• English
  • Login / Register

2024ರ Kia Carnival ವರ್ಸಸ್‌ ಹಳೆಯ ಕಾರ್ನೀವಲ್: ಪ್ರಮುಖ ಬದಲಾವಣೆಗಳ ವಿವರಗಳು

ಕಿಯಾ ಕಾರ್ನಿವಲ್ ಗಾಗಿ ansh ಮೂಲಕ ಅಕ್ಟೋಬರ್ 04, 2024 07:50 pm ರಂದು ಪ್ರಕಟಿಸಲಾಗಿದೆ

  • 139 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಳೆಯ ಆವೃತ್ತಿಗೆ ಹೋಲಿಸಿದರೆ, ಹೊಸ ಕಾರ್ನಿವಲ್ ಹೆಚ್ಚು ಆಧುನಿಕ ವಿನ್ಯಾಸ, ಪ್ರೀಮಿಯಂ ಇಂಟಿರಿಯರ್‌ ಮತ್ತು ಹೆಚ್ಚಿನ ಫೀಚರ್‌ಗಳನ್ನು ಹೊಂದಿದೆ

2024 Kia Carnival vs Old Carnival

ಭಾರತದಾದ್ಯಂತ 2024 ರ ಕಿಯಾ ಕಾರ್ನಿವಲ್ ಅನ್ನು  63.90 ಲಕ್ಷ ರೂ. ಬೆಲೆಯಲ್ಲಿ (ಪರಿಚಯಾತ್ಮಕ, ಎಕ್ಸ್-ಶೋರೂಮ್) ಬಿಡುಗಡೆ ಮಾಡಲಾಗಿದೆ, ಮತ್ತು ಇದು ಸ್ಥಗಿತಗೊಂಡ ಒಂದು ವರ್ಷದ ನಂತರ ಭಾರತೀಯ ಮಾರುಕಟ್ಟೆಗೆ ಮರಳಿದೆ. ಇದೀಗ ಅದರ ಫೇಸ್‌ಲಿಫ್ಟ್ ನಾಲ್ಕನೇ ತಲೆಮಾರಿನ ಅವತಾರದಲ್ಲಿದೆ. 2023ರ ಜುಲೈವರೆಗೆ ಭಾರತದಲ್ಲಿ ಮಾರಾಟದಲ್ಲಿದ್ದ ಹಿಂದಿನ ಎರಡನೇ ತಲೆಮಾರಿನ ಮೊಡೆಲ್‌ಗೆ ಹೋಲಿಸಿದರೆ, ಹೊಸ-ಜನ್ ಕಾರ್ನಿವಲ್ ಹೆಚ್ಚು ಆಧುನಿಕ ವಿನ್ಯಾಸ, ಹೆಚ್ಚು ಪ್ರೀಮಿಯಂ-ಕಾಣುವ ಕ್ಯಾಬಿನ್ ಮತ್ತು ಸಾಕಷ್ಟು ಹೊಸ ಫೀಚರ್‌ಗಳನ್ನು ಹೊಂದಿದೆ. ಹಳೆಯದಕ್ಕೆ ಹೋಲಿಸಿದರೆ ಹೊಸ ಕಾರ್ನೀವಲ್ ಎಷ್ಟು ವಿಭಿನ್ನವಾಗಿದೆ ಎಂದು ತಿಳಿಯೋಣ: 

ಡಿಸೈನ್‌

2020 Kia Carnival Front
2024 Kia Carnival Front

ಕಾರ್ನಿವಲ್‌ನ ವಿನ್ಯಾಸವು ಸಾಕಷ್ಟು ವಿಕಸನಗೊಂಡಿದೆ ಮತ್ತು ಮುಂಭಾಗದಲ್ಲಿನ ಪ್ರಮುಖ ಬದಲಾವಣೆಯೆಂದರೆ ಅದು ಕಳೆದ ಎರಡು ತಲೆಮಾರುಗಳಿಂದ ಕರ್ವ್‌ನಿಂದ ಬಾಕ್ಸ್‌ ಆಕಾರಕ್ಕೆ ಹೋಗಿದೆ. ನಾಲ್ಕನೇ ತಲೆಮಾರಿನ ಕಾರ್ನಿವಲ್ ಸ್ಕ್ವೇರ್-ಆಫ್ ಫೇಸಿಯಾವನ್ನು ಹಾಗು ಬೃಹತ್ ಗ್ರಿಲ್ ಅನ್ನು ಹೊಂದಿದೆ, ಲಂಬವಾಗಿ ಇರಿಸಲಾದ 4-ಪೀಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸ್ಲಿಮ್ ಬಂಪರ್ ಮತ್ತು ಎಲ್-ಆಕಾರದ ಅಂಶಗಳೊಂದಿಗೆ ಎಲ್‌ಇಡಿ ಡಿಆರ್‌ಎಲ್‌ಗಳು ಗ್ರಿಲ್‌ನ ಮಧ್ಯಭಾಗದವರೆಗೆ ಚಲಿಸುತ್ತವೆ.

2020 Kia Carnival Side
2024 Kia Carnival Side

ಬದಿಗಳಿಂದ ಗಮನಿಸುವಾಗ, ಒಟ್ಟಾರೆ ಬಾಡಿಯ ಆಕೃತಿಯು ಸಾಕಷ್ಟು ಹೋಲುತ್ತದೆ, ಆದರೆ A-ಪಿಲ್ಲರ್ ಈಗ ಹೆಚ್ಚು ರಾಕ್ ಆಗಿದೆ ಮತ್ತು 3 ನೇ ಸಾಲಿನ ವಿಂಡೋ ಕೂಡ ದೊಡ್ಡದಾಗಿದೆ. ಚಕ್ರದ ಗಾತ್ರವು ಇದರಲ್ಲಿಯೂ 18-ಇಂಚಿನದ್ದಾಗಿದ್ದರೂ, ಹೊಸ ಮೊಡೆಲ್‌ ಇತ್ತೀಚಿನ ವಿನ್ಯಾಸದೊಂದಿಗೆ ಹೊಂದಾಣಿಕೆಯಾಗಲು ಹೆಚ್ಚು ಸೊಗಸಾದ ಅಲಾಯ್‌ಗಳನ್ನು ಪಡೆಯುತ್ತದೆ.

2020 Kia Carnival Rear
2024 Kia Carnival Rear

ಬದಲಾವಣೆಗಳು ಹೆಚ್ಚಾಗಿ ಹಿಂಭಾಗದಲ್ಲಿ ಎದ್ದುಕಾಣುತ್ತದೆ. ನಾಲ್ಕನೇ ಜನರೇಶನ್‌ ದೊಡ್ಡ ಬಂಪರ್‌ನೊಂದಿಗೆ ಹೆಚ್ಚು ಉಬ್ಬಿದ ವಿನ್ಯಾಸವನ್ನು ಹೊಂದಿದೆ ಮತ್ತು ಎಲ್-ಆಕಾರದ ಲೈಟಿಂಗ್‌ ಅಂಶಗಳೊಂದಿಗೆ ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲ್ಯಾಂಪ್ ಸೆಟಪ್ ಅನ್ನು ಸಹ ಪಡೆಯುತ್ತದೆ.

ಇಂಟಿರಿಯರ್‌

ಕಳೆದ ಎರಡು ತಲೆಮಾರುಗಳಲ್ಲಿ, ಕಾರ್ನಿವಲ್‌ನ ಕ್ಯಾಬಿನ್‌ಗೆ ಅನೇಕ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಎರಡೂ ಡ್ಯುಯಲ್-ಟೋನ್ ಕ್ಯಾಬಿನ್ ಅನ್ನು ಹೊಂದಿದ್ದರೂ, ಹೊಸದು ಕಪ್ಪು ಮತ್ತು ಕಂದು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ, ಅಲ್ಲಿ ಡ್ಯಾಶ್‌ಬೋರ್ಡ್ ಸಂಪೂರ್ಣ ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ ಮತ್ತು ಸೀಟುಗಳನ್ನು ಕಂದು ಬಣ್ಣದ ಲೆಥೆರೆಟ್ ಕವರ್‌ನಲ್ಲಿ ಮುಚ್ಚಲಾಗುತ್ತದೆ.

2020 Kia Carnival Dashboard
2024 Kia Carnival Dashboard

ಕ್ಯಾಬಿನ್ ವಿನ್ಯಾಸದಲ್ಲಿಯೂ ಕಡಿಮೆ ಬದಲಾವಣೆಯನ್ನು ಪಡೆದಿದ್ದು, ಫ್ಲಾಟ್ ಡ್ಯಾಶ್‌ಬೋರ್ಡ್ ಮತ್ತು ಅದರ ಅಗಲದಲ್ಲಿ ಸುತ್ತುವರಿದ ಲೈಟಿಂಗ್‌ ಸ್ಟ್ರೀಪ್‌ ಅನ್ನು ಹೊಂದಿದೆ. ಎರಡನೇ ತಲೆಮಾರಿನ ಮೊಡೆಲ್‌ಗೆ ಹೋಲಿಸಿದರೆ ಇದು ಹೊಸದಾಗಿ ವಿನ್ಯಾಸಗೊಳಿಸಿದ ಸ್ಟೀರಿಂಗ್ ವೀಲ್‌ ಅನ್ನು ಸಹ ಪಡೆಯುತ್ತದೆ ಮತ್ತು ಕ್ಯಾಬಿನ್ ಡ್ರೈವರ್-ಕೇಂದ್ರಿತವಾಗಿದೆ, ಸ್ಕ್ರೀನ್‌ಗಳು ಮತ್ತು AC ಕಂಟ್ರೋಲ್‌ಗಳೆರಡು ಸ್ವಲ್ಪಮಟ್ಟಿಗೆ ಚಾಲಕನ ಕಡೆಗೆ ಆಧಾರಿತವಾಗಿದೆ.

ಇದನ್ನೂ ಓದಿ:  ಭಾರತದಲ್ಲಿ 2024ರ Kia Carnival ಬಿಡುಗಡೆ, ಬೆಲೆ 63.90 ಲಕ್ಷ ರೂ.ನಿಂದ ಪ್ರಾರಂಭ

ಕ್ಯಾಬಿನ್‌ನಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದೆ ಅದು ಬಹಳ ಮುಖ್ಯವಾಗಿದೆ. ಎರಡನೇ ತಲೆಮಾರಿನ ಕಾರ್ನಿವಲ್ ಬಹು ಆಸನ ವಿನ್ಯಾಸಗಳಲ್ಲಿ ಲಭ್ಯವಿದ್ದರೂ, ಪ್ರಸ್ತುತವು 7-ಸೀಟರ್‌ನ ಸಂರಚನೆಯಲ್ಲಿ ಮಾತ್ರ ನೀಡಲಾಗುತ್ತದೆ, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳು ಮತ್ತು ಮೂರನೇ ಸ್ಥಾನದಲ್ಲಿ ಬೆಂಚ್ ಸೀಟ್ ಒಳಗೊಂಡಿದೆ.

ಫೀಚರ್‌ಗಳು

2024 Kia Carnival Dual 12.3-inch Screens

ಭಾರತದಲ್ಲಿ ಮಾರಾಟವಾಗಿದ್ದ ಕೊನೆಯ ಆವೃತ್ತಿಗೆ ಹೋಲಿಸಿದರೆ ನಾಲ್ಕನೇ ತಲೆಮಾರಿನ ಕಾರ್ನಿವಲ್ ಹೆಚ್ಚಿನ ಫೀಚರ್‌ಗಳ ಪಟ್ಟಿಯನ್ನು ಹೊಂದಿದೆ. ಇದು ಡ್ಯುಯಲ್ ಇಂಟಿಗ್ರೇಟೆಡ್ 12.3-ಇಂಚಿನ ಸ್ಕ್ರೀನ್‌ಗಳು (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), 11-ಇಂಚಿನ ಹೆಡ್ಸ್-ಅಪ್ ಡಿಸ್ಪ್ಲೇ, ಲಂಬರ್‌ ಬೆಂಬಲದೊಂದಿಗೆ 12-ರೀತಿಯಲ್ಲಿ ಚಾಲಿತ ಡ್ರೈವರ್ ಸೀಟ್ ಮತ್ತು 8-ರೀತಿಯಲ್ಲಿ ಚಾಲಿತ ಮುಂಭಾಗದ ಪ್ರಯಾಣಿಕರ ಸೀಟನ್ನು ಪಡೆಯುತ್ತದೆ.

2024 Kia Carnival Wireless Phone Charger

ಇದು  ಹೀಟಿಂಗ್‌ ಮತ್ತು ವೆಂಟಿಲೇಶನ್‌ ಫಂಕ್ಷನ್‌ನೊಂದಿಗೆ ಚಾಲಿತ ಎರಡನೇ ಸಾಲಿನ ಸೀಟ್‌ಗಳು, ಡ್ಯುಯಲ್ ಸಿಂಗಲ್-ಪೇನ್ ಸನ್‌ರೂಫ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, 12-ಸ್ಪೀಕರ್ BOSE ಸೌಂಡ್ ಸಿಸ್ಟಮ್ ಮತ್ತು 3-ಝೋನ್‌ ಕ್ಲೈಮೆಟ್‌ ಕಂಟ್ರೋಲ್‌ ಅನ್ನು ಸಹ ಪಡೆಯುತ್ತದೆ.

2024 Kia Carnival Level 2 ADAS

ಸುರಕ್ಷತೆಯ ವಿಷಯದಲ್ಲಿ, ಇದು 8 ಏರ್‌ಬ್ಯಾಗ್‌ಗಳು, ಎಲ್ಲಾ-ನಾಲ್ಕು ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೊನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ನೀಡುತ್ತದೆ.

2020 Kia Carnival Touchscreen

ಎರಡನೇ ತಲೆಮಾರಿನ ಕಾರ್ನಿವಲ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 3-ಝೋನ್ ಕ್ಲೈಮೇಟ್ ಕಂಟ್ರೋಲ್, ಎರಡು ಸಿಂಗಲ್ ಪೇನ್ ಸನ್‌ರೂಫ್‌ಗಳು, ವೆಂಟಿಲೇಟೆಡ್ ಡ್ರೈವರ್ ಸೀಟ್, 10-ವೇ ಚಾಲಿತ ಡ್ರೈವರ್ ಸೀಟ್, 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು  ಹಿಂದಿನ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತದೆ.

ಪವರ್‌ಟ್ರೈನ್‌

2020 Kia Carnival Engine
2024 Kia Carnival Engine

 

ಸೆಕೆಂಡ್‌ ಜನರೇಶನ್‌ನ ಕಾರ್ನಿವಲ್‌

ನಾಲ್ಕನೇ-ಜನರೇಶನ್‌ನ ಕಾರ್ನಿವಲ್‌

ಎಂಜಿನ್‌

2.2-ಲೀಟರ್‌ ಡೀಸೆಲ್‌

2.2-ಲೀಟರ್‌ ಡೀಸೆಲ್‌

ಪವರ್‌

200 ಪಿಎಸ್‌

193 ಪಿಎಸ್‌

ಟಾರ್ಕ್‌

440 ಎನ್‌ಎಮ್‌

441 ಎನ್‌ಎಮ್‌

ಗೇರ್‌ಬಾಕ್ಸ್‌

8-ಸ್ಪೀಡ್ ಆಟೋಮ್ಯಾಟಿಕ್‌ 

8-ಸ್ಪೀಡ್ ಆಟೋಮ್ಯಾಟಿಕ್‌ 

ಕಿಯಾ ಹಳೆಯ ಆವೃತ್ತಿಯಂತೆಯೇ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನಾಲ್ಕನೇ-ಜನ್ ಕಾರ್ನಿವಲ್ ಅನ್ನು ನೀಡುತ್ತದೆ, ಆದರೆ ಹೊಸ ಕಾರ್ನಿವಲ್‌ನ ಎಂಜಿನ್ ಸ್ವಲ್ಪ ಕಡಿಮೆ ಪವರ್‌ ಉತ್ಪಾದನೆಯನ್ನು ಹೊಂದಿದೆ. ಮತ್ತೊಂದೆಡೆ ಟಾರ್ಕ್ ಮತ್ತು ಟ್ರಾನ್ಸ್ಮಿಷನ್ ಒಂದೇ ಆಗಿರುತ್ತದೆ.

ಬೆಲೆ & ಪ್ರತಿಸ್ಪರ್ಧಿಗಳು

2024 Kia Carnival

ಕಿಯಾವು ಹೊಸ ಕಾರ್ನಿವಲ್‌ನ ಬೆಲೆಯನ್ನು 63.90 ಲಕ್ಷ ರೂಪಾಯಿಗೆ ನಿಗದಿಪಡಿಸಿದೆ ಮತ್ತು ಎರಡನೇ ಜನರೇಶನ್‌ನ ಈ ಮೊಡೆಲ್‌ನ ಕೊನೆಯ ದಾಖಲಾದ ಬೆಲೆ 30.99 ಲಕ್ಷ ರೂಪಾಯಿ ಆಗಿತ್ತು. ಈ ಬೆಲೆಯಲ್ಲಿ, ಇದು ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊಗೆ ಪ್ರೀಮಿಯಂ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ, ಹಾಗೆಯೇ ಟೊಯೋಟಾ ವೆಲ್ಫೈರ್ ಮತ್ತು ಲೆಕ್ಸಸ್ LM ಗೆ ಕೈಗೆಟುಕುವ ಆಯ್ಕೆಯಾಗಿದೆ.

ಎಲ್ಲಾ ಬೆಲೆಗಳು, ಭಾರತದಾದ್ಯಂತದ ಎಕ್ಸ್ ಶೋರೂಂ  ಆಗಿದೆ

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಕಿಯಾ ಕಾರ್ನಿವಲ್ ಡೀಸೆಲ್ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಕಾರ್ನಿವಲ್

1 ಕಾಮೆಂಟ್
1
R
rahul sharma
Oct 4, 2024, 3:46:48 PM

Innova is clear winner

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಮ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience