ಹಳೆಯ ಮರ್ಸಿಡಿಸ್ ಬೆಂಜ್ E-ಕ್ಲಾಸ್ ಹೊಸ ಮೊಡೆಲ್‌ಗಿಂತ ಹೇಗೆ ಉತ ್ತಮವಾಗಿದೆ ಎಂದು ಹೇಳಲು ಇಲ್ಲಿದೆ 10 ಕಾರಣಗಳು
ಮರ್ಸಿಡಿಸ್ ಇ-ವರ್ಗ ಗಾಗಿ shreyash ಮೂಲಕ ಸೆಪ್ಟೆಂಬರ್ 11, 2024 07:34 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ-ಜನರೇಷನ್ E-ಕ್ಲಾಸ್ ಸ್ಟೈಲಿಶ್ ಆಗಿರುವ ಹೊರಭಾಗವನ್ನು ಹೊಂದಿದೆ ಮತ್ತು ಕ್ಯಾಬಿನ್ ನಲ್ಲಿ EQS-ಪ್ರೇರಿತ ಡ್ಯಾಶ್‌ಬೋರ್ಡ್ ಅನ್ನು ನೀಡಲಾಗಿದೆ
6 ನೇ ಜನರೇಷನ್ ಮರ್ಸಿಡಿಸ್-ಬೆಂಜ್ E-ಕ್ಲಾಸ್ ಅನ್ನು 2023 ರಲ್ಲಿ ವಿಶ್ವದಾದ್ಯಂತ ಪರಿಚಯಿಸಲಾಯಿತು ಮತ್ತು ಅಕ್ಟೋಬರ್ 2024 ರಲ್ಲಿ ಅದರ ನಿರೀಕ್ಷಿತ ಬಿಡುಗಡೆಗೆ ಮೊದಲು ಭಾರತದಲ್ಲಿ ಬಹಿರಂಗಪಡಿಸಲಾಗಿದೆ. 2024 ರ E-ಕ್ಲಾಸ್ ಡೆಲಿವರಿಗಳು ದೀಪಾವಳಿ ಹಬ್ಬದ ಆಸುಪಾಸಿನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಹೊಸ E-ಕ್ಲಾಸ್ ಸೆಡಾನ್ ಹಳೆಯ ಮಾಡೆಲ್ ಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ ಮತ್ತು ಹೊಸ MBUX ಟ್ರಿಪಲ್ ಸ್ಕ್ರೀನ್ ಸೆಟಪ್‌ನೊಂದಿಗೆ ಅಪ್ಡೇಟ್ ಆಗಿರುವ ಕ್ಯಾಬಿನ್ ಅನ್ನು ಹೊಂದಿದೆ. ಹೊಸ ಜನರೇಷನ್ E-ಕ್ಲಾಸ್ ಅನ್ನು ಹಳೆಯದಕ್ಕಿಂತ ಉತ್ತಮಗೊಳಿಸುವ 10 ವಿಷಯಗಳು ಇಲ್ಲಿವೆ.
ಡೈಮೆನ್ಷನ್ ಗಳು
ಮರ್ಸಿಡಿಸ್ ಇನ್ನೂ ಕೂಡ 2024 E-ಕ್ಲಾಸ್ ಸೆಡಾನ್ ಅನ್ನು ಭಾರತದಲ್ಲಿ ಲಾಂಗ್-ವೀಲ್‌ಬೇಸ್ (LWB) ವರ್ಷನ್ ನೊಂದಿಗೆ ನೀಡುತ್ತಿದೆ. ಅದರ ಹಳೆಯ ವರ್ಷನ್ ಗೆ ಹೋಲಿಸಿದರೆ, ಈ ಹೊಸ-ಜನ್ E-ಕ್ಲಾಸ್ ಇನ್ನೂ ಉದ್ದವಾಗಿದೆ. ಇದರ ಡೈಮೆನ್ಷನ್ ನ ವಿವರಗಳನ್ನು ಕೆಳಗೆ ನೀಡಲಾಗಿದೆ:
ಡೈಮೆನ್ಷನ್ ಗಳು |
2024 E-ಕ್ಲಾಸ್ |
ಹಳೆಯ E-ಕ್ಲಾಸ್ |
ವ್ಯತ್ಯಾಸ |
ಉದ್ದ |
5092 ಮಿ.ಮೀ |
5075 ಮಿ.ಮೀ |
+ 17 ಮಿ.ಮೀ |
ಅಗಲ |
1860 ಮಿ.ಮೀ |
1860 ಮಿ.ಮೀ |
ಯಾವುದೇ ವ್ಯತ್ಯಾಸವಿಲ್ಲ |
ಎತ್ತರ |
1493 ಮಿ.ಮೀ |
1495 ಮಿ.ಮೀ |
- 2 ಮಿ.ಮೀ |
ವೀಲ್ಬೇಸ್ |
3094 ಮಿ.ಮೀ |
3079 ಮಿ.ಮೀ |
+ 15 ಮಿ.ಮೀ |
ಹೊಸ ಡಿಸೈನ್
2024 ಮರ್ಸಿಡಿಸ್ ಬೆಂಜ್ E-ಕ್ಲಾಸ್ ಹಿಂದಿನ ಮಾಡೆಲ್ ಗಿಂತ ಹೆಚ್ಚು ಐಷಾರಾಮಿಯಾಗಿದೆ. ಮುಂಭಾಗವು ಹೊಸ ಸ್ಟಾರ್-ಪ್ಯಾಟರ್ನ್ ಗ್ರಿಲ್ ಅನ್ನು ಹೊಂದಿದೆ ಮತ್ತು ಬದಿಯಲ್ಲಿ, ಇದು 18-ಇಂಚಿನ ಅಲೊಯ್ ವೀಲ್ಸ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಪಡೆಯುತ್ತದೆ. ಮೇಬ್ಯಾಕ್ ಶೈಲಿಯ ಹಿಂಭಾಗದ ಕ್ವಾರ್ಟರ್ ಗ್ಲಾಸ್ ಪ್ಯಾನೆಲ್ ಅದರ ಐಷಾರಾಮಿ ಲುಕ್ ಅನ್ನು ಇನ್ನೂ ಹೆಚ್ಚಿಸುತ್ತದೆ.
ಹೊಸ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು
ಹೊಸ ಜನರೇಷನ್ ಸೆಡಾನ್ ಮುಂಭಾಗದಲ್ಲಿ ಹೊಸ LED ಹೆಡ್‌ಲೈಟ್ ಡಿಸೈನ್ ಅನ್ನು ಹೊಂದಿದ್ದು ಅದು ಮೊದಲಿಗಿಂತ ಸ್ಲೀಕ್ ಆಗಿ ಕಾಣುತ್ತದೆ. ಹಿಂಭಾಗದಲ್ಲಿ, ಸೆಡಾನ್ 3D ಸ್ಟಾರ್-ಪ್ಯಾಟರ್ನ್ ಟೈಲ್ ಲೈಟ್‌ಗಳನ್ನು ಹೊಂದಿದೆ (ಮರ್ಸಿಡಿಸ್ ಲೋಗೋದಂತೆ), ಇದನ್ನು ಸ್ಲಿಮ್ ಕ್ರೋಮ್ ಸ್ಟ್ರಿಪ್‌ನಿಂದ ಸಂಪರ್ಕಿಸಲಾಗಿದೆ.
ಹೊಸ ಕಲರ್ ಆಯ್ಕೆ: ನಾಟಿಕ್ ಬ್ಲೂ
ಹೊಸ E-ಕ್ಲಾಸ್ ಹೊಸ ನಾಟಿಕ್ ಬ್ಲೂ ಕಲರ್ ಶೇಡ್ ಅನ್ನು ಕೂಡ ಪರಿಚಯಿಸುತ್ತಿದೆ. ಇದರ ಜೊತೆಗೆ ಮೊದಲು ಇದ್ದ ಹೈಟೆಕ್ ಸಿಲ್ವರ್, ಗ್ರ್ಯಾಫೈಟ್ ಗ್ರೇ, ಅಬ್ಸಿಡಿಯನ್ ಬ್ಲಾಕ್ ಮತ್ತು ಪೋಲಾರ್ ವೈಟ್ ಕಲರ್ ಆಯ್ಕೆಗಳು ಕೂಡ ಸಿಗುತ್ತವೆ.
ಹೊಸ MBUX ಸೂಪರ್‌ಸ್ಕ್ರೀನ್ ಸೆಟಪ್
ನೀವು ಹೊಸ E-ಕ್ಲಾಸ್ ಕ್ಯಾಬಿನ್ ಒಳಗೆ ಪ್ರವೇಶಿಸಿದಾಗ, MBUX ಸೂಪರ್‌ಸ್ಕ್ರೀನ್ ಸೆಟಪ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್ ನಿಮ್ಮ ಗಮನ ಸೆಳೆಯುತ್ತದೆ. ಇದು 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಇನ್ಫೋಟೈನ್‌ಮೆಂಟ್‌ಗಾಗಿ 14.4-ಇಂಚಿನ ಟಚ್‌ಸ್ಕ್ರೀನ್ ಮತ್ತು ಕೋ-ಡ್ರೈವರ್‌ಗಾಗಿ ಪ್ರತ್ಯೇಕ 12.3-ಇಂಚಿನ ಸ್ಕ್ರೀನ್ ಅನ್ನು ಒಳಗೊಂಡಿದೆ.
ಸೆಲ್ಫ್ ಫೇಸಿಂಗ್ ಕ್ಯಾಮೆರಾ
ಮರ್ಸಿಡಿಸ್ ಈಗ ಸೂಪರ್‌ಸ್ಕ್ರೀನ್ ಡ್ಯಾಶ್‌ಬೋರ್ಡ್‌ನ ಮೇಲೆ ಸೆಲ್ಫ್-ಫೇಸಿಂಗ್ ಕ್ಯಾಮರಾವನ್ನು ನೀಡುತ್ತಿದೆ, ಇದನ್ನು ಜೂಮ್ ಅಥವಾ ವೆಬೆಕ್ಸ್‌ನಲ್ಲಿ ವೀಡಿಯೊ ಮೀಟಿಂಗ್ ಗಳಿಗೆ ಬಳಸಬಹುದು. ಇದನ್ನು ಕ್ಯಾಬಿನ್ ಸೆಲ್ಫಿಗಳಿಗೂ ಬಳಸಬಹುದು. ಆದರೆ ಸುರಕ್ಷತೆಯ ದೃಷ್ಟಿಯಿಂದ ಕಾರನ್ನು ಡ್ರೈವ್ ಮಾಡುವಾಗ ಈ ಕ್ಯಾಮರಾವನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ.
ಡಿಜಿಟಲ್ ವೆಂಟ್ ಕಂಟ್ರೋಲ್
ಹೊಸ ಸೆಡಾನ್ ಡಿಜಿಟಲ್ ವೆಂಟ್ ಕಂಟ್ರೋಲ್ ಸಿಸ್ಟಮ್ ಅನ್ನು ಹೊಂದಿದ್ದು, ಇದು ಇನ್ಫೋಟೈನ್‌ಮೆಂಟ್ ಸ್ಕ್ರೀನ್ ನಿಂದ ನೇರವಾಗಿ AC ವೆಂಟ್‌ಗಳ ಗಾಳಿಯ ಹರಿವು ಮತ್ತು ದಿಕ್ಕನ್ನು ಸರಿಹೊಂದಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ಈ ವೆಂಟ್ ಗಳನ್ನು ಮಾನ್ಯುಯಲ್ ಆಗಿ ಕೂಡ ಅಡ್ಜಸ್ಟ್ ಮಾಡಬಹುದು.
ಐಷಾರಾಮಿ ಹಿಂದಿನ ಸೀಟ್
ಹೊಸ E-ಕ್ಲಾಸ್ ಹಿಂದಿನ ಸೀಟಿನ ಪ್ರಯಾಣಿಕರಿಗೆ ಹೆಚ್ಚು ಐಷಾರಾಮಿ ಅನುಭವವನ್ನು ನೀಡುತ್ತದೆ. ಹಿಂದಿನ ಸೀಟ್ ಬೇಸ್ ಅನ್ನು 40 ಮಿಮೀ ಎತ್ತರಕ್ಕೆ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದು ಮತ್ತು ಬ್ಯಾಕ್‌ರೆಸ್ಟ್ ಅನ್ನು 36 ಡಿಗ್ರಿಗಳಷ್ಟು ರಿಕ್ಲೈನ್ ಮಾಡಬಹುದು. ಹೆಚ್ಚುವರಿ ಅನುಕೂಲತೆಗಾಗಿ ನೀವು ಸಾಫ್ಟ್ ಪಿಲ್ಲೋ ಪಡೆಯುತ್ತೀರಿ, ಇದರ ಜೊತೆಗೆ ಪ್ರತ್ಯೇಕ ಕ್ಲೈಮೇಟ್ ಕಂಟ್ರೋಲ್ ಝೋನ್ ಗಳು ಮತ್ತು ಎಲೆಕ್ಟ್ರಾನಿಕ್ ಸನ್ ಬ್ಲೈಂಡ್‌ಗಳಂತಹ ಫೀಚರ್ ಗಳನ್ನು ಕೂಡ ನೀಡಲಾಗಿದೆ.
ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆಗಳು
2024 E-ಕ್ಲಾಸ್ ಈಗ 4 ಸಿಲಿಂಡರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾತ್ರ ಲಭ್ಯವಿದೆ. ನೀವು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ನಡುವೆ ಆಯ್ಕೆ ಮಾಡಬಹುದು. ಎರಡೂ 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬರುತ್ತವೆ ಅದು 30 ಸೆಕೆಂಡುಗಳ ಕಾಲ 27 PS ಬೂಸ್ಟ್ ಅನ್ನು ನೀಡುತ್ತದೆ. ಎರಡೂ ಎಂಜಿನ್‌ಗಳನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲಾಗಿದೆ, ಅದು ಸೆಡಾನ್‌ನ ಹಿಂದಿನ ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ. ಮರ್ಸಿಡಿಸ್ 6 ಸಿಲಿಂಡರ್ ಎಂಜಿನ್ ಆಯ್ಕೆಯನ್ನು 2024 E-ಕ್ಲಾಸ್ ಸೆಡಾನ್‌ನೊಂದಿಗೆ ಕೈಬಿಟ್ಟಿದೆ.
ಇದನ್ನು ಕೂಡ ಓದಿ: ಮರ್ಸಿಡಿಸ್ ಮೇಬ್ಯಾಕ್ EQS 680 ಎಲೆಕ್ಟ್ರಿಕ್ SUV ಭಾರತದಲ್ಲಿ ಬಿಡುಗಡೆಯಾಗಿದೆ, ಬೆಲೆ ರೂ. 2.25 ಕೋಟಿ
ಸುಧಾರಿತ ಡ್ರೈವಿಂಗ್ ಗುಣಮಟ್ಟ
ಮರ್ಸಿಡಿಸ್ ಹೊಸ E-ಕ್ಲಾಸ್ ಅನ್ನು ಸೆಲೆಕ್ಟಿವ್ ಡ್ಯಾಂಪಿಂಗ್ ಸಿಸ್ಟಮ್‌ನೊಂದಿಗೆ ನೀಡುತ್ತಿದೆ, ಅದು ರಸ್ತೆಯ ಪರಿಸ್ಥಿತಿಯನ್ನು ಆಧರಿಸಿ ಪ್ರತಿ ಚಕ್ರದ ಮೇಲೆ ಡ್ಯಾಂಪಿಂಗ್ ಪರಿಣಾಮವನ್ನು ಅಡ್ಜಸ್ಟ್ ಮಾಡುತ್ತದೆ. ಸಣ್ಣ ಗುಂಡಿಗಳಿಗೆ, ಈ ಸಿಸ್ಟಮ್ ಡ್ರೈವ್ ಅನ್ನು ಹೆಚ್ಚು ಆರಾಮದಾಯಕವಾಗಿಸಲು ಡ್ಯಾಂಪಿಂಗ್ ಅನ್ನು ಕಡಿಮೆ ಮಾಡುತ್ತದೆ. ದೊಡ್ಡ ಗುಂಡಿಗಳಿಗೆ, ಡ್ರೈವ್ ಅನ್ನು ಸ್ಥಿರವಾಗಿ ಮತ್ತು ಆರಾಮದಾಯಕವಾಗಿಸಲು ಇದು ಸಂಪೂರ್ಣ ಡ್ಯಾಂಪಿಂಗ್ ಅನ್ನು ಬಳಸುತ್ತದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024 ಮರ್ಸಿಡಿಸ್ ಬೆಂಝ್ E-ಕ್ಲಾಸ್ ಬೆಲೆಯು 80 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಒಮ್ಮೆ ಲಾಂಚ್ ಆದ ನಂತರ, ಇದು ಆಡಿ A6 ಮತ್ತು ಹೊಸ BMW 5 ಸಿರೀಸ್ LWB ಯೊಂದಿಗೆ ಮತ್ತೊಮ್ಮೆ ಸ್ಪರ್ಧಿಸಲಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಮರ್ಸಿಡಿಸ್ ಬೆಂಜ್ E-ಕ್ಲಾಸ್ ಡೀಸೆಲ್