Login or Register ಅತ್ಯುತ್ತಮ CarDekho experience ಗೆ
Login

2025 Audi RS Q8 ಪರ್ಫಾರ್ಮೆನ್ಸ್ ಎಡಿಷನ್‌ ಭಾರತದಲ್ಲಿ ಬಿಡುಗಡೆ, ಬೆಲೆ 2.49 ಕೋಟಿ ರೂ.ನಿಗದಿ

ಆಡಿ ಆರ್ಎಸ್ ಕ್ಯೂ8 ಗಾಗಿ dipan ಮೂಲಕ ಫೆಬ್ರವಾರಿ 17, 2025 09:54 pm ರಂದು ಪ್ರಕಟಿಸಲಾಗಿದೆ

ಆಡಿ ಆರ್‌ಎಸ್‌ Q8 ಪರ್ಫಾರ್ಮೆನ್ಸ್ 4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್‌ನೊಂದಿಗೆ ಬರುತ್ತದೆ, ಇದು 640 ಪಿಎಸ್‌ ಮತ್ತು 850 ಎನ್‌ಎಮ್‌ನಷ್ಟು ಔಟ್‌ಪುಟ್‌ಅನ್ನು ಉತ್ಪಾದಿಸುತ್ತದೆ

  • ಕಪ್ಪು ಬಣ್ಣದ ಗ್ರಿಲ್, ಮತ್ತು ಕಸ್ಟಮೈಸ್ ಮಾಡಬಹುದಾದ ಲೈಟಿಂಗ್‌ ಪ್ಯಾಟರ್ನ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಹಾಗು OLED ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ.

  • ಇದು ಕಪ್ಪು ಬಣ್ಣದ ಇಂಟೀರಿಯರ್‌ ಅನ್ನು ಹೊಂದಿದ್ದು, ಸ್ಪೊರ್ಟ್ಸ್‌ ಸೀಟುಗಳು ಲೆದರೆಟ್ ಕವರ್‌ ಮತ್ತು ಲೆದರ್‌ನಿಂದ ಸುತ್ತುವರಿದ ಸ್ಟೀರಿಂಗ್ ವೀಲ್ ಅನ್ನು ಹೊಂದಿವೆ.

  • ಫೀಚರ್‌ಗಳಲ್ಲಿ 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ, ಟಚ್‌ಸ್ಕ್ರೀನ್ ಮತ್ತು ಡಿಸ್‌ಪ್ಲೇ ಪ್ಯಾನೆಲ್ ಹೊಂದಿರುವ 4-ಝೋನ್‌ ಆಟೋ ಎಸಿ ಸೇರಿವೆ.

  • ಸುರಕ್ಷತಾ ಸೂಟ್ ಬಹು ಏರ್‌ಬ್ಯಾಗ್‌ಗಳು, ADAS ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

  • ಇದು ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಮತ್ತು ಲಂಬೋರ್ಘಿನಿ ಉರಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಆಡಿಯ ಅತ್ಯಂತ ಶಕ್ತಿಶಾಲಿ ಎಸ್‌ಯುವಿಯಾದ RS Q8 ಪರ್ಫಾರ್ಮೆನ್ಸ್ ಭಾರತದಲ್ಲಿ ಫೇಸ್‌ಲಿಫ್ಟ್‌ಅನ್ನು ಪಡೆದುಕೊಂಡಿದೆ, ಇದರ ಬೆಲೆಗಳು 2.49 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ). ಇದು ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ಸೂಕ್ಷ್ಮವಾದ ಆಪ್‌ಡೇಟ್‌ಗಳೊಂದಿಗೆ ಬರುತ್ತದೆ ಮತ್ತು 4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಅನ್ನು ಹೊಂದಿದೆ, ಇದು 3 ಸೆಕೆಂಡುಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ. ಆಡಿ ಎಸ್‌ಯುವಿ ನೀಡುವ ಎಲ್ಲವನ್ನೂ ನಾವು ವಿವರವಾಗಿ ನೋಡೋಣ:

ಎಕ್ಸ್‌ಟೀರಿಯರ್‌

ಫೇಸ್‌ಲಿಫ್ಟೆಡ್ ಆಡಿ ಆರ್‌ಎಸ್‌ Q8 ನ ಒಟ್ಟಾರೆ ವಿನ್ಯಾಸ ಭಾಷೆ ಒಂದೇ ಆಗಿದ್ದರೂ, 2025ರ ಮೊಡೆಲ್‌ ಹನಿಕೋಂಬ್ ಮೆಶ್ ಗ್ರಿಲ್‌ನೊಂದಿಗೆ ಕಪ್ಪು ಬಣ್ಣದ ಗ್ರಿಲ್‌ನೊಂದಿಗೆ ಬರುತ್ತದೆ. ಎಲ್‌ಇಡಿ ಹೆಡ್‌ಲೈಟ್‌ಗಳು ಕಪ್ಪು ಬಣ್ಣದ ಫಿನಿಶ್ ಹೊಂದಿದ್ದು, ಲೇಸರ್ ಎಲ್‌ಇಡಿ ಲೈಟ್‌ಗಳು ಹೈಬೀಮ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಎಲ್‌ಇಡಿ ಡಿಆರ್‌ಎಲ್‌ಗಳು ಐದು ಕಸ್ಟಮೈಸ್‌ ಮಾಡಬಹುದಾದ ಲೈಟ್‌ ಸಿಗ್ನೇಚರ್‌ ಪ್ಯಾಟರ್ನ್‌ಗಳನ್ನು ಪಡೆಯುತ್ತವೆ.

ಸೈಡ್‌ನಿಂದ ಗಮನಿಸುವಾಗ, ಇದು 23-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ, ಅದು ವ್ಯತಿರಿಕ್ತ ಕೆಂಪು ಕ್ಯಾಲಿಪರ್‌ಗಳನ್ನು ಒಳಗೊಂಡಿದೆ. ಹೊರಗಿನ ರಿಯರ್‌ವ್ಯೂ ಕನ್ನಡಿಗಳು (ORVM ಗಳು) ಸಹ ಕಪ್ಪು ಬಣ್ಣದ್ದಾಗಿವೆ.

ಹಿಂಭಾಗದಲ್ಲಿ, ಇದು ಮೊದಲ ಬಾರಿಗೆ OLED ಲೈಟಿಂಗ್‌ನೊಂದಿಗೆ ಬರುತ್ತದೆ, ಇದು ಹೆಡ್‌ಲೈಟ್‌ಗಳಂತೆ, ಕಸ್ಟಮೈಸ್‌ ಮಾಡಬಹುದಾದ ಲೈಟ್‌ ಪ್ಯಾಟರ್ನ್‌ಗಳನ್ನು ಪಡೆಯುತ್ತದೆ. ಇದು ಟ್ವಿನ್-ಟಿಪ್ ಎಕ್ಸಾಸ್ಟ್ ಅನ್ನು ಹೊಂದಿರುವ ಕಪ್ಪು ಹಿಂಭಾಗದ ಡಿಫ್ಯೂಸರ್‌ನೊಂದಿಗೆ ಬರುತ್ತದೆ. ಇದು ರೂಫ್‌ನ ಮೇಲೆ ಜೋಡಿಸಲಾದ ಸ್ಪಾಯ್ಲರ್ ಮತ್ತು ಹಿಂಭಾಗದ ವೈಪರ್ ಅನ್ನು ಸಹ ಪಡೆಯುತ್ತದೆ.

ಇಂಟೀರಿಯರ್‌

ಆಡಿ ಆರ್‌ಎಸ್ ಕ್ಯೂ8 ಕಾರಿನ ಒಳಭಾಗದಲ್ಲಿ ಕಪ್ಪು ಬಣ್ಣದ ಥೀಮ್‌ನೊಂದಿಗೆ ಕೆಂಪು ಬಣ್ಣದ ಅಲಂಕರಣದೊಂದಿಗೆ ಬಂದಿದ್ದು, ಈ ಎಸ್ಯುವಿಯ ಸ್ಪೋರ್ಟಿ ಸ್ವಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸೀಟುಗಳು ಮತ್ತು ಸ್ಟೀರಿಂಗ್ ವೀಲ್‌ಗಳು ಲೆದರ್‌ನ ಕವರ್‌ ಅನ್ನು ಹೊಂದಿದ್ದರೆ, ಗೇರ್ ಸೆಲೆಕ್ಟರ್ ಲಿವರ್, ಸೆಂಟರ್ ಆರ್ಮ್‌ರೆಸ್ಟ್ ಮತ್ತು ಡೋರ್ ಪ್ಯಾನೆಲ್‌ಗಳು ಮೈಕ್ರೋಫೈಬರ್ ಮೆಟಿರಿಯಲ್‌ ಅನ್ನು ಬಳಸಲಾಗಿದೆ.

ಇದು ಕಾಂಟ್ರಾಸ್ಟ್ ಸ್ಟಿಚಿಂಗ್ ಹೊಂದಿರುವ ಸ್ಪೋರ್ಟ್ಸ್ ಸೀಟುಗಳನ್ನು ಪಡೆಯುತ್ತದೆ ಮತ್ತು ಸೀಟ್ ಬ್ಯಾಕ್‌ಗಳು 'RS' ಎಂಬಾಸಿಂಗ್ ಅನ್ನು ಹೊಂದಿದ್ದು, ಇದನ್ನು ರೆಗ್ಯುಲರ್‌ Q8 ಎಸ್‌ಯುವಿಗಿಂತ ಭಿನ್ನವಾಗಿಸುತ್ತದೆ.

ಇದನ್ನೂ ಓದಿ: ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್‌ಗಳು ಪ್ರಾರಂಭ

ಫೀಚರ್‌ ಮತ್ತು ಸುರಕ್ಷತೆ

ಫೀಚರ್‌ಗಳ ವಿಷಯದಲ್ಲಿ, ಆಡಿ RS Q8 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ, ಇದು rpm ಡಿಸ್‌ಪ್ಲೇಯ ಬಣ್ಣವನ್ನು ಬದಲಾಯಿಸುತ್ತದೆ ಮತ್ತು ಗೇರ್‌ಗಳನ್ನು ಬದಲಾಯಿಸಲು ಸೂಕ್ತ ಸಮಯವನ್ನು ಸೂಚಿಸಲು ನಿರಂತರವಾಗಿ ಕೆಂಪು ಬಣ್ಣವನ್ನು ಮಿನುಗುತ್ತದೆ. ಇದಲ್ಲದೆ, ಆಡಿ ಎಸ್‌ಯುವಿ ಬೃಹತ್ ಟಚ್‌ಸ್ಕ್ರೀನ್, 23-ಸ್ಪೀಕರ್ ಬ್ಯಾಂಗ್ ಒಲುಫ್ಸೆನ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ, 4-ಝೋನ್ ಆಟೋ ಎಸಿ ಕಂಟ್ರೋಲ್‌ಗಳಿಗಾಗಿ ಡಿಜಿಟಲ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು ಚಾಲಿತ ಟೈಲ್‌ಗೇಟ್‌ನೊಂದಿಗೆ ಬರುತ್ತದೆ.

ಸುರಕ್ಷತಾ ದೃಷ್ಟಿಯಿಂದ, ಇದು ಬಹು ಏರ್‌ಬ್ಯಾಗ್‌ಗಳು, ಸಕ್ರಿಯ ರೋಲ್ ಸ್ಟೆಬಿಲೈಸೇಶನ್, ಹಿಂಭಾಗದ ಸ್ಪೋರ್ಟ್ ಡಿಫರೆನ್ಷಿಯಲ್, 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ನೈಟ್ ವಿಷನ್ ಅಸಿಸ್ಟೆನ್ಸ್ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಫೀಚರ್‌ಗಳೊಂದಿಗೆ ಬರುತ್ತದೆ.

ಪವರ್‌ಟ್ರೈನ್‌ ಆಯ್ಕೆಗಳು

ಆಡಿ ಆರ್‌ಎಸ್‌ Q8 ಕಾರು 4-ಲೀಟರ್ V8 ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದರ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

4-ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ V8 ಎಂಜಿನ್

ಪವರ್‌

640 ಪಿಎಸ್‌

ಟಾರ್ಕ್‌

850 ಎನ್‌ಎಮ್‌

ಟ್ರಾನ್ಸ್‌ಮಿಷನ್‌

8-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್

ಡ್ರೈವ್‌ಟ್ರೈನ್‌

ಆಲ್‌-ವೀಲ್‌ ಡ್ರೈವ್‌

ಆಡಿ RS Q8 3.6 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ ಮತ್ತು ಎಲೆಕ್ಟ್ರಾನಿಕ್ ಆಗಿ ಸೀಮಿತವಾದ ಗರಿಷ್ಠ ವೇಗ 305 ಕಿಮೀ ಆಗಿದೆ.

ಪ್ರತಿಸ್ಪರ್ಧಿಗಳು

ಭಾರತದಲ್ಲಿ ಆಡಿ ಆರ್‌ಎಸ್ ಕ್ಯೂ8 ಕಾರು ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲವಾದರೂ, ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ ಮತ್ತು ಲಂಬೋರ್ಘಿನಿ ಉರಸ್ ಕಾರುಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on Audi ಆರ್ಎಸ್ ಕ್ಯೂ8

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ