• English
  • Login / Register

ಈ ವಿವರವಾದ ಗ್ಯಾಲರಿಯಲ್ಲಿ 5 ಡೋರ್ ಮಹೀಂದ್ರಾ ಥಾರ್ ರೋಕ್ಸ್‌ನ ಸಂಪೂರ್ಣ ಚಿತ್ರಣ

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ ansh ಮೂಲಕ ಆಗಸ್ಟ್‌ 14, 2024 11:36 pm ರಂದು ಪ್ರಕಟಿಸಲಾಗಿದೆ

  • 154 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು ಹೊಸ 6-ಸ್ಲ್ಯಾಟ್ ಗ್ರಿಲ್, ಪ್ರೀಮಿಯಂ ಲುಕಿಂಗ್ ಕ್ಯಾಬಿನ್, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಮತ್ತು ಸಾಕಷ್ಟು ಆಧುನಿಕ ಫೀಚರ್‌ಗಳನ್ನು ಪಡೆಯುತ್ತದೆ

5-door Mahindra Thar Roxx Detailed In Images

ಬಹಳ ಸಮಯದಿಂದ ಕಾಯುತ್ತಿದ್ದ 5-ಡೋರ್‌ನ ಮಹೀಂದ್ರಾ ಥಾರ್ ರೋಕ್ಸ್‌ಅನ್ನು ಬಿಡುಗಡೆ ಮಾಡಲಾಗಿದೆ ಮತ್ತು ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಗಳು12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಥಾರ್‌ನ ದೊಡ್ಡ ಆವೃತ್ತಿಯು ಅದರ 3-ಡೋರ್ ಆವೃತ್ತಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನವಾಗಿ ಕಾಣುವ ಮುಂಭಾಗದ ಲುಕ್‌, ಎರಡು ಹೆಚ್ಚುವರಿ ಬಾಗಿಲುಗಳು, ಬಿಳಿ ಕ್ಯಾಬಿನ್ ಮತ್ತು ಅನೇಕ ಹೊಸ ಫೀಚರ್‌ಗಳನ್ನು ಪಡೆಯುತ್ತದೆ ಮತ್ತು ಇದು ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್‌ಗಳೊಂದಿಗೆ ಬರುತ್ತದೆ. ಥಾರ್ ರೋಕ್ಸ್ ಅನ್ನು ನೋಡಲು ನಿಮಗೆ ಇನ್ನೂ ಅವಕಾಶ ಸಿಗದಿದ್ದರೆ, ಈ ವಿವರವಾದ ಗ್ಯಾಲರಿಯಲ್ಲಿ ನೀವು ಅದನ್ನು ಪರಿಶೀಲಿಸಬಹುದು.

ಎಕ್ಸ್‌ಟೀರಿಯರ್‌

5-door Mahindra Thar Roxx Front

ಮುಂಭಾಗದಲ್ಲಿ, ಥಾರ್ ರೋಕ್ಸ್ ಹೊಸ 6-ಸ್ಲ್ಯಾಟ್ ಗ್ರಿಲ್ ಅನ್ನು ಕಪ್ಪು ಮತ್ತು ಸುತ್ತಿನ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಸಿ-ಆಕಾರದ ಡಿಆರ್‌ಎಲ್‌ಗಳೊಂದಿಗೆ ಫಿನಿಶ್‌ ಮಾಡಿದೆ. 

5-door Mahindra Thar Roxx Front Bumper

ಬಂಪರ್, ಫಾಗ್ ಲ್ಯಾಂಪ್‌ಗಳು ಮತ್ತು ಇಂಡಿಕೇಟರ್‌ಗಳಿಗೆ ಸಹ ಸಣ್ಣ ಬದಲಾವಣೆಗಳನ್ನು ನೀಡಲಾಗಿದೆ. ಆದಾಗ್ಯೂ, ವೀಲ್‌ ಆರ್ಚ್‌ಗಳು 3-ಡೋರ್‌ನ ಆವೃತ್ತಿಯಂತೆಯೇ ಇರುತ್ತವೆ.

5-door Mahindra Thar Roxx Side

ಬದಿಗಳಿಂದ ಗಮನಿಸುವಾಗ, ನೀವು ಥಾರ್‌ನ ವಿಸ್ತೃತ ಉದ್ದದ ಬಗ್ಗೆ ಕಲ್ಪನೆಯನ್ನು ಪಡೆಯುತ್ತೀರಿ ಮತ್ತು ನೀವು ಎರಡು ಹೆಚ್ಚುವರಿ ಡೊರ್‌ಗಳು, ಸಿ-ಪಿಲ್ಲರ್ ಮೌಂಟೆಡ್ ಲಂಬವಾದ ಹಿಂಭಾಗದ ಬಾಗಿಲಿನ ಹ್ಯಾಂಡಲ್‌ಗಳು ಮತ್ತು ಮೆಟಲ್‌ನ ಸೈಡ್ ಸ್ಟೆಪ್ ಅನ್ನು ಸಹ ಗಮನಿಸಬಹುದು.

5-door Mahindra Thar Roxx 19-inch Alloys

ಇದು 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಸಹ ಪಡೆಯುತ್ತದೆ.

5-door Mahindra Thar Roxx Rear

ಹಿಂಭಾಗದಲ್ಲಿ, ವಿನ್ಯಾಸವು ಸಿ-ಆಕಾರದ ಇನ್ಸರ್ಟ್‌ಗಳೊಂದಿಗೆ ಎಲ್‌ಇಡಿ ಟೈಲ್‌ಲೈಟ್‌ಗಳು, ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಮತ್ತು ದಪ್ಪನಾದ ಬಂಪರ್ ಅನ್ನು ಒಳಗೊಂಡಿದೆ.

ಇಂಟೀರಿಯರ್‌

5-door Mahindra Thar Roxx Dashboard

ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಲೆಥೆರೆಟ್ ಪ್ಯಾಡಿಂಗ್ ಹಾಗು ತಾಮ್ರದ ಸ್ಟಿಚ್ಚಿಂಗ್‌ನೊಂದಿಗೆ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್ ರೌಂಡ್ ಎಸಿ ವೆಂಟ್‌ಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿದೆ.

5-door Mahindra Thar Roxx Front Seats

ಮುಂಭಾಗದ ಸೀಟ್‌ಗಳು ಬಿಳಿ ಲೆಥೆರೆಟ್ ಕವರ್‌ ಅನ್ನು ಪಡೆಯುತ್ತವೆ ಮತ್ತು ಅವುಗಳು ವೆಂಟಿಲೇಶನ್‌ ಸೌಕರ್ಯದೊಂದಿಗೆ ಬರುತ್ತವೆ. ಈ ಸೀಟ್‌ಗಳು ಹಿಂಭಾಗದಲ್ಲಿ "ಥಾರ್" ಎಂಬ ಹೆಸರನ್ನು ಸಹ ಹೊಂದಿವೆ.

5-door Mahindra Thar Roxx Rear Seats

ಹಿಂಭಾಗದ ಸೀಟ್‌ಗಳು ಬಿಳಿ ಫ್ಯಾಬ್ರಿಕ್‌ನೊಂದಿಗೆ ಇದೇ ರೀತಿಯ ಅನುಭವವನ್ನು ನೀಡುತ್ತದ ಮತ್ತು ಅವುಗಳು ಕಪ್ ಹೋಲ್ಡರ್‌ಗಳೊಂದಿಗೆ ಸೆಂಟರ್ ಆರ್ಮ್‌ರೆಸ್ಟ್‌ ಅನ್ನು ಪಡೆಯುತ್ತದೆ. 

ಫೀಚರ್‌ & ಸುರಕ್ಷತೆ

5-door Mahindra Thar Roxx Automatic Climate Control

10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳ ಹೊರತಾಗಿ, ಥಾರ್ ರೋಕ್ಸ್ ಹಿಂಭಾಗದ ಎಸಿ ವೆಂಟ್‌ಗಳು, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಆಟೋಮ್ಯಾಟಿಕ್‌ ಎಸಿಯನ್ನು ಸಹ ಪಡೆಯುತ್ತದೆ.

5-door Mahindra Thar Roxx Panoramic Sunroof

ಮಹೀಂದ್ರಾವು ಥಾರ್ ರೋಕ್ಸ್‌ನ ಟಾಪ್‌-ವೇರಿಯೆಂಟ್‌ಗಳಲ್ಲಿ  ಪನೋರಮಿಕ್ ಸನ್‌ರೂಫ್‌ ಅನ್ನು ಸಹ ನೀಡುತ್ತಿದೆ, ಆದರೆ ಕಡಿಮೆ-ಸ್ಪೆಕ್ ಆವೃತ್ತಿಗಳು ಸಿಂಗಲ್-ಪೇನ್‌ರೂಫ್‌ ಅನ್ನು ಪಡೆಯುತ್ತವೆ.

5-door Mahindra Thar Roxx ADAS Camera

ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತದೆ. ಮಹೀಂದ್ರಾವು ಥಾರ್ ರೋಕ್ಸ್ ಅನ್ನು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಲೆವೆಲ್ 2 ಎಡಿಎಎಸ್ (ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು) ಫೀಚರ್‌ಗಳೊಂದಿಗೆ  ಸಹ ನೀಡುತ್ತಿದೆ.

ಪವರ್‌ಟ್ರೈನ್‌

5-door Mahindra Thar Roxx Engine

ಮಹೀಂದ್ರಾ ಥಾರ್ ರೋಕ್ಸ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ, ಅವುಗಳೆಂದರೆ,  2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (161 ಪಿಎಸ್‌ ಮತ್ತು 330 ಎನ್‌ಎಮ್‌), ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ (152 ಪಿಎಸ್‌ ಮತ್ತು 330 ಎನ್‌ಎಮ್‌).

5-door Mahindra Thar Roxx Automatic Transmission

ಈ ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ.

5-door Mahindra Thar Roxx 4X4

3-ಡೋರ್ ಆವೃತ್ತಿಯಂತೆಯೇ, 5-ಬಾಗಿಲಿನ ಥಾರ್ ರೋಕ್ಸ್ ಸಹ ಹಿಂದಿನ-ಚಕ್ರ-ಡ್ರೈವ್ ಮತ್ತು ನಾಲ್ಕು-ಚಕ್ರ-ಡ್ರೈವ್ ಸೆಟಪ್‌ಗಳೊಂದಿಗೆ ಬರುತ್ತದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

5-door Mahindra Thar Roxx

ಮಹೀಂದ್ರಾ ಥಾರ್ ರೋಕ್ಸ್‌ನ  ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.  ಇದು ಫೋರ್ಸ್ ಗೂರ್ಖಾ 5-ಡೋರ್‌ಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಿದೆ.

ಹೆಚ್ಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಮಿಸ್‌ ಮಾಡದೇ ಫಾಲೋ ಮಾಡಿ

ಇನ್ನಷ್ಟು ಓದಿ : ಮಹೀಂದ್ರಾ ಥಾರ್ ರೋಕ್ಸ್‌ ಆನ್‌ರೋಡ್‌ ಬೆಲೆ

was this article helpful ?

Write your Comment on Mahindra ಥಾರ್‌ ROXX

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience