2024ರ Kia Carnival ಮತ್ತು Kia EV9 ಬಿಡುಗಡೆಗೆ ದಿನಾಂಕ ಫಿಕ್ಸ್
ಕಿಯಾ ಕಾರ್ನಿವಲ್ ಗಾಗಿ dipan ಮೂಲಕ ಆಗಸ್ಟ್ 13, 2024 02:30 pm ರಂದು ಪ್ರಕಟಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾದ ಈ ಎರಡೂ ಹೊಸ ಕಾರುಗಳು ಅಕ್ಟೋಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ
ಕಿಯಾ ಇಂಡಿಯಾವು 2024 ರಲ್ಲಿ ತನ್ನ ಕಾರುಗಳ ಪಟ್ಟಿಗೆ ಹೊಸ ಮೂರು ಕಾರುಗಳನ್ನು ಪರಿಚಯಿಸುವುದಾಗಿ 2023 ರ ಅಂತ್ಯದ ವೇಳೆಯಲ್ಲಿಯೇ ಭರವಸೆ ನೀಡಿತ್ತು. ಇದರಂತೆ, ಫೇಸ್‌ಲಿಫ್ಟೆಡ್ ಕಿಯಾ ಸೊನೆಟ್ ಅನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಕೊರಿಯನ್ ಕಾರು ತಯಾರಕರು ಈಗ ಹೊಸ ತಲೆಮಾರಿನ ಕಿಯಾ ಕಾರ್ನಿವಲ್ ಮತ್ತು ಕಿಯಾ ಇವಿ9 ಅನ್ನು ಅಕ್ಟೋಬರ್ 3 ರಂದು ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಹಿರಂಗಪಡಿಸಿದ್ದಾರೆ. ಜಾಗತಿಕವಾಗಿ ಈ ಎರಡೂ ಮೊಡೆಲ್‌ನಲ್ಲಿ ಲಭ್ಯವಿರುವ ವಿಶೇಷತೆಗಳನ್ನು ವಿವರವಾಗಿ ಗಮನಿಸೋಣ.
2024 ಕಿಯಾ ಕಾರ್ನಿವಲ್
ಕಿಯಾ ಕಾರ್ನಿವಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರು ಅಲ್ಲ. ಕಿಯಾದ ಈ ಪ್ರೀಮಿಯಂ ಎಮ್‌ಪಿವಿಯನ್ನು ಭಾರತದಲ್ಲಿ ಮೊದಲು 2020 ರಲ್ಲಿ ಪರಿಚಯಿಸಲಾಯಿತು, ಆದರೆ 2023 ರಲ್ಲಿ ಸ್ಥಗಿತಗೊಳಿಸಲಾಯಿತು. ಆದರೆ, ಈ ಎಮ್‌ಪಿವಿಯು ಈಗ ಅದರ ಫೇಸ್‌ಲಿಫ್ಟ್ ನಾಲ್ಕನೇ ತಲೆಮಾರಿನ ಅವತಾರದಲ್ಲಿ ನಮ್ಮ ಮಾರುಕಟ್ಟೆಗೆ ಪುನರಾಗಮನವನ್ನು ಮಾಡಲಿದೆ.
ಇದು 12.3-ಇಂಚಿನ ಡ್ಯುಯಲ್-ಸ್ಕ್ರೀನ್ ಸೆಟಪ್, ಪ್ಯಾನರೋಮಿಕ್ ಸನ್‌ರೂಫ್, ವೆಂಟಿಲೇಟೆಡ್ ಮತ್ತು ಚಾಲಿತ ಸೀಟ್‌ಗಳು ಮತ್ತು 3-ಜೋನ್ ಎಸಿಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಇದು ಜಾಗತಿಕ ಮೊಡೆಲ್‌ನ 3.5-ಲೀಟರ್ ವಿ6 ಪೆಟ್ರೋಲ್ (287 ಪಿಎಸ್/353 ಎನ್‌ಎಮ್) ಅಥವಾ 1.6-ಲೀಟರ್ ಪೆಟ್ರೋಲ್-ಹೈಬ್ರಿಡ್ (242 ಪಿಎಸ್/367 ಎನ್‌ಎಮ್) ಅನ್ನು ಪಡೆಯಬಹುದು. ಈಗ ಸ್ಥಗಿತಗೊಂಡಿರುವ ಇಂಡಿಯಾ-ಸ್ಪೆಕ್ ಕಾರ್ನಿವಲ್ 2.2-ಲೀಟರ್ ಡೀಸೆಲ್ ಎಂಜಿನ್ (200 ಪಿಎಸ್/440 ಎನ್‌ಎಮ್) ಜೊತೆಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿತ್ತು.
ಕಿಯಾ ಇವಿ9
ಕಿಯಾ ಇವಿ9 ಭಾರತದಲ್ಲಿ ಇವಿ6 ನಂತರ ಕಿಯಾದಿಂದ ಎರಡನೇ ಮತ್ತು ಹೆಚ್ಚು ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಆಗಿದೆ. ಕಳೆದ ವರ್ಷ ಜಾಗತಿಕವಾಗಿ ಅನಾವರಣಗೊಂಡ ಇವಿ9 76.1 ಕಿ.ವ್ಯಾಟ್ ಮತ್ತು 99.8 ಕಿವ್ಯಾಟ್ ಬ್ಯಾಟರಿ ಪ್ಯಾಕ್ ನಡುವೆ ಆಯ್ಕೆಯನ್ನು ಪಡೆಯುತ್ತದೆ, ಇದು ಗರಿಷ್ಠ WLTP-ರೇಟೆಡ್ ರೇಂಜ್ ಅನ್ನು 541 ಕಿಮೀಗಿಂತ ಹೆಚ್ಚು ಹೊಂದಿದೆ.
ಫೀಚರ್‌ಗಳನ್ನು ಗಮನಿಸುವಾಗ, ಕಿಯಾ ಕಾರ್ನಿವಲ್‌ನಂತೆ ಈ ಇವಿಯು 12.3-ಇಂಚಿನ ಡ್ಯುಯಲ್-ಸ್ಕ್ರೀನ್ ಸೆಟಪ್(ಒಂದು ಡ್ರೈವರ್‌ನ ಡಿಸ್‌ಪ್ಲೇಗಾಗಿ ಮತ್ತು ಇನ್ನೊಂದು ಟಚ್‌ಸ್ಕ್ರೀನ್‌ಗಾಗಿ), 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್ ಮತ್ತು ಒರಗಿಕೊಳ್ಳುವ ಅಥವಾ ಸ್ವಿವೆಲಿಂಗ್ ನಡುವಿನ ಆಯ್ಕೆಯನ್ನು ಪಡೆಯುವ ಎರಡನೇ ಸಾಲಿನ ಸೀಟ್‌ಗಳನ್ನು ಪಡೆಯುತ್ತದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
2024ರ ಕಿಯಾ ಕಾರ್ನಿವಲ್‌ನ ಬೆಲೆಗಳು 40 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. ಇದು ಟೊಯೋಟಾ ಇನ್ನೋವಾ ಹೈಕ್ರಾಸ್‌ಗೆ ಹೆಚ್ಚು ಬೆಲೆಬಾಳುವ ಮತ್ತು ಪ್ರೀಮಿಯಂ ಪರ್ಯಾಯವಾಗಿದ್ದು, ಹಾಗೆಯೇ ಟೊಯೊಟಾ ವೆಲ್‌ಫೈರ್ ಮತ್ತು ಲೆಕ್ಸಸ್ ಎಲ್‌ಎಮ್‌ನಂತಹ ಐಷಾರಾಮಿ ಎಮ್‌ಪಿವಿಗಳಿಗಿಂತ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ.
ಕಿಯಾ ಇವಿ9ನ ಬೆಲೆಯು ಸುಮಾರು 80 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಬಿಎಮ್‌ಡಬ್ಲ್ಯೂ ಐಎಕ್ಸ್ ಮತ್ತು ಮರ್ಸಿಡೀಸ್-ಬೆಂಝ್ ಇಕ್ಯೂಇ ಎಸ್‌ಯುವಿಯಂತಹ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.
ಕಿಯಾವು 2024ರ ಕಿಯಾ ಕಾರ್ನಿವಲ್ ಮತ್ತು ಕಿಯಾ ಇವಿ9 ಗೆ ಯಾವ ಬೆಲೆಯನ್ನು ನಿಗದಿಪಡಿಸಿದರೆ ಉತ್ತಮ ? ಕೆಳಗೆ ಕಾಮೆಂಟ್‌ನಲ್ಲಿ ನಮಗೆ ತಿಳಿಸಿ.
ಕಾರು ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನಲ್ ಅನ್ನು ಫಾಲೋ ಮಾಡಿ