Mahindra XUV 3XO ಇವಿ ಮತ್ತೊಮ್ಮೆ ಪ್ರತ್ಯಕ್ಷ, ರೆಗುಲರ್ ಕಾರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳ ಸೇರ್ಪಡೆ
ಮಹೀಂದ್ರ XUV400 EV ಗಾಗಿ dipan ಮೂಲಕ ಅಕ್ಟೋಬರ್ 23, 2024 07:53 pm ರಂದು ಪ್ರಕಟಿಸಲಾಗಿದೆ
- 44 Views
- ಕಾಮೆಂಟ್ ಅನ್ನು ಬರೆಯಿರಿ
XUV 3XO ಇವಿ ICE ಮಾಡೆಲ್‌ನಂತೆಯೇ ಡಿಸೈನ್ ಮತ್ತು ಫೀಚರ್‌ಗಳನ್ನು ಪಡೆಯಲಿದೆ. ಇದು XUV300 (ಪ್ರೀ-ಫೇಸ್‌ಲಿಫ್ಟ್ XUV 3XO) ಅನ್ನು ಆಧರಿಸಿರುವ XUV400 ಇವಿಯಲ್ಲಿರುವ ಬ್ಯಾಟರಿಯನ್ನು ಬಳಸುವ ಸಾಧ್ಯತೆಯಿದೆ
ಮಹೀಂದ್ರಾ XUV 3XO ಅನ್ನು 2024 ರ ಆರಂಭದಲ್ಲಿ ಮಹೀಂದ್ರಾ XUV 300 ನ ಫೇಸ್‌ಲಿಫ್ಟ್ ಆಗಿರುವ ವರ್ಷನ್ ಆಗಿ ಬಿಡುಗಡೆ ಮಾಡಲಾಯಿತು. 3XO ನ ಕೆಲವು ಸ್ಪೈ ಫೋಟೋಗಳು ಅದನ್ನು ಕಾಪರ್ ಬ್ಯಾಡ್ಜ್‌ಗಳೊಂದಿಗೆ ಮತ್ತು ಮುಂಭಾಗದ ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್ ಅನ್ನು ತೋರಿಸಿವೆ (ಇದು ಮಹೀಂದ್ರಾ ಇವಿಗಳಿಗೆ ಸಾಮಾನ್ಯವಾಗಿದೆ). ಹಾಗಾಗಿ ಇದು XUV 3XO ಇವಿ ಎಂದು ನಾವು ಅಂದುಕೊಂಡಿದ್ದೇವೆ. ಬನ್ನಿ, ಈ ಸ್ಪೈ ಮಾಡಿರುವ ಇವಿಯಲ್ಲಿ ಏನೇನು ನೋಡಲಾಗಿದೆ ಎಂಬುದನ್ನು ನಾವು ನೋಡೋಣ:
ಏನೇನು ನೋಡಲಾಗಿದೆ?
ನೋಡಲಾಗಿರುವ ಮಾಡೆಲ್ ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಭಾಗಶಃ ಕೆಮಫ್ಲೇಜ್ ಮಾಡಲಾಗಿದೆ, ಆದರೆ ಇವಿ ವರ್ಷನ್ ಸಾಮಾನ್ಯ ICE ವರ್ಷನ್‌ನಂತೆಯೇ ಕಾಣುತ್ತದೆ ಎಂಬುದು ಸ್ಪಷ್ಟವಾಗಿದೆ. ಆದರೆ, ಇವಿ ವರ್ಷನ್ ಬ್ಲ್ಯಾಂಕ್ಡ್-ಆಫ್ ಗ್ರಿಲ್ ಮತ್ತು ಕಾಪರ್-ಕಲರ್ ಬ್ಯಾಡ್ಜಿಂಗ್‌ನಂತಹ ಕೆಲವು ಇವಿ-ನಿರ್ದಿಷ್ಟ ಡಿಸೈನ್ ಅಂಶಗಳೊಂದಿಗೆ ಬರುತ್ತದೆ. ಕಾಪರ್ ಕಲರ್‌ನ ರೂಫ್ ಅನ್ನು ಕೂಡ ನೋಡಲಾಗಿದೆ.
ಈ ಸ್ಪೈ ಶಾಟ್‌ಗಳಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿರುವ ಮುಂಭಾಗದ ಫೆಂಡರ್ ಮತ್ತು ICE ವರ್ಷನ್‌ನಲ್ಲಿ ಇರುವಂತೆಯೇ ಕಾಣುವ ಅಲೊಯ್ ವೀಲ್ ಡಿಸೈನ್. ಹಿಂಭಾಗದಲ್ಲಿ, ಕನೆಕ್ಟೆಡ್ LED ಲೈಟ್ ಸೆಟಪ್ ಅನ್ನು ಕೂಡ ನೋಡಬಹುದು. ಉಳಿದ ಡಿಸೈನ್ ಅಂಶಗಳು ಅದರ ICE ವರ್ಷನ್‌ನಂತೆಯೇ ಇದೆ.
ಸ್ಪೈ ಶಾಟ್‌ಗಳು ನಮಗೆ ಕಾರಿನ ಒಳನೋಟವನ್ನು ಕೂಡ ನೀಡುತ್ತವೆ, ಮತ್ತು ಇದು XUV 3XO ನಂತೆಯೇ ಇದೆ. ಇದು ಡ್ಯುಯಲ್-ಟೋನ್ ವೈಟ್ ಮತ್ತು ಬ್ಲಾಕ್ ಕ್ಯಾಬಿನ್ ಥೀಮ್, ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಮತ್ತು ವೈಟ್ ಸೀಟ್ ಅಪ್ಹೋಲ್ಸ್ಟರಿಯನ್ನು ಹೊಂದಿದೆ.
ಇದನ್ನು ಕೂಡ ಓದಿ: ಈ ದೀಪಾವಳಿ ಹಬ್ಬಕ್ಕೆ ಮಹೀಂದ್ರಾ SUV ಅನ್ನು ಖರೀದಿಸಲು ನೋಡುತ್ತಿದ್ದೀರಾ? ಹಾಗಾದರೆ ನೀವು 6 ತಿಂಗಳವರೆಗೆ ಕಾಯಬೇಕಾಗಬಹುದು!
ನಿರೀಕ್ಷಿಸಲಾಗಿರುವ ಫೀಚರ್‌ಗಳು
ಒಳಭಾಗವು ICE ವರ್ಷನ್‌ನಂತೆಯೇ ಇರುವುದರಿಂದ, ಇವಿಯು 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಮತ್ತು ಡ್ಯುಯಲ್-ಝೋನ್ ಆಟೋ AC ಅನ್ನು ಪಡೆಯಬಹುದು. ಇದರಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಕೂಡ ನೀಡಬಹುದು.
ICE ವರ್ಷನ್‌ನಲ್ಲಿರುವ ಸುರಕ್ಷತಾ ಫೀಚರ್‌ಗಳನ್ನು ಕೂಡ ಮಹೀಂದ್ರಾ XUV 3XO ಇವಿಗೆ ನೀಡುವ ಸಾಧ್ಯತೆಯಿದೆ. ಪ್ರಮುಖ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿವೆ. ಇದು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಕೂಡ ಪಡೆಯಬಹುದು.
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್ ಆಯ್ಕೆ
XUV300 (ಪ್ರೀ-ಫೇಸ್‌ಲಿಫ್ಟ್ 3XO) ಅನ್ನು ಆಧರಿಸಿರುವ ಮಹೀಂದ್ರಾ XUV400 ಇವಿ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ: 34.5 kWh ಮತ್ತು 39.5 kWh, ಎರಡೂ 150 PS ಮತ್ತು 310 Nm ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಇದು 456 ಕಿಮೀ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ. ಮಹೀಂದ್ರಾ XUV 3XO ಇವಿ ಒಂದೇ ರೀತಿಯ ಕ್ಲೈಮ್ ರೇಂಜ್‌ನೊಂದಿಗೆ ಅದೇ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ XUV3XO ಬೆಲೆಯು ರೂ. 7.79 ಲಕ್ಷದಿಂದ ರೂ. 15.49 ಲಕ್ಷದವರೆಗೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಇದೆ ಮತ್ತು ಮಹೀಂದ್ರಾ XUV 3XO ಇವಿ ಇದಕ್ಕಿಂತ ಸ್ವಲ್ಪ ಹೆಚ್ಚು ಪ್ರೀಮಿಯಂ ಬೆಲೆಯನ್ನು ಪಡೆಯಬಹುದು ಎಂದು ನಾವು ನಂಬುತ್ತೇವೆ. ಇದು ಟಾಟಾ ನೆಕ್ಸಾನ್ ಇವಿಗೆ ಪ್ರತಿಸ್ಪರ್ಧಿಯಾಗಿದೆ, ಟಾಟಾ ಕರ್ವ್ ಇವಿ ಮತ್ತು MG ZS ಇವಿಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಲಿದೆ.
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: XUV400 ಇವಿ ಆಟೋಮ್ಯಾಟಿಕ್