Login or Register ಅತ್ಯುತ್ತಮ CarDekho experience ಗೆ
Login

Mahindra Thar Roxx ವರ್ಸಸ್‌ Maruti Jimny ಮತ್ತು Force Gurkha 5-door: ಆಫ್ ರೋಡ್ ವಿಶೇಷಣಗಳ ಹೋಲಿಕೆ

ಆಗಸ್ಟ್‌ 16, 2024 07:11 pm ರಂದು shreyash ಮೂಲಕ ಪ್ರಕಟಿಸಲಾಗಿದೆ
60 Views

ಗೂರ್ಖಾವನ್ನು ಹೊರತುಪಡಿಸಿ, ಥಾರ್ ರೋಕ್ಸ್ ಮತ್ತು ಜಿಮ್ನಿ ಎರಡೂ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಬರುತ್ತವೆ

ಥಾರ್‌ನ 5-ಡೋರ್ ಆವೃತ್ತಿಯಾದ ಮಹೀಂದ್ರಾ ಥಾರ್ ರೋಕ್ಸ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಮತ್ತು ಅದರ ಎಲ್ಲಾ ವಿಶೇಷಣಗಳು ಮತ್ತು ಫೀಚರ್‌ಗಳನ್ನು ಸಹ ಬಹಿರಂಗಪಡಿಸಲಾಗಿದೆ. ಥಾರ್ ರೋಕ್ಸ್, ಒಂದು ಆಫ್‌ರೋಡರ್ ಆಗಿ, ಮಾರುತಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾ 5-ಡೋರ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ. ಈ ಪ್ರತಿಯೊಂದು ಮೊಡೆಲ್‌ಗಳ ಆಫ್‌ರೋಡ್‌ ವಿಶೇಷಣಗಳು ಹೇಗೆ ಹೋಲಿಕೆ ಆಗುತ್ತದೆ ಎಂಬುದನ್ನು ನೋಡೋಣ.

ಆಫ್-ರೋಡ್ ವಿಶೇಷತೆಗಳು

ವಿಶೇಷತೆಗಳು

ಮಹೀಂದ್ರಾ ಥಾರ್‌ ರೋಕ್ಸ್‌

ಮಾರುತಿ ಜಿಮ್ನಿ

ಫೋರ್ಸ್‌ ಗುರ್ಖಾ 5-ಡೋರ್‌

ಅಪ್ರೋಚ್ ಆಂಗಲ್

41.7 ಡಿಗ್ರಿ

36 ಡಿಗ್ರಿ

39 ಡಿಗ್ರಿ

ಡಿಪಾರ್ಚರ್‌ ಆಂಗಲ್

36.1 ಡಿಗ್ರಿ

46 ಡಿಗ್ರಿ

37 ಡಿಗ್ರಿ

ಬ್ರೇಕ್ಓವರ್ ಆಂಗಲ್

23.9 ಡಿಗ್ರಿ

24 ಡಿಗ್ರಿ

28 ಡಿಗ್ರಿ

ವಾಟರ್ ವೇಡಿಂಗ್ ಸಾಮರ್ಥ್ಯ

650 ಮಿ.ಮೀ

ಲಭ್ಯವಿಲ್ಲ

700 ಮಿ.ಮೀ

ಗ್ರೌಂಡ್‌ ಕ್ಲಿಯರೆನ್ಸ್‌

ಲಭ್ಯವಿಲ್ಲ

210 ಮಿ.ಮೀ

233 ಮಿ.ಮೀ

  • ಇಲ್ಲಿರುವ ಎಲ್ಲಾ ಆಫ್‌ರೋಡ್‌ ಎಸ್‌ಯುವಿಗಳಲ್ಲಿ, ಥಾರ್ ರೋಕ್ಸ್ ಅತ್ಯುನ್ನತ ಆಪ್ರೋಚ್‌ ಆಂಗಲ್‌ ಅನ್ನು ನೀಡುತ್ತದೆ, ಜಿಮ್ನಿ ಗರಿಷ್ಠ ಡಿಪಾರ್ಚರ್‌ ಆಂಗಲ್‌ ಅನ್ನು ಹೊಂದಿದೆ ಮತ್ತು ಗೂರ್ಖಾ 5-ಡೋರ್ ಅತ್ಯಧಿಕ ಬ್ರೇಕ್‌ಓವರ್ ಆಂಗಲ್‌ ಅನ್ನು ಹೊಂದಿದೆ.

  • ಗೂರ್ಖಾ 5-ಡೋರ್‌ ಇಲ್ಲಿ ಗರಿಷ್ಠ 700 ಮಿ.ಮೀ ವಾಟರ್‌ ವೇಡಿಂಗ್‌ ಸಾಮರ್ಥ್ಯವನ್ನು ಪಡೆಯುತ್ತದೆ, ಇದು ಥಾರ್ ರೋಕ್ಸ್‌ಗಿಂತ 50 ಮಿಮೀ.ನಷ್ಟು ಹೆಚ್ಚಿದೆ. ಆದರೆ, ಮಾರುತಿಯು ಜಿಮ್ನಿಯ ನಿಖರವಾದ ನೀರಿನಲ್ಲಿ ಸಾಗುವ ಸಾಮರ್ಥ್ಯವನ್ನು ಒದಗಿಸಿಲ್ಲ.

  • ಗೂರ್ಖಾ 5-ಡೋರ್‌ ಮೊಡೆಲ್‌ ಜಿಮ್ನಿಗಿಂತಲೂ 23 ಮಿ.ಮೀ.ನಷ್ಟು ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಮಹೀಂದ್ರಾ ತನ್ನ ದೊಡ್ಡ ಥಾರ್‌ಗೆ ಗ್ರೌಂಡ್ ಕ್ಲಿಯರೆನ್ಸ್ ಅಂಕಿಅಂಶವನ್ನು ಒದಗಿಸಿಲ್ಲ.

  • ಇಲ್ಲಿ ಮಾರುತಿ ಜಿಮ್ನಿ ಮತ್ತು ಥಾರ್ ರೋಕ್ಸ್ ಎರಡೂ ಮ್ಯಾನ್ಯುವಲ್ ಟ್ರಾನ್ಸ್‌ಫರ್ ಕೇಸ್ ಕಂಟ್ರೋಲ್ ಲಿವರ್‌ಗಳನ್ನು (2H, 4H ಮತ್ತು 4L ಮೋಡ್‌ಗಳ ನಡುವೆ ಬದಲಾಯಿಸಲು) ಪಡೆಯುತ್ತವೆ, ಆದರೆ ಇಲ್ಲಿನ ಗೂರ್ಖಾ 5-ಡೋರ್ ESOF (ಎಲೆಕ್ಟ್ರಾನಿಕ್-ಶಿಫ್ಟ್-ಆನ್-ಫ್ಲೈ) ಎಲೆಕ್ಟ್ರಿಕ್ ಟ್ರಾನ್ಸ್‌ಫರ್ ಕೇಸ್ ಕಂಟ್ರೋಲ್ ಅನ್ನು ಪಡೆಯುತ್ತದೆ.

ಇದನ್ನೂ ಸಹ ಓದಿ: ಈ ವಿವರವಾದ ಗ್ಯಾಲರಿಯಲ್ಲಿ 5 ಡೋರ್ ಮಹೀಂದ್ರಾ ಥಾರ್ ರೋಕ್ಸ್‌ನ ಸಂಪೂರ್ಣ ಚಿತ್ರಣ

ಪವರ್‌ಟ್ರೈನ್‌

ಮಹೀಂದ್ರಾ ಥಾರ್‌ ರೋಕ್ಸ್‌

ಮಾರುತಿ ಜಿಮ್ನಿ

ಫೋರ್ಸ್‌ ಗುರ್ಖಾ 5-ಡೋರ್‌

ಎಂಜಿನ್‌

2-ಲೀಟರ್ ಟರ್ಬೊ-ಪೆಟ್ರೋಲ್

2.2-ಲೀಟರ್ ಡೀಸೆಲ್

1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (ಎನ್/ಎ) ಪೆಟ್ರೋಲ್

2.6-ಲೀಟರ್ ಡೀಸೆಲ್

ಪವರ್‌

162 ಪಿಎಸ್ (ಮ್ಯಾನುಯಲ್‌)/177 ಪಿಎಸ್ (ಆಟೋಮ್ಯಾಟಿಕ್‌)

152 ಪಿಎಸ್ (ಮ್ಯಾನುಯಲ್‌)/ 175 ಪಿಎಸ್‌ವರೆಗೆ (ಆಟೋಮ್ಯಾಟಿಕ್‌)

105 ಪಿಎಸ್

140 ಪಿಎಸ್

ಟಾರ್ಕ್‌

330 ಎನ್ಎಂ (ಮ್ಯಾನುಯಲ್‌)/380ಎನ್ಎಂ (ಆಟೋಮ್ಯಾಟಿಕ್‌)

330 ಎನ್ಎಂ (ಮ್ಯಾನುಯಲ್‌)/ 370 ಎನ್ಎಂವರೆಗೆ (ಆಟೋಮ್ಯಾಟಿಕ್‌)

134 ಎನ್ಎಂ

320 ಎನ್ಎಂ

ಡ್ರೈವ್‌ ಪ್ರಕಾರ

RWD

RWD/ 4WD*

4WD

4WD

ಗೇರ್‌ ಬಾಕ್ಸ್‌

6-ಸ್ಪೀಡ್ ಮ್ಯಾನುಯಲ್‌/6-ಸ್ಪೀಡ್ AT^

6-ಸ್ಪೀಡ್ ಮ್ಯಾನುಯಲ್‌/6-ಸ್ಪೀಡ್ AT

5-ಸ್ಪೀಡ್ ಮ್ಯಾನುಯಲ್‌, 4-ಸ್ಪೀಡ್ AT

5-ಸ್ಪೀಡ್ ಮ್ಯಾನುಯಲ್‌

*RWD: ರಿಯರ್‌-ವೀಲ್‌-ಡ್ರೈವ್/4WD: 4-ವೀಲ್-ಡ್ರೈವ್

^AT: ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್

  • RWD ಮತ್ತು 4WD ಡ್ರೈವ್‌ಟ್ರೇನ್‌ಗಳ ಆಯ್ಕೆಗಳೊಂದಿಗೆ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುವ ಈ ಹೋಲಿಕೆಯಲ್ಲಿ ಥಾರ್‌ ರೋಕ್ಸ್‌ ಏಕೈಕ ಎಸ್‌ಯುವಿ ಆಗಿದೆ.

  • ಆಯ್ಕೆ ಮಾಡಿದ ಪವರ್‌ಟ್ರೇನ್ ಯಾವುದೇ ಅದರೂ, ಥಾರ್ ರೋಕ್ಸ್ ಇಲ್ಲಿ ಅತ್ಯಂತ ಶಕ್ತಿಶಾಲಿ ಎಸ್‌ಯುವಿ ಆಗಿದೆ, ಆದರೆ ಪೆಟ್ರೋಲ್-ಎಂಜಿನ್‌ ಮಾತ್ರ ನೀಡುವ ಜಿಮ್ನಿಯು ಕಡಿಮೆ ಪವರ್‌ ಉತ್ಪಾದನೆಯೊಂದಿಗೆ ಚಿಕ್ಕ ಎಂಜಿನ್ ಅನ್ನು ಹೊಂದಿದೆ.

  • ಥಾರ್ ರೋಕ್ಸ್‌ನ ಡೀಸೆಲ್ ಮ್ಯಾನುವಲ್ ಆವೃತ್ತಿಯ ಕುರಿತು ಮಾತನಾಡುವುದಾದರೆ, ಇದು 35 ಪಿಎಸ್ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಗೂರ್ಖಾ 5-ಡೋರ್‌ಗೆ ಹೋಲಿಸಿದರೆ 50 ಎನ್‌ಎಂನಷ್ಟು ಹೆಚ್ಚಿನ ಟಾರ್ಕ್ ಉತ್ಪಾದನೆಯನ್ನು ಹೊಂದಿದೆ. ಥಾರ್ ರೋಕ್ಸ್ ಡೀಸೆಲ್ 6-ಸ್ಪೀಡ್ ಆಟೋಮ್ಯಾಟಿಕ್‌ ಆಯ್ಕೆಯನ್ನು ಸಹ ಪಡೆಯುತ್ತದೆ, ಆದರೆ ಗೂರ್ಖಾ 5-ಡೋರ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಹೊಂದಬಹುದು.

  • ಥಾರ್ ರೋಕ್ಸ್‌ನ ಪೆಟ್ರೋಲ್ ಮ್ಯಾನುಯಲ್ ಆವೃತ್ತಿಗೆ ಬಂದಾಗ, ಇದು ಜಿಮ್ನಿಯ ಪೆಟ್ರೋಲ್ ಮ್ಯಾನ್ಯುವಲ್ ಆವೃತ್ತಿಗಿಂತ 57 ಪಿಎಸ್‌ನಷ್ಟು ಹೆಚ್ಚಿನ ಪವರ್‌ ಅನ್ನು ಮತ್ತು 196 ಎನ್‌ಎಮ್‌ನಷ್ಟು ಹೆಚ್ಚಿನ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಆಟೋಮ್ಯಾಟಿಕ್‌ ಆವೃತ್ತಿಯನ್ನು ಹೋಲಿಸಿದಾಗ ಈ ವ್ಯತ್ಯಾಸವು ಹೆಚ್ಚು ಆಗುತ್ತದೆ, ಥಾರ್ ರೋಕ್ಸ್ ಜಿಮ್ನಿಗಿಂತ 72 ಪಿಎಸ್‌ನಷ್ಟು ಹೆಚ್ಚು ಶಕ್ತಿಶಾಲಿಯಾಗಿದೆ.

  • ಥಾರ್ ರೋಕ್ಸ್ ಪೆಟ್ರೋಲ್ ಆಟೋಮ್ಯಾಟಿಕ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಅನ್ನು ಬಳಸುತ್ತದೆ, ಆದರೆ ಜಿಮ್ನಿ 4-ಸ್ಪೀಡ್ ಟಾರ್ಕ್ ಕನ್ವರ್ಟರ್‌ಗೆ ಜೋಡಿಯಾಗಿ ಬರುತ್ತದೆ.

ಬೆಲೆಗಳ ಹೋಲಿಕೆ

ಮಹೀಂದ್ರಾ ಥಾರ್ ರೋಕ್ಸ್ (ಪರಿಚಯಾತ್ಮಕ)

ಮಾರುತಿ ಜಿಮ್ನಿ

ಫೋರ್ಸ್ ಗೂರ್ಖಾ 5-ಡೋರ್‌

12.99 ರೂ.ನಿಂದ 20.49 ಲಕ್ಷ ರ (RWD ಆವೃತ್ತಿಗಳಿಗೆ ಮಾತ್ರ)

12.74 ಲಕ್ಷ ರೂ.ನಿಂದ 14.95 ಲಕ್ಷ ರೂ

18 ಲಕ್ಷ ರೂ.

ಎಲ್ಲಾವುಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ

ಮಾರುತಿ ಜಿಮ್ನಿ ಇಲ್ಲಿ ಅತ್ಯಂತ ಕೈಗೆಟುಕುವ ಆಫ್ ರೋಡ್ ಎಸ್‌ಯುವಿಯಾಗಿದೆ, ಆದರೆ ಥಾರ್ ರೋಕ್ಸ್‌ನ ಟಾಪ್‌ ಸ್ಪೆಕ್‌ ಆವೃತ್ತಿಗಳ ಬೆಲೆಗಳು 20 ಲಕ್ಷ ರೂ.ನ ಗಡಿಯನ್ನು ದಾಟುತ್ತವೆ. ಥಾರ್ ರೋಕ್ಸ್‌ನ 4WD ಡೀಸೆಲ್ ಆವೃತ್ತಿಗಳ ಬೆಲೆಗಳನ್ನು ಮಹೀಂದ್ರಾ ಇನ್ನೂ ಘೋಷಿಸಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. ಫೋರ್ಸ್ ಗೂರ್ಖಾ 5-ಡೋರ್ ಕೇವಲ 18 ಲಕ್ಷ ರೂಪಾಯಿ ಬೆಲೆಯಲ್ಲಿ ಸಂಪೂರ್ಣ ಲೋಡ್ ಮಾಡಲಾದ ಟ್ರಿಮ್‌ನಲ್ಲಿ ಬರುತ್ತದೆ.

ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಮಿಸ್‌ ಮಾಡದೇ ಫಾಲೋ ಮಾಡಿ

ಇನ್ನಷ್ಟು ಓದಿ: ಮಾರುತಿ ಜಿಮ್ನಿ ಆನ್‌ರೋಡ್‌ ಬೆಲೆ

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ಹೊಸ ವೇರಿಯೆಂಟ್
Rs.92.90 - 97.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ