• English
    • Login / Register

    ಮೊದಲ ಬಾರಿಗೆ ಹೊಸ Kia Seltosನ ಇಂಟೀರಿಯರ್‌ನ ಸ್ಪೈಶಾಟ್‌ಗಳು ವೈರಲ್‌..!

    ಕಿಯಾ ಸೆಲ್ಟೋಸ್ ಗಾಗಿ dipan ಮೂಲಕ ಮಾರ್ಚ್‌ 28, 2025 08:09 pm ರಂದು ಪ್ರಕಟಿಸಲಾಗಿದೆ

    • 14 Views
    • ಕಾಮೆಂಟ್‌ ಅನ್ನು ಬರೆಯಿರಿ

    ಕಾರು ತಯಾರಕರ ಇತ್ತೀಚಿನ ಬಿಡುಗಡೆಯಾದ ಕಿಯಾ ಸೈರೋಸ್‌ನೊಂದಿಗೆ ಬಹಳಷ್ಟು ಕ್ಯಾಬಿನ್ ವಿವರಗಳನ್ನು ಹಂಚಿಕೊಳ್ಳಲಾಗಿದೆ ಎಂದು ಸ್ಪೈ ಶಾಟ್‌ಗಳು ಬಹಿರಂಗಪಡಿಸುತ್ತವೆ

    New-generation Kia Seltos interior spied

    • ಸೆಲ್ಟೋಸ್‌ನ ಹೊಸ ಸ್ಪೈ ಶಾಟ್‌ಗಳು ದುಬಾರಿ ಬೆಲೆಯ ಕಿಯಾ EV9 ನಂತೆಯೇ ಸೀಟುಗಳನ್ನು ತೋರಿಸುತ್ತವೆ.

    • ಕಿಯಾ ಸಿರೋಸ್‌ನಂತೆ ಡ್ಯುಯಲ್-ಟೋನ್ ಸಿಲ್ವರ್ ಮತ್ತು ಗ್ರೇ ಸೀಟ್ ಕವರ್‌ನೊಂದಿಗೆ ಕಾಣುತ್ತದೆ.

    • ಇಂಟೀರಿಯರ್‌ನ ವಿನ್ಯಾಸವು ಆಧುನಿಕವಾಗಿ ಕಾಣುವ ಕ್ಯಾಬಿನ್‌ನೊಂದಿಗೆ ಸಿರೋಸ್‌ನಂತೆಯೇ ಇದೆ.

    • ಡ್ಯಾಶ್‌ಬೋರ್ಡ್ ಅನ್ನು ಗಮನಿಸಲಾಗಿಲ್ಲ, ಆದರೆ ಟ್ರಿಪಲ್-ಸ್ಕ್ರೀನ್ ಸೆಟಪ್ ಹೊಂದಿರುವ ಸಾಧ್ಯತೆಯಿದೆ.

    • ಇತರ ಫೀಚರ್‌ಗಳಲ್ಲಿ ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಎಸಿ ಸೇರಿವೆ.

    • ಇದರ ಸುರಕ್ಷತಾ ಸೂಟ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ADAS ಅನ್ನು ಪಡೆಯಬಹುದು.

    • ಪ್ರಸ್ತುತ-ಲಭ್ಯವಿರುವ ಕಿಯಾ ಸೆಲ್ಟೋಸ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದುವ ನಿರೀಕ್ಷೆಯಿದೆ.

    ಮುಂಬರುವ ಹೊಸ ಜನರೇಶನ್‌ನ ಕಿಯಾ ಸೆಲ್ಟೋಸ್‌ನ ಹಲವು ಪರೀಕ್ಷಾ ಮೊಡೆಲ್‌ಗಳು ಅಂತರರಾಷ್ಟ್ರೀಯ ನೆಲದಲ್ಲಿ ಸುತ್ತುತ್ತಿವೆ, ಅವುಗಳು ಬಾಕ್ಸರ್ ಆಕಾರ ಮತ್ತು ಹೊಸ ವಿನ್ಯಾಸ ಅಂಶಗಳನ್ನು ಸೇರಿಸಿಕೊಂಡಿವೆ. ಈಗ, ಅದರ ಇಂಟಿರೀಯರ್‌ಅನ್ನು ಇತ್ತೀಚೆಗೆ ಸೆರೆಹಿಡಿಯಲಾಯಿತು, ಅದು ಕಿಯಾ ಸಿರೋಸ್‌ನೊಂದಿಗೆ ಹಂಚಿಕೊಂಡ ಕೆಲವು ಅಂಶಗಳ ಬಗ್ಗೆ ಸುಳಿವು ನೀಡಿತು. ಮುಂಬರುವ ಸೆಲ್ಟೋಸ್‌ನ ಸ್ಪೈ ಶಾಟ್‌ಗಳಲ್ಲಿ ನಾವು ಗುರುತಿಸಬಹುದಾದ ಎಲ್ಲವನ್ನೂ ನೋಡೋಣ:

    ಸ್ಪೈ ಶಾಟ್‌ಗಳು ಏನನ್ನು ಬಹಿರಂಗಪಡಿಸುತ್ತವೆ?

    New-generation Kia Seltos exterior

    ಹೊಸ ಜನರೇಶನ್‌ನ ಕಿಯಾ ಸೆಲ್ಟೋಸ್‌ನ ಎಕ್ಸ್‌ಟೀರಿಯರ್‌ನ ವಿನ್ಯಾಸದ ಬಾಡಿ ಆಕೃತಿಯನ್ನು ಮೊದಲೇ ಗುರುತಿಸಲಾಗಿದ್ದರೂ, ಹೊಸ ಸ್ಪೈ ಶಾಟ್‌ಗಳು ಚೌಕಾಕಾರದ ಹೌಸಿಂಗ್‌ನಲ್ಲಿ ಲಂಬವಾಗಿ ಜೋಡಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಸಹ ದೃಢಪಡಿಸುತ್ತವೆ. ಮುಂಭಾಗದ ಬಂಪರ್‌ನಲ್ಲಿ ಲಂಬವಾದ ಸ್ಲ್ಯಾಟ್‌ಗಳನ್ನು ಹೊಂದಿರುವ ಸಣ್ಣ ಗ್ರಿಲ್ ಮತ್ತು ಒರಟಾದ ಕಪ್ಪು ಪಟ್ಟಿಯು ಸಹ ಗೋಚರಿಸುತ್ತದೆ.

    New-generation Kia Seltos exterior
    New-generation Kia Seltos slylised wheels

    ಹಿಂದಿನ ಪರೀಕ್ಷಾ ಆವೃತ್ತಿಯು ಅಲಾಯ್ ವೀಲ್‌ಗಳನ್ನು ಹೊಂದಿದ್ದರೆ, ಈ ಪರೀಕ್ಷಾ ಮೊಡೆಲ್‌ 18-ಇಂಚಿನ ರಿಮ್‌ಗಳನ್ನು ಮತ್ತು ಸ್ಟೈಲ್‌ ಆಗಿರುವ ವೀಲ್ ಕವರ್‌ಗಳನ್ನು ಹೊಂದಿತ್ತು. ಹಿಂಭಾಗದಲ್ಲಿ, ಮುಂಬರುವ ಸೆಲ್ಟೋಸ್ ಅನ್ನು ಪ್ರಸ್ತುತ ಲಭ್ಯವಿರುವ ಸೆಲ್ಟೋಸ್‌ನಂತೆಯೇ ಎಲ್‌ಇಡಿ ಅಂಶಗಳೊಂದಿಗೆ ತ್ರಿಕೋನ ಟೈಲ್ ಲೈಟ್ ಸೆಟಪ್‌ನೊಂದಿಗೆ ಕಾಣಬಹುದು. ಹಿಂಭಾಗದ ಬಂಪರ್ ಕೂಡ ಮುಂಭಾಗದ ಬಂಪರ್‌ನಂತೆ ಕಪ್ಪು ಪಟ್ಟಿಯನ್ನು ಹೊಂದಿದೆ.

    New-generation Kia Seltos rear seats

    ಈ ಸ್ಪೈ ಶಾಟ್‌ಗಳು ಹೊಸ ಜನರೇಶನ್‌ನ ಸೆಲ್ಟೋಸ್‌ನ ಇಂಟೀರಿಯರ್‌ನ ಒಂದು ನೋಟವನ್ನು ನೀಡುತ್ತವೆ, ಇದು ಕಿಯಾ ಸೈರೋಸ್‌ನ ಆಧುನಿಕ ಮತ್ತು ಸಿಂಪಲ್‌ ಕ್ಯಾಬಿನ್‌ನಿಂದ ಹೆಚ್ಚು ಪ್ರೇರಿತವಾದಂತೆ ಕಾಣುತ್ತದೆ. ಇದರ ಸೀಟುಗಳು ಕಿಯಾ EV9 ನಲ್ಲಿರುವ ಸೀಟುಗಳಂತೆಯೇ ಕಾಣುತ್ತವೆ, ಆದರೆ ಕಿತ್ತಳೆ ಬಣ್ಣದ ಅಕ್ಸೆಂಟ್‌ಗಳೊಂದಿಗೆ ಬೂದು ಮತ್ತು ಬೆಳ್ಳಿಯ ಸೀಟ್ ಕವರ್‌ ಕಿಯಾ ಸೈರೋಸ್‌ನಂತೆಯೇ ಇರುತ್ತದೆ. ಹಿಂಭಾಗದ ಸೀಟುಗಳು ಮತ್ತು ಹಿಂಭಾಗದ ಬಾಗಿಲುಗಳು ಸಹ ಸೈರೋಸ್‌ನಿಂದ ಸ್ಫೂರ್ತಿ ಪಡೆದಂತೆ ತೋರುತ್ತದೆ.

    New-generation Kia Seltos front seats

    ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಹೊಸ ಜನರೇಶನ್‌ನ ಸೆಲ್ಟೋಸ್ ಸೈರೋಸ್‌ನಂತೆ ಟ್ರಿಪಲ್-ಸ್ಕ್ರೀನ್ ವಿನ್ಯಾಸದೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

    ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತಾ ತಂತ್ರಜ್ಞಾನ

    Current-gen Kia Seltos gets dual-zone auto AC

    ಫೀಚರ್‌ಗಳ ಸೂಟ್ ಇನ್ನೂ ಬಹಿರಂಗಗೊಳ್ಳದಿದ್ದರೂ, ಇದು 12.3-ಇಂಚಿನ ಟಚ್‌ಸ್ಕ್ರೀನ್, ಅದೇ ಗಾತ್ರದ ಡ್ರೈವರ್ ಡಿಸ್‌ಪ್ಲೇ ಮತ್ತು ಕಿಯಾ ಸೈರೋಸ್‌ನಂತೆ AC ಕಂಟ್ರೋಲ್‌ಗಳಿಗಾಗಿ 5-ಇಂಚಿನ ಸ್ಕ್ರೀನ್‌ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್-ಜೋನ್ ಆಟೋ ಎಸಿ ಮತ್ತು ವೆಂಟಿಲೇಶನ್‌ ಫಂಕ್ಷನ್‌ನೊಂದಿಗೆ ವಿದ್ಯುತ್ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಸಹ ಮುಂದುವರಿಸಬಹುದು.

    Current-gen Kia Seltos gets 360-degree camera

    ಹೊಸ ತಲೆಮಾರಿನ ಸೆಲ್ಟೋಸ್‌ನ ಸುರಕ್ಷತಾ ಪ್ಯಾಕೇಜ್‌ ಪ್ರಸ್ತುತ ಲಭ್ಯವಿರುವ ಮೊಡೆಲ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದರಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿದಂತೆ ಸೌಲಭ್ಯಗಳಿವೆ. ಇದು ಲೆವೆಲ್-2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಸೂಟ್ ಅನ್ನು ಸಹ ಪಡೆಯಲಿದ್ದು, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಫಾರ್ವರ್ಡ್ ಡಿಕ್ಕಿ ಎಚ್ಚರಿಕೆ ಸೇರಿದಂತ ಫೀಚರ್‌ಗಳನ್ನು ಹೊಂದಿದೆ.

    ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ Volkswagen Tiguan R-Lineನ ಎಂಜಿನ್ ಮತ್ತು ಬಣ್ಣ ಆಯ್ಕೆಗಳ ಮಾಹಿತಿಗಳು ಬಹಿರಂಗ

    ನಿರೀಕ್ಷಿತ ಪವರ್‌ಟ್ರೇನ್ ಆಯ್ಕೆಗಳು

    Current-gen Kia Seltos engine

    ಮುಂಬರುವ ಸೆಲ್ಟೋಸ್ ಪ್ರಸ್ತುತ-ಲಭ್ಯವಿರುವ ಮೊಡೆಲ್‌ನಂತೆಯೇ ಎಂಜಿನ್ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

    ಎಂಜಿನ್‌

    1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

    1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

    1.5-ಲೀಟರ್ ಡೀಸೆಲ್ ಎಂಜಿನ್

    ಪವರ್‌

    115 ಪಿಎಸ್‌

    160 ಪಿಎಸ್‌

    116 ಪಿಎಸ್‌

    ಟಾರ್ಕ್‌

    144 ಎನ್‌ಎಮ್‌

    253 ಎನ್‌ಎಮ್‌

    250 ಎನ್‌ಎಮ್‌

    ಗೇರ್‌ಬಾಕ್ಸ್‌*

    6-ಸ್ಪೀಡ್ ಮ್ಯಾನ್ಯುವಲ್‌, CVT

    6-ಸ್ಪೀಡ್ iMT, 7-ಸ್ಪೀಡ್ DCT

    6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ AT

    ಡ್ರೈವ್‌ಟ್ರೈನ್‌

    ಫ್ರಂಟ್-ವೀಲ್-ಡ್ರೈವ್ (FWD)

    ಫ್ರಂಟ್-ವೀಲ್-ಡ್ರೈವ್ (FWD)

    ಫ್ರಂಟ್-ವೀಲ್-ಡ್ರೈವ್ (FWD)

    *CVT = ಕಂಟಿನ್ಯೂವಸ್ಲಿ ವೇರಿಯಬಲ್ ಟ್ರಾನ್ಸ್‌ಮಿಷನ್;

    iMT = ಕ್ಲಚ್ ಇಲ್ಲದ ಮ್ಯಾನುವಲ್ ಗೇರ್‌ಬಾಕ್ಸ್;

    AT = ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    ಮುಂಬರುವ ಕಿಯಾ ಸೆಲ್ಟೋಸ್ ಪ್ರಸ್ತುತ-ಲಭ್ಯವಿರುವ ಮೊಡೆಲ್‌ಗಿಂತ ಗಣನೀಯವಾಗಿ ಹೆಚ್ಚಿನ ಬೆಲೆಯನ್ನು ಪಡೆಯುವ ನಿರೀಕ್ಷೆಯಿದೆ, ಇದರ ಬೆಲೆ ರೂ 11.13 ಲಕ್ಷದಿಂದ ರೂ 20.51 ಲಕ್ಷ ರೂ. (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ವರೆಗೆ ಇರುತ್ತದೆ. ಇದು ಹುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಟೊಯೋಟಾ ಹೈರೈಡರ್, ಸ್ಕೋಡಾ ಕುಶಾಕ್ ಮತ್ತು ವೋಕ್ಸ್‌ವ್ಯಾಗನ್ ಟೈಗುನ್‌ನಂತಹ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ. 

     ಫೋಟೊದ ಮೂಲ

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Kia ಸೆಲ್ಟೋಸ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience