Login or Register ಅತ್ಯುತ್ತಮ CarDekho experience ಗೆ
Login

ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್: ಶಾರುಖ್ ಖಾನ್ ಅವರ ಈ ಹೊಸ ಕಾರಿಗೆ ಸಂಬಂಧಿಸಿದ 5 ವಿಶೇಷ ವಿಷಯಗಳನ್ನು ಇಲ್ಲಿ ತಿಳಿಯಿರಿ

published on ಮಾರ್ಚ್‌ 30, 2023 11:16 am by shreyash for ರೋಲ್ಸ್-ರಾಯಸ್ ಕುಲ್ಲಿನನ್

ಬಾಲಿವುಡ್ ನ ಈ ನಟ ವಿಶ್ವದ ಅತ್ಯಂತ ಐಷಾರಾಮಿ ಎಸ್‌ಯುವಿಗಳಲ್ಲಿ ಒಂದನ್ನು ಖರೀದಿಸಲು ಸಾಕಷ್ಟು ಹಣವನ್ನು ವ್ಯಯಿಸಿದ್ದಾರೆ.

ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಅವರು ಇತ್ತೀಚೆಗೆ 10 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿಶ್ವದ ಅತ್ಯಂತ ಐಷಾರಾಮಿ ಎಸ್‌ಯುವಿಗಳಲ್ಲಿ ಒಂದಾದ ಬಿಳಿ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್‌ನಲ್ಲಿ ಸವಾರಿ ಮಾಡುತ್ತಿದ್ದರು. ಶಾರುಖ್ ಖಾನ್ ಅವರ ಬಂಗಲೆ 'ಮನ್ನತ್' ಸಮೀಪ ಸಿಗ್ನೇಚರ್ 555 ನಂಬರ್ ಪ್ಲೇಟ್‌ ಹೊಂದಿದ್ದ ಎಸ್‌ಯುವಿಯ ಛಾಯಾಚಿತ್ರವನ್ನು ಅವರ ಅಭಿಮಾನಿಗಳು ತೆಗೆದಿದ್ದರು, ಇದು ಅವರ ಗ್ಯಾರೇಜ್‌ಗೆ ಇತ್ತೀಚಿನ ಸೇರ್ಪಡೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ.

ಶಾರುಖ್ ಖಾನ್ ಅವರ ಹೊಸ ಕಾರಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಶೇಷ ವಿಷಯಗಳು ಇಲ್ಲಿವೆ:

ಭವ್ಯವಾದ ವಿನ್ಯಾಸ

ಕಲಿನನ್‌ನ ವಿನ್ಯಾಸವು ಯಾವಾಗಲೂ ಆಕ್ರಮಣಕಾರಿ ಮತ್ತು ಬಲಶಾಲಿಯಾಗಿರುತ್ತದೆ ಮತ್ತು ಬ್ಲ್ಯಾಕ್ ಬ್ಯಾಡ್ಜ್‌ ರೋಲ್ಸ್ ರಾಯ್ಸ್‌ನ ಉತ್ಪಾದನಾ ಸರಣಿಯ ಎಂಜಿನಿಯರಿಂಗ್‌ನ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ವೈಭವಯುತ ಎಸ್‌ಯುವಿಯ ಈ ಆವೃತ್ತಿಯು ಪ್ಯಾಂಥಿಯಾನ್ ಗ್ರಿಲ್ ಮತ್ತು ಕ್ರೋಮ್ ಬ್ಲ್ಯಾಕ್ ಸ್ಪಿರಿಟ್ ಆಫ್ ಎಕ್ಸ್‌ಟಸಿಗಾಗಿ ಬ್ಲ್ಯಾಕ್ಡ್-ಔಟ್ ಫಿನಿಶ್ ಅನ್ನು ಹೊಂದಿದೆ. ಇದು ಕಲಿನನ್‌ನ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಗೆ ನಿರ್ದಿಷ್ಟಗೊಳಿಸಲಾದ ಫೋರ್ಜ್‌ಡ್ 22-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಸಹ ಹೊಂದಿದೆ.

ಇದನ್ನೂ ಓದಿ: ಸಿಡಿ ಸ್ಪೀಕ್: ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ತ್ವರಿತವಾಗಿ ಕಾರುಗಳಿಗೆ ಹೊಸ ವೈಶಿಷ್ಟ್ಯದ ಅಪ್‌ಡೇಟ್‌ಗಳನ್ನು ನೀಡುವ ಪ್ರವೃತ್ತಿಯು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ

ಟೆಕ್ನಿಕಲ್ ಕಾರ್ಬನ್ ಫೈಬರ್ ಡ್ಯಾಶ್‌ಬೋರ್ಡ್

ಒಳಭಾಗದಲ್ಲಿ, ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಡ್ಯಾಶ್‌ಬೋರ್ಡ್‌ ಮೂರು ಆಯಾಮದ ಕಾರ್ಬನ್ ಟೆಕ್ ಫೈಬರ್ ಫಿನಿಶ್ ಅನ್ನು ಹೊಂದಿದೆ, ಅಂದರೆ, ಇದು 3-D ಪರಿಣಾಮವನ್ನು ನೀಡುವ ಅತ್ಯಂತ ನಿಖರವಾದ ಪುನರಾವರ್ತಿತ ಜ್ಯಾಮಿತೀಯ ಆಕಾರಗಳನ್ನು ಹೊಂದಿದೆ. ಇದನ್ನು ಕಲಿನನ್‌ನ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ವಿಶಾಲವಾದ ಲಾಂಜ್ ಆಸನಗಳು

ಲಾಂಜ್ ಆಸನವು ಹಿಂಬದಿಯ ಆಸನಗಳಲ್ಲಿ, ಹೈ-ಡೆಫಿನಿಷನ್ 12-ಇಂಚಿನ ಪರದೆಗಳು ಮತ್ತು ಷಾಂಪೇನ್ ಗ್ಲಾಸ್‌ಗಳನ್ನು ಹೊಂದಿರುವ ಫೋಲ್ಡ್ ಔಟ್ ಆರ್ಮ್‌ರೆಸ್ಟ್‌ಗಳನ್ನು ಹೊಂದಿದ್ದು ಇಬ್ಬರೂ ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ, ಪ್ರಯಾಣಿಕರು ತಮ್ಮ ವೈಯಕ್ತಿಕ ಸೀಟ್ ಕಾನ್ಫಿಗರೇಶನ್ ಮತ್ತು ಮಸಾಜ್ ಮೋಡ್ ಅನ್ನು ಆಯ್ಕೆ ಮಾಡಿಕೊಳ್ಳಬಬಹುದು. ಹಾಗೆಯೇ ರೋಲ್ಸ್-ರಾಯ್ಸ್ ಎಸ್‌ಯುವಿ ಸಿಗ್ನೇಚರ್ ಸ್ಟಾರ್‌ಲೈಟ್ ಹೆಡ್‌ಲೈನರ್ ಅನ್ನು ಬ್ಲ್ಯಾಕ್ ಲೆಥರ್‌ನೊಂದಿಗೆ ಶೂಟಿಂಗ್ ಸ್ಟಾರ್‌ಗಳನ್ನು ಅನುಕರಿಸುವ 1,344 ಫೈಬರ್ ಆಪ್ಟಿಕ್ ಲೈಟ್‌ಗಳೊಂದಿಗೆ ಪಡೆದುಕೊಂಡಿದೆ.

ಇದನ್ನೂ ಓದಿ: 25 ವರ್ಷಗಳನ್ನು ಪೂರೈಸಿದ ಟಾಟಾ ಸಫಾರಿ: ಐಕಾನಿಕ್ ಎಸ್‌ಯುವಿಯು ಕುಟುಂಬ ಸ್ನೇಹಿ ಇಮೇಜ್‌ ಅನ್ನು ಗಳಿಸಿಕೊಳ್ಳಲು ಒಳಪಟ್ಟಬದಲಾವಣೆಗಳ ಬಗ್ಗೆ ಇಲ್ಲಿ ತಿಳಿಯಿರಿ

ಸ್ಪೋರ್ಟಿ ಇಂಜಿನಿಯರಿಂಗ್

ಬ್ಲ್ಯಾಕ್ ಬ್ಯಾಡ್ಜ್ ರೋಲ್ಸ್ ರಾಯ್ಸ್ ಐಷಾರಾಮಿ ಕಾರಿಗೆ ಡೈನಾಮಿಸಿಸಂಗೆ ಒತ್ತು ನೀಡುತ್ತದೆ. ಕಲಿನನ್‌ಗಾಗಿ, "ಪ್ರಮಾಣಿತ" ಎಸ್‌ಯಿವಿಯ ಅನುಭವಕ್ಕಿಂತ ವಿಭಿನ್ನವಾದ ಅನುಭವವನ್ನು ಒದಗಿಸಲು ಫ್ರೇಮ್‌ನ ಬಿಗಿತ, ನಾಲ್ಕು ವ್ಹೀಲ್ ಸ್ಟೀರಿಂಗ್ ಮತ್ತು ಆಲ್-ವೀಲ್ ಡ್ರೈವ್‌ಟ್ರೇನ್ ಸಿಸ್ಟಮ್‌ಗಳನ್ನು ಮರು-ಇಂಜಿನಿಯರಿಂಗ್ ಮಾಡಿದೆ ಎಂದು ಮಾರ್ಕ್ಯೂ ಹೇಳಿದೆ. ಸಸ್ಪೆಂಶನ್ ಯುನಿಟ್‌ಗಳು ಮತ್ತು ಸೆಟ್ಟಿಂಗ್‌ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ರೋಲ್ಸ್ ರಾಯ್ಸ್ ರೈಸ್ಡ್ ಬ್ರೇಕಿಂಗ್ ಬೈಟ್ ಪಾಯಿಂಟ್‌ನಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಬ್ರೇಕ್ ಡಿಸ್ಕ್ ವೆಂಟಿಲೇಷನ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

ಹೆಚ್ಚು ಶಕ್ತಿಶಾಲಿ V12 ಎಂಜಿನ್

ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಹೊಸ ಎಕ್ಸಾಸ್ಟ್ ಸಿಸ್ಟಮ್‌ನೊಂದಿಗೆ ಅಪ್‌ಡೇಟ್‌ ಮಾಡಲಾದ 6.75-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್ ಅನ್ನು ಪಡೆದುಕೊಂಡಿದೆ. ಇದರ ಸಾಮರ್ಥ್ಯ 600PS ಮತ್ತು 900Nm ಆಗಿದೆ ಮತ್ತು ಇದು ಪ್ರಮಾಣಿತ ಕಲಿನನ್‌ಗಿಂತ 29PS ಮತ್ತು 50Nm ಅಧಿಕವಾಗಿದೆ. ಇದು ಏಯ್ಟ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಹೊಂದಿಕೆಯಾಗುತ್ತದೆ, ಇದನ್ನು ಆತುರಕ್ಕೆ ಹೆಚ್ಚು ಸ್ಪಂದಿಸುವಂತೆ ಮಾಡಲು ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಗೆ ನಿರ್ದಿಷ್ಟವಾಗಿ ಟ್ಯೂನ್ ಮಾಡಲಾಗಿದೆ.

ಇನ್ನಷ್ಟು ಓದಿ: ರೋಲ್ಸ್ ರಾಯ್ಸ್ ಕಲಿನನ್ ಆಟೋಮ್ಯಾಟಿಕ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 11 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ರೋಲ್ಸ್-ರಾಯಸ್ ಕುಲ್ಲಿನನ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ