊಳ್ಳಬಹುದು. ಮೊಣಕಾಲು ಮತ್ತು ಭುಜದ ಹತ್ತಿರ ಸಾಕಷ್ಟು ಜಾಗ ಇದೆ ಆದರೆ ಪನೋರಮಿಕ್ ಸನ್‌ರೂಫ್‌ನಿಂದಾಗಿ ಹೆಡ್‌ರೂಮ್ ನಲ್ಲಿ ಸ್ವಲ್ಪ ಮಟ್ಟಿಗೆ ರಾಜಿ ಮಾಡಿಕೊಳ್ಳಲಾಗಿದೆ. ಮತ್ತು ಸೌಕರ್ಯವನ್ನು ಇನ್ನೂ ಉತ್ತಮವಾಗಿ ನೀಡಬಹುದಿತ್ತು. ಸೀಟ್ ಬೇಸ್ ಸ್ವಲ್ಪ ಚಿಕ್ಕದಾಗಿದೆ, ಇದು ತೊಡೆಯ ಭಾಗದಲ್ಲಿ ಹೆಚ್ಚಿನ ಬೆಂಬಲವನ್ನು ಬಯಸುತ್ತದೆ. ಮತ್ತು ಬ್ಯಾಕ್‌ರೆಸ್ಟ್ ನಲ್ಲಿ ಎರಡು ಒರಗಿಕೊಳ್ಳುವ ಸೆಟ್ಟಿಂಗ್‌ಗಳನ್ನು ಹೊಂದಿದ್ದರೆ, ಉತ್ತಮ ಬಾಹ್ಯರೇಖೆಯು ಬೆಂಬಲದೊಂದಿಗೆ ಸಹಾಯ ಮಾಡುತ್ತದೆ. 

ಆದರೂ ವೈಶಿಷ್ಟ್ಯಗಳು ಉತ್ತಮವಾಗಿವೆ ಎಂದು ಹೇಳಬಹುದು. ಇದರಲ್ಲಿ ಗೌಪ್ಯತೆ ಕರ್ಟನ್ ಗಳು, ಎರಡು ಟೈಪ್-ಸಿ ಪೋರ್ಟ್‌ಗಳು ಮತ್ತು ಫೋನ್ ಹೋಲ್ಡರ್, 2 ಕಪ್ ಹೋಲ್ಡರ್‌ಗಳೊಂದಿಗೆ ಆರ್ಮ್‌ರೆಸ್ಟ್‌ಗಳನ್ನು ಪಡೆಯುತ್ತೀರಿ.  ಮತ್ತೊಂದು ಉತ್ತಮವಾದುದು ಎಂದರೆ ಆರ್ಮ್‌ರೆಸ್ಟ್ ಮತ್ತು ಡೋರ್ ಆರ್ಮ್‌ರೆಸ್ಟ್‌ನ ಎತ್ತರವು ಒಂದೇ ಆಗಿರುತ್ತದೆ ಆದ್ದರಿಂದ ನೀವು ಹೆಚ್ಚು ಆರಾಮದಾಯಕವಾಗುತ್ತೀರಿ. ಹಾಗೆಯೇ ಇನ್ನೊಂದು ಒಳ್ಳೆಯ ಅಂಶವೆಂದರೆ ಹಿಂಬದಿಯ ಎಲ್ಲಾ 3 ಪ್ರಯಾಣಿಕರಿಗೆ ಸರಿಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳು ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ. 

ಸುರಕ್ಷತೆ

2023 Kia Seltos

ಗ್ಲೋಬಲ್ NCAP ನಲ್ಲಿ  ಸೆಲ್ಟೋಸ್ ನ ಫೇಸ್‌ಲಿಫ್ಟ್ ಗಿಂತ ಹಿಂದಿನ ಆವೃತ್ತಿ  3-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಆದರೆ ಈಗ ಉತ್ತಮ ಸ್ಕೋರ್‌ಗಾಗಿ ಸೆಲ್ಟೋಸ್ ಅನ್ನು ಬಲಪಡಿಸಿದ್ದೇವೆ ಎಂದು ಕಿಯಾ ಹೇಳಿಕೊಂಡಿದೆ. ಇದರೊಂದಿಗೆ, ಸುರಕ್ಷತಾ ವೈಶಿಷ್ಟ್ಯಗಳಲ್ಲಿ 6 ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಉಳಿದ ಎಲೆಕ್ಟ್ರಾನಿಕ್ ಸಾಧನಗಳು ಇನ್ನೂ ಇವೆ. ಹಾಗೆಯೇ, ಹೊಸ ಕ್ರ್ಯಾಶ್ ಟೆಸ್ಟ್ ಸ್ಕೋರ್‌ಗಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ.

ಬೂಟ್‌ನ ಸಾಮರ್ಥ್ಯ

Kia Seltos Boot space

ಕಿಯಾ ಹೇಳುವಂತೆ, ಸೆಲ್ಟೋಸ್ 433 ಲೀಟರ್ ಜಾಗವನ್ನು ನೀಡುತ್ತದೆ. ಆದರೆ ವಾಸ್ತವದಲ್ಲಿ, ಪ್ರಾಯೋಗಿಕತೆಯು ಆಳವಿಲ್ಲದ ಮತ್ತು ನೇರವಾದ ಬೂಟ್ ಸ್ಪೇಸ್ ನ್ನು ಹೊಂದಿದೆ. ಆದ್ದರಿಂದ, ಒಂದು ದೊಡ್ಡ ಸೂಟ್ಕೇಸ್ ಅನ್ನು ಮಾತ್ರ ಇಟ್ಟುಕೊಳ್ಳಬಹುದು, ಮತ್ತು ನೀವು ಅದರ ಮೇಲೆ ಏನನ್ನೂ ಇಡಲು ಸಾಧ್ಯವಿಲ್ಲ. ದೊಡ್ಡ ಸೂಟ್ಕೇಸ್ ಇಟ್ಟುಕೊಂಡ ನಂತರ, ಬದಿಯಲ್ಲಿಯೂ ಹೆಚ್ಚು ಜಾಗ ಉಳಿಯುವುದಿಲ್ಲ. ನೀವು ಸಣ್ಣ ಸೂಟ್ ಕೇಸ್ ಗಳು ಅಥವಾ ಸಣ್ಣ  ಬ್ಯಾಗ್ ಗಳನ್ನು ಮಾತ್ರ ಇಡುವುದಾದರೆ, ಬೂಟ್ ಫ್ಲೋರ್ ಉದ್ದ ಮತ್ತು ಅಗಲವಾಗಿರುವುದರಿಂದ ಅವು ಸುಲಭವಾಗಿ ಹೊಂದಿಕೊಳ್ಳುತ್ತವೆ. ಮತ್ತೊಂದು ಒಳ್ಳೆಯ ವಿಷಯವೆಂದರೆ ಹಿಂದಿನ ಸೀಟುಗಳು 60:40 ರಲ್ಲಿ ನೀವು ಅವುಗಳನ್ನು ಮಡಚಬಹುದು ಮತ್ತು ದೊಡ್ಡ ವಸ್ತುಗಳನ್ನು ಸಾಗಿಸಲು ಸೂಕ್ತವಾದ ಫ್ಲಾಟ್ ಫ್ಲೋರ್ ಅನ್ನು ರಚಿಸಬಹುದು.

ಕಾರ್ಯಕ್ಷಮತೆ

Kia Seltos Engine

ಸೆಲ್ಟೋಸ್‌ನೊಂದಿಗೆ ನೀವು ಇನ್ನೂ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಪಡೆಯುತ್ತೀರಿ. ಆದಾಗಿಯೂ, ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಳೆಯ 1.4 ಟರ್ಬೊ ಪೆಟ್ರೋಲ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು 160 ಪಿಎಸ್ ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಸಂಖ್ಯೆ ಸೂಚಿಸುವಂತೆ, ಈ ಎಂಜಿನ್ ಚಾಲನೆ ಮಾಡಲು ಉತ್ತೇಜಕವಾಗಿದೆ. ಇದರ ವೇಗ ಉತ್ಪಾದನೆಯು ತುಂಬಾ ನಯವಾಗಿ ಮತ್ತು  ತ್ವರಿತವಾಗಿರುತ್ತದೆ. ಇದರಿಂದ ಓವರ್ ಟೇಕ್ ಮಾಡುವುದು ಸುಲಭವಾಗಲಿದೆ. 

ಉತ್ತಮ ಭಾಗವೆಂದರೆ ಈ ಎಂಜಿನ್ ಡ್ಯುಯಲ್ ಸ್ವಭಾವವನ್ನು ಹೊಂದಿದೆ. ನೀವು ಇದರಲ್ಲಿ ಆರಾಮವಾಗಿ ಪ್ರಯಾಣಿಸಲು ಬಯಸಿದರೆ, ಅದರ ಲೀನಿಯರ್ ಪವರ್ ಡೆಲಿವರಿ ಹೊಂದಿರುವ ಈ ಎಂಜಿನ್ ಶ್ರಮರಹಿತವಾಗಿರುತ್ತದೆ ಮತ್ತು ನೀವು ವೇಗವಾಗಿ ಹೋಗಲು ಬಯಸಿದಾಗ, ಬಲ ಪಾದವನ್ನು ಎಕ್ಸಲೆರಟ್ ಮೇಲಿಟ್ಟು ಗಟ್ಟಿಯಾಗಿ ಒತ್ತಿರಿ ಮತ್ತು ನಿಮಗೆ ಬೇಕಾಗುವ ವೇಗವನ್ನು ಆರಾಮವಾಗಿ ತೆಗೆದುಕೊಳ್ಳುತ್ತದೆ. ಕ್ಲೈಮ್ ಮಾಡಿದಂತೆ 0 ದಿಂದ100 ರವರೆಗಿನ ವೇಗವನ್ನು ತಲುಪಲು 8.9 ಸೆಕೆಂಡ್ ನಷ್ಟು ಸಮಯ ಬೇಕಾಗುತ್ತದೆ. ಇದು ಈ ವಿಭಾಗದಲ್ಲಿ ಸೆಲ್ಟೋಸ್ ನ್ನು ವೇಗವಾದ ಎಸ್ಯುವಿಯನ್ನಾಗಿ ಅನ್ನು ಮಾಡುತ್ತದೆ. DCT ಟ್ರಾನ್ಸ್ಮಿಶನ್ ಈ ಡ್ಯುಯಲ್ ಸ್ವಭಾವದ ಎಂಜಿನ್ ಗೆ ಸರಿಹೊಂದುವಂತೆ ಚೆನ್ನಾಗಿ ಟ್ಯೂನ್ ಆಗಿದೆ.

Kia Seltos

ಡೀಸೆಲ್ ಎಂಜಿನ್ ಇನ್ನೂ ಒಂದೇ ಆಗಿರುತ್ತದೆ, ಹಿಂದಕ್ಕೆ ಇಡಲಾಗಿದೆ ಮತ್ತು ಓಡಿಸಲು ಸುಲಭವಾಗಿದೆ. ಇದು ಕೂಡ ಸಂಸ್ಕರಿಸಲ್ಪಟ್ಟಿದೆ ಆದರೆ ಕಾರ್ಯಕ್ಷಮತೆಯು ಟರ್ಬೊ ಪೆಟ್ರೋಲ್‌ ಎಂಜಿನ್ ನಂತೆ ಅಷ್ಟೇನು ಉತ್ತಮವಾಗಿಲ್ಲ. ಆದಾಗಿಯೂ, ನೀವು ಸರಳವಾಗಿ ಡ್ರೈವ್ ಮಾಡಲು ಮತ್ತು ಪ್ರಯಾಣಿಸಲು ಬಯಸುತ್ತಿದ್ದರೆ, ಅದು ಶ್ರಮರಹಿತವಾಗಿರುತ್ತದೆ ಮತ್ತು ಉತ್ತಮ ದಕ್ಷತೆಯನ್ನು ನೀಡುತ್ತದೆ. 

ಆದರೆ ನೀವು ಉತ್ಸಾಹದ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೆ ಮತ್ತು ನಗರದಲ್ಲಿ ಸುಲಭವಾಗಿ ಓಡಿಸಲು ಮತ್ತು ಹೆದ್ದಾರಿಯಲ್ಲಿ ಡ್ರೈವ್ ಮಾಡಲು ಬಯಸಿದರೆ, ನೀವು CVT ಟ್ರಾನ್ಸ್ಮಿಷನ್ ಹೊಂದಿರುವ 1.5 ಲೀಟರ್ ನ ಪೆಟ್ರೋಲ್ ಎಂಜಿನ್ ಅನ್ನು ಆರಿಸಿಕೊಳ್ಳಬೇಕು. ನಾವು ಈ ಪವರ್‌ಟ್ರೇನ್ ಅನ್ನು ಹೊಂದಿರುವ ಹಲವು ಕಾರುಗಳನ್ನು ಓಡಿಸಿದ್ದೇವೆ ಮತ್ತು ಇದು ಸರಳವಾದ ಚಾಲನಾ ಅನುಭವಕ್ಕಾಗಿ ಇದು ಅತ್ಯುತ್ತಮ ಆಯ್ಕೆಯಾಗಿದೆ.

ರೈಡ್ ಅಂಡ್ ಹ್ಯಾಂಡಲಿಂಗ್

Kia Seltosಬಹಳ ಸಮಯದ ನಂತರ, ಕಿಯಾ ತನ್ನ ಸೆಲ್ಟೋಸ್‌ನ ಸವಾರಿಯ ಗುಣಮಟ್ಟವನ್ನು ಸುಧಾರಿಸಿದೆ. ಇದನ್ನು ಮೊದಲು ಪರಿಚಯಿಸಿದಾಗ ಸಸ್ಪೆನ್ಸನ್ ತುಂಬಾ ಕಠಿಣವಾಗಿತ್ತು, ಇದು ನಗರದಲ್ಲಿ ಓಡಿಸಲು ಕಷ್ಟಕರವಾಗಿತ್ತು. ಆದರೆ ಈಗ ಅದು ಸಂಪೂರ್ಣ ಬದಲಾಗಿದೆ. ವಾಸ್ತವವಾಗಿ, 18-ಇಂಚಿನ ಚಕ್ರಗಳೊಂದಿಗೆ ಸವಾರಿಯ ಗುಣಮಟ್ಟವು ಈಗ ಅತ್ಯಾಧುನಿಕ ಮತ್ತು ಮೆತ್ತನೆಯದ್ದಾಗಿದೆ. ಇನ್ನು ಮುಂದೆ ಸ್ಪೀಡ್ ಬ್ರೇಕರ್‌ಗಳು ಮತ್ತು ಗುಂಡಿಇರುವ ರಸ್ತೆಯ ಮೇಲೆ ಹೋಗುವಾಗ ನಿಮ್ಮನ್ನು ಕಷ್ಟಕ್ಕೆ ಒಳಪಡಿಸುವುದಿಲ್ಲ, ಏಕೆಂದರೆ, ಸಸ್ಪೆನ್ಸನ್ ನ ಗುಣಮಟ್ಟ ನಿಮಗೆ ಉತ್ತಮ ಅನುಭವನ್ನು ನೀಡುತ್ತದೆ. ಆಳವಾದ ಗುಂಡಿಗಳಲ್ಲಿ ಸ್ವಲ್ಪ ಕಷ್ಟ ಅನಿಸಬಹುದು, ಆದರೆ ಅವುಗಳು ಸಹ ನಿಮಗೆ ಕಿರಿಕಿರಿಯನ್ನು ಉಂಟುಮಾಡುವುದಿಲ್ಲ. 17-ಇಂಚಿನ ಚಕ್ರಗಳು ಖಂಡಿತವಾಗಿಯೂ ಕುಶನ್ ಅಂಶವನ್ನು ಹೆಚ್ಚಿಸುತ್ತವೆ. ಆದುದರಿಂದ ನೀವು ಇನ್ನು ಮುಂದೆ ಜಿಟಿ-ಲೈನ್ ಅಥವಾ ಎಕ್ಸ್-ಲೈನ್ ಅನ್ನು  ಖರೀದಿಸುವ ಬಗ್ಗೆ ಹೆಚ್ಚೇನೂ ಯೋಚಿಸಬೇಕಾಗಿಲ್ಲ.

ರೂಪಾಂತರಗಳು

Kia Seltos badge

ಕಿಯಾ ಸೆಲ್ಟೋಸ್ 18 ವಿಭಿನ್ನ ವೇರಿಯೆಂಟ್ ಗಳು ಮತ್ತು ಪವರ್‌ಟ್ರೇನ್ ಸಂಯೋಜನೆಗಳೊಂದಿಗೆ ಬರುತ್ತದೆ. ಚಿಂತಿಸಬೇಡಿ, ನಿಮಗೆ ಸಹಾಯ ಮಾಡಲು ವೇರಿಯೆಂಟ್ ಗಳ ಬಗ್ಗೆ ವಿವರಿಸಿದ ವೀಡಿಯೊ ಶೀಘ್ರದಲ್ಲೇ ಕಾರ್‌ದೇಖೊದಲ್ಲಿ ಬರಲಿದೆ.  ಸದ್ಯಕ್ಕೆ, ನೀವು ಅರ್ಥಮಾಡಿಕೊಳ್ಳಬೇಕಾಗಿರುವುದು ಇದು ಟೆಕ್-ಲೈನ್, ಜಿಟಿ-ಲೈನ್ ಮತ್ತು ಎಕ್ಸ್-ಲೈನ್ ಎಂಬ 3 ವಿಭಿನ್ನ ಟ್ರಿಮ್‌ಗಳಲ್ಲಿ ಬರುತ್ತದೆ ಎಂಬುವುದು. ಟೆಕ್-ಲೈನ್ ಮುಂಭಾಗದಿಂದ ಸ್ವಲ್ಪ ಶಾಂತವಾಗಿ ಕಾಣುತ್ತದೆ ಮತ್ತು 17 ಇಂಚಿನ ಚಕ್ರಗಳನ್ನು ಪಡೆಯುತ್ತದೆ. ಒಳಗೆ, ನೀವು ಖರೀದಿಸುವ ಆವೃತ್ತಿಯನ್ನು ಅವಲಂಬಿಸಿ ಫ್ಯಾಬ್ರಿಕ್ ಸೀಟ್‌ಗಳೊಂದಿಗೆ ಕಪ್ಪು ಇಂಟೀರಿಯರ್, ಲೆಥೆರೆಟ್ ಸೀಟ್‌ಗಳೊಂದಿಗೆ ಬೀಜ್ ಮತ್ತು ಕಪ್ಪು ಇಂಟೀರಿಯರ್ ಅಥವಾ ಲೆಥೆರೆಟ್ ಸೀಟ್‌ಗಳೊಂದಿಗೆ ಕಂದು ಇಂಟೀರಿಯರ್ ಅನ್ನು ಪಡೆಯಬಹುದು. 

ಜಿಟಿ-ಲೈನ್ ಒಂದೇ ವೇರಿಯೆಂಟ್ ನಲ್ಲಿ ಲಭ್ಯವಿದೆ ಮತ್ತು ಇದರೊಂದಿಗೆ ನೀವು ವಿಭಿನ್ನ ಮತ್ತು ಹೆಚ್ಚು ಆಕ್ರಮಣಕಾರಿ ಗ್ರಿಲ್ ಮತ್ತು ಬಂಪರ್ ಅನ್ನು ಪಡೆಯುತ್ತೀರಿ. ಚಕ್ರಗಳು ಸಹ 18-ಇಂಚುಗಳು ಮತ್ತು ಒಳಗೆ  ಇದು ಕಪ್ಪು ಮತ್ತು ಬಿಳಿ ಲೆಥೆರೆಟ್ ಸೀಟ್ ಅಪ್‌ಹೊಲ್ಸ್‌ಟರಿಯೊಂದಿಗೆ ಸಂಪೂರ್ಣ ಬ್ಲ್ಯಾಕ್‌ ಥೀಮ್ ಅನ್ನು ಹೊಂದಿದೆ.

ಎಕ್ಸ್-ಲೈನ್ ಕೂಡ ಒಂದೇ ವೆರಿಯೆಂಟ್‌ ಆಗಿದೆ ಮತ್ತು ಇದು ಮ್ಯಾಟ್ ಪೇಂಟ್ ಫಿನಿಶ್ ಹೊಂದಿದೆ. ಹೊರಗೆ, ಕೆಲವು ಕಪ್ಪು ಅಂಶಗಳೊಂದಿಗೆ ಇದು GT-ಲೈಕ್ ನೋಟವನ್ನು ಹೊಂದಿದೆ. ಒಳಗೆ, ಇದು ಹಸಿರು ಒಳಸೇರಿಸುವಿಕೆಯೊಂದಿಗೆ ಕಪ್ಪು  ಇಂಟಿರೀಯರ್‌ ಮತ್ತು ಹಸಿರು ಲೆಥೆರೆಟ್ ಸೀಟ್ ಅಪ್‌ಹೊಲ್ಸ್‌ಟರಿಯನ್ನು ಪಡೆದಿದೆ.

ವರ್ಡಿಕ್ಟ್

Kia Seltos

 2019 ರ ಸೆಲ್ಟೋಸ್ ಮಾಡೆಲ್ ಮಾಡಿದ ಅದೇ ಕೆಲಸವನ್ನು ಹೊಸ ಸುಧಾರಿತ ಆವೃತ್ತಿ  ಮಾಡುತ್ತಿದೆ. ಈ ಸಮಯದಲ್ಲಿ, ಇದು ಉತ್ತಮ ಲುಕ್ ಹೊಂದಿದೆ, ಉತ್ತಮವಾಗಿ ಚಾಲನೆ ಮಾಡುತ್ತದೆ ಮತ್ತು ವೈಶಿಷ್ಟ್ಯಗಳ ಪಟ್ಟಿಯು ಈ ವಿಭಾಗದಲ್ಲಿ ಉತ್ತಮವಾಗಿದೆ. ಮತ್ತು ಇದೆಲ್ಲವೂ ಬೆಲೆಯಲ್ಲಿ ಅದರ ಮೌಲ್ಯವನ್ನು ಸುಲಭವಾಗಿ ಸಮರ್ಥಿಸುತ್ತದೆ. ಈಗ ಒಂದೇ ಒಂದು ಪ್ರಶ್ನೆ ಉಳಿದಿದೆ: ಅದರ ಕ್ರ್ಯಾಶ್ ಟೆಸ್ಟ್ ರೇಟಿಂಗ್. ಆದರೆ ಇದು ಕೇವಲ 4 ನಕ್ಷತ್ರಗಳನ್ನು ಪಡೆದರೂ ಸಹ, ಅದನ್ನು ಖರೀದಿಸಲು ನೀವು ಎರಡು ಬಾರಿ ಯೋಚಿಸಬೇಕಾಗಿಲ್ಲ.

ಕಿಯಾ ಸೆಲ್ಟೋಸ್

ನಾವು ಇಷ್ಟಪಡುವ ವಿಷಯಗಳು

  • ಸಾಫ್ಟ್-ಟಚ್ ಅಂಶಗಳು ಮತ್ತು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ ಅತ್ಯುತ್ತಮ ಕ್ಯಾಬಿನ್ ಅನುಭವ.
  • ಪನೋರಮಿಕ್ ಸನ್‌ರೂಫ್, ADAS ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಕೆಲವು ವೈಶಿಷ್ಟ್ಯಗಳು ಮೇಲಿನ ಸೆಗ್ಮೆಂಟ್ ನಿಂದ ಪಡೆದಿದೆ.
  • ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಡೀಸೆಲ್ ಸೇರಿದಂತೆ ಬಹು ಎಂಜಿನ್ ಆಯ್ಕೆಗಳು.
  •  ಈ ವಿಭಾಗದಲ್ಲಿ ಲೀಡಿಂಗ್ ಆಗಿರುವ 160PS  ಉತ್ಪಾದಿಸುವ 1-5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನ್ನು ಹೊಂದಿದೆ.
  • ಆಕರ್ಷಕ  ಲೈಟಿಂಗ್ ಅಂಶಗಳೊಂದಿಗೆ ಆಕ್ರಮಣಕಾರಿ ನೋಟ.

ನಾವು ಇಷ್ಟಪಡದ ವಿಷಯಗಳು

  • ಕ್ರ್ಯಾಶ್ ಪರೀಕ್ಷೆಯು ಇನ್ನೂ ಬಾಕಿಯಿದೆ, ಆದರೆ ಕುಶಾಕ್ ಮತ್ತು ಟೈಗುನ್‌ ನಂತೆ 5 ಸ್ಟಾರ್ ರೇಟಿಂಗ್ ಪಡೆಯಲು ಸಾಧ್ಯವಾಗದೆ ಇರಬಹುದು.
  • ಕಡಿಮೆ ಬೂಟ್ ಸ್ಪೇಸ್ ಪ್ರಾಯೋಗಿಕತೆಯನ್ನು ಮಿತಿಗೊಳಿಸುತ್ತದೆ

ಎಆರ್‌ಎಐ mileage19.1 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1493 cc
no. of cylinders4
ಮ್ಯಾಕ್ಸ್ ಪವರ್114.41bhp@4000rpm
ಗರಿಷ್ಠ ಟಾರ್ಕ್250nm@1500-2750rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬೂಟ್‌ನ ಸಾಮರ್ಥ್ಯ447 litres
ಇಂಧನ ಟ್ಯಾಂಕ್ ಸಾಮರ್ಥ್ಯ50 litres
ಬಾಡಿ ಟೈಪ್ಎಸ್ಯುವಿ

ಒಂದೇ ರೀತಿಯ ಕಾರುಗಳೊಂದಿಗೆ ಸೆಲ್ಟೋಸ್ ಅನ್ನು ಹೋಲಿಕೆ ಮಾಡಿ

Car Name
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
336 ವಿರ್ಮಶೆಗಳು
206 ವಿರ್ಮಶೆಗಳು
43 ವಿರ್ಮಶೆಗಳು
317 ವಿರ್ಮಶೆಗಳು
446 ವಿರ್ಮಶೆಗಳು
281 ವಿರ್ಮಶೆಗಳು
552 ವಿರ್ಮಶೆಗಳು
286 ವಿರ್ಮಶೆಗಳು
165 ವಿರ್ಮಶೆಗಳು
410 ವಿರ್ಮಶೆಗಳು
ಇಂಜಿನ್1482 cc - 1497 cc 1482 cc - 1497 cc 998 cc - 1493 cc 1462 cc - 1490 cc1199 cc - 1497 cc 1451 cc - 1956 cc1462 cc1349 cc - 1498 cc1956 cc999 cc - 1498 cc
ಇಂಧನಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಡೀಸಲ್ಪೆಟ್ರೋಲ್
ಹಳೆಯ ಶೋರೂಮ್ ಬೆಲೆ10.90 - 20.30 ಲಕ್ಷ11 - 20.15 ಲಕ್ಷ7.99 - 15.69 ಲಕ್ಷ11.14 - 20.19 ಲಕ್ಷ8.15 - 15.80 ಲಕ್ಷ13.99 - 21.95 ಲಕ್ಷ8.34 - 14.14 ಲಕ್ಷ9.98 - 17.89 ಲಕ್ಷ15.49 - 26.44 ಲಕ್ಷ11.89 - 20.49 ಲಕ್ಷ
ಗಾಳಿಚೀಲಗಳು6662-662-62-62-66-72-6
Power113.42 - 157.81 ಬಿಹೆಚ್ ಪಿ113.18 - 157.57 ಬಿಹೆಚ್ ಪಿ81.8 - 118 ಬಿಹೆಚ್ ಪಿ86.63 - 101.64 ಬಿಹೆಚ್ ಪಿ113.31 - 118.27 ಬಿಹೆಚ್ ಪಿ141 - 167.76 ಬಿಹೆಚ್ ಪಿ86.63 - 101.64 ಬಿಹೆಚ್ ಪಿ108.49 - 138.08 ಬಿಹೆಚ್ ಪಿ167.62 ಬಿಹೆಚ್ ಪಿ113.98 - 147.51 ಬಿಹೆಚ್ ಪಿ
ಮೈಲೇಜ್17 ಗೆ 20.7 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್-19.39 ಗೆ 27.97 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್15.58 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್15.43 ಕೆಎಂಪಿಎಲ್16.8 ಕೆಎಂಪಿಎಲ್18.09 ಗೆ 19.76 ಕೆಎಂಪಿಎಲ್

ಕಿಯಾ ಸೆಲ್ಟೋಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಕಿಯಾ ಸೆಲ್ಟೋಸ್ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ336 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (336)
  • Looks (82)
  • Comfort (132)
  • Mileage (66)
  • Engine (45)
  • Interior (79)
  • Space (23)
  • Price (47)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • CRITICAL
  • Amazing Car

    This car offers an amazing ambiance with exceptional comfort. The mileage is also good, and the serv...ಮತ್ತಷ್ಟು ಓದು

    ಇವರಿಂದ user
    On: Feb 20, 2024 | 911 Views
  • for HTK Plus Diesel iMT

    Good Car

    Good comfort, and must-like features, with the most important feature being its beautiful look. This...ಮತ್ತಷ್ಟು ಓದು

    ಇವರಿಂದ rahil khan
    On: Feb 11, 2024 | 870 Views
  • A Mind-blowing Car

    The mileage, overall aesthetics (both interiors and exteriors), and the futuristic design of this ca...ಮತ್ತಷ್ಟು ಓದು

    ಇವರಿಂದ sujoy das
    On: Feb 07, 2024 | 1179 Views
  • Amazing Car

    The standout feature of the Kia Seltos is undeniably its design. They have enlisted top engineers to...ಮತ್ತಷ್ಟು ಓದು

    ಇವರಿಂದ shiddhesh sunil chavan
    On: Feb 06, 2024 | 205 Views
  • Good Car

    The car has good handling, is comfortable, and reliable. However, maintenance costs are high, and th...ಮತ್ತಷ್ಟು ಓದು

    ಇವರಿಂದ yajurveda borse
    On: Feb 04, 2024 | 467 Views
  • ಎಲ್ಲಾ ಸೆಲ್ಟೋಸ್ ವಿರ್ಮಶೆಗಳು ವೀಕ್ಷಿಸಿ

ಕಿಯಾ ಸೆಲ್ಟೋಸ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: ಕಿಯಾ ಸೆಲ್ಟೋಸ್ dieselis 20.7 ಕೆಎಂಪಿಎಲ್ . ಕಿಯಾ ಸೆಲ್ಟೋಸ್ petrolvariant has ಎ mileage of 17 ಕೆಎಂಪಿಎಲ್.ಸ್ವಯಂಚಾಲಿತ ರೂಪಾಂತರಗಳಿಗೆ ಹಕ್ಕು ಪಡೆದ ARAI ಮೈಲೇಜ್: .

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌20.7 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌20.7 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌17.9 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌17 ಕೆಎಂಪಿಎಲ್

ಕಿಯಾ ಸೆಲ್ಟೋಸ್ ವೀಡಿಯೊಗಳು

  • Kia Seltos 2023 vs Hyundai Creta 2023, Grand Vitara, Taigun/Kushaq & Elevate! | #BuyOrHold
    7:00
    Kia Seltos 2023 vs Hyundai Creta 2023, Grand Vitara, Taigun/Kushaq & Elevate! | #BuyOrHold
    ಜುಲೈ 13, 2023 | 97416 Views
  • 2023 Kia Seltos Facelift: A Detailed Review | Naya Benchmark?
    14:17
    2023 Kia Seltos Facelift: A Detailed Review | Naya Benchmark?
    ನವೆಂಬರ್ 22, 2023 | 15530 Views
  • 2023 Kia Seltos Facelift Revealed! Expected Price, Changes and Everything New!
    3:06
    2023 ಕಿಯಾ ಸೆಲ್ಟೋಸ್ Facelift Revealed! Expected Price, Changes ಮತ್ತು Everything New!
    ನವೆಂಬರ್ 22, 2023 | 19611 Views
  • New Kia Seltos | How Many Features Do You Need?! | ZigAnalysis
    11:27
    New Kia Seltos | How Many Features Do You Need?! | ZigAnalysis
    ಆಗಸ್ಟ್‌ 04, 2023 | 24434 Views

ಕಿಯಾ ಸೆಲ್ಟೋಸ್ ಬಣ್ಣಗಳು

  • ಗ್ಲೇಸಿಯರ್ ವೈಟ್ ಪರ್ಲ್
    ಗ್ಲೇಸಿಯರ್ ವೈಟ್ ಪರ್ಲ್
  • ಹೊಳೆಯುವ ಬೆಳ್ಳಿ
    ಹೊಳೆಯುವ ಬೆಳ್ಳಿ
  • pewter olive
    pewter olive
  • ಇನ್ಟೆನ್ಸ್ ರೆಡ್
    ಇನ್ಟೆನ್ಸ್ ರೆಡ್
  • ಅರೋರಾ ಬ್ಲಾಕ್ ಪರ್ಲ್
    ಅರೋರಾ ಬ್ಲಾಕ್ ಪರ್ಲ್
  • ಇಂಪೀರಿಯಲ್ ಬ್ಲೂ
    ಇಂಪೀರಿಯಲ್ ಬ್ಲೂ
  • ಅರೋರಾ ಕಪ್ಪು ಮುತ್ತು ಹೊಂದಿರುವ ಹಿಮನದಿ ಬಿಳಿ ಮುತ್ತು
    ಅರೋರಾ ಕಪ್ಪು ಮುತ್ತು ಹೊಂದಿರುವ ಹಿಮನದಿ ಬಿಳಿ ಮುತ್ತು
  • ಗ್ರಾವಿಟಿ ಗ್ರೇ
    ಗ್ರಾವಿಟಿ ಗ್ರೇ

ಕಿಯಾ ಸೆಲ್ಟೋಸ್ ಚಿತ್ರಗಳು

  • Kia Seltos Front Left Side Image
  • Kia Seltos Grille Image
  • Kia Seltos Headlight Image
  • Kia Seltos Taillight Image
  • Kia Seltos Wheel Image
  • Kia Seltos Hill Assist Image
  • Kia Seltos Exterior Image Image
  • Kia Seltos Exterior Image Image
space Image
Found what ನೀವು were looking for?

ಕಿಯಾ ಸೆಲ್ಟೋಸ್ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What are the features of the Kia Seltos?

Devyani asked on 16 Nov 2023

Features onboard the updated Seltos includes dual 10.25-inch displays (digital d...

ಮತ್ತಷ್ಟು ಓದು
By CarDekho Experts on 16 Nov 2023

What is the service cost of KIA Seltos?

Abhi asked on 22 Oct 2023

For this, we'd suggest you please visit the nearest authorized service centr...

ಮತ್ತಷ್ಟು ಓದು
By CarDekho Experts on 22 Oct 2023

How many colours are available in KIA Seltos?

Prakash asked on 11 Oct 2023

The Kia Seltos is available in 9 different colours - Intense Red, Glacier White ...

ಮತ್ತಷ್ಟು ಓದು
By CarDekho Experts on 11 Oct 2023

What is the mileage of the KIA Seltos?

Abhi asked on 25 Sep 2023

The Seltos mileage is 17.0 to 20.7 kmpl. The Automatic Diesel variant has a mile...

ಮತ್ತಷ್ಟು ಓದು
By CarDekho Experts on 25 Sep 2023

How many colours are available in Kia Seltos?

Abhi asked on 15 Sep 2023

Kia Seltos is available in 9 different colours - Intense Red, Glacier White Pear...

ಮತ್ತಷ್ಟು ಓದು
By CarDekho Experts on 15 Sep 2023
space Image

ಭಾರತ ರಲ್ಲಿ ಸೆಲ್ಟೋಸ್ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 13.58 - 25.37 ಲಕ್ಷ
ಮುಂಬೈRs. 12.84 - 24.42 ಲಕ್ಷ
ತಳ್ಳುRs. 12.87 - 24.44 ಲಕ್ಷ
ಹೈದರಾಬಾದ್Rs. 13.34 - 24.93 ಲಕ್ಷ
ಚೆನ್ನೈRs. 13.49 - 25.37 ಲಕ್ಷ
ಅಹ್ಮದಾಬಾದ್Rs. 12.15 - 22.53 ಲಕ್ಷ
ಲಕ್ನೋRs. 12.59 - 23.31 ಲಕ್ಷ
ಜೈಪುರRs. 12.75 - 23.59 ಲಕ್ಷ
ಪಾಟ್ನಾRs. 12.73 - 23.96 ಲಕ್ಷ
ಚಂಡೀಗಡ್Rs. 12.26 - 22.69 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಮಾರ್ಚ್‌ offer

Similar Electric ಕಾರುಗಳು

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience