Login or Register ಅತ್ಯುತ್ತಮ CarDekho experience ಗೆ
Login

2023 ಹೋಂಡಾ ಸಿಟಿ ಮತ್ತು ಸಿಟಿ ಹೈಬ್ರಿಡ್ ನಿರೀಕ್ಷಿತ ಬೆಲೆಗಳು: ನವೀಕೃತ ಆವೃತ್ತಿ ಎಷ್ಟು ದುಬಾರಿಯಾಗುತ್ತೆ?

ಮಾರ್ಚ್‌ 01, 2023 03:26 pm ರಂದು rohit ಮೂಲಕ ಪ್ರಕಟಿಸಲಾಗಿದೆ
21 Views

ಈ ನವೀಕೃತ ಸೆಡಾನ್ ಹೊಸ ಪ್ರವೇಶ-ಹಂತದ SV ವೇರಿಯೆಂಟ್ ನೀಡುತ್ತಿದ್ದು ADAS ನೊಂದಿಗೆ ಟಾಪ್ ಎಂಡ್‌ನಲ್ಲಿ ಹೆಚ್ಚು ಬೆಲೆ ಹೊಂದಿದೆ.

ಹೋಂಡಾ ಸಿಟಿ ತನ್ನ ಹೊಸ ಅವತಾರದಲ್ಲಿ ಮಾರ್ಚ್ 2 ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದ್ದು, ನವೀಕೃತ ಸಿಟಿ ಹೈಬ್ರಿಡ್ (e:HEV) ಕೂಡಾ ಅದೇ ದಿನ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ. ಕೆಲವು ಸೋರಿಕೆಯಾದ ಚಿತ್ರಗಳು ಮತ್ತು ವಿವರಗಳು ಸಾಮಾನ್ಯ ಸಿಟಿ ಮತ್ತು ಸಿಟಿ ಹೈಬ್ರಿಡ್ ಎರಡರಲ್ಲೂ ಹೊಸ ಮೂಲ ವೇರಿಯೆಂಟ್‌ಗಳನ್ನು ಒಳಗೊಂಡಂತೆ ನವೀಕರಣದೊಂದಿಗೆ ಏನೇನು ನೀಡಲಿವೆ ಎಂಬುದರ ಬಗ್ಗೆ ಈಗಾಗಲೇ ಸೂಚಿಸಿವೆ. ಅನೇಕ ಡೀಲರ್‌ಶಿಪ್‌ಗಳು ಈ ಸೆಡಾನ್‌ನ ಆಫ್‌ಲೈನ್ ಬುಕಿಂಗ್‌ಗಳನ್ನೂ ಸ್ವೀಕರಿಸುತ್ತಿವೆ. ನಮಗೆ ಈಗಾಗಲೇ ತಿಳಿದಿರುವ ಅನೇಕ ವೇರಿಯೆಂಟ್ ವಿವರಗಳೊಂದಿಗೆ, ಪೆಟ್ರೋಲ್-ಮಾತ್ರ ಮಾಡೆಲ್ ಹಾಗೂ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಗೆ ಇವುಗಳು ನಮ್ಮ ವೇರಿಯೆಂಟ್‌ವಾರು ನಿರೀಕ್ಷಿತ ಬೆಲೆಗಳಾಗಿವೆ.

ಆದರೆ, ನಿರೀಕ್ಷಿತ ವೇರಿಯೆಂಟ್‌ವಾರು ಬೆಲೆಗಳ ವಿವರಗಳನ್ನು ನೋಡುವ ಮೊದಲು ನಾವು ಈ ನವೀಕೃತ ಸೆಡಾನ್‌ನ ಪವರ್‌ಟ್ರೇನ್ ವಿವರಗಳನ್ನು ಪರಿಶೀಲಿಸೋಣ:

ನಿರ್ದಿಷ್ಟತೆ

1.5-ಲೀಟರ್ ಪೆಟ್ರೋಲ್

1.5-ಲೀಟರ್ ಪೆಟ್ರೋಲ್ ಹೈಬ್ರಿಡ್

ಪವರ್

121PS

126PS (ಸಂಯೋಜಿತ)

ಟಾರ್ಕ್

145Nm

253Nm (ಸಂಯೋಜಿತ)

ಟ್ರಾನ್ಸ್‌ಮಿಶನ್

6-ಸ್ಪೀಡ್ MT, 7-ಸ್ಟೆಪ್ CVT

e-CVT

ನವೀಕರಣದೊಂದಿಗೆ ಈ ಸೆಡಾನ್ 1.5-ಲೀಟರ್ ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿರುವುದಿಲ್ಲ (100PS/200Nm). ಸಿಟಿ ಹೈಬ್ರಿಡ್ ಕೂಡಾ 0.7kWh ಬ್ಯಾಟರಿ ಪ್ಯಾಕ್ ಮತ್ತು ಇಲೆಕ್ಟ್ರಿಕ್ ಮೋಟರ್‌ನೊಂದಿಗೆ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ.

ಈ ನವೀಕೃತ ಸಿಟಿ ವೈರ್‌ಲೆಸ್ ಫೋನ್ ಚಾರ್ಜರ್, ಏಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಹಾಗೂ ಪ್ರಮುಖವಾಗಿ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌(ADAS) ಗಳನ್ನು ಹೊಂದಿದೆ. ಹೋಂಡಾ ಪರಿಚಯಿಸಿದ ಸಿಟಿಯ ಹೈಬ್ರಿಡ್ ಅವತಾರದಲ್ಲಿ, ಸುರಕ್ಷತಾ ತಂತ್ರಜ್ಞಾನವು ಈಗ ಸಾಮಾನ್ಯ ಪೆಟ್ರೋಲ್ ಸೆಡಾನ್‌ನಲ್ಲೂ ಲಭ್ಯವಿದೆ. ಅಷ್ಟೇ ಅಲ್ಲದೆ ಇದರಲ್ಲಿ ಮ್ಯಾನುವಲ್ ಟ್ರಾನ್ಸ್‌ಮಿಶನ್ ಕೂಡಾ ಲಭ್ಯವಿದೆ.

ಇದನ್ನೂ ಓದಿ: ChatGPT ಪ್ರಕಾರ ಭಾರತಕ್ಕೆ ಸೂಕ್ತವಾದ 4 ಕಾರುಗಳು ಇಲ್ಲಿವೆ

ನಿರೀಕ್ಷಿತ ವೇರಿಯೆಂಟ್-ವಾರು ಬೆಲೆಗಳ ವಿವರಗಳು ಇಲ್ಲಿವೆ:

ವೇರಿಯೆಂಟ್

1.5-ಲೀಟರ್ MT

1.5- ಲೀಟರ್ CVT

1.5- ಲೀಟರ್ ಪೆಟ್ರೋಲ್ ಹೈಬ್ರಿಡ್

SV (ಹೊಸ)

ರೂ 11 ಲಕ್ಷ

V

ರೂ 12.20 ಲಕ್ಷ

ರೂ 13.60 ಲಕ್ಷ

ರೂ 16.57 ಲಕ್ಷ (ಹೊಸ)

VX

ರೂ 13.65 ಲಕ್ಷ

ರೂ 14.95 ಲಕ್ಷ

ZX

ರೂ 15.65 ಲಕ್ಷ

ರೂ 16.95 ಲಕ್ಷ

ರೂ 20 ಲಕ್ಷ

ಹೊಸ ನವೀಕರಣದೊಂದಿಗೆ, ಹೋಂಡಾ ತನ್ನ ಕಾಂಪ್ಯಾಕ್ಟ್ ಸೆಡಾನ್‌ಗೆ ಹೊಸ ಪ್ರವೇಶ-ಹಂತದ SV ಟ್ರಿಮ್ ಅನ್ನು ಪರಿಚಯಿಸಲಿದೆ, ಇದು CVT ಆಯ್ಕೆ ಹೊಂದಿರದ ಏಕೈಕ ವೇರಿಯೆಂಟ್ ಆಗಿದೆ. ಈ CVT ವೇರಿಯೆಂಟ್‌ಗಳು ತಮ್ಮ ಮ್ಯಾನುವಲ್ ಪ್ರತಿರೂಪಗಳಿಗಿಂತ ರೂ 1.3 ಲಕ್ಷದಿಂದ ರೂ 1.4 ಲಕ್ಷದಷ್ಟು ಹೆಚ್ಚು ಬೆಲೆಯನ್ನು ಹೊಂದಿದೆ. ಟಾಪ್-ಎಂಡ್ ZX ಟ್ರಿಮ್ VX ಗಿಂದ ರೂ ಎರಡು ಲಕ್ಷದಷ್ಟು ಹೆಚ್ಚಿರಲು ಕಾರಣ ADAS ನ ಸೇರ್ಪಡೆ. ಇದು ಆಟೋನಾಮಸ್ ಎಮರ್ಜನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಅಸಿಸ್ಟ್ ಅನ್ನು ಹೊಂದಿದೆ.

ಇದನ್ನೂ ಓದಿ: ಮಾರುತಿ ಗ್ರ್ಯಾಂಡ್ ವಿಟಾರಾದ ಪ್ರತಿಸ್ಪರ್ಧಿ ಹೋಂಡಾದ ಹೊಚ್ಚ ಹೊಸ SUV ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಕಂಡುಬಂದಿದೆ

ನವೀಕೃತ ಸಿಟಿಯ ನಿರೀಕ್ಷಿತ ಬೆಲೆಯನ್ನು ಅದರ ಪ್ರತಿಸ್ಪರ್ಧಿಗಳೊಂದಿಗೆ ಹೋಲಿಸೋಣ:

2023 ಹೋಂಡಾ ಸಿಟಿ (ನಿರೀಕ್ಷಿತ)

ಸ್ಕೋಡಾ ಸ್ಲಾವಿಯಾ

2023 ಹ್ಯುಂಡೈ ವರ್ನಾ (ನಿರೀಕ್ಷಿತ)

ಫೋಕ್ಸ್‌ವಾಗನ್ ವರ್ಟಸ್

ಮಾರುತಿ ಸಿಯಾಝ್

ರೂ 11 ಲಕ್ಷದಿಂದ ರೂ 16.95 ಲಕ್ಷದ ತನಕ

ರೂ 11.29 ಲಕ್ಷದಿಂದ ರೂ ರೂ 18.40 ಲಕ್ಷದ ತನಕ

ರೂ 10 ಲಕ್ಷದಿಂದ ರೂ ರೂ 18 ಲಕ್ಷದ ತನಕ

ರೂ 11.32 ಲಕ್ಷದಿಂದ ರೂ ರೂ 18.42 ಲಕ್ಷದ ತನಕ

ರೂ 9.20 ಲಕ್ಷದಿಂದ ರೂ ರೂ 12.19 ಲಕ್ಷದ ತನಕ

ಈ ಹೋಂಡಾ ಸಿಟಿ ಫೋಕ್ಸ್‌ವಾಗನ್ ವರ್ಟಸ್, ಸ್ಕೋಡಾ ಸ್ಲೇವಿಯಾ, ಮಾರುತಿ ಸಿಯಾಝ್ ಮತ್ತು ಹ್ಯುಂಡೈ ವರ್ನಾಗೆ (ತನ್ನ ಹೊಸ ಪೀಳಿಗೆ ಆವೃತ್ತಿಯಲ್ಲಿ) ಪ್ರತಿಸ್ಪರ್ಧಿಯಾಗಿದೆ. ಹಾಗೆಯೇ, ಸಿಟಿ ಹೈಬ್ರಿಡ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ.

ಎಲ್ಲವೂ ಎಕ್ಸ್-ಶೋರೂಂ ಬೆಲೆಗಳು

ಇನ್ನಷ್ಟು ಓದಿ : ಸಿಟಿ ಡೀಸೆಲ್

Share via

Write your Comment on Honda ನಗರ

explore similar ಕಾರುಗಳು

ಹೋಂಡಾ ನಗರ ಹೈಬ್ರಿಡ್

4.168 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್27.13 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌

ಹೋಂಡಾ ಸಿಟಿ

4.3189 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್17.8 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.1.70 - 2.69 ಸಿಆರ್*
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.12.28 - 16.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ