ಸುಧಾರಿತ 2023ರ ಬಿಎಂಡಬ್ಲ್ಯೂ X5 ರೂ 93.90 ಲಕ್ಷಕ್ಕೆ ಬಿಡುಗಡೆ
ಬಿಎಂಡವೋ ಎಕ್ಸ4 ಗಾಗಿ sonny ಮೂಲಕ ಜುಲೈ 17, 2023 10:15 pm ರಂದು ಪ್ರಕಟಿಸಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
2023 X5 ಪರಿಷ್ಕೃತ ಮುಂಭಾಗ ಮತ್ತು ನವೀಕೃತ ಕ್ಯಾಬಿನ್ ಜೊತೆಗೆ ಎರಡು ಇಂಟಗ್ರೇಟೆಡ್ ಡಿಸ್‌ಪ್ಲೇಗಳನ್ನು ಪಡೆದಿದೆ
-
ಈ ನವೀಕೃತ BMW X5 ಒಳಗೂ-ಹೊರಗೂ ಬ್ರ್ಯಾಂಡ್‌ನ ಪ್ರಸ್ತುತ ಡಿಸೈನ್ ಲ್ಯಾಂಗ್ವೇಜ್ ಅನ್ನು ಪಡೆದಿದೆ.
-
ಹೊಸ ಡಿಸೈನ್ ಅನ್ನು ಪ್ರತ್ಯೇಕಿಸಲು ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳು ಮತ್ತು ನವೀಕೃತ ಗ್ರಿಲ್.
-
12.3-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 14.9-ಇಂಚು ಇನ್ಫೋಟೇನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಈಗ ಸೇರಿಸಲಾಗಿದೆ.
-
ಆದರೂ ವಿಹಂಗಮ ಗ್ಲಾಸ್ ರೂಫ್, ಪವರ್ ಮತ್ತು ವಾತಾಯನದ ಮುಂಭಾಗದ ಸೀಟುಗಳು ಮತ್ತು ಪ್ಲಶ್ ಅಫ್‌ಹೋಲ್ಸ್‌ಟ್ರಿ ಅನ್ನು ಪಡೆದಿದೆ.
-
ನವೀಕೃತ ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಪವರ್ ಟ್ರೇನ್‌ಗಳು ಈಗ 48V ಮೈಲ್ಡ್-ಹೈಬ್ರಿಡ್ ಟೆಕ್ ಮತ್ತು ಇನ್ನಷ್ಟು ಕಾರ್ಯಕ್ಷಮತೆಯನ್ನು ಪಡೆದಿದೆ.
ಐಷಾರಾಮಿ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಮಧ್ಯಮ-ಗಾತ್ರದ SUVಗಳಲ್ಲಿ BMW X5 ಕೂಡಾ ಒಂದು. ಇದರ ನವೀಕೃತ ಅವತಾರವು 2023ರ ಪ್ರಾರಂಭದಲ್ಲಿ ಪಾದಾರ್ಪಣೆ ಮಾಡಿದ್ದು ಇದೀಗ ನಮ್ಮ ತೀರಕ್ಕೆ ಬಂದಿದೆ. ಈ ನವೀಕೃತ X5 ಅನ್ನು ಕೇವಲ ಎರಡು ವೇರಿಯೆಂಟ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳೆರಡರಲ್ಲಿಯೂ ನೀಡಾಲಗಿದ್ದು ಅವುಗಳ ಬೆಲೆ ಈ ಕೆಳಗಿನಂತಿವೆ:
BMW X5 ವೇರಿಯೆಂಟ್‌ಗಳು |
ಪೆಟ್ರೋಲ್ (xಡ್ರೈವ್40i) |
ಡೀಸೆಲ್ (xಡ್ರೈವ್30d) |
xಲೈನ್ |
ರೂ 93.90 ಲಕ್ಷ |
ರೂ 95.90 ಲಕ್ಷ |
M ಸ್ಪೋರ್ಟ್ |
ರೂ 1.04 ಕೋಟಿ |
ರೂ 1.06 ಕೋಟಿ |
ಈ ನವೀಕೃತ ಟಾಪ್-ಸ್ಪೆಕ್ ಎಂ ಸ್ಪೋರ್ಟ್ ವೇರಿಯೆಂಟ್‌ಗಳಿಗೆ ಹಿಂದಿನ ಮಾಡೆಲ್‌ಗೆ ಹೋಲಿಸಿದರೆ ಸುಮಾರು ರೂ 6 ಲಕ್ಷದಷ್ಟು ದುಬಾರಿಯಾಗಿದೆ.
ಹೊಸ ನವೀಕೃತ X5ನಲ್ಲಿ ಹೊಸತೇನಿದೆ?
2023 X5 ಅನ್ನು ಪರಿಷ್ಕೃತ ಮುಂಭಾಗದಿಂದ ಗುರುತಿಸಬಹುದಾಗಿದ್ದು, ಇದು ಈಗ ಹೊಸ ಮುಂಭಾಗದ ಬಂಪರ್‌ನಲ್ಲಿ ನೇರವಾಗಿ ಗಾಳಿಯನ್ನು ಒಳಗೆಳೆದುಕೊಳ್ಳುವ ಫೀಚರ್ ಅನ್ನು ಪಡೆದಿದೆ. ಮುಖ್ಯ ಗ್ರಿಲ್ ದೊಡ್ಡದಾಗಿದ್ದು ಈಗ ಪ್ರಕಾಶಮಾನವಾದ ಹೊಳಪನ್ನು ಪಡೆಯುತ್ತಿದೆ ಮತ್ತು ಅದರ LED ಲ್ಯಾಂಪ್‌ಗಳು ಹೊಸ ಲೈಟ್‌ನ ಸಹಿಯೊಂದಿಗೆ ಈಗ ಸ್ಲೀಕರ್ ಆಗಿದೆ. ಹಿಂಭಾಗದಲ್ಲಿ ಗಮನಾರ್ಹ ಡಿಸೈನ್ ಬದಲಾವಣೆಯೆಂದರೆ LED ಟೇಲ್‌ಲ್ಯಾಂಪ್‌ಗಳಿಗೆ ಮರುವಿನ್ಯಾಸಗೊಳಿಸಿದ ಲೇಔಟ್. ಈ ಐಷಾರಾಮಿ SUV ಹಿಂಭಾಗದ ಪ್ರಮುಖ ಸ್ಕಿಡ್‌ಪ್ಲೇಟ್‌ಗಳೊಂದಿಗೆ ಕೆಳಗಿನ ತುದಿಯಲ್ಲಿ ಈಗಲೂ ಕ್ಲಾಡಿಂಗ್ ಅನ್ನು ಪಡೆದಿದ್ದು ತುಸು ಒರಟಾದ ನೋಟವನ್ನು ನೀಡುತ್ತದೆ.
ಸ್ಪೋರ್ಟ್ ವೇರಿಯೆಂಟ್ ಅನ್ನು ಸ್ಪೋರ್ಟಿಯರ್ ನೋಟಕ್ಕಾಗಿ ಎಕ್ಸ್‌ಟೀರಿಯರ್ ಸುತ್ತಲೂ ಸಿಲ್ವರ್ ಬದಲಿಗೆ ಬ್ಲ್ಯಾಕ್ಡ್ ಔಟ್ ಮಾಡಲಾಗಿದೆ.
ಖರೀದಿದಾರರಿಗೆ ಕ್ಯಾಬಿನ್ ಒಳಗಿನ ಬದಲಾವಣೆ ವಿಶೇಷವೆನಿಸುತ್ತದೆ. ಈ ನವೀಕೃತ X5 ಪ್ರಸ್ತುತ BMW ಡ್ಯಾಶ್‌ಬೋರ್ಡ್‌ನೊಂದಿಗೆ ಬಾಗಿದ ಇಂಟೆಗ್ರೇಟೆಡ್ ಡ್ಯುಯಲ್ ಡಿಸ್‌ಪ್ಲೇಗಳು-12.3-ಇಂಚು ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು 14.9 ಇಂಚು ಇನ್ಫೋಟೇನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ. ಅಲ್ಲದೇ ಇದು ಮುಂಭಾಗದ ಪ್ರಯಾಣಿಕ ಸ್ಥಳದಲ್ಲಿರುವ ಡ್ಯಾಶ್‌ಬೋರ್ಡ್ ಸುತ್ತಲೂ ಆ್ಯಂಬಿಯೆಂಟ್ ಲೈಟಿಂಗ್ ಬಾರ್‌ನೊಂದಿಗೆ ಬರುತ್ತದೆ.
ಹೊಸ X5 ಪವರ್‌ಟ್ರೇನ್‌ಗಳು
BMW X5 ಈಗಲೂ 3-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳೊಂದಿಗೆ ಬರುತ್ತದೆ, ಆದರೆ ಅವುಗಳನ್ನು 48V ಮೈಲ್ಡ್-ಹೈಬ್ರಿಡ್ ಟೆಕ್ ಮತ್ತು ವರ್ಧಿತ ಕಾರ್ಯಕ್ಷಮತೆಯೊಂದಿಗೆ ನವೀಕರಿಸಲಾಗಿದೆ. ಅವುಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:
ವೇರಿಯೆಂಟ್ |
xಡ್ರೈವ್40i |
xಡ್ರೈವ್30d |
ಇಂಜಿನ್ |
3-ಲೀಟರ್, ಆರು-ಸಿಲಿಂಡರ್ |
3-ಲೀಟರ್, ಆರು-ಸಿಲಿಂಡರ್ |
ಪವರ್ |
381PS |
285PS |
ಟಾರ್ಕ್ |
520Nm |
650Nm |
ಟ್ರಾನ್ಸ್‌ಮಿಷನ್ |
8-ಸ್ಪೀಡ್ AT |
8-ಸ್ಪೀಡ್ AT |
ಇದು ಆಲ್-ವ್ಹೀಲ್-ಡ್ರೈವ್ ಅನ್ನೇ ಸ್ಟಾಂಡರ್ಡ್ ಆಗಿ ನೀಡುತ್ತದೆ
ಫೀಚರ್‌ಭರಿತವಾಗಿಯೇ ಇದೆ
ಈ BMW X5 ಟಾಪ್‌ವೇರಿಯೆಂಟ್‌ನಲ್ಲಿ ವಿಹಂಗಮ ಗ್ಲಾಸ್ ರೂಫ್, ಸಕ್ರಿಯ ಸೀಟ್ ವೆಂಟಿಲೇಷನ್, ವಿದ್ಯುತ್‌ಚಾಲಿತವಾಗಿ ಹೊಂದಿಸಬಲ್ಲ ಮುಂಭಾಗದ ಸೀಟುಗಳು ಮತ್ತು ಪವರ್ ಸ್ಪ್ಲಿಟ್-ಟೇಲ್‌ಗೇಟ್ ಮುಂತಾದ ಫೀಚರ್‌ಗಳೊಂದಿಗೆ ಸುಸಜ್ಜಿತವಾಗಿದೆ. xಲೈನ್ ಟ್ರಿಮ್ ಸೆನ್ಸಾಫಿನ್ ಅಪ್‌ಹೋಲ್ಸ್‌ಟ್ರಿ ಪಡೆದಿದ್ದರೆ, M ಸ್ಪೋಟರ್ಟ್ ಬ್ರೌನ್ ಅಥವಾ ವೈಟ್ ಲೆದರ್ ಅಪ್‌ಹೋಲ್ಸ್‌ಟ್ರಿಯನ್ನು ಪಡೆಯುತ್ತದೆ. ಹೊಸ X5 21-ಇಂಚು ಅಲಾಯ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, ವೇರಿಯೆಂಟ್ ಅನ್ನು ಆಧರಿಸಿ ಇದು ವಿವಿಧ ವಿನ್ಯಾಸಗಳಲ್ಲಿ ಬರುತ್ತದೆ.
ಇದು ಹೊಂದಿಸಬಲ್ಲ ಸಸ್ಪೆನ್ಷನ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು M ಸ್ಪೋರ್ಟ್ ಮಾತ್ರ ಪ್ಲಶ್ ರೈಡ್ ಗುಣಮಟ್ಟಕ್ಕಾಗಿ ಏರ್ ಸಸ್ಪೆನ್ಷನ್ ಅನ್ನು ಪಡೆಯುತ್ತದೆ. ಸುರಕ್ಷತೆಯ ವಿಷಯದಲ್ಲಿ, ಈ BMW X5 ಆರು ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಆ್ಯಕ್ಟಿವ್ ಪಾರ್ಕ್ ಅಸಿಸ್ಟ್‌ನೊಂದಿಗೆ ಬರುತ್ತದೆ.
ಪ್ರತಿಸ್ಪರ್ಧಿಗಳು
ಈ BMW X5 ಫೇಸ್‌ಲಿಫ್ಟ್‌ಗೆ ಮರ್ಸಿಡಿಸ್-ಬೆನ್ಝ್ GLE, ವೋಲ್ವೋ XC90, ರೇಂಜ್ ರೋವರ್ ವೇಲರ್ ಮತ್ತು ಆಡಿ Q7 ಪ್ರತಿಸ್ಪರ್ಧಿಗಳಾಗಿವೆ.
ಇನ್ನಷ್ಟು ಓದಿ : X5 ಆಟೋಮ್ಯಾಟಿಕ್