Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ 2025ರ Skoda Kodiaq ಬಿಡುಗಡೆಗೆ ದಿನಾಂಕ ನಿಗದಿ

ಏಪ್ರಿಲ್ 10, 2025 09:59 pm ರಂದು aniruthan ಮೂಲಕ ಪ್ರಕಟಿಸಲಾಗಿದೆ
32 Views

ವಿಕಸನೀಯ ವಿನ್ಯಾಸ, ಆಪ್‌ಡೇಟ್‌ ಮಾಡಿದ ಕ್ಯಾಬಿನ್, ಹೆಚ್ಚಿನ ಫೀಚರ್‌ಗಳು ಮತ್ತು ವರ್ಧಿತ ಶಕ್ತಿ... 2025ರ ಸ್ಕೋಡಾ ಕೊಡಿಯಾಕ್ ಈ ಎಲ್ಲಾ ಅಂಶಗಳ ಆಪ್‌ಡೇಟ್‌ಗಳನ್ನು ಪಡೆಯುತ್ತದೆ

  • 2025ರ ಸ್ಕೋಡಾ ಕೊಡಿಯಾಕ್ ಏಪ್ರಿಲ್ 17 ರಂದು ಬಿಡುಗಡೆಯಾಗಲಿದೆ.

  • ಇದನ್ನು ಸ್ಪೋರ್ಟ್‌ಲೈನ್ ಮತ್ತು ಸೆಲೆಕ್ಷನ್ ಎಲ್ ಕೆ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುವುದು.

  • ಹೆಚ್ಚು ಆಧುನಿಕ ಲೈಟಿಂಗ್‌ ಸೆಟಪ್‌ನೊಂದಿಗೆ ವಿಕಸನೀಯ ಬಾಹ್ಯ ವಿನ್ಯಾಸವನ್ನು ಪಡೆಯುತ್ತದೆ.

  • ಒಳಭಾಗದಲ್ಲಿ, ಎರಡು ಬಣ್ಣಗಳಲ್ಲಿ ಹೊಚ್ಚ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ನೀಡಲಾಗಿದೆ.

  • 12.9-ಇಂಚಿನ ಟಚ್‌ಸ್ಕ್ರೀನ್, ಮುಂಭಾಗದ ಸೀಟುಗಳಿಗೆ ಮಸಾಜ್ ಫಂಕ್ಷನ್‌ ಮತ್ತು 13-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್ ಇವುಗಳ ಪ್ರಮುಖ ಫೀಚರ್‌ಗಳಾಗಿವೆ.

  • 204 ಪಿಎಸ್‌ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, 7-ಸ್ಪೀಡ್‌ ಡಿಸಿಟಿಯೊಂದಿಗೆ ಸಂಯೋಜಿಸಲ್ಪಟ್ಟಿದೆ.

ನೀವು ಹೊಸ 2025 ಸ್ಕೋಡಾ ಕೊಡಿಯಾಕ್ ಮೇಲೆ ಕಣ್ಣಿಟ್ಟಿದ್ದರೆ, ಅದರ ಬಿಡುಗಡೆ ಹೆಚ್ಚು ದೂರವಿಲ್ಲ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ಹೊಸ ಸ್ಕೋಡಾ ಕೊಡಿಯಾಕ್ ಕಾರಿನ ಬೆಲೆಯನ್ನು ಏಪ್ರಿಲ್ 17 ರಂದು ಘೋಷಿಸಲಾಗುವುದು. ಎರಡನೇ ಜನರೇಶನ್‌ನ ಸ್ಕೋಡಾ ಕೊಡಿಯಾಕ್ ಸ್ಪೋರ್ಟ್‌ಲೈನ್ ಮತ್ತು ಸೆಲೆಕ್ಷನ್ ಎಲ್ ಕೆ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಸಲು ಲಭ್ಯವಿರುತ್ತದೆ.

ನೀವು 2025 ರ ಸ್ಕೋಡಾ ಕೊಡಿಯಾಕ್ ಮೇಲೆ ಕಣ್ಣು ಹಾಕಿದ್ದರೆ, ನಾವು ನಿಮಗೆ ಸಂಕ್ಷಿಪ್ತ ಅವಲೋಕನವನ್ನು ನೀಡುತ್ತಿರುವುದರಿಂದ ನೀವು ಈಗ ಸರಿಯಾದ ಸ್ಥಳದಲ್ಲಿದ್ದೀರಿ.

2025 ಸ್ಕೋಡಾ ಕೊಡಿಯಾಕ್: ಎಕ್ಸ್‌ಟೀರಿಯರ್‌ ಡಿಸೈನ್‌

ಸ್ಕೋಡಾ ಕೊಡಿಯಾಕ್ ವಿನ್ಯಾಸವು ಹೊಸತನದ ಬದಲಾಗಿ ವಿಕಸನೀಯ ವಿಧಾನವನ್ನು ತೆಗೆದುಕೊಳ್ಳುತ್ತದೆ. ಪರಿಚಿತ ಸ್ಕೋಡಾ "ಬಟರ್‌ಫ್ಲೈ" ಗ್ರಿಲ್ ಈಗ ಒಂದು ಗಾತ್ರ ದೊಡ್ಡದಾಗಿದೆ ಮತ್ತು ಫ್ಲ್ಯಾಶ್‌ಗಾಗಿ ಪ್ರಕಾಶಿತ ಲೈಟ್ ಬಾರ್ ಅನ್ನು ಹೊಂದಿದೆ, ಆದರೆ ಹೆಡ್‌ಲೈಟ್‌ಗಳು ಈಗ ನಯವಾಗಿವೆ. ಅದರ ಕೆಳಗೆ, ನೀವು C-ಆಕಾರದ ಅಂಶಗಳನ್ನು ಹೊಂದಿರುವ ಬಂಪರ್ ಮತ್ತು ಸ್ಲಿಮ್ ಏರ್ ಡ್ಯಾಮ್ ಅನ್ನು ಪಡೆಯುತ್ತೀರಿ.

ಪ್ರೊಫೈಲ್‌ನಲ್ಲಿ, ಸ್ಕೋಡಾ ಕೊಡಿಯಾಕ್ ನೀವು ಆಯ್ಕೆ ಮಾಡುವ ಟ್ರಿಮ್ ಅನ್ನು ಅವಲಂಬಿಸಿ ವಿಭಿನ್ನ ವಿನ್ಯಾಸಗಳೊಂದಿಗೆ 18-ಇಂಚಿನ ಅಲಾಯ್‌ಗಳನ್ನು ಪಡೆಯುತ್ತದೆ. ರೂಫ್‌ಗೆ ಫ್ಲೋಟಿಂಗ್‌ ಎಫೆಕ್ಟ್‌ಅನ್ನು ನೀಡಲು ಸಿ-ಪಿಲ್ಲರ್ ಮೇಲೆ ಸಿಲ್ವರ್‌ ಟ್ರಿಮ್ ಅನ್ನು ಸಹ ಪಡೆಯುತ್ತದೆ. ಒಟ್ಟಾರೆ ವಿನ್ಯಾಸವನ್ನು ಪೂರ್ತಿಗೊಳಿಸುವುದು ಕನೆಕ್ಟೆಡ್‌ ಟೈಲ್ ಲ್ಯಾಂಪ್‌ಗಳ ಜೋಡಿ ಆಗಿದೆ.

2025ರ ಸ್ಕೋಡಾ ಕೊಡಿಯಾಕ್: ಇಂಟೀರಿಯರ್ ಡಿಸೈನ್

2025 ಕೊಡಿಯಾಕ್ ಕಾರಿನ ಒಳಭಾಗವು ಹೊಸದಾಗಿದೆ. 12.9-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಿಂದ ಪ್ರಾಬಲ್ಯ ಹೊಂದಿರುವ ಹೊಸ ಲೇಯರ್ಡ್ ಡ್ಯಾಶ್‌ಬೋರ್ಡ್ ಅನ್ನು ನೀವು ಪಡೆಯುತ್ತೀರಿ. ಇದು ಬಟನ್‌ ಕಂಟ್ರೋಲ್‌ಗಳನ್ನು ಸಹ ಪಡೆಯುತ್ತದೆ, ಅವು ಬಹುಕ್ರಿಯಾತ್ಮಕವಾಗಿವೆ, ಅಂದರೆ ಅವುಗಳನ್ನು ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಇನ್ಫೋಟೈನ್‌ಮೆಂಟ್ ಕರ್ತವ್ಯಗಳಂತಹ ಬಹು ಉದ್ದೇಶಗಳಿಗಾಗಿ ಬಳಸಬಹುದು.

ಇದನ್ನೂ ಓದಿ: ಹಲವು ವೇರಿಯೆಂಟ್‌ಗಳು ಮತ್ತು ಬಣ್ಣದ ಆಯ್ಕೆಗಳೊಂದಿಗೆ ಭಾರತಕ್ಕೆ ಬರಲಿರುವ 2025ರ Skoda Kodiaq

ಗೇರ್ ಸೆಲೆಕ್ಟರ್ ಅನ್ನು ಈಗ ಸ್ಟೀರಿಂಗ್ ಕಾಲಂಗೆ ಬದಲಾಯಿಸಲಾಗಿದೆ, ಇದು ಕೆಳಗಿನ ಸೆಂಟರ್‌ ಕನ್ಸೋಲ್‌ನಲ್ಲಿ ಸಾಕಷ್ಟು ಸ್ಟೋರೇಜ್‌ ಸ್ಥಳವನ್ನು ತೆರೆಯುತ್ತದೆ. ಎರಡು ಕ್ಯಾಬಿನ್ ಬಣ್ಣಗಳಲ್ಲಿ ಲಭ್ಯವಿದೆ, ಅವುಗಳಲ್ಲಿ ಸ್ಪೋರ್ಟ್‌ಲೈನ್‌ನೊಂದಿಗೆ ಕಪ್ಪು ಮತ್ತು ಸೆಲೆಕ್ಷನ್ LK ನಲ್ಲಿ ಕಪ್ಪು/ಕಂದು.

2025 ಸ್ಕೋಡಾ ಕೊಡಿಯಾಕ್: ಆನ್‌ಬೋರ್ಡ್ ಫೀಚರ್‌ಗಳು

ಫೀಚರ್‌ಗಳ ವಿಷಯದಲ್ಲಿ, ಸ್ಕೋಡಾ ಕೊಡಿಯಾಕ್ ಬಹಳಷ್ಟು ಪ್ಯಾಕ್ ಆಗಿದೆ. ಮೇಲೆ ತಿಳಿಸಿದ ಟಚ್‌ಸ್ಕ್ರೀನ್ ಜೊತೆಗೆ, 2025 ಕೊಡಿಯಾಕ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 3-ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ಪನೋರಮಿಕ್ ಸನ್‌ರೂಫ್, ಹೀಟಿಂಗ್‌, ವೆಂಟಿಲೇಷನ್ ಮತ್ತು ಮಸಾಜ್‌ನೊಂದಿಗೆ ಚಾಲಿತ ಮುಂಭಾಗದ ಸೀಟುಗಳು ಮತ್ತು 13-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಪ್ರಯಾಣಿಕರ ಸುರಕ್ಷತೆಯನ್ನು 9 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾದೊಂದಿಗೆ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಪಾರ್ಕ್ ಅಸಿಸ್ಟ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ನೋಡಿಕೊಳ್ಳಲಾಗುತ್ತದೆ. 2025 ಸ್ಕೋಡಾ ಕೊಡಿಯಾಕ್‌ನಲ್ಲಿ ಯಾವುದೇ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಇರುವುದಿಲ್ಲ.

2025 ಸ್ಕೋಡಾ ಕೊಡಿಯಾಕ್: ಎಂಜಿನ್ ಆಯ್ಕೆ

ಸ್ಕೋಡಾ ಕೊಡಿಯಾಕ್ ಅನ್ನು ಒಂದೇ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು, ಅದರ ವಿಶೇಷಣಗಳನ್ನು ನಿಮ್ಮ ಮಾಹಿತಿಗಾಗಿ ಕೆಳಗಿನ ಕೋಷ್ಟಕದಲ್ಲಿ ಉಲ್ಲೇಖಿಸಲಾಗಿದೆ:

ಪ್ಯಾರಮೀಟರ್‌ಗಳು

2025 ಸ್ಕೋಡಾ ಕೊಡಿಯಾಕ್

ಎಂಜಿನ್‌

2-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

204 ಪಿಎಸ್‌

ಟಾರ್ಕ್‌

320 ಎನ್‌ಎಮ್‌

ಗೇರ್‌ಬಾಕ್ಸ್‌

7-ಸ್ಪೀಡ್‌ ಡಿಸಿಟಿ*

ಡ್ರೈವ್‌ಟ್ರೈನ್‌

ಆಲ್-ವೀಲ್ ಡ್ರೈವ್ (AWD)

ಕ್ಲೈಮ್‌ ಮಾಡಿದ ಇಂಧನ ದಕ್ಷತೆ

ಪ್ರತಿ ಲೀ.ಗೆ 14.86 ಕಿ.ಮೀ.

* ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

2025 ಸ್ಕೋಡಾ ಕೊಡಿಯಾಕ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2025 ರ ಸ್ಕೋಡಾ ಕೊಡಿಯಾಕ್ ಕಾರಿನ ಬೆಲೆ ಸುಮಾರು 45 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಜೀಪ್ ಮೆರಿಡಿಯನ್ ಹಾಗೂ ಟೊಯೋಟಾ ಫಾರ್ಚೂನರ್, ಎಂಜಿ ಗ್ಲೋಸ್ಟರ್ ಮತ್ತು ಮುಂಬರುವ ಎಂಜಿ ಮೆಜೆಸ್ಟರ್ ಮತ್ತು ರೆಗ್ಯುಲರ್‌ ವೋಕ್ಸ್‌ವ್ಯಾಗನ್ ಟಿಗುವಾನ್‌ನಂತಹ ಫುಲ್‌ ಸೈಜ್‌ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Skoda ಕೊಡಿಯಾಕ್ 2025

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ