• English
    • Login / Register

    2025ರ Volkswagen Tiguan R-Lineನ ಪ್ರಮುಖ ಫೀಚರ್‌ಗಳ ಪಟ್ಟಿ ಬಹಿರಂಗ

    ವೋಕ್ಸ್ವ್ಯಾಗನ್ ಟಿಗುವಾನ್ 2025 ಗಾಗಿ dipan ಮೂಲಕ ಮಾರ್ಚ್‌ 28, 2025 09:26 pm ರಂದು ಮಾರ್ಪಡಿಸಲಾಗಿದೆ

    • 14 Views
    • ಕಾಮೆಂಟ್‌ ಅನ್ನು ಬರೆಯಿರಿ

    ವೋಕ್ಸ್‌ವ್ಯಾಗನ್ ಈಗಾಗಲೇ ಟಿಗುವಾನ್ ಆರ್-ಲೈನ್ 2-ಲೀಟರ್ ಟಿಎಸ್‌ಐ ಎಂಜಿನ್‌ನೊಂದಿಗೆ ಹೊರಹೋಗುವ ಮೊಡೆಲ್‌ಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ ಎಂದು ದೃಢಪಡಿಸಿದೆ

    Volkswagen Tiguan R-Line key features revealed

     ವೋಕ್ಸ್‌ವ್ಯಾಗನ್ ಟಿಗುವಾನ್ ಆರ್-ಲೈನ್ ನಮ್ಮ ಮಾರುಕಟ್ಟೆಗೆ ಜರ್ಮನ್ ಕಾರು ತಯಾರಕರ ಮೊದಲ ಮೊಡೆಲ್‌ ಆಗಿದ್ದು, ಸ್ಪೋರ್ಟಿ ಆರ್-ಲೈನ್ ಪೋರ್ಟ್‌ಫೋಲಿಯೊ ಅಡಿಯಲ್ಲಿ ಇದನ್ನು ಏಪ್ರಿಲ್ 14, 2025 ರಂದು ಬಿಡುಗಡೆ ಮಾಡಲಾಗುವುದು. ಆ ನಿಟ್ಟಿನಲ್ಲಿ, ವೋಕ್ಸ್‌ವ್ಯಾಗನ್ ಈಗಾಗಲೇ ಪವರ್‌ಟ್ರೇನ್ ಮತ್ತು ವೇರಿಯೆಂಟ್‌-ವಾರು ಬಣ್ಣ ಆಯ್ಕೆಗಳನ್ನು ವಿವರಿಸಿದೆ. ಈಗ, ಕಾರು ತಯಾರಕರು ಈ ಮುಂಬರುವ ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಮೊದಲು ಇದರ ಕೆಲವು ಪ್ರಮುಖ ಫೀಚರ್‌ಗಳನ್ನು ಬಹಿರಂಗಪಡಿಸಿದ್ದಾರೆ. ಅದರ ವಿವರಗಳು ಇಲ್ಲಿವೆ:

    ದೃಢಪಡಿಸಿದ ಫೀಚರ್‌ಗಳು

    Volkswagen Tiguan R-Line seats

    ಜರ್ಮನ್ ಕಾರು ತಯಾರಕ ಕಂಪನಿಯು ಮುಂಬರುವ ಟಿಗುವಾನ್ ಆರ್-ಲೈನ್‌ನಲ್ಲಿ ಬರುವ ಕೆಲವು ಫೀಚರ್‌ಗಳನ್ನು ದೃಢಪಡಿಸಿದೆ. ಅದರ ಪಟ್ಟಿಗಳು ಇಲ್ಲಿವೆ

    • ಮಸಾಜ್ ಫಂಕ್ಷನ್‌ ಮತ್ತು ಲಂಬರ್‌ ಸಪೋರ್ಟ್‌ನೊಂದಿಗೆ ಸ್ಪೋರ್ಟ್‌ ಸೀಟ್‌ಗಳು

    • 3-ಝೋನ್‌ ಆಟೋ ಎಸಿ

    • ಪಾರ್ಕ್ ಅಸಿಸ್ಟ್

    • ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS)

    • ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್

    • 30-ಬಣ್ಣದ ಆಂಬಿಯೆಂಟ್ ಲೈಟಿಂಗ್

    ಇವುಗಳಲ್ಲಿ, ಪ್ರಸ್ತುತ-ಸ್ಪೆಕ್ ಟಿಗುವಾನ್ ಈಗಾಗಲೇ 3-ಝೋನ್‌ ಆಟೋ ಎಸಿ ಮತ್ತು ಪಾರ್ಕ್ ಅಸಿಸ್ಟ್‌ನೊಂದಿಗೆ ಬರುತ್ತದೆ. 30-ಬಣ್ಣಗಳ ಆಂಬಿಯೆಂಟ್ ಲೈಟಿಂಗ್ ಮತ್ತು ADAS ನಂತಹ ಕೆಲವು ಫೀಚರ್‌ಗಳು ಭಾರತದಲ್ಲಿ ವೋಕ್ಸ್‌ವ್ಯಾಗನ್‌ನಲ್ಲಿ ಮೊದಲ ಬಾರಿಗೆ ಬಂದಿವೆ.

    ಇತರ ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ

    Volkswagen Tiguan R-Line touchscreen

    ಮೇಲಿನ ಫೀಚರ್‌ಗಳ ಜೊತೆಗೆ, ಭಾರತಕ್ಕಾಗಿ ಟಿಗುವಾನ್ ಆರ್-ಲೈನ್ 12.9-ಇಂಚಿನ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ.

    ಸುರಕ್ಷತಾ ಸೂಟ್ ಕನಿಷ್ಠ 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿರುತ್ತದೆ.

    ಇದನ್ನೂ ಓದಿ: ಭಾರತದಲ್ಲಿ Kia EV6 ಫೇಸ್‌ಲಿಫ್ಟ್ ಬಿಡುಗಡೆ, ಬೆಲೆ 65.90 ಲಕ್ಷ ರೂ. ನಿಗದಿ

    ಪವರ್‌ಟ್ರೇನ್ ಆಯ್ಕೆಗಳು

    Volkswagen Tiguan R-Line side profile

    ವೋಕ್ಸ್‌ವ್ಯಾಗನ್ ಕಂಪನಿಯು ಈ ಹಿಂದೆ ಟಿಗುವಾನ್ ಆರ್-ಲೈನ್ ಪ್ರಸ್ತುತ ಸ್ಪೆಕ್ ಮೊಡೆಲ್‌ನಂತೆಯೇ 2-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಹೊಂದಿರುತ್ತದೆ ಎಂದು ದೃಢಪಡಿಸಿತ್ತು, ಆದರೆ ಈಗ ಅದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ. ವಿವರವಾದ ವಿಶೇಷಣಗಳು ಇಲ್ಲಿವೆ:

    ಎಂಜಿನ್‌

    2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

    ಪವರ್‌

    204 ಪಿಎಸ್‌ (ಹಿಂದಿನದಕ್ಕಿಂತ 14 ಪಿಎಸ್‌ ಹೆಚ್ಚು)

    ಟಾರ್ಕ್‌

    320 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    7-ಸ್ಪೀಡ್ ಡಿಸಿಟಿ*

    ಡ್ರೈವ್‌ಟ್ರೈನ್‌

    ಆಲ್-ವೀಲ್-ಡ್ರೈವ್ (AWD)

    *ಡಿಸಿಟಿ = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Volkswagen Tiguan R-Line rear

    ವೋಕ್ಸ್‌ವ್ಯಾಗನ್ ಟಿಗುವಾನ್ ಆರ್-ಲೈನ್ ಅನ್ನು ಏಪ್ರಿಲ್ 14, 2025 ರಂದು ಭಾರತದಲ್ಲಿ ಪರಿಚಯಿಸಲಾಗುವುದು ಮತ್ತು ಇದನ್ನು ಸಂಪೂರ್ಣವಾಗಿ ದೇಶಕ್ಕೆ ಆಮದು ಮಾಡಿಕೊಳ್ಳಲಾಗುವುದರಿಂದ ಸುಮಾರು 55 ಲಕ್ಷ ರೂ. (ಎಕ್ಸ್-ಶೋರೂಂ) ಬೆಲೆಯನ್ನು ಹೊಂದುವ ನಿರೀಕ್ಷೆಯಿದೆ. ಇದು ಜೀಪ್ ಕಂಪಾಸ್, ಹುಂಡೈ ಟಕ್ಸನ್ ಮತ್ತು ಸಿಟ್ರೊಯೆನ್ C5 ಏರ್‌ಕ್ರಾಸ್ ವಿರುದ್ಧ ಪೈಪೋಟಿಯನ್ನು ಮುಂದುವರಿಸಲಿದೆ. 

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Volkswagen ಟಿಗುವಾನ್ 2025

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience