• English
    • Login / Register

    Maruti Dzire 3000 ಕಿ.ಮೀ ರಿವ್ಯೂ: ಹೇಗಿದೆ ಇದರೊಂದಿಗಿನ ಅನುಭವ ?

    Published On ಮಾರ್ಚ್‌ 27, 2025 By ansh for ಮಾರುತಿ ಡಿಜೈರ್

    • 234 Views
    • Write a comment

    ಹೆಚ್ಚಿನ ಸಂದರ್ಭಗಳಲ್ಲಿ, ಡಿಜೈರ್ ಅತ್ಯುತ್ತಮ ಚಾಲನಾ ಅನುಭವವನ್ನು ನೀಡುತ್ತದೆ, ಆದರೆ ನೀವು ಹೆದ್ದಾರಿಯನ್ನು ತಲುಪಿದ ನಂತರ, ಅದು ನಿರಾಶಾದಾಯಕವಾಗಲು ಪ್ರಾರಂಭಿಸುತ್ತದೆ

    Maruti Dzire

    ಜನವರಿ 1 ರಂದು ಬೆಳಗಿನ ಜಾವ, ಇಡೀ ದೇಶವೇ ನಿದ್ರಿಸುತ್ತಿದ್ದಾಗ, ನನ್ನ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ನಾನು ಪುಣೆಯಿಂದ ಮುಂಬೈಗೆ ಹೋಗಲು ನಿರ್ಧರಿಸಿದೆ. ನಾನು ಡಿಜೈರ್ ಅನ್ನು ಬೇರೆ ನಗರಕ್ಕೆ ತೆಗೆದುಕೊಂಡು ಹೋಗಿದ್ದು ಇದೇ ಮೊದಲು. ಮುಂದಿನ ಎರಡು ತಿಂಗಳಲ್ಲಿ, ನಾನು ಇನ್ನೂ ಎರಡು ಬಾರಿ ಪುಣೆ-ಮುಂಬೈ ನಡುವೆ ಡ್ರೈವ್‌ಗಳನ್ನು ಮಾಡುತ್ತೇನೆ, ಇದರಲ್ಲಿ ನಾನು ವಿಭಿನ್ನ ರಸ್ತೆಗಳಲ್ಲಿ, ವಿಭಿನ್ನ ಪರಿಸ್ಥಿತಿಗಳಲ್ಲಿ ಮತ್ತು ವಿಭಿನ್ನ ಜನರೊಂದಿಗೆ ಚಾಲನೆ ಮಾಡುತ್ತೇನೆ. 

    ಪುಣೆಯಲ್ಲಿರುವ ನನ್ನ ಸ್ಥಳದಿಂದ ಎಕ್ಸ್‌ಪ್ರೆಸ್‌ವೇ ಪ್ರಾರಂಭವಾಗುವವರೆಗೆ, ಸುಮಾರು 20 ನಿಮಿಷಗಳ ಡ್ರೈವ್ ಬೇಕಾಗುತ್ತದೆ, ಅಲ್ಲಿ ಬೆಳಿಗ್ಗೆ ಬಹಳಷ್ಟು ಟ್ರಕ್‌ಗಳು ಮತ್ತು ಬಸ್‌ಗಳ ಓಡಾಟವಿರುತ್ತದೆ. ಇಲ್ಲಿ ನಾನು ತುಂಬಾ ಜಾಗರೂಕರಾಗಿರಬೇಕು ಮತ್ತು ನಿಧಾನಗತಿಯಲ್ಲಿ ಚಾಲನೆ ಮಾಡಬೇಕು (ಡಿಜೈರ್ ಇದನ್ನು ಆನಂದಿಸುತ್ತದೆ), ವಿಶೇಷವಾಗಿ ಬೆಳಗಿನ ಜಾವದಲ್ಲಿ ಹೆಚ್ಚಿನ ಟ್ರಕ್ ಚಾಲಕರು ನಿದ್ರೆಯ ಅಮಲಿನಲ್ಲಿರುತ್ತಾರೆ.

    Maruti Dzire

    ಆದರೆ ನಾನು ಎಕ್ಸ್‌ಪ್ರೆಸ್‌ವೇಗೆ ಬಂದ ನಂತರ, ಮುಂದಿನ ಎರಡೂವರೆ ಗಂಟೆಗಳ ಕಾಲ ನನಗೆ ಮುಕ್ತ ರಸ್ತೆ ಸಿಗುತ್ತದೆ. ನನ್ನ ಮೊದಲ ಪ್ರವಾಸದಲ್ಲಿ, ಹೊಸ ವರ್ಷದ ದಿನವಾದ್ದರಿಂದ ಸಾಮಾನ್ಯಕ್ಕಿಂತ ಕಡಿಮೆ ಟ್ರಾಫಿಕ್ ಇರುತ್ತದೆ ಎಂದು ನಾನು ನಿರೀಕ್ಷಿಸಿದ್ದೆ, ಮತ್ತು ನಿಲ್ಲದೆ ನೇರವಾಗಿ ಮುಂಬೈಗೆ ಹೋಗಲು ನಿರ್ಧರಿಸಿದೆ. ಆದರೆ ನನ್ನ ಕ್ರೂಸಿಂಗ್ ವೇಗವನ್ನು ಗಂಟೆಗೆ 100 ಕಿ.ಮೀ. ತಲುಪಲು ನಾನು ವೇಗವನ್ನು ಹೆಚ್ಚಿಸಲು ಪ್ರಾರಂಭಿಸಿದ ತಕ್ಷಣ, ನಾನು ಒಂದನ್ನು ಗಮನಿಸಿದೆ.

    ಡಿಜೈರ್ 80 ರಿಂದ 100 ಕಿ.ಮೀ. ವೇಗದಲ್ಲಿ ಚಲಿಸಲು ಇಷ್ಟಪಡುವುದಿಲ್ಲ. 80 ಕಿ.ಮೀ.ವರೆಗೆ ವೇಗವರ್ಧನೆಯು ತ್ವರಿತ ಮತ್ತು ಮೃದುವಾಗಿರುತ್ತದೆ. ನಾನು ಕಾರನ್ನು ತಳ್ಳಬೇಕಾಗಿಲ್ಲ ಮತ್ತು ಆ ವೇಗವನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆದರೆ ನೀವು ಅಲ್ಲಿಂದ 100 ಕಿ.ಮೀ. ವೇಗವನ್ನು ಹೆಚ್ಚಿಸಿದರೆ, ಯಾವುದೇ ಫಲಿತಾಂಶವಿಲ್ಲದೆ ನೀವು ಕಾರನ್ನು ಹೆಚ್ಚು ತಳ್ಳುತ್ತಿದ್ದೀರಿ ಎಂದು ಭಾಸವಾಗುತ್ತದೆ.

    ಹೆದ್ದಾರಿಗಳಲ್ಲಿ ಹೆಚ್ಚಿನ ವೇಗದಲ್ಲಿ, ಹೊಸ ಎಂಜಿನ್‌ನಿಂದಾಗಿ ಡಿಜೈರ್ ನೀರಸವೆನಿಸುತ್ತದೆ. ಹಾಗಾಗಿ ನಾನು ವೇಗವನ್ನು ಹೆಚ್ಚಿಸಬೇಕಾದಾಗಲೆಲ್ಲಾ ಡಿಜೈರ್ ಅನ್ನು ವೇಗವಾಗಿ ಓಡಿಸಲು ಬೇಡಿಕೊಳ್ಳಬೇಕಾಗುತ್ತಿತ್ತು. ಈ ಎಕ್ಸ್‌ಪ್ರೆಸ್‌ವೇ ಮಾರ್ಗವು ಘಾಟ್ ಸೆಕ್ಷನ್‌ಅನ್ನು ಸಹ ಒಳಗೊಂಡಿದೆ, ಅಲ್ಲಿ ನಾನು ಅದನ್ನು ಮೂರನೇ ಗೇರ್‌ನಲ್ಲಿ ಇಡಬೇಕಾಗಿತ್ತು, ಆದ್ದರಿಂದ ನಾನು ತಿರುವುಗಳನ್ನು ಆನಂದಿಸಬಹುದು. ಟ್ರಾಫಿಕ್ ಇಲ್ಲದಿದ್ದರೂ ನಾಲ್ಕನೇ ಅಥವಾ ಐದನೇ ಗೇರ್‌ನಲ್ಲಿ ಇದು ಸಾಧ್ಯವಾಗುವುದಿಲ್ಲ.

    Maruti Dzire Interior

    ಆದರೆ ಈ ಹೆದ್ದಾರಿ ಡ್ರೈವ್‌ನಿಂದ ಒಂದು ಒಳ್ಳೆಯ ವಿಷಯ ನನಗೆ ತಿಳಿಯಿತು. ಪ್ರತಿ ಲೀ.ಗೆ 24 ಕಿ.ಮೀ.ಯಷ್ಟು ಮೈಲೇಜ್‌ ನೀಡುತ್ತಿತ್ತು. ಹೆದ್ದಾರಿಗಳಲ್ಲಿ ಡಿಜೈರ್ ಅತ್ಯಂತ ಇಂಧನ ದಕ್ಷತೆಯನ್ನು ಹೊಂದಿದೆ, ಇದರಲ್ಲಿ ಸುಧಾರಿಸಬೇಕಾದ ಒಂದು ಅಂಶವೆಂದರೆ ಇದರ ಪರ್ಫಾರ್ಮೆನ್ಸ್‌. ಆದರೆ ಮುಂಬೈನಿಂದ ಪುಣೆಗೆ ಬಾರುವಾಗ ಸಾಕಷ್ಟು ಹತ್ತುವಿಕೆ ಇರುವುದರಿಂದ ಹಿಂತಿರುಗುವಾಗ ಇದರ ಪರ್ಫಾರ್ಮೆನ್ಸ್‌ ಸ್ವಲ್ಪ ಕೆಟ್ಟದಾಗಿತ್ತು. 

    ಮುಂದಿನ ಬಾರಿ ನಾನು ಮುಂಬೈಗೆ ಹೋದದ್ದು ಜನವರಿ ಮಧ್ಯದಲ್ಲಿ, ಮತ್ತು ನಾನು ಯಾವುದೇ ನಿರೀಕ್ಷೆಗಳಿಲ್ಲದೆ ಕಾರಿನಲ್ಲಿ ಕುಳಿತಿದ್ದರಿಂದ ಈ ಕಷ್ಟಕರವಾದ ಹೆದ್ದಾರಿ ಚಾಲನೆಗೆ ಸಿದ್ಧನಾಗಿದ್ದೆ. ಈ ಬಾರಿ, ನಾನು ನಗರದೊಳಗೆ ಬಹಳಷ್ಟು ಕಾರು ಚಲಾಯಿಸಬೇಕಾಯಿತು. ಬಾಂದ್ರಾದಿಂದ ವರ್ಸೋವಾಗೆ ಮತ್ತು ನಂತರ ಗೋರೆಗಾಂವ್‌ಗೆ. ನಾನು ಬಹಳಷ್ಟು ಸ್ಥಳಗಳಿಗೆ ಭೇಟಿ ನೀಡಬೇಕಾಗಿತ್ತು, ಅಂದರೆ ಮುಂಬೈ ಟ್ರಾಫಿಕ್‌ನಲ್ಲಿ ನಾನು ಬಹಳಷ್ಟು ಪ್ರಯಾಣಿಸಬೇಕಾಗಿತ್ತು.

    Maruti Dzire Fuel efficiency

    ಡಿಜೈರ್ ತನ್ನ ತಾಕತ್ತನ್ನು ಸಾಬೀತುಪಡಿಸಿದ್ದು ಇಲ್ಲಿಯೇ. ಹೆದ್ದಾರಿಯಲ್ಲಿ ಇದು ನೀರಸವಾಗಿತ್ತು, ಆದರೆ ನಗರದಲ್ಲಿ ಇದರ ಶಕ್ತಿಯಲ್ಲಿ ಕೊರತೆ ಇರಲಿಲ್ಲ. ನಾನು ಹೆಚ್ಚಿನ ಸಮಯ ಎರಡನೇ ಮತ್ತು ಮೂರನೇ ಗೇರ್‌ನಲ್ಲಿಯೇ ಇದ್ದೆ, ಮತ್ತು ನನ್ನ ಸುತ್ತಮುತ್ತಲಿನವರನ್ನು ಸುಲಭವಾಗಿ ಓವರ್‌ಟೇಕ್‌ ಮಾಡುತ್ತಿದ್ದೆ. ನಗರದ ಒಳಗೆ ಕೂಡ ಡಿಜೈರ್ ನನಗೆ 15 ರಿಂದ 17 ಕಿ.ಮೀ. ಮೈಲೇಜ್‌ಅನ್ನು ನೀಡುತ್ತಿತ್ತು.

    ಆದರೆ ಗಡಿಯಾರ 5 ಗಂಟೆ ಬಾರಿಸುತ್ತಿದ್ದಂತೆ ಸಂಜೆಯ ಟ್ರಾಫಿಕ್‌ ಪ್ರಾರಂಭವಾದಾಗ, ನಾನು ಸ್ವಲ್ಪ ಸಮಯದವರೆಗೆ ಬಂಪರ್ ಟು ಬಂಪರ್ ಟ್ರಾಫಿಕ್‌ನಲ್ಲಿ ಫಸ್ಟ್ ಗೇರ್‌ನಲ್ಲಿ ಇರಬೇಕಾಯಿತು. ಇಲ್ಲಿ, ಮೊದಲ ಗೇರ್‌ನಲ್ಲಿ ಹೆಚ್ಚು ಶಕ್ತಿ ಇಲ್ಲದ ಕಾರಣ ಮತ್ತು ಟ್ರಾಫಿಕ್ ಮಧ್ಯದಲ್ಲಿ ನಿಲ್ಲಲು ನಾನು ಬಯಸದ ಕಾರಣ ನಾನು ಕ್ಲಚ್‌ನೊಂದಿಗೆ ತುಂಬಾ ಜಾಗರೂಕರಾಗಿರಬೇಕಿತ್ತು. 

    Maruti Dzire

    ನನ್ನ ಕೊನೆಯ ಪ್ರವಾಸ ಫೆಬ್ರವರಿಯಲ್ಲಿತ್ತು, ಆ ವೇಳೆಯಲ್ಲಿ ನಾನು ಮುಂಬೈನಲ್ಲಿ ಕಾರು ಚಲಾಯಿಸುತ್ತಿದ್ದಾಗ ನನ್ನೊಂದಿಗೆ ಕೆಲವು ಜನರಿದ್ದರು. ಹೆಚ್ಚಿನ ಸಮಯ, ಕಾರಿನಲ್ಲಿ 4 ಜನ ಇರುತ್ತಿದ್ದರು, ಮತ್ತು ನಾನು ಸೇರಿದಂತೆ ಅವರೆಲ್ಲರೂ ಕಾರು ಎಷ್ಟು ಆರಾಮದಾಯಕವಾಗಿದೆ ಎಂದು ಆಶ್ಚರ್ಯಚಕಿತರಾಗುತ್ತಿದ್ದೆವು. ನಾವು ಗೋರೆಗಾಂವ್ ಮತ್ತು ವರ್ಸೋವಾದ ಕಳಪೆ ರಸ್ತೆಗಳ ಜೊತೆಗೆ ಜುಹುವಿನ ನಯವಾದ ಡಾಂಬರು ರಸ್ತೆಯ ಮೇಲೆ ಓಡಿದೆವು, ಮತ್ತು ಎಲ್ಲಾ ಪರಿಸ್ಥಿತಿಗಳು ಮತ್ತು ಮೇಲ್ಮೈಗಳಲ್ಲಿ, ಡಿಜೈರ್ ಎಲ್ಲಾ ಪ್ರಯಾಣಿಕರನ್ನು ಆರಾಮದಾಯಕವಾಗಿಸುವಲ್ಲಿ ಯಶಸ್ವಿಯಾಯಿತು.

    ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಗರದೊಳಗೆ ನನ್ನ ಮೈಲೇಜ್‌ 15 ರಿಂದ 17 ಕಿ.ಮೀ.ಗಳ ನಡುವೆ ಇತ್ತು, ನಾನು ಭಾರೀ ಟ್ರಾಫಿಕ್‌ನಲ್ಲಿ ಕಳೆದ ಸಮಯಗಳನ್ನು ಒಳಗೊಂಡಂತೆ. ಡಿಜೈರ್ ತಾನು ನಗರಕ್ಕೆ ಏಕೆ ಉತ್ತಮ ಪ್ರಯಾಣಿಕ ಕಾರು ಎಂಬುದನ್ನು ಸಾಬೀತುಪಡಿಸಿತು. ಡ್ರೈವ್‌ಗಳು ಅನುಕೂಲಕರವಾಗಿರುವುದಲ್ಲದೆ, ನಮ್ಮ ಪರ್ಸ್‌ಗೂ ಹೊರೆಯನ್ನು ಉಂಟು ಮಾಡುವುದಿಲ್ಲ. 

    ಮುಂಬರುವ ತಿಂಗಳುಗಳಲ್ಲಿ, ನಾನು ಡಿಜೈರ್‌ನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ ಮತ್ತು ಅದರಲ್ಲಿನ ಸ್ಥಳಾವಕಾಶ ಮತ್ತು ಫೀಚರ್‌ಗಳ ಅಂಶಗಳ ಮೇಲೆ ಗಮನ ಹರಿಸುತ್ತೇನೆ. ಆದ್ದರಿಂದ ಕಾರ್‌ದೇಖೋವನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ. 

    ಪಾಸಿಟಿವ್‌ ಅಂಶಗಳು: ವಿನ್ಯಾಸ, ಫೀಚರ್‌ಗಳು, ಸಿಟಿ ಡ್ರೈವ್‌, ಸವಾರಿ ಸೌಕರ್ಯ

    ನಕಾರಾತ್ಮಕ ಅಂಶಗಳು: ಹೆದ್ದಾರಿಗಳಲ್ಲಿ ಶಕ್ತಿ ಕಡಿಮೆಯಾಗಿದೆ ಎಂದು ಅನಿಸುತ್ತದೆ

    ಸ್ವೀಕರಿಸಿದ ದಿನಾಂಕ: 16ನೇ ಡಿಸೆಂಬರ್, 2024

    ಸ್ವೀಕರಿಸಿದ ಕಿಲೋಮೀಟರ್‌ಗಳು: 723 ಕಿಮೀ

    ಇಲ್ಲಿಯವರೆಗೆ ಕಿಲೋಮೀಟರ್‌ಗಳು: 3921 ಕಿಮೀ

    Published by
    ansh

    ಇತ್ತೀಚಿನ ಸೆಡಾನ್ ಕಾರುಗಳು

    ಮುಂಬರುವ ಕಾರುಗಳು

    ಇತ್ತೀಚಿನ ಸೆಡಾನ್ ಕಾರುಗಳು

    ×
    We need your ನಗರ to customize your experience