• English
  • Login / Register

ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್‌ಗಳು ಪ್ರಾರಂಭ

ಮಹೀಂದ್ರ be 6 ಗಾಗಿ yashika ಮೂಲಕ ಫೆಬ್ರವಾರಿ 15, 2025 07:18 am ರಂದು ಪ್ರಕಟಿಸಲಾಗಿದೆ

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎಸ್‌ಯುವಿಗಳ ಡೆಲಿವೆರಿಗಳು 2025ರ ಮಾರ್ಚ್‌ನಿಂದ ಹಂತ ಹಂತವಾಗಿ ಪ್ರಾರಂಭವಾಗುತ್ತವೆ

Bookings open for Mahindra XEV 9e and BE 6

  • ಮಹೀಂದ್ರಾ ಬಿಇ6 ಮತ್ತು ಎಕ್ಸ್‌ಇವಿ 9ಇ ಗಾಗಿ ಬುಕಿಂಗ್‌ಗಳು ಈಗ ಪ್ರಾರಂಭವಾಗಿದೆ, ಮಾರ್ಚ್ ಮಧ್ಯದಿಂದ ಡೆಲಿವೆರಿಗಳು ಪ್ರಾರಂಭವಾಗಲಿವೆ.

  • ಮಹೀಂದ್ರಾ ಬಿಇ 6 ಪ್ಯಾಕ್ ಒನ್, ಪ್ಯಾಕ್ ಒನ್ ಎಬವ್‌, ಪ್ಯಾಕ್ ಟು, ಪ್ಯಾಕ್ ತ್ರೀ ಸೆಲೆಕ್ಟ್ ಮತ್ತು ಪ್ಯಾಕ್ ತ್ರೀ ಎಂಬ ಐದು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಆದರೆ XEV 9e ಪ್ಯಾಕ್ ಒನ್, ಪ್ಯಾಕ್ ಟು, ಪ್ಯಾಕ್ ತ್ರೀ ಸೆಲೆಕ್ಟ್ ಮತ್ತು ಪ್ಯಾಕ್ ತ್ರೀ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • BE 6 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳನ್ನು ಹೊಂದಿದೆ, ಆದರೆ XEV 9e 12.3-ಇಂಚಿನ ಟ್ರಿಪಲ್ ಡಿಸ್‌ಪ್ಲೇ ಸೆಟಪ್ ಅನ್ನು ನೀಡುತ್ತದೆ.

  • ಎರಡೂ ಮೊಡೆಲ್‌ಗಳು ಮಲ್ಟಿ-ಝೋನ್‌ ಆಟೋ ಎಸಿ, 16-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋ ಪಾರ್ಕಿಂಗ್ ಮತ್ತು 7 ಏರ್‌ಬ್ಯಾಗ್‌ಗಳು (6 ಸ್ಟ್ಯಾಂಡರ್ಡ್‌ ಆಗಿ) ಮತ್ತು ಲೆವೆಲ್ 2 ADAS ನಂತಹ ಸುಧಾರಿತ ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡಿವೆ.

  • ಎರಡೂ ಇವಿಗಳು ಸ್ಟ್ಯಾಂಡರ್ಡ್ 59 ಕಿ.ವ್ಯಾಟ್‌ ಮತ್ತು ದೊಡ್ಡ 79 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತವೆ, ಎರಡಕ್ಕೂ ಸಿಂಗಲ್-ಮೋಟಾರ್ ಸೆಟಪ್‌ ಜೋಡಿಯಾಗಿದೆ.

  • ಎಕ್ಸ್‌ಇವಿ 9ಇಯು 656 ಕಿ.ಮೀ.ವರೆಗಿನ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ, ಆದರೆ  ಬಿಇ6 683 ಕಿ.ಮೀ ವರೆಗಿನ ಹೆಚ್ಚಿನ ರೇಂಜ್‌ ಅನ್ನು ನೀಡುತ್ತದೆ.

  • ಮಹೀಂದ್ರಾ ಬಿಇ 6 ಕಾರಿನ ಬೆಲೆ 18.90 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿ 26.90 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋ ರೂಂ) ಇದ್ದರೆ, ಎಕ್ಸ್‌ಇವಿ 9e ಕಾರಿನ ಬೆಲೆ 21.90 ಲಕ್ಷ ರೂಪಾಯಿಗಳಿಂದ 30.50 ಲಕ್ಷ ರೂಪಾಯಿಗಳವರೆಗೆ (ಎಕ್ಸ್ ಶೋ ರೂಂ) ಇದೆ.

ಮಹೀಂದ್ರಾವು ಇತ್ತೀಚೆಗೆ ಬಿಇ6 ಮತ್ತು ಎಕ್ಸ್‌ಇವಿ 9ಇಗಾಗಿ ಭಾರತದಾದ್ಯಂತ ಟೆಸ್ಟ್‌ ಡ್ರೈವ್‌ಗಳನ್ನು ಪ್ರಾರಂಭಿಸಿದೆ. ಮತ್ತು ಈಗ ವಾಹನ ತಯಾರಕರು ಈ ಎಸ್‌ಯುವಿಗಳಿಗಾಗಿ ಆನ್‌ಲೈನ್ ಮತ್ತು ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ಆಫ್‌ಲೈನ್‌ ಆಗಿ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಬಿಇ 6 ಬೆಲೆ 18.9 ಲಕ್ಷದಿಂದ 26.90 ಲಕ್ಷ ರೂ.ಗಳವರೆಗೆ ಇದ್ದರೆ, ಎಕ್ಸ್‌ಇವಿ 9ಇಯ ಬೆಲೆ ಸ್ವಲ್ಪ ಹೆಚ್ಚಾಗಿದ್ದು, 21.9 ಲಕ್ಷ ರೂ.ಗಳಿಂದ 30.50 ಲಕ್ಷ ರೂ.ಗಳವರೆಗೆ ಇದೆ. ಈಗ, ಮಹೀಂದ್ರಾವು ತನ್ನ EV ಗಳಲ್ಲಿ ಏನು ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ನೋಡೋಣ!

ಡಿಸೈನ್‌

Mahindra XEV 9e Front

ಬಿಇ 6 ಡ್ಯುಯಲ್-ಪಾಡ್ ಹೆಡ್‌ಲೈಟ್‌ಗಳು, C-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳು ಮತ್ತು 19-ಇಂಚಿನ ಸ್ಟೈಲಿಶ್ ಅಲಾಯ್ ವೀಲ್‌ಗಳೊಂದಿಗೆ ಆಕ್ರಮಣಕಾರಿ ನೋಟವನ್ನು ಹೊಂದಿದ್ದು, ಇವುಗಳನ್ನು 20 ಇಂಚುಗಳಿಗೆ ಅಪ್‌ಗ್ರೇಡ್ ಮಾಡಬಹುದು. ಹಾಗೆಯೇ, XUV 9e ಲಂಬವಾಗಿ ಜೋಡಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳು, ತಲೆಕೆಳಗಾದ L-ಆಕಾರದ ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳು ಮತ್ತು 19-ಇಂಚಿನ ಅಥವಾ 20-ಇಂಚಿನ ಎರೋಡೈನಾಮಿಕ್‌ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ ಆಯ್ಕೆಗಳನ್ನು ಒಳಗೊಂಡಿರುವ ಸರಳವಾದ ಎಸ್‌ಯುವಿ-ಕೂಪ್ ವಿನ್ಯಾಸವನ್ನು ಹೊಂದಿದೆ.

ಕ್ಯಾಬಿನ್‌ ಮತ್ತು ಫೀಚರ್‌ಗಳು

Mahindra XEV 9e Dashboard

ಮಹೀಂದ್ರಾ BE 6 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಪುಲ್-ಟ್ಯಾಬ್ ಡೋರ್ ಹ್ಯಾಂಡಲ್‌ಗಳು, ಪ್ರಕಾಶಿತ 'BE' ಲೋಗೋ ಹೊಂದಿರುವ 2-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯುಯಲ್ ವೈರ್‌ಲೆಸ್ ಚಾರ್ಜರ್‌ಗಳು, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು, ಪನೋರಮಿಕ್ ಗ್ಲಾಸ್ ರೂಫ್ ಮತ್ತು ಸೆಲ್ಫಿ ಕ್ಯಾಮೆರಾದೊಂದಿಗೆ ತಂತ್ರಜ್ಞಾನ-ಭರಿತ ಇಂಟೀರಿಯರ್‌ ಅನ್ನು ನೀಡುತ್ತದೆ. ಸುರಕ್ಷತೆಯಲ್ಲಿ 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅರೆನಿದ್ರಾವಸ್ಥೆ ಮೇಲ್ವಿಚಾರಣೆಯೊಂದಿಗೆ ಲೆವೆಲ್ 2 ADAS ಸೇರಿವೆ.

BE 6 ನ ಫೀಚರ್‌ಗಳ ಪಟ್ಟಿಗೆ ಹೆಚ್ಚುವರಿಯಾಗಿ, ಮಹೀಂದ್ರಾ XUV 9e 12.3-ಇಂಚಿನ ಟ್ರಿಪಲ್ ಡಿಸ್‌ಪ್ಲೇ ಸೆಟಪ್, ಸಿಂಗಲ್ ವೈರ್‌ಲೆಸ್ ಚಾರ್ಜರ್ ಅನ್ನು ಒಳಗೊಂಡಿದೆ. ಎರಡೂ ಎಸ್‌ಯುವಿಗಳು 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು  ಸುಧಾರಿತವಾದ ಲೆವೆಲ್‌-2 ADAS ಫೀಚರ್‌ಗಳನ್ನು ನೀಡುತ್ತವೆ.

ಮಹೀಂದ್ರಾ BE 6 ಮತ್ತು XEV 9e: ಪವರ್‌ಟ್ರೇನ್ ಆಯ್ಕೆಗಳು

ಮಹೀಂದ್ರಾ ತನ್ನ ಎರಡೂ ಇವಿಗಳೊಂದಿಗೆ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ನೀಡಿದೆ. ಅದರ ವಿಶೇಷಣಗಳು ಇಲ್ಲಿವೆ:

ವಿಶೇಷಣಗಳು

ಮಹೀಂದ್ರಾ ಬಿಇ 6

ಮಹೀಂದ್ರಾ ಎಕ್ಸ್‌ಇವಿ 9ಇ

ಬ್ಯಾಟರಿ ಪ್ಯಾಕ್‌

59 ಕಿ.ವ್ಯಾಟ್‌

79 ಕಿ.ವ್ಯಾಟ್‌

59 ಕಿ.ವ್ಯಾಟ್‌

79 ಕಿ.ವ್ಯಾಟ್‌

ಎಲೆಕ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

1

1

1

1

ಪವರ್‌

231 ಪಿಎಸ್‌

286 ಪಿಎಸ್‌

231 ಪಿಎಸ್‌

286 ಪಿಎಸ್‌

ಟಾರಕ್‌

380 ಎನ್‌ಎಮ್‌

380 ಎನ್‌ಎಮ್‌

380 ಎನ್‌ಎಮ್‌

380 ಎನ್‌ಎಮ್‌

ಕ್ಲೈಮ್ ಮಾಡಿದ ರೇಂಜ್‌ (MIDC ಭಾಗ 1+ ಭಾಗ 2)

557 ಕಿ.ಮೀ.

683 ಕಿ.ಮೀ.

542 ಕಿ.ಮೀ.

656ಕಿ.ಮೀ.

ಡ್ರೈವ್‌ ಟ್ರೈನ್‌

RWD*

RWD

RWD

RWD

*RWD = ರಿಯರ್‌-ವೀಲ್‌-ಡ್ರೈವ್‌

ಮಹೀಂದ್ರಾ BE 6 ಮತ್ತು XEV 9e: ಪ್ರತಿಸ್ಪರ್ಧಿಗಳು

ಮಹೀಂದ್ರಾ BE 6, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ ಇವಿ, ಎಂಜಿ ಝಡ್ಎಸ್ ಇವಿ ಮತ್ತು ಮುಂಬರುವ ಮಾರುತಿ ಇ ವಿಟಾರಾ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಹಾಗೆಯೇ, ಮಹೀಂದ್ರಾ XEV 9e ಭಾರತದಲ್ಲಿ ಬಿಡುಗಡೆಯಾದಾಗ ಟಾಟಾ ಹ್ಯಾರಿಯರ್ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Mahindra be 6

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಕಿಯಾ ಇವಿ6 2025
    ಕಿಯಾ ಇವಿ6 2025
    Rs.63 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience