Login or Register ಅತ್ಯುತ್ತಮ CarDekho experience ಗೆ
Login

2025ರ Hyundai Ioniq 5 ಬಿಡುಗಡೆಗೆ ಸಮಯ ನಿಗದಿ, ಬೆಲೆಗಳು ಸೆಪ್ಟೆಂಬರ್ ವೇಳೆಗೆ ಬಹಿರಂಗಗೊಳ್ಳುವ ಸಾಧ್ಯತೆ

ಏಪ್ರಿಲ್ 25, 2025 06:21 pm ರಂದು dipan ಮೂಲಕ ಪ್ರಕಟಿಸಲಾಗಿದೆ
8 Views

ಫೇಸ್‌ಲಿಫ್ಟೆಡ್ ಐಯೋನಿಕ್ 5 ಒಳಗೆ ಮತ್ತು ಹೊರಗೆ ಕೆಲವು ಸೂಕ್ಷ್ಮ ಆಪ್‌ಡೇಟ್‌ಗಳನ್ನು ಪಡೆಯುತ್ತದೆಯಾದರೂ, ಜಾಗತಿಕ-ಸ್ಪೆಕ್ ಮೊಡೆಲ್‌ನಲ್ಲಿ ಲಭ್ಯವಿರುವ ದೊಡ್ಡ 84 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಇದನ್ನು ನೀಡಲಾಗುವುದಿಲ್ಲ ಎಂದು ಮೂಲಗಳು ಸೂಚಿಸುತ್ತವೆ

ಹ್ಯುಂಡೈ ಐಯೋನಿಕ್ 5 ಅನ್ನು 2023ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅಂದಿನಿಂದ ಯಾವುದೇ ಪ್ರಮುಖ ಆಪ್‌ಡೇಟ್‌ಗಳನ್ನು ಸ್ವೀಕರಿಸಿಲ್ಲ. ನಮ್ಮ ಮೂಲಗಳ ಪ್ರಕಾರ, 2024 ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾದ ಫೇಸ್‌ಲಿಫ್ಟೆಡ್ ಆವೃತ್ತಿಯು ಆಗಸ್ಟ್ ಅಥವಾ ಸೆಪ್ಟೆಂಬರ್ 2025 ರ ವೇಳೆಗೆ ಭಾರತಕ್ಕೆ ಬರುವ ನಿರೀಕ್ಷೆಯಿರುವುದರಿಂದ ಅದು ಶೀಘ್ರದಲ್ಲೇ ಬದಲಾಗಲಿದೆ. ಈ ಆಪ್‌ಡೇಟ್‌ ಮಾಡಲಾದ ಮಡೆಲ್‌ ಒಳಗೆ ಮತ್ತು ಹೊರಗೆ ಸೂಕ್ಷ್ಮವಾದ ವಿನ್ಯಾಸ ಬದಲಾವಣೆಗಳನ್ನು ತರುತ್ತದೆ. ಹಾಗೆಯೇ, ವಿದೇಶಗಳಲ್ಲಿ ಫೇಸ್‌ಲಿಫ್ಟೆಡ್ ಮೊಡೆಲ್‌ನಲ್ಲಿ ಪರಿಚಯಿಸಲಾದ ದೊಡ್ಡ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಭಾರತ-ಸ್ಪೆಕ್ ಮೊಡೆಲ್‌ನಲ್ಲೂ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸುತ್ತವೆ.

ಹಾಗೆಯೇ, ಫೇಸ್‌ಲಿಫ್ಟೆಡ್ ಇಂಡಿಯಾ-ಸ್ಪೆಕ್ ಅಯೋನಿಕ್ 5 ನಿಂದ ನಾವು ನಿರೀಕ್ಷಿಸಬಹುದಾದ ಎಲ್ಲವೂ ಇಲ್ಲಿದೆ:

2025ರ ಹ್ಯುಂಡೈ ಅಯೋನಿಕ್ 5: ಒಂದು ಅವಲೋಕನ

ಒಟ್ಟಾರೆ ಬಾಡಿಯ ಆಕೃತಿಯು ಬದಲಾಗದೆ ಇದ್ದರೂ, ಹುಂಡೈ ಅಯೋನಿಕ್ 5 ರ ಜಾಗತಿಕ ಫೇಸ್‌ಲಿಫ್ಟ್ ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್ ಅನ್ನು ಹೊಂದಿದ್ದು ಅದು ಹೆಚ್ಚು ಆಕ್ರಮಣಕಾರಿ ನೋಟವನ್ನು ನೀಡುತ್ತದೆ. ಅಲಾಯ್ ವೀಲ್‌ಗಳು ಈಗ ಹೊಸ ಡ್ಯುಯಲ್-ಟೋನ್ ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿವೆ. ಈ ಆಪ್‌ಡೇಟ್‌ಗಳು, ಬಾಕ್ಸಿ LED ಹೆಡ್‌ಲೈಟ್‌ಗಳು, ಸಿಗ್ನೇಚರ್ ಡಿಆರ್‌ಎಲ್‌ಗಳು ಮತ್ತು ಪಿಕ್ಸೆಲ್-ಶೈಲಿಯ ಟೈಲ್ ಲೈಟ್‌ಗಳ ಜೊತೆಗೆ, ಭಾರತ-ಸ್ಪೆಕ್‌ನಲ್ಲೂ ನೀಡುವ ನಿರೀಕ್ಷೆಯಿದೆ.

ಒಳಭಾಗದಲ್ಲಿ, ಫೇಸ್‌ಲಿಫ್ಟೆಡ್ ಐಯೋನಿಕ್ 5 ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಂವಾದಾತ್ಮಕ ಪಿಕ್ಸೆಲ್ ಡಾಟ್‌ಗಳೊಂದಿಗೆ ಮತ್ತು ಸೀಟ್ ಹೀಟಿಂಗ್, ಸ್ಟೀರಿಂಗ್ ವೀಲ್ ಹೀಟಿಂಗ್ ಮತ್ತು ಪಾರ್ಕ್ ಅಸಿಸ್ಟ್‌ನಂತಹ ಕಾರ್ಯಗಳಿಗಾಗಿ ಹೆಚ್ಚುವರಿ ಭೌತಿಕ ಬಟನ್‌ಗಳನ್ನು ಒಳಗೊಂಡಿದೆ. ಕ್ಯಾಬಿನ್ ಹಿಂದಿನ ಬಿಳಿ ಬಣ್ಣಗಳ ಬದಲಿಗೆ ಕಪ್ಪು ಬೆಜೆಲ್‌ಗಳನ್ನು ಪಡೆಯುತ್ತದೆ, ಇದು ಸ್ಪೋರ್ಟಿಯರ್ ಭಾವನೆಯನ್ನು ನೀಡುತ್ತದೆ. ಕಪ್‌ಹೋಲ್ಡರ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ಗಾಗಿ ಸೆಂಟರ್‌ ಕನ್ಸೋಲ್ ಅನ್ನು ಹೊಸ ವಿನ್ಯಾಸದೊಂದಿಗೆ ಪರಿಷ್ಕರಿಸಲಾಗಿದೆ, ಪ್ರವೇಶವನ್ನು ಸುಧಾರಿಸಲು, ಸೀಟುಗಳು ಬದಲಾಗದೆ ಉಳಿದಿವೆ. ಈ ಆಪ್‌ಡೇಟ್‌ಗಳು ಭಾರತ-ಸ್ಪೆಕ್ ಆವೃತ್ತಿಯ ಭಾಗವಾಗುವ ನಿರೀಕ್ಷೆಯಿದೆ.

ಫೇಸ್‌ಲಿಫ್ಟೆಡ್ ಹುಂಡೈ ಐಯೋನಿಕ್ 5 ನಲ್ಲಿರುವ ಫೀಚರ್‌ಗಳ ಸೂಟ್ ಪ್ರಸ್ತುತ-ಸ್ಪೆಕ್ ಮೊಡೆಲ್‌ನಂತೆಯೇ ಉಳಿಯುವ ನಿರೀಕ್ಷೆಯಿದೆ, ಇದರಲ್ಲಿ 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ), ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಡ್ಯುಯಲ್-ಜೋನ್ ಆಟೋ ಎಸಿ ಸೇರಿವೆ.

ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಫೇಸ್‌ಲಿಫ್ಟೆಡ್ಮೊಡೆಲ್‌ ಫಾರ್ವರ್ಡ್ ಡಿಕ್ಕಿ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ ಸಹಾಯ ಫೀಚರ್‌ಗಳನ್ನು ನೀಡುವುದನ್ನು ಮುಂದುವರಿಸುತ್ತದೆ.

ಇದನ್ನೂ ಓದಿ: 2025 ರ ವರ್ಷದ ವಿಶ್ವ ಕಾರು ಪ್ರಶಸ್ತಿಯನ್ನು ಗೆದ್ದ Kia EV3

2025 ಹುಂಡೈ ಅಯೋನಿಕ್ 5: ಪವರ್‌ಟ್ರೇನ್ ಆಯ್ಕೆಗಳು

ಅಂತರರಾಷ್ಟ್ರೀಯ-ಸ್ಪೆಕ್ ಫೇಸ್‌ಲಿಫ್ಟೆಡ್ ಐಯೋನಿಕ್ 5 ರ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳು ಇಲ್ಲಿವೆ:

ಬ್ಯಾಟರಿ ಪ್ಯಾಕ್‌

84 ಕಿ.ವ್ಯಾಟ್‌

ಪವರ್‌

228 ಪಿಎಸ್‌

ಟಾರ್ಕ್‌

350 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

570 ಕಿ.ಮೀ.ವರೆಗೆ (WLTP)

ಡ್ರೈವ್‌ ಟ್ರೈನ್‌

ರಿಯರ್‌-ವೀಲ್‌-ಡ್ರೈವ್‌ (RWD)

ಹಾಗೆಯೇ, ಮೇಲೆ ಹೇಳಿದಂತೆ, ಭಾರತ-ಸ್ಪೆಕ್ ಮೊಡೆಲ್‌ ಪ್ರಸ್ತುತ 72.6 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ARAI- ಕ್ಲೈಮ್ ಮಾಡಿದ 631 ಕಿಮೀ ರೇಂಜ್‌ನೊಂದಿಗೆ ಮುಂದುವರಿಯುತ್ತದೆ, ಇದು 217 ಪಿಎಸ್‌ ಮತ್ತು 350 ಎನ್‌ಎಮ್‌ ಉತ್ಪಾದಿಸುವ ಹಿಂಭಾಗದ-ಆಕ್ಸಲ್-ಮೌಂಟೆಡ್ (RWD) ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲ್ಪಟ್ಟಿದೆ ಎಂದು ಮೂಲಗಳು ಸೂಚಿಸುತ್ತವೆ.

2025ರ ಹುಂಡೈ ಅಯೋನಿಕ್ 5: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2025ರ ಹ್ಯುಂಡೈ ಐಯೋನಿಕ್ 5 ಪ್ರಸ್ತುತ-ಸ್ಪೆಕ್ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಪಡೆಯುವ ನಿರೀಕ್ಷೆಯಿದೆ, ಇದರ ಬೆಲೆ 46.05 ಲಕ್ಷ ರೂ.(ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ಆಗಿದೆ. ಇದು BYD ಸೀಲಿಯನ್ 7, BYD ಸೀಲ್, ಹಾಗೂ ಐಷಾರಾಮಿ BMW iX1 LWB ನೊಂದಿಗೆ ಪೈಪೋಟಿ ನಡೆಸುವುದನ್ನು ಮುಂದುವರಿಸುತ್ತದೆ, ಆದರೆ ಭಾರತದಲ್ಲಿ Kia EV6 ಗೆ ಕೈಗೆಟುಕುವ ಪರ್ಯಾಯವಾಗಿದೆ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Hyundai ಅಯಾನಿಕ್ 5

ಇನ್ನಷ್ಟು ಅನ್ವೇಷಿಸಿ on ಹುಂಡೈ ಅಯಾನಿಕ್ 5

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ